Cougn Syrup: ಮಕ್ಕಳ ಸಾವು ಹಿನ್ನೆಲೆ: ರಾಜ್ಯದಲ್ಲಿ ಅಲರ್ಟ್, ಕಾಫ್ ಸಿರಪ್ ಮಾದರಿಗಳ ಸಂಗ್ರಹ
Karnataka: ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ 12 ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ಈ ಸಿರಪ್‌ಗಳನ್ನು ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.

-

ಬೆಂಗಳೂರು: ಮಧ್ಯಪ್ರದೇಶ ಹಾಗೂ ರಾಜಸ್ಥಾನದಲ್ಲಿ ಕೋಲ್ಡ್ರಿಫ್ ಕೆಮ್ಮಿನ ಸಿರಪ್ (Cougn Syrup) ಸೇವಿಸಿ ಸರಣಿ ಮಕ್ಕಳ ಸಾವು (Children death) ಹಿನ್ನೆಲೆಯಲ್ಲಿ ರಾಜ್ಯದಲ್ಲಿ (Karnataka) ಆರೋಗ್ಯ ಇಲಾಖೆ (Health department) ಅಲರ್ಟ್ ಆಗಿದೆ. ಎಲ್ಲಾ ಬ್ರ್ಯಾಂಡ್ ಕಾಫ್ ಸಿರಪ್‌ಗಳ ಸ್ಯಾಂಪಲ್‌ಗಳನ್ನು ಸಂಗ್ರಹಿಸಿ ಪರೀಕ್ಷೆ ನಡೆಸಲು ಮುಂದಾಗಿದೆ. ಔಷಧ ನಿಯಂತ್ರಣ ಹಾಗೂ ಸರಬರಾಜು ಇಲಾಖೆ ಕಾಫ್ ಸಿರಪ್‌ಗಳ ಟೆಸ್ಟ್ ಮಾಡಲು ಮುಂದಾಗಿದ್ದು, ರಾಜ್ಯದ ಎಲ್ಲೆಡೆ ಕಾಫ್ ಸಿರಪ್‌ಗಳ ಮಾದರಿ ಪಡೆಯುತ್ತಿದೆ.
ಮಧ್ಯಪ್ರದೇಶ ಮತ್ತು ರಾಜಸ್ಥಾನದಲ್ಲಿ ಕಳೆದ ಕೆಲವು ದಿನಗಳಿಂದ ಕೆಮ್ಮಿನ ಸಿರಪ್‌ಗಳಿಂದಾಗಿ 12 ಮಕ್ಕಳು ಸಾವನ್ನಪ್ಪಿದ ನಂತರ, ಕೇಂದ್ರ ಆರೋಗ್ಯ ಸಚಿವಾಲಯ ಮತ್ತು ರಾಜ್ಯ ಆರೋಗ್ಯ ಇಲಾಖೆಗಳು ವೈದ್ಯರ ಸಲಹೆ ಇಲ್ಲದೇ ಮಕ್ಕಳಿಗೆ ಈ ಸಿರಪ್‌ಗಳನ್ನು ನೀಡದಂತೆ ಮಾರ್ಗಸೂಚಿ ಹೊರಡಿಸಿದೆ.
ಇದನ್ನೂ ಓದಿ: Cough Syrup: ಕಂದಮ್ಮಗಳ ಜೀವ ತೆಗೆದ ಕೆಮ್ಮಿನ ಸಿರಪ್; ಔಷಧ ನೀಡಿದ್ದ ವೈದ್ಯನ ಬಂಧನ
ಸದ್ಯ ರಾಜ್ಯದಲ್ಲಿ ಕೋಲ್ಡ್ರಿಫ್ ಸಿರಪ್ ಸರಬರಾಜು ಆಗುತ್ತಿಲ್ಲ. ತಮಿಳುನಾಡಿನಲ್ಲಿ ಕೋಲ್ಡ್ರಿಫ್ ಔಷಧಿ ಸರಬರಾಜು ಆಗಿದೆ. ಆದರೆ ಉಳಿದ ಕಂಪನಿಗಳ ಕೆಮ್ಮಿನ ಸಿರಪ್‌ಗಳ ಮೇಲೂ ಹದ್ದಿನ ಕಣ್ಣು ಇಡಲಾಗಿದೆ. ಪೋಷಕರಿಗೆ ಕೋಲ್ಡ್ರಿಫ್ ಸಿರಪ್ ಖರೀದಿ ಮಾಡದಂತೆ ಸೂಚನೆ ನೀಡಲಾಗಿದೆ. ವೈದ್ಯರ ಸಲಹೆ ಪಡೆದು ಮಕ್ಕಳಿಗೆ ಸಿರಪ್ ನೀಡುವಂತೆ ಸೂಚನೆ ಕೊಡಲಾಗಿದೆ.