ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ (Dharmasthala case) ಸಂಬಂಧಿಸಿ ಬಂಧನವಾಗಿರುವ ದೂರುದಾರ ಚಿನ್ನಯ್ಯ ಜಾಮೀನು ಅರ್ಜಿಯ ಆದೇಶವನ್ನು ಸೆ.16ಕ್ಕೆ ಬೆಳ್ತಂಗಡಿ ನ್ಯಾಯಾಲಯ ಕಾಯ್ದಿರಿಸಿದೆ. ಇಂದು ಬೆಳ್ತಂಗಡಿ ಕೋರ್ಟ್‌ನಲ್ಲಿ ಚಿನ್ನಯ್ಯ ಪರ ವಕೀಲರು ಜಾಮೀನಿಗಾಗಿ ಸಲ್ಲಿಸಿದ್ದಂತ ಅರ್ಜಿಯನ್ನು ವಿಚಾರಣೆ ನಡೆಸಿದ ಜಡ್ಜ್, ವಿಚಾರಣೆಯ ಬಳಿಕ ಜಾಮೀನು ಆದೇಶ ಕಾಯ್ದಿರಿಸಿದರು.
ಜಾಮೀನಿಗೆ ಎಸ್ಐಟಿ ಪರ ವಕೀಲರು ಆಕ್ಷೇಪಣೆ ಸಲ್ಲಿಸಿದ್ದರು. ಈ ಎಲ್ಲವನ್ನು ವಿಚಾರಣೆ ನಡೆಸಿದಂತ ನ್ಯಾಯಾಲಯವು ತನ್ನ ಆದೇಶವನ್ನು ಕಾಯ್ದಿರಿಸಿದೆ.
ಹೊಸ ವಿಡಿಯೋ ಬಿಡುಗಡೆ ಮಾಡಿದ ಯುಟ್ಯೂಬರ್ ಸಮೀರ್
ಬೆಂಗಳೂರು: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ತನಿಖಾ ತಂಡದಿಂದ ಇತ್ತೀಚಿಗೆ ವಿಚಾರಣೆಗೆ ಒಳಗಾಗಿದ್ದ ಯುಟ್ಯೂಬರ್ ಎಂ.ಡಿ. ಸಮೀರ್ ಹೊಸ ವಿಡಿಯೋ ಮಾಡಿದ್ದಾರೆ.
ಯುಟ್ಯೂಬ್‌ನಲ್ಲಿ 'ಬುರುಡೆ Media? ಷಡ್ಯಂತ್ರ? No More Lies' ಶೀರ್ಷಿಕೆಯಡಿ ವಿಡಿಯೋ ಬಿಡುಗಡೆ ಮಾಡಿರುವ ಸಮೀರ್, ಕಳೆದ ಒಂದೂವರೆ ತಿಂಗಳಿನಿಂದ ನನ್ನ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಲಾಗಿದೆ. ವಿದೇಶದಿಂದ ನನಗೆ ಫಂಡಿಂಗ್ ಆಗಿದೆ ಎಂದು ಆರೋಪಿಸಲಾಗಿದೆ. ಆದರೆ ನನಗೆ ಯಾವುದೇ ರೀತಿಯ ವಿದೇಶಿ ಹಣ ಬಂದಿಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.
ತನ್ನ ಬ್ಯಾಂಕ್ ಖಾತೆಗೆ ಯಾವುದೇ ಫಂಡಿಂಗ್ ಆಗಿಲ್ಲ ಎಂಬ ಬಗ್ಗೆ ತನ್ನ ಬಳಿ ಇರುವ ಎರಡು ಬ್ಯಾಂಕ್ ಖಾತೆಗಳ ವಿವರ ನೀಡಿದ್ದಾರೆ. ಈ ಬಗ್ಗೆ ಪೊಲೀಸರಿಗೆ ಎಲ್ಲಾ ದಾಖಲೆಗಳನ್ನು ನೀಡಿದ್ದೇನೆ. ನನ್ನ ವಿರುದ್ಧದ ಆರೋಪಗಳು ಸುಳ್ಳು ಎಂದಿದ್ದಾರೆ.
ಈ ಸುದ್ದಿಯನ್ನೂ ಓದಿ | Dharmasthala Case: ಬುರುಡೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್; ಸೌಜನ್ಯ ಮಾವನ ಹೆಸರು ಹೇಳಿದ್ನಾ ಚಿನ್ನಯ್ಯ?