ಬಿಗ್​ಬಾಸ್ ಬಿಹಾರ ರಿಸಲ್ಟ್​ ಫೋಟೋ ಗ್ಯಾಲರಿ ಫ್ಯಾಷನ್​ ವಿಶ್ವವಾಣಿ ಪ್ರಾಪರ್ಟಿ ವಿದೇಶ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Fake Nandini Ghee: ನಂದಿನಿ ತುಪ್ಪದಲ್ಲಿ ಕಲಬೆರಕೆ: ದೊಡ್ಡ ಜಾಲ ಬಯಲು, ನಾಲ್ವರ ಬಂಧನ

fake nandini products: ನಂದಿನಿ ತುಪ್ಪದಲ್ಲಿ ಕಳಪೆ ಸಾಮಗ್ರಿಗಳನ್ನು ಕಲಬೆರಕೆ ಮಾಡಿ ತಮಿಳುನಾಡಿಗೆ ಪೂರೈಸುತ್ತಿದ್ದ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳು ಒಂದು ಲೀಟರ್ ಮೂಲ ತುಪ್ಪದಿಂದ ಮೂರು ಲೀಟರ್ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು. ಬಂಧಿತ ವ್ಯಕ್ತಿಗಳನ್ನು ಕೆಎಂಎಫ್ ವಿತರಕ ಮಹೇಂದ್ರ, ಅವರ ಮಗ ದೀಪಕ್, ತಮಿಳುನಾಡಿನಿಂದ ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ಮುನಿರಾಜು ಮತ್ತು ಚಾಲಕ ಅಭಿ ಅರಸು ಎಂದು ಗುರುತಿಸಲಾಗಿದೆ.

ನಂದಿನಿ ತುಪ್ಪ

ಬೆಂಗಳೂರು: ತಮಿಳುನಾಡಿನಲ್ಲಿ ಕೆಎಂಎಫ್‌ನ ನಂದಿನಿ ತು‌ಪ್ಪದ ಹೆಸರಿನಲ್ಲಿ ಕಲಬೆರಕೆ (Adulteration) ತುಪ್ಪ ತಯಾರಿಸಿ ಮಾರಾಟ ಮಾಡುವ (fake nandini ghee) ದೊಡ್ಡ ಜಾಲವನ್ನು ಕೇಂದ್ರ ಅಪರಾಧ ಶಾಖೆ (CCB) ಅಧಿಕಾರಿಗಳು ಮತ್ತು ಕೆಎಂಎಫ್ (KMF) ವಿಜಿಲೆನ್ಸ್ ವಿಂಗ್ ನಡೆಸಿದ ಜಂಟಿ ಕಾರ್ಯಾಚರಣೆಯಲ್ಲಿ ಬಯಲು ಮಾಡಲಾಗಿದೆ. ಕೆಎಂಎಫ್ ವಿತರಕ, ಅವರ ಮಗ ಮತ್ತು ಇತರ ಇಬ್ಬರು ಸೇರಿದಂತೆ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿದೆ. ಈ ಜಾಲ ನಂದಿನಿ ತುಪ್ಪವನ್ನು ಕೃತಕ ತುಪ್ಪದೊಂದಿಗೆ ಕಲಬೆರಕೆ ಮಾಡಿ ಗೋಲ್‌ಮಾಲ್‌ ನಡೆಸುತ್ತಿತ್ತು.

1.26 ಕೋಟಿ ರೂಪಾಯಿ ಮೌಲ್ಯದ 8,136 ಲೀಟರ್ ಕಲಬೆರಕೆ ತುಪ್ಪ ಪೂರೈಸಲು ಬಳಸಿದ ನಾಲ್ಕು ವಾಹನಗಳು, ತುಪ್ಪ ತಯಾರಿಸಲು ಯಂತ್ರೋಪಕರಣಗಳು ಮತ್ತು ತುಪ್ಪವನ್ನು ಕಲಬೆರಕೆ ಮಾಡಲು ಬಳಸಲಾದ ದೊಡ್ಡ ಪ್ರಮಾಣದ ತೆಂಗಿನಕಾಯಿ ಮತ್ತು ತಾಳೆ ಎಣ್ಣೆಯನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಗಳು ಒಂದು ಲೀಟರ್ ಮೂಲ ತುಪ್ಪದಿಂದ ಮೂರು ಲೀಟರ್ ಕಲಬೆರಕೆ ತುಪ್ಪವನ್ನು ಉತ್ಪಾದಿಸುತ್ತಿದ್ದರು.

ಬೆಂಗಳೂರಿನ ಅಧಿಕೃತ ಕೆಎಂಎಫ್ ಪರವಾನಗಿಗಳನ್ನು ಹೊಂದಿರುವ ವ್ಯಾಪಾರಿಗೆ ತುಪ್ಪವನ್ನು ಸರಬರಾಜು ಮಾಡಲಾಗಿತ್ತು. ನಂತರ ಅವರು ಮತ್ತು ಅವರ ಕುಟುಂಬು ಕಲಬೆರಕೆ ತುಪ್ಪವನ್ನು ನಗರದಾದ್ಯಂತ ವಿವಿಧ ಸಗಟು ಮತ್ತು ಚಿಲ್ಲರೆ ಅಂಗಡಿಗಳು ಮತ್ತು ನಂದಿನಿ ಪಾರ್ಲರ್‌ಗಳಿಗೆ ವಿತರಿಸಿ, ಅದನ್ನು ನಿಜವಾದ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ. ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ ಶಿವಸ್ವಾಮಿ, ಆರೋಪಿಗಳಲ್ಲಿ ಒಬ್ಬರು ಕೆಎಂಎಫ್ ಡೀಲರ್ ಆಗಿದ್ದಾರೆ ಎಂದರು.

