ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಅಪಘಾತದಲ್ಲಿ ಮೃತಪಟ್ಟ ನರಸಿಂಹಮೂರ್ತಿಗೆ ಜಿಲ್ಲಾ ಸಂಘದಿಂದ ಶ್ರದ್ಧಾಂಜಲಿ ಸಲ್ಲಿಕೆ

ಕವಿ ಉಪನ್ಯಾಸಕ, ಸಾಮಾಜಿಕ ಚಿಂತಕ, ಜನಪರ ಹೋರಾಟಗಳ ಸಂಗಾತಿ, ಪತ್ರಿಕಾ ವಿತರಕ ರಾಗಿದ್ದ ಮಾಡಪ್ಪಲ್ಲಿ ನರಸಿಂಹಮೂರ್ತಿ ಅವರ ನಿಧನವು ತೀವ್ರ ದು:ಖವನ್ನು ತಂದಿದೆ. ವೃತ್ತಿಯಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ನರಸಿಂಹ ಮೂರ್ತಿ ಅಂತಹವರ ಸಂತತಿ ಬೆಳೆಯಬೇಕಿದೆ.

ಭಾನುವಾರ ಬೆಳಿಗ್ಗೆ ಅಪಘಾತದಲ್ಲಿ ಮೃತಪಟ್ಟ ಮಾಡಪ್ಪಲ್ಲಿ ನರಸಿಂಹಮೂರ್ತಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿAದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ಚಿಕ್ಕಬಳ್ಳಾಪುರ : ಭಾನುವಾರ ಬೆಳಿಗ್ಗೆ ಅಪಘಾತದಲ್ಲಿ ಮೃತಪಟ್ಟ ಮಾಡಪ್ಪಲ್ಲಿ ನರಸಿಂಹ ಮೂರ್ತಿ ಅವರಿಗೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಲಾಯಿತು.

ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ ಸೋಮವಾರ ಬೆಳಿಗ್ಗೆ ಏರ್ಪಡಿಸಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಭಾಗವಹಿಸಿದ್ದ ಪತ್ರಕರ್ತರು ಮೃತ ನರಸಿಂಹಮೂರ್ತಿ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪನಮನ ಸಲ್ಲಿಸುವ ಮೂಲಕ ಶ್ರದ್ಧಾಂಜಲಿ ಸಲ್ಲಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾಧ್ಯಕ್ಷ ಎಂ.ಜಯರಾಮ್ ಪ್ರಾಮಾಣಿಕ ಪತ್ರಕರ್ತ, ಕವಿ ಉಪನ್ಯಾಸಕ, ಸಾಮಾಜಿಕ ಚಿಂತಕ, ಜನಪರ ಹೋರಾಟಗಳ ಸಂಗಾತಿ, ಪತ್ರಿಕಾ ವಿತರಕರಾಗಿದ್ದ ಮಾಡಪ್ಪಲ್ಲಿ ನರಸಿಂಹಮೂರ್ತಿ ಅವರ ನಿಧನವು ತೀವ್ರ ದು:ಖವನ್ನು ತಂದಿದೆ.ವೃತ್ತಿಯಲ್ಲಿ ಪ್ರಾಮಾಣಿಕತೆ ಕಣ್ಮರೆಯಾಗುತ್ತಿರುವ ಈ ದಿನಗಳಲ್ಲಿ ನರಸಿಂಹ ಮೂರ್ತಿ ಅಂತಹವರ ಸಂತತಿ ಬೆಳೆಯಬೇಕಿದೆ.ತಾನು ಕಷ್ಟದಲ್ಲಿದ್ದರೂ ಯಾರಿಂದಲೂ ಕೂಡ ನಯಾಪೈಸೆಗೆ ಆಶಿಸದೆ ವೃತ್ತಬದ್ಧತೆ ಮೆರೆದಿದ್ದರು ಎಂಬುದನ್ನು ಕೇಳಿ ಒಂದೆಡೆ ಸಂತೋಷವಾಗಿದ್ದರೆ, ಇಂತಹ ವ್ಯಕ್ತಿ ಅಕಾಲಿಕ ಮರಣಕ್ಕೆ ತುತ್ತಾದರು ಎಂಬ ಸುದ್ದಿ ಆಘಾತವನ್ನು ತಂದಿದೆ ಎಂದರು.

ಇದನ್ನೂ ಓದಿ: Chikkaballapur News: ಸೆ.25ಕ್ಕೆ ಮಂಜುನಾಥ ರೆಡ್ಡಿ ನೇತೃತ್ವದಲ್ಲಿ ಅಖಿಲ ಕರ್ನಾಟಕ ರೈತ ಸಂಘಟನೆಗೆ ಅಧಿಕೃತ ಚಾಲನೆ

