ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali Fashion 2025: ದೀಪಾವಳಿ ಫೆಸ್ಟೀವ್ ಸೀಸನ್ ಲೆಹೆಂಗಾಗೆ ಸಿಕ್ತು ಲೋಕಲ್ ಟಚ್

Deepavali Fashion: ದೀಪಾವಳಿ ಹಬ್ಬದ ಸೀಸನ್‌ನಲ್ಲಿ ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ವೈವಿಧ್ಯಮಯ ಲೆಹೆಂಗಾಗಳು ಆಗಮಿಸಿವೆ. ಯಾವ ಡಿಸೈನ್‌ನವು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಫ್ಯಾಷನಿಸ್ಟಾಗಳು ಇಲ್ಲಿ ತಿಳಿಸಿದ್ದಾರೆ.‌ ಈ ಕುರಿತ ವರದಿ ಇಲ್ಲಿದೆ.

ಚಿತ್ರಗಳು: ಲೂಸಿ ಸರೆರಿಯಾ, ಮಾಡೆಲ್
1/5

ದೀಪಾವಳಿ ಹಬ್ಬದ ಸೀಸನ್‌ನಲ್ಲಿ, ಈ ಬಾರಿ ನಾನಾ ಡಿಸೈನ್‌ನ ಪಕ್ಕಾ ಸೌತ್ ಇಂಡಿಯನ್ ಲುಕ್ ನೀಡುವ ಲೆಹೆಂಗಾಗಳು ಆಗಮಿಸಿವೆ.

ಇದುವರೆಗೂ ನಾರ್ತ್ ಇಂಡಿಯನ್ ಸ್ಟೈಲ್‌ನಲ್ಲಿದ್ದ ರೆಡಿಮೇಡ್ ಲೆಹೆಂಗಾಗಳಿಗೆ ಇದೀಗ ಸೌತ್ ಇಂಡಿಯನ್ ಟಚ್ ದೊರೆತಿದೆ. ತಕ್ಷಣಕ್ಕೆ ನೋಡಲು ಡಿಸೈನರ್ ಲಂಗ-ದಾವಣಿಯಂತೆ ಕಾಣುವ ಈ ಡಿಸೈನರ್‌ವೇರ್‌ಗಳು ಕಸ್ಟಮೈಸ್ಡ್ ಡಿಸೈನ್‌ನಲ್ಲಿ ಬೋಟಿಕ್‌ನಲ್ಲಿ ಮಾತ್ರ ದೊರಕುತ್ತಿದ್ದವು. ಆದರೆ ಇದೀಗ, ರೆಡಿಮೇಡ್ ಕೆಟಗರಿಯಲ್ಲೂ ಎಲ್ಲೆಡೆ ದೊರೆಯುತ್ತಿವೆ ಎನ್ನುತ್ತಾರೆ ಮಾಡೆಲ್ ಲೂಸಿ.

2/5

ಲೋಕಲ್ ಲುಕ್‌ಗೆ ಸಾಥ್ ನೀಡುವ ಲೆಹೆಂಗಾಗಳು

ಈ ಬಾರಿಯ ಫೆಸ್ಟಿವ್ ಸೀಸನ್‌ನಲ್ಲಿ ಸಾಕಷ್ಟು ವಿನ್ಯಾಸದ ಸೌತ್ ಇಂಡಿಯನ್ ಲುಕ್ ನೀಡುವ ನಾನಾ ವೆರೈಟಿ ಲೆಹೆಂಗಾಗಳು ಪಾಪ್ಯುಲರ್ ಆಗಿವೆ. ಇದಕ್ಕೆ ಪೂರಕ ಎಂಬಂತೆ, ಸೌತ್ ಇಂಡಿಯನ್ ಲುಕ್ ನೀಡುವ ದುಪಟ್ಟಾ, ಬ್ಲೌಸ್ ಹಾಗೂ ಲಂಗಗಳ ವಿನ್ಯಾಸದಲ್ಲಿ ಹೆವ್ವಿ ಡಿಸೈನ್‌ನವು ಮಿಕ್ಸ್ ಆಗಿವೆ. ಜತೆಗೆ ಲೋಕಲ್ ಸ್ಟಿಚ್ ವಿನ್ಯಾಸಕ್ಕೆ ದಕ್ಕೆಯಾಗದಂತೆ ಇವುಗಳ ರೂಪ ಬದಲಾಗಿರುವುದು ಲೆಹೆಂಗಾ ಪ್ರಿಯರಿಗೆ ಇಷ್ಟವಾಗಿದೆ ಎನ್ನುತ್ತಾರೆ ಡಿಸೈನರ್ಸ್.