ಇದನ್ನೂ ಓದಿ: Tirupati Laddu Scam: ತಿರುಪತಿಗೆ ಕಲಬೆರಕೆ ತುಪ್ಪ ಪೂರೈಸುತ್ತಿದ್ದ ಡೈರಿಗೆ ರಾಸಾಯನಿಕ ಪದಾರ್ಥ ಒದಗಿಸುತ್ತಿದ್ದ ವ್ಯಾಪಾರಿಯ ಬಂಧನ

ಚಾಮರಾಜಪೇಟೆಯಲ್ಲಿ ಗೋದಾಮು

ಸಿಸಿಬಿ ವಿಶೇಷ ತನಿಖಾ ದಳ ಮತ್ತು ಕೆಎಂಎಫ್ ವಿಜಿಲೆನ್ಸ್ ವಿಂಗ್ ಅಧಿಕಾರಿಗಳು ನಿರ್ದಿಷ್ಟ ಗುಪ್ತಚರ ಮಾಹಿತಿಯನ್ನು ಸಂಗ್ರಹಿಸಿ ದಾಳಿ ನಡೆಸಿ ಈ ಕಾರ್ಯಾಚರಣೆಯನ್ನು ಪತ್ತೆ ಹಚ್ಚಿದ್ದಾರೆ. ಬಂಧಿತ ವ್ಯಕ್ತಿಗಳನ್ನು ಕೆಎಂಎಫ್ ವಿತರಕ ಮಹೇಂದ್ರ, ಅವರ ಮಗ ದೀಪಕ್, ತಮಿಳುನಾಡಿನಿಂದ ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ಮುನಿರಾಜು ಮತ್ತು ಚಾಲಕ ಅಭಿ ಅರಸು ಎಂದು ಗುರುತಿಸಲಾಗಿದೆ. ಜಂಟಿ ತಂಡವು ಚಾಮರಾಜಪೇಟೆಯ ನಂಜಾಂಬ ಅಗ್ರಹಾರದಲ್ಲಿರುವ ಕೃಷ್ಣ ಎಂಟರ್‌ಪ್ರೈಸಸ್‌ಗೆ ಸೇರಿದ ಗೋದಾಮುಗಳು, ಅಂಗಡಿಗಳು ಮತ್ತು ಸರಕು ವಾಹನಗಳ ಮೇಲೆ ದಾಳಿ ನಡೆಸಿತು, ಇದು ಆರೋಪಿಗಳಲ್ಲಿ ಒಬ್ಬರು ಮತ್ತು ಅವರ ಕುಟುಂಬ ಸದಸ್ಯರ ಒಡೆತನದಲ್ಲಿದೆ.

ದಾಳಿಯ ಸಮಯದಲ್ಲಿ, ತಮಿಳುನಾಡಿನಿಂದ ಕಲಬೆರಕೆ ತುಪ್ಪ ಸಾಗಿಸುತ್ತಿದ್ದ ವಾಹನವನ್ನು ಚಾಲಕ ಅರಸು ಜೊತೆಗೆ ವಶಪಡಿಸಿಕೊಳ್ಳಲಾಗಿದೆ. ಐದು ಮೊಬೈಲ್ ಫೋನ್‌ಗಳು, 60 ಲಕ್ಷ ರೂಪಾಯಿ ಮೌಲ್ಯದ ನಾಲ್ಕು ಸರಕು ವಾಹನಗಳು, 1.19 ಲಕ್ಷ ರೂ. ನಗದು, ನಕಲಿ ನಂದಿನಿ ಬ್ರಾಂಡ್ ಸ್ಯಾಚೆಟ್‌ಗಳು ಮತ್ತು 8,136 ಲೀಟರ್ ಕಲಬೆರಕೆ ತುಪ್ಪ ತುಂಬಿದ ಬಾಟಲಿಗಳು, ಕಲಬೆರಕೆಗೆ ಬಳಸುವ ತೆಂಗಿನಕಾಯಿ ಮತ್ತು ತಾಳೆ ಎಣ್ಣೆ ತುಂಬಿದ ಡಬ್ಬಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಕೆಎಂಎಫ್ ವಿಜಿಲೆನ್ಸ್ ವಿಭಾಗದಿಂದ ನಮಗೆ ನಿರ್ದಿಷ್ಟ ಮಾಹಿತಿ ಬಂದಿದೆ. ಕಲಬೆರಕೆ ತುಪ್ಪ ಉತ್ಪಾದಿಸುತ್ತಿದ್ದ ಘಟಕವು ತಮಿಳುನಾಡಿನ ತಿರುಪ್ಪೂರು ಜಿಲ್ಲೆಯಲ್ಲಿತ್ತು. ಪ್ರಮುಖ ಆರೋಪಿಯ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಲಾಗುತ್ತಿದೆ. ಆರೋಪಿಗಳು ಕಳೆದ ಎರಡು ವರ್ಷಗಳಿಂದ ಸಕ್ರಿಯರಾಗಿದ್ದರು ಎಂದು ಬೆಂಗಳೂರು ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: Nandini Ghee Price: ರಾಜ್ಯದ ಜನತೆಗೆ ಮತ್ತೆ ದರ ಏರಿಕೆ ಶಾಕ್; ನಂದಿನಿ ತುಪ್ಪದ ದರ ಪ್ರತಿ ಲೀಟರ್​ಗೆ 90 ರೂಪಾಯಿ ಏರಿಕೆ

ಹರೀಶ್‌ ಕೇರ

View all posts by this author