ಕೆಎಮ್ಸಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ವಿರುದ್ಧ ಹೋರಾಟ
ಡಾ. ಬಿ ಆರ್ ಅಂಬೇಡ್ಕರ್ ವೃತ್ತದಲ್ಲಿರುವ ಕೆ ಎಂ ಸಿ ಆಸ್ಪತ್ರೆ ಮಂಗಳೂರು , ಲಯನ್ಸ್ ಕ್ಲಬ್ ಕದ್ರಿ ಸಹಯೋಗದಲ್ಲಿ ‘ಕ್ಯಾನ್ ಕಾನ್ಕರ್’ ಸಾರ್ವಜನಿಕ ಜಾಗೃತಿ ಕಾರ್ಯಕ್ರಮ ಆಯೋಜಿಸಿತ್ತು. ಕಾರ್ಯಕ್ರಮದಲ್ಲಿ ಕ್ಯಾನ್ಸರ್ ಕುರಿತಾದ ಮಿಥ್ಯ ಮತ್ತು ಸತ್ಯ ಹಾಗೂ ಕ್ಯಾನ್ಸರ್ ವಿರುದ್ಧ ಹೋರಾಟದಲ್ಲಿ ಮನೋಸ್ಥೈರ್ಯದ ಮಹತ್ವದ ಮೇಲೆ ತಜ್ಞರು ಬೆಳಕು ಚೆಲ್ಲಿದರು.