Udupi Sri Mandarthi Vaibhava: ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್‌ನ 'ನಳಭೀಮ ಪಾಕಂ' ಸಿಹಿ ತಿಂಡಿ ಮಳಿಗೆಗೆ ಚಾಲನೆ
Udupi Sri Mandarthi Vaibhava: ಬೆಂಗಳೂರು ನಗರದ ದೊಡ್ಡ ಬಾಣಸವಾಡಿಯಲ್ಲಿರುವ ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್‌ನ 'ನಳಭೀಮ ಪಾಕಂ' ಸಿಹಿ ತಿಂಡಿಯ ವಿಶೇಷ ಮಳಿಗೆ ಮತ್ತು ಕ್ಯಾಟರಿಂಗ್ ಸರ್ವಿಸ್ ಅನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಪತ್ನಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್ ಅವರು ಶನಿವಾರ ಉದ್ಘಾಟಿಸಿ, ಶುಭ ಕೋರಿದರು.


ಬೆಂಗಳೂರು: ನಗರದ ದೊಡ್ಡ ಬಾಣಸವಾಡಿಯಲ್ಲಿರುವ ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್‌ನ 'ನಳಭೀಮ ಪಾಕಂ' ಸಿಹಿ ತಿಂಡಿಯ ವಿಶೇಷ ಮಳಿಗೆ ಮತ್ತು ಕ್ಯಾಟರಿಂಗ್ ಸರ್ವಿಸ್ ಅನ್ನು ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರ ಪತ್ನಿ, ವಿಶ್ವವಾಣಿ ಪುಸ್ತಕ ಪ್ರಕಾಶನದ ವ್ಯವಸ್ಥಾಪಕ ನಿರ್ದೇಶಕಿ ಸುಷ್ಮಾ ಭಟ್ ಅವರು ಶನಿವಾರ ಉದ್ಘಾಟಿಸಿ, ಶುಭ ಕೋರಿದರು. ಈ ಹೋಟೆಲ್‌ನ ಶುಚಿ ರುಚಿ ತಿಂಡಿ ತಿನಿಸುಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಉಡುಪಿ ಶ್ರೀ ಮಂದಾರ್ತಿ ವೈಭವ ಹೋಟೆಲ್ ಈ ಪ್ರದೇಶದ ಅತ್ಯಂತ ಜನಪ್ರಿಯ ಹೋಟೆಲ್ ಆಗಿದೆ.

ದುರ್ಗಾ ಪರಮೇಶ್ವರಿ ಚಿಟ್ಸ್ ಪ್ರೈ. ಲಿನ ಮ್ಯಾನೇಜಿಂಗ್ ಡೈರೆಕ್ಟರ್ ಎಂ.ಬಿ. ಉಮೇಶ್ ಶೆಟ್ಟಿ ಅವರು ಮುಖ್ಯ ಅತಿಥಿಯಾಗಿ ಆಗಮಿಸಿ, ಈ ಹೋಟೆಲ್ ಮತ್ತು ನೂತನವಾಗಿ ಆರಂಭಿಸಲಾಗಿರುವ ಸಿಹಿ ಮಳಿಗೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಹೋಟೆಲ್‌ನ ಮಾಲೀಕರಾದ ನಿತ್ಯಾನಂದ ಶೆಟ್ಟಿ ಅವರು, ಹೋಟೆಲ್‌ನ ವಾರ್ಷಿಕೋತ್ಸವದ ಅಂಗವಾಗಿ ಸಿಹಿ ತಿಂಡಿ ಮಳಿಗೆ ಆರಂಭಿಸಲಾಗಿದೆ ಎಂದು ತಿಳಿಸಿದರು.

ನಮ್ಮ ಹೋಟೆಲ್‌ನಲ್ಲಿ ಶುಚಿ ಮತ್ತು ರುಚಿಗೆ ಆದ್ಯತೆ ನೀಡಲಾಗಿದೆ. ಜನರ ಅನಾರೋಗ್ಯಕ್ಕೆ ಕಲುಷಿತ ಆಹಾರವೇ ಮೂಲ ಕಾರಣ. ಹಾಗಾಗಿ ನಾವು ಊಟ, ತಿಂಡಿ ತಯಾರಿಸುವಾಗ ಯಾವುದೇ ರಾಸಾಯನಿಕ, ಸೋಡಾ ಅಥವಾ ಕಲಬೆರಕೆ ವಸ್ತುಗಳನ್ನು ಬಳಸುವುದಿಲ್ಲ. ಆರೋಗ್ಯಕರ ಅಡುಗೆ ಎಣ್ಣೆಯನ್ನೇ ಬಳಸುತ್ತೇವೆ ಎಂದು ನಿತ್ಯಾನಂದ ಶೆಟ್ಟಿ ಅವರು ಹೇಳಿದರು.
ಈ ಸುದ್ದಿಯನ್ನೂ ಓದಿ | Wedding Nail Art Trend: ಶ್ರಾವಣದ ವೆಡ್ಡಿಂಗ್ ಸೀಸನ್‌ನಲ್ಲಿ ಹೆಚ್ಚಾಯ್ತು ನೇಲ್ ಆರ್ಟ್ ಕ್ರೇಝ್!
ಎಲ್ಲ ಬಜೆಟ್‌ನ ಜನರಿಗೆ ಸೂಕ್ತ ಎನಿಸುವ ಕ್ಯಾಟರಿಂಗ್ ವ್ಯವಸ್ಥೆಯನ್ನೂ ನಾವು ಆರಂಭಿಸಿದ್ದೇವೆ. ಮದುವೆ, ವಿಶೇಷ ಸಭೆ, ಸಮಾರಂಭಗಳಿಗೆ ವಿಶೇಷ ಊಟ, ತಿಂಡಿ- ತಿನಿಸುಗಳನ್ನು ನಾವು ಪೂರೈಸುತ್ತೇವೆ ಎಂದೂ ನಿತ್ಯಾನಂದ ಶೆಟ್ಟಿ ಅವರು ಮಾಹಿತಿ ನೀಡಿದರು.
ಕ್ಯಾಟರಿಂಗ್ ಸರ್ವಿಸ್‌ಗಾಗಿ ಸಂಪರ್ಕಿಸಿ:
ಮೊಬೈಲ್ ನಂ: 9480646203, 9700862222