3/5

ಬದಲಾದ ಲೆಹೆಂಗಾ ರೂಪ

ಸೌತ್ ಇಂಡಿಯನ್ ಲೆಹೆಂಗಾ ಎಂದಾಕ್ಷಣಾ ಎಲ್ಲರಿಗೂ ತಿಳಿಯುವಂತೆ ಲಂಗ-ದಾವಣಿ ಹಾಗೂ ಸೀರೆ ಬ್ಲೌಸ್ ಡಿಸೈನ್ ಊಹೆ ಮಾಡಿಕೊಳ್ಳಲಾಗುತ್ತಿತ್ತು. ಆದರೆ, ಈ ಡಿಸೈನ್‌ನಲ್ಲೆ ಇದೀಗ ಸಾಕಷ್ಟು ಬದಲಾವಣೆಯಾಗಿದೆ. ಬಿಗ್ ಹಾಗೂ ಸ್ಮಾಲ್ ಫ್ಲೀಟ್ಸ್ ಇರುವ ಲಂಗ, ಅಂಬ್ರೆಲ್ಲಾ ಶೇಪ್ ಇರುವಂತಹ ಲೆಹೆಂಗಾಗಳು ಎಂಟ್ರಿ ನೀಡಿವೆ. ಇನ್ನು, ಸಾಮಾನ್ಯವಾಗಿ ಬಳಸುವ ಕಲಾಂಕಾರಿ, ಜರ್ದೋಸಿ, ಎಂಬ್ರಾಯ್ಡರಿ, ಥ್ರೆಡ್‌ವರ್ಕ್, ಮಿರರ್ ವರ್ಕ್ ಹೀಗೆ ನಾನಾ ಬಗೆಯ ವಿನ್ಯಾಸಗಳು ಎಂದಿನಂತೆ ಲೆಹೆಂಗಾ ಲಂಗವನ್ನು ಸಿಂಗರಿಸಿವೆ.

4/5

ಲೆಹೆಂಗಾ ಬ್ಲೌಸ್ ವಿನ್ಯಾಸ

ನೋಡಲು ಪಕ್ಕಾ ಸೀರೆಯ ಬ್ಲೌಸ್ ಕಟ್ ಹೊಂದಿರುವ ಫ್ರಂಟ್ ಹಾಗೂ ಬ್ಯಾಕ್ ಸೈಡ್ ಬಟನ್ ಹೊಂದಿರುವ ಲೆಹೆಂಗಾ ಬ್ಲೌಸ್‌ಗಳು ಈ ಸೀಸನ್‌ನಲ್ಲಿ ಟ್ರೆಂಡಿಯಾಗಿವೆ. ಇದರಿಂದಾಗಿ ನೋಡಲು ಥೇಟ್ ಸೌತ್ ಇಂಡಿಯನ್ ಇಮೇಜ್ ನೀಡುತ್ತವೆ.

ಮನಮೋಹಕ ಲೆಹೆಂಗಾ ದಾವಣಿ

ಫೆಸ್ಟೀವ್ ಸೀಸನ್‌ನ ಟ್ರೆಂಡ್‌ಗೆ ಸೂಟ್ ಆಗುವಂತೆ ಈ ಬಾರಿ ಹೆವ್ವಿ ಡಿಸೈನ್‌ನ ಲೆಹೆಂಗಾ ದಾವಣಿ ಅಥವಾ ದುಪಟ್ಟಾಗಳು ಮನಮೋಹಕ ವಿನ್ಯಾಸದಲ್ಲಿ ಬಂದಿವೆ.

ಲಾಂಗ್ ಬ್ಲೌಸ್ ಹಾಗೂ ಕಮೀಝ್ ರೀತಿಯ ಟಾಪ್‌ಗಳ ಬದಲು ಸೀರೆ ಇಲ್ಲವೇ ದಾವಣಿ ಲಂಗಕ್ಕೆ ಧರಿಸಲಾಗುವ ಬ್ಲೌಸ್ ಬಂದಿರುವುದು ಈ ಸೀಸನ್‌ನ ವಿಶೇಷವಾಗಿದೆ ಎನ್ನುತ್ತಾರೆ ಡಿಸೈನರ್ಸ್.

5/5

ಸೌತ್ ಇಂಡಿಯನ್ ಲೆಹೆಂಗಾ ಪ್ರಿಯರಿಗೆ ಒಂದಿಷ್ಟು ಟಿಪ್ಸ್

* ಡಿಸೈನರ್ ಲೆಹೆಂಗಾದ ಸೂಕ್ತ ನಿರ್ವಹಣೆ ಅಗತ್ಯ.

* ಈ ಲೆಹೆಂಗಾಗಳು ಸೆಲೆಬ್ರೆಟಿ ಲುಕ್ ನೀಡುತ್ತವೆ.

* ಧರಿಸಿದ ನಂತರ ಅದನ್ನು ಪ್ರತ್ಯೇಕವಾಗಿ ತೆಗೆದಿರಿಸುವುದು ಅಗತ್ಯ.

ಶೀಲಾ ಸಿ ಶೆಟ್ಟಿ

View all posts by this author