ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Murder case: ಪತ್ನಿಯನ್ನು ಕೊಂದಿದ್ದ ಪತಿಯ ಮಚ್ಚಿನಿಂದ ಕೊಚ್ಚಿ ಹತ್ಯೆ

ಪತ್ನಿ ಮೇಘನಾಳನ್ನು ಪತಿ ಚರಣ್ ಹತ್ಯೆಗೈದು ಚೈಲು ಸೇರಿದ್ದನು. ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದನು. ಇಂದು ಬೈಕ್‌ನಲ್ಲಿ ತೆರಳುವಾಗ ಚರಣ್ ನನ್ನು ಹಿಂಬಾಲಿಸಿ ಹೋದಂತ ಹಂತಕರು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ.

ಚಿಕ್ಕಮಗಳೂರು: ತನ್ನ ಪತ್ನಿಯನ್ನು ಕೊಲೆ ಮಾಡಿ ಜೈಲು ಸೇರಿ ಮರಳಿ ಬಂದಿದ್ದ ಪತಿಯನ್ನು ಆತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆಯಲ್ಲೇ ಯಾರೋ ಕೊಲೆ ಮಾಡಿರುವ ಘಟನೆ ಚಿಕ್ಕಮಗಳೂರಲ್ಲಿ ನಡೆದಿದೆ. ಚಿಕ್ಕಮಗಳೂರಿನ ತರೀಕೆರೆ ತಾಲ್ಲೂಕಿನ ಬಾವಿಕೆರೆಯಲ್ಲಿ ಪತ್ನಿಯನ್ನು ಹತ್ಯೆ ಮಾಡಿದ್ದ ಚರಣ್ (26) ಎಂಬಾತ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆಯಲ್ಲೇ ಮಚ್ಚಿನಿಂದ ಹಲ್ಲೆ ಮಾಡಿ ಬರ್ಬರವಾಗಿ ಹತ್ಯೆ ಮಾಡಲಾಗಿದೆ.

ಪತ್ನಿ ಮೇಘನಾಳನ್ನು ಪತಿ ಚರಣ್ ಹತ್ಯೆಗೈದು ಚೈಲು ಸೇರಿದ್ದನು. ಮೂರು ತಿಂಗಳ ಹಿಂದೆ ಜಾಮೀನಿನ ಮೇಲೆ ಹೊರಬಂದಿದ್ದನು. ಇಂದು ಬೈಕ್‌ನಲ್ಲಿ ತೆರಳುವಾಗ ಚರಣ್ ನನ್ನು ಹಿಂಬಾಲಿಸಿ ಹೋದಂತ ಹಂತಕರು ಮಚ್ಚಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಲಕ್ಕವಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಬೇರೆ ವಿಷಯಕ್ಕೆ ಸಂಬಂಧಿಸಿ ಕೊಲೆ ಮಾಡಲಾಗಿದೆಯೇ ಅಥವಾ ಆತನ ಪತ್ನಿಯ ಕೊಲೆಯ ದ್ವೇಷ ತೀರಿಸಿಕೊಳ್ಳಲಾಗಿದೆಯೇ ಎಂಬಿತ್ಯಾದಿ ವಿಚಾರಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಹರೀಶ್‌ ಕೇರ

View all posts by this author