ನರಸಿAಹಮೂರ್ತಿ ಅವರ ಕುಟುಂಬವು ಇವರ ಆದಾಯದ ಮೇಲೆ ನಿಂತಿದೆ ಎಂದು ಕೇಳಿ ಬೇಸರವಾಗಿದೆ.ಇದನ್ನು ಮನಗಂಡು ಇವರ ಕುಟುಂಬಕ್ಕೆ ಸಂಘದಿAದ ಆರ್ಥಿಕ ಸಹಾಯ ನೀಡುವ ಬಗ್ಗೆ ತೀರ್ಮಾನಿಸಲಾಗಿದೆ.ಅಲ್ಲದೆ ಪತ್ರಕರ್ತರ ಸಂಘದ ರಾಜ್ಯಾಧ್ಯಕ್ಷರ ಮೂಲಕವೂ ಸರಕಾರದಿಂದಲೂ ಆರ್ಥಿಕ ಸಹಾಯ ಮಾಡಿಸಿಕೊಡಲು ಕ್ರಮ ವಹಿಸ ಲಾಗುವುದು. ಉಳಿದಂತೆ ಎಲ್ಲಾ ಪತ್ರಕರ್ತರೂ ಕೂಡ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ನಹೋದ್ಯೋಗಿಯ ಕುಟುಂಬದ ನೋವಿನಲ್ಲಿ ಸಮಭಾಗಿಗಳಾಗೋಣ ಎಂದು ಮನವಿ ಮಾಡಿದರು.

ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಮಾತನಾಡಿ ಸರಳ ಸಜ್ಜನಿಕೆಯ ವ್ಯಕ್ತಿತ್ವ ಹೊಂದಿದ್ದ ಮಾಡಪ್ಪಲ್ಲಿ ನರಸಿಂಹಮೂರ್ತಿ ಅವರು ಅಪಘಾತದಲ್ಲಿ ಅಕಾಲಿಕ ಮರಣಕ್ಕೀಡಾಗಿರು ವುದು ನೋವಿನ ಸಂಗತಿಯಾಗಿದೆ.ಯುವ ಪತ್ರಕರ್ತರಾದರೂ ಭ್ರಷ್ಟಗೊಳ್ಳದೆ ಪ್ರಾಮಾಣಿಕ ವಾಗಿ ಉಳಿಯುವ ಮೂಲಕ ಇತರರಿಗೆ ಮಾದರಿಯಾಗಿದ್ದರು. ಪತ್ರಿಕೆಯ ಜತೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಭ್ರಷ್ಟ ವ್ಯವಸ್ಥೆಯ ಬಗ್ಗೆ ಸಿಂಹಸ್ವಪ್ನವಾಗಿದ್ದ ಇವರ ಬರಹಗಳು ಸಜ್ಜನ ಸಮಾಜದ ಮುನ್ನೋಟವುಳ್ಳವಾಗಿದ್ದವು.ಇವರ ಅಗಲಿಕೆಯ ನೋವನ್ನು ಭರಿಸುವ ಶಕ್ತಿಯನ್ನು ಅವರ ಕುಟುಂಬಕ್ಕೆ ಭಗವಂತ ನೀಡಲಿ ಎಂದು ಆಶಿಸಿದರು.

ಹಿರಿಯ ಪತ್ರಕರ್ತ ಕೃಷ್ಣಪ್ಪ, ಟಿ.ಎಸ್,ನಾಗೇಂದ್ರಬಾಬು, ರೈತಸಂಘದ ಮಂಜುನಾಥರೆಡ್ಡಿ ಅವರು ಇದೇ ವೇಳೆ ನುಡಿನಮನ ಸಲ್ಲಿಸಿದರು.

ಈವೇಳೆ ಸುವರ್ಣನ್ಯೂಸ್ ಜಿಲ್ಲಾ ವರದಿಗಾರ ರವಿಕುಮಾರ್, ಉದಯವಾಣಿ ವರದಿಗಾರ ಕಾಗತಿ ನಾಗರಾಜಪ್ಪ, ವಿಶ್ವವಾಣಿ ವರದಿಗಾರ ಮುನಿರಾಜು ಎಂ ಅರಿಕೆರೆ, ಸಂಯುಕ್ತ ಕರ್ನಾಟಕ ವರದಿಗಾರ ಮುರಳಿ,ನಂದಿ ವಿಜಯ ಸಂಪಾದಕ ಮುನಿರಾಜು.ಎಂ., ಸುವರ್ಣ ಪಾಲಾರ್ ಸಂಪಾದಕ ಗೋವರ್ಧನ್, ಸಂಯುಕ್ತವಿಜಯ ವರದಿಗಾರ ಸತೀಶ್, ಸಂಜೆವಾಣಿ ವರದಿಗಾರ ಟಿ,ಎಸ್,ನಾಗೇಂದ್ರಬಾಬು, ಅಶ್ವತ್ಥ್,ಡೈಲಿನ್ಯೂಸ್ ವರದಿಗಾರ ಸಿ.ವಿ.ವೆಂಕಟೇಶ್, ಕೆ.ಎನ್.ನಾರಾಯಣಸ್ವಾಮಿ, ವಿಜಯವಾಣಿ ವೆಂಕಟೇಶ್, ಪಬ್ಲಿಕ್ ಟಿವಿ ವರದಿಗಾರ ಮುದ್ದುಕೃಷ್ಣ, ಭವನದ ವ್ಯವಸ್ಥಾಪಕ ಚಲಪತಿ ಮತ್ತಿತರರು ಇದ್ದರು.