ಬಾಗೇಪಲ್ಲಿ : ತಾಲೂಕು ವ್ಯಾಪ್ತಿಯ 16 ಗ್ರಾ.ಪಂ.ಗಳಲ್ಲಿ ಗ್ರಾಮೀಣಭಾಗದ ಎಲ್ಲಾ ಮೂಲಭೂತ ಸೌಲಭ್ಯ ಒದಗಿಸುವಂತೆ ಒತ್ತಾಯಿಸಿ ಸಿಪಿಐಎಂ ಚಿಕ್ಕಬಳ್ಳಾಪುರ ಜಿಲ್ಲಾ ಸಮಿತಿ ಸಂಘಟನೆ ನೇತೃತ್ವದಲ್ಲಿ ಘಂಟಂವಾರಿಪಲ್ಲಿ ಗ್ರಾಮ ಪಂಚಾಯಿತಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ವೇಳೆ ಸಿ.ಪಿ.ಐ.ಎಂ ಸಂಘಟನೆ ತಾಲ್ಲೂಕು ಮುಖಂಡರಾದ ಡಿ.ಟಿ.ಮುನಿಸ್ವಾಮಿ ಮಾತನಾಡಿ ಗ್ರಾಮೀಣ ಭಾಗದಲ್ಲಿ ಇರುವವರು ಅನೇಕ ಸಮಸ್ಯೆಗಳಿಂದ ಜೀವನ ನಡೆಸುತಿದ್ದಾರೆ. ನಿವೇಶನ, ಮನೆ, ರಸ್ತೆ, ಚರಂಡಿ, ವಿದ್ಯುತ್ ಹಾಗೂ ಕುಡಿಯುವ ನೀರು ಸೇರಿದಂತೆ ಮೂಲ ಸೌಲಭ್ಯಗಳನ್ನು ಸಮರ್ಪಕವಾಗಿ ಕಲ್ಪಿಸುವಂತೆ ಒತ್ತಾಯಿಸಿ ಗ್ರಾ.ಪಂ.ಗಳಿಂದ ಸಿಗಬೇಕಾದ ಸೌಲಭ್ಯಗಳು ಸಿಗದಂತಾ ಗಿದೆ ಎಂದು ಗಂಭಿರವಾಗಿ ಆರೋಪಿಸಿದರು.
ಈ ಪ್ರತಿಭಟನೆಯ ಮುಖ್ಯ ಉದ್ದೇಶ ನಿವೇಶನ ರಹಿತರಿಗೆ ನಿವೇಶನಗಳನ್ನು ನೀಡಬೇಕು, ವಸತಿ ರಹಿತರಿಗೆ ವಸತಿಯನ್ನು ಮಂಜೂರು ಮಾಡಬೇಕು ಮತ್ತು ನರೇಗಾ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ನಿಜವಾದ ಕೂಲಿ ಕಾರ್ಮಿಕರಿಗೆ ಮತ್ತು ರೈತ ಭಾಂದವರಿಗೆ ಉದ್ದೇಶ ಪೂರಕವಾಗಿ ಕೆಲಸವನ್ನು ನೀಡುತ್ತಿಲ್ಲವೆಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ಯಶಸ್ವಿಯಾಗಿ ನಡೆದ ಚಿಕ್ಕಬಳ್ಳಾಪುರ ಜಿಲ್ಲಾ ಹಾಲು ಉತ್ಪಾದಕ ಸಂಘಟನೆಗಳ ಒಕ್ಕೂಟದ ವಾರ್ಷಿಕ ಸಾಮಾನ್ಯ ಸಭೆ
ಎಲ್ಲಾ ಗ್ರಾಮಗಳಲ್ಲಿ ಶುದ್ದ ಕುಡಿಯುವ ನೀರಿನ ಶುದ್ಧೀಕರಣ ಘಟಕವಿದ್ದು ಸಮರ್ಪಕ ನಿರ್ವಹಣೆ ಇಲ್ಲದೆ ನಿಪ್ರಯೋಜನೆಗುಂಡಿರುತ್ತವೆ ಅಲ್ಲದೆ ಈ ಭಾಗದ ಎಲ್ಲಾ ರಸ್ತೆಗಳಲ್ಲೂ ಗುಂಡಿ ಬಿದ್ದು, ವಾಹನದಟ್ಟಣೆ ಸಾಮಾನ್ಯವಾಗಿದೆ. ಕೂಡಲೆ ರಸ್ತೆಯನ್ನು ಸರಿಪಡಿಸಿ ಹಾಗೂ ಒಳಚರಂಡಿ ಕಾಮಗಾರಿಯನ್ನು ಸರಿಪಡಿಸಬೇಕು,’’ ಎಂದು ಒತ್ತಾಯಿಸಿದರು.
ಮೇಲಿನ ಎಲ್ಲಾ ಬೇಡಿಕೆಗಳನ್ನು ಈಡೇರಿಸಲು ತಮಗೆ 10ದಿನಗಳ ಕಾಲಾವಕಾಶವನ್ನು ನೀಡು ತ್ತಿದ್ದೇವೆ. 10ದಿನಗಳೊಳಗೆ ಈ ಎಲ್ಲಾ ಬೇಡಿಕೆಗಳು ಈಡೇರದೆ ಇದ್ದಲ್ಲಿ, ನಾವು ಅಕ್ಟೋಬರ್ ತಿಂಗಳಲ್ಲಿ ತಾಲೂಕು ಪಂಚಾಯಿತಿ ಆವರಣದ ಮುಂಭಾಗ ಮತ್ತು ನವೆಂಬರ್ ತಿಂಗಳಲ್ಲಿ ಚಿಕ್ಕಬಳ್ಳಾಪುರ ಜಿಲ್ಲಾಪಂಚಾಯತಿ ಮುಂದೆ 48ಗಂಟೆಗಳ ಕಾಲ ಹಗಲು-ರಾತ್ರಿ ಉಗ್ರವಾದ ಹೋರಾಟವನ್ನು ಮಾಡುತ್ತೇವೆ ಎಂದು ಗ್ರಾಮ ಪಂಚಾಯಿತಿ ಪಿ.ಡಿ.ಓ ನಾರಾಯಣ ಸ್ವಾಮಿ ರವರಿಗೆ ಮನವಿ ಪತ್ರವನ್ನು ಸಲ್ಲಿಸಿದರು.
ಈ ಸಂದರ್ಭದಲ್ಲಿ ಜಿ.ಕೃಷ್ಣಪ್ಪ, ಡಿ.ಅಶ್ವತ್ಥನಾರಾಯಣ, ಚನ್ನರಾಯಪ್ಪ, ರಾಮಲಿಂಗಪ್ಪ, ಮುನಿಯಪ್ಪ,ಇಮ್ರಾನ್,ಗೌನಿಪಲ್ಲಿ ನಾಗರಾಜಪ್ಪ, ಕೆ.ಜಿ. ಶ್ರೀನಿವಾಸರೆಡ್ಡಿ, ರಘುರಾಮ್, ನರಸಿಂಹಪ್ಪ, ವೆಂಕಟರಾಮ್, ಗೋವರ್ಧನ್, ವಿಷ್ಣುವರ್ಧನರೆಡ್ಡಿ ಇತರರು ಹಾಜರಿದ್ದರು