ಮಂಗಳೂರು: ಸೌಜನ್ಯ ಮೇಲೆ ಅತ್ಯಾಚಾರ ಎಸಗಿ, ಕೊಲೆ (Sowjanya case) ಮಾಡಿದ್ದು ಆಕೆಯ ಮಾವ ವಿಠಲ್ ಗೌಡ ಎಂದು ಮೈಸೂರಿನ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ (Snehamayi Krishna) ಗಂಭೀರ ಆರೋಪ ಮಾಡಿದ್ದಾರೆ. ಈ ಕುರಿತು ದಕ್ಷಿಣ ಕನ್ನಡ ಎಸ್‌ಪಿ ಡಾ.ಅರುಣ್ ಕುಮಾರ್‌ಗೆ ದೂರು ಅರ್ಜಿ ಸಲ್ಲಿಸಿದ್ದಾರೆ.
ಸೌಜನ್ಯಳ ಮೇಲೆ ಸೋದರಮಾವ ವಿಠಲ ಗೌಡಗೆ ಕೆಟ್ಟ ದೃಷ್ಟಿ ಇತ್ತು. ಆಕೆಯನ್ನು ಬಳಸಿಕೊಳ್ಳಲು ಬಹಳ ಸಮಯದಿಂದ ಹವಣಿಸುತ್ತಿದ್ದ. ಒಪ್ಪದೇ ಇದ್ದಂತಹ ಸಂದರ್ಭದಲ್ಲಿ ಆಕೆ ಮೇಲೆ ಅತ್ಯಾಚಾರ ಎಸಗಿ, ಕೊಲೆಗೈದಿದ್ದಾನೆ ಎಂದು ಆರೋಪಿಸಿದ್ದಾರೆ.
ಸೌಜನ್ಯ ತಾಯಿ ಕುಸುಮಾವತಿಗೂ ಸಹೋದರ ವಿಠಲ್ ಗೌಡನ ಮೇಲೆ ಸಂಶಯವಿತ್ತು. ಮಗಳ ಮೃತದೇಹವನ್ನು ನೋಡಲು ಕುಸುಮಾವತಿ ಹೋಗಿರಲಿಲ್ಲ. ಸಂತೋಷ್ ರಾವ್ ಅವರನ್ನು ಈ ಕೃತ್ಯಕ್ಕೆ ಬಳಸಿಕೊಂಡಿರಬಹುದು. ಈ ಬಗ್ಗೆ ನಾನು ಬಹಳ ದಿನಗಳಿಂದ ಮಾಹಿತಿಗಳನ್ನು ಕಲೆ ಹಾಕುತ್ತಿದ್ದೇನೆ ಎಂದು ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Sasikanth senthil: ಧರ್ಮಸ್ಥಳ ಪ್ರಕರಣ; ಜನಾರ್ದನ ರೆಡ್ಡಿ ವಿರುದ್ಧ ಮಾನನಷ್ಟ ಕೇಸ್ ದಾಖಲಿಸಿದ ಸೆಂಥಿಲ್
ಸಾಂದರ್ಭಿಕ ಸಾಕ್ಷಿಗಳನ್ನು ಇಟ್ಟುಕೊಂಡು ತನಿಖೆ ಮಾಡಬೇಕು. ಪ್ರಕರಣದ ಸಂಪೂರ್ಣ ಮರು ತನಿಖೆ ನಡೆಸಿ ಆರೋಪಿಗೆ ಶಿಕ್ಷೆ ವಿಧಿಸಬೇಕು. ವಿಠಲ ಗೌಡನ ಮಂಪರು ಪರೀಕ್ಷೆ ಮಾಡಬೇಕು. ಮಂಪರು ಪರೀಕ್ಷೆಯಿಂದ ಸತ್ಯ ಬಹಿರಂಗವಾಗಲಿದೆ ಎಂದು ಹೇಳಿದ್ದಾರೆ.