ಹುಬ್ಬಳ್ಳಿ: ಖ್ಯಾತ ಯೂಟ್ಯೂಬರ್ ಮುಕಳೆಪ್ಪ (YouTuber Mukaleppa) ಅಲಿಯಾಸ್ ಕ್ವಾಜಾ ಶಿರಹಟ್ಟಿ ವಿರುದ್ಧ ಲವ್ ಜಿಹಾದ್ ಆರೋಪ ಕೇಳಿ ಬಂದಿದೆ. ಹಿಂದೂ ಯುವತಿ ಪ್ರೀತಿಸಿ ವಿವಾಹವಾಗಿರೋ ಕ್ವಾಜಾ ಶಿರಹಟ್ಟಿ ವಿರುದ್ಧ ಆಕೆಯ ಹೆತ್ತವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಮುಕಳೆಪ್ಪ ವಿರುದ್ಧ ಬಜರಂಗದಳದ ಕಾರ್ಯಕರ್ತರೂ ಕೂಡ ದೂರು ನೀಡಿದ್ದಾರೆ. ಮುಸ್ಲಿಂ ಧರ್ಮಕ್ಕೆ ಸೇರಿದ ಮುಕಳೆಪ್ಪ ಅಲಿಯಾಸ್ ಕ್ವಾಜಾ ಶಿರಹಟ್ಟಿ ನಕಲಿ ಐಡಿ ಸೃಷ್ಟಿಸಿ, ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಅಂತ ಆರೋಪಿಸಿ, ದೂರು ನೀಡಲಾಗಿದೆ. ಯುವತಿ ಹೆತ್ತವರು ಮುಕಳೆಪ್ಪ ವಿರುದ್ಧ ಹುಬ್ಬಳ್ಳಿಯ ಹಳೆ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮುಕಳೆಪ್ಪ ಮೋಸ ಮಾಡಿ ತಮ್ಮ ಮಗಳನ್ನು ಮದುವೆಯಾಗಿದ್ದಾನೆ. ತಮ್ಮ ಮಗಳನ್ನು ವಾಪಸ್ ಕಳಿಸುವಂತೆ ಕೇಳಿದರೆ ಧಮ್ಕಿ ಹಾಕ್ತಿದ್ದಾನೆ ಅಂತ ಯುವತಿ ಹೆತ್ತವರು ಆರೋಪಿಸಿದ್ದಾರೆ. ನಮ್ಮ ಮಗಳನ್ನು ನಮ್ಮ ಜೊತೆ ಕಳುಹಿಸಿ ಕೊಡುವಂತೆ ದೂರಿನಲ್ಲಿ ಮನವಿ ಮಾಡಿದ್ದಾರೆ. ಇದಕ್ಕೂ ಮುನ್ನ ಮುಕಳೆಪ್ಪ ವಿರುದ್ಧ ಧಾರವಾಡದಲ್ಲೂ ದೂರು ದಾಖಲಾಗಿತ್ತು. ಬಜರಂಗದಳ ಕಾರ್ಯಕರ್ತರು ದೂರು ನೀಡಿದ್ದರು. ಮುಕಳೆಪ್ಪ ಧಾರವಾಡ ಮೂಲದ ಯೂಟ್ಯೂಬರ್ ಆಗಿದ್ದು, ಆತನ ವಿರುದ್ಧ ಧಾರವಾಡ ಗ್ರಾಮೀಣ ಠಾಣೆಗೆ ಬಜರಂದಳ ಕಾರ್ಯಕರ್ತರು ದೂರು ಸಲ್ಲಿಸಿದ್ದರು.
ಮುಸ್ಲಿಂ ಧರ್ಮಕ್ಕೆ ಸೇರಿದ ಮುಕಳೆಪ್ಪ ನಕಲಿ ಐಡಿ ಸೃಷ್ಟಿಸಿ, ಹಿಂದೂ ಯುವತಿಯನ್ನು ಮದುವೆಯಾಗಿದ್ದಾನೆ ಎಂದು ಆರೋಪಿಸಲಾಗಿದೆ. ಹಿಂದೂ ಯುವತಿಗೆ ಮೋಸ ಮಾಡಿದ್ದಾನೆ. ಅಷ್ಟೇ ಅಲ್ಲದೇ ಅಲ್ಲದೇ ಹಿಂದೂ ಯುವತಿಯರನ್ನು ತನ್ನ ಯೂಟ್ಯೂಬ್‌ಗೆ ಬಳಸಿಕೊಳ್ಳುತ್ತಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಉತ್ತರ ಕನ್ನಡ ಮೂಲದ ಮುಂಡಗೋಡಿನ ಮೂಲದ ಯುವತಿಯನ್ನು ಮುಕಳೆಪ್ಪ ವಿವಾಹವಾಗಿದ್ದ. ಜೂನ್ 5 ರಂದು ಮುಂಡಗೋಡದಲ್ಲಿ ಮದುವೆಯಾಗಿದ್ದು, ಉಪ ನೋಂದಣಿ ಕಚೇರಿಯಲ್ಲಿ ನೋಂದಣಿ ಮಾಡಿಸಲಾಗಿತ್ತು.
ಈ ಸುದ್ದಿಯನ್ನೂ ಓದಿ: Love Jihad: ಮುಸ್ಲಿಂ ಯುವತಿಯಿಂದ ಹಿಂದೂ ಗಂಡನ ಮತಾಂತರ, ಲವ್ ಜಿಹಾದ್ ನಡೆಸಿದ ವಿಚಿತ್ರ ಆರೋಪ
ಬಜರಂಗದಳದ ದೂರಿನ ಕುರಿತು ಯುವತಿ ಪ್ರತಿಕ್ರಿಯೆ ನೀಡಿದ್ದು, ನಾವಿಬ್ಬರೂ ಪ್ರೀತಿಸುತ್ತಿದ್ದೆವು. ಪರಸ್ಪರ ಒಪ್ಪಿಗೆಯ ಮೇರೆಗೆ ವಿವಾಹವಾಗಿದ್ದೇವೆ. ನನಗೆ ಯಾರೂ ಈ ಕುರಿತು ಒತ್ತಾಯ ಇಲ್ಲ ಬ್ಲಾಕ್‌ಮೇಲ್ ಮಾಡಿಲ್ಲ ಎಂದು ಆಕೆ ಹೇಳಿದ್ದಾಳೆ.