ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chikkaballapur News: ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಶ್ರೀ ಕೃಷ್ಣ ಜಯಂತಿ ಆಚರಣೆ

ಹಿಂದೂ ಧರ್ಮಿಯರು ಶ್ರೀ ಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾಧಿ ಕಾಲ ದಿಂದಲೂ ಪಾಲಿಸುತ್ತಿದ್ದಾರೆ. ಧರ್ಮದ ರಕ್ಷಣೆ ಮಾಡಲು ಶ್ರೀ ಕೃಷ್ಣ ಪರಮಾತ್ಮನು ತೆಗೆದುಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ “ಸಂಭವಾಮಿ ಯುಗೇ ಯುಗೇ ” ಎಂದು ಹೇಳಿ ಧರ್ಮೋದ್ದಾರಕವಾಗಿ, ಜಗದೋದ್ಧಾರಕನಾಗಿ  ನಿಂತರು.

ಜಿಲ್ಲಾಡಳಿತದಿಂದ ಅರ್ಥಪೂರ್ಣವಾಗಿ ಶ್ರೀ ಕೃಷ್ಣ ಜಯಂತಿ ಆಚರಣೆ

Ashok Nayak Ashok Nayak Aug 16, 2025 11:39 PM

ಚಿಕ್ಕಬಳ್ಳಾಪುರ : ಮನುಷ್ಯನ ಜೀವನಕ್ಕೆ ಬೇಕಾದ ಎಲ್ಲ ಆದರ್ಶಗಳು, ಸಲಹೆ, ಮಾರ್ಗದರ್ಶನಗಳು ಭಗವದ್ಗೀತೆಯ ತಾತ್ಪರ್ಯದಲ್ಲಿವೆ ಎಂದು ಜಿಲ್ಲಾಧಿಕಾರಿ ಪಿ ಎನ್ ರವೀಂದ್ರ ತಿಳಿಸಿದರು. 

ಶನಿವಾರ ನಗರದ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಯಾದವ ಕ್ಷೇಮಾಭಿವೃದ್ಧಿ ಸಂಘ ಇವರ ಸಂಯುಕ್ತಾಶ್ರಯದಲ್ಲಿ ನಡೆದ ಶ್ರೀ ಕೃಷ್ಣನ ಜಯಂತಿ ಕಾರ್ಯಕ್ರಮದಲ್ಲಿ ಶ್ರೀ ಕೃಷ್ಣನ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ  ಮಾತನಾಡಿದರು.

ಹಿಂದೂ ಧರ್ಮಿಯರು ಶ್ರೀ ಕೃಷ್ಣನನ್ನು ಆರಾಧಿಸುವ, ಪೂಜಿಸುವ ಸಂಪ್ರದಾಯವನ್ನು ಅನಾಧಿ ಕಾಲದಿಂದಲೂ ಪಾಲಿಸುತ್ತಿದ್ದಾರೆ. ಧರ್ಮದ ರಕ್ಷಣೆ ಮಾಡಲು ಶ್ರೀ ಕೃಷ್ಣ ಪರಮಾತ್ಮನು ತೆಗೆದು ಕೊಂಡ ನಿರ್ಧಾರ ಸತ್ಯದ ದಾರಿಯಾಗಿದೆ. ಜಗತ್ತಿನಲ್ಲಿ ಅಧರ್ಮ ಹೆಚ್ಚಾದಾಗ ಎಲ್ಲಾ ಕಾಲಕ್ಕೂ  “ಸಂಭವಾಮಿ ಯುಗೇ ಯುಗೇ ” ಎಂದು ಹೇಳಿ ಧರ್ಮೋದ್ದಾರಕವಾಗಿ, ಜಗದೋದ್ಧಾರಕನಾಗಿ  ನಿಂತರು.

ಇದನ್ನೂ ಓದಿ: Chikkanayakanahalli News: ವಿದ್ಯುತ್ ಕಂಬದಿಂದ ಬಿದ್ದು ಲೈನ್‌ಮನ್ ಸಾವು

ಧರ್ಮವನ್ನು ರಕ್ಷಿಸುವ ನಿಟ್ಟಿನಲ್ಲಿ ಭಗವಾನ್ ವಿಷ್ಣುವಿನ 8ನೇ ಅವತಾರವಾಗಿರುವ ಕೃಷ್ಣ, ಸಾವಿರಾರು ಗೋಪಿಕ ಸ್ತ್ರೀಯರಿಗೆ ರಕ್ಷಣೆ ಕೊಟ್ಟನು. ಕುರುಕ್ಷೇತ್ರ ಯುದ್ಧದಲ್ಲಿ ಪಾಂಡವರು ಕೌರವರ ಯುದ್ಧದಲ್ಲಿ ಧರ್ಮ ರಕ್ಷಣೆ ಕರ್ತವ್ಯ ಮಾಡಿ ಪ್ರಮುಖ ಪಾತ್ರ ವಹಿಸುತ್ತಾರೆ. ಅವರು ಸಲಹೆಗಾರ, ಯೋಧ, ರಾಜತಾಂತ್ರಿಕ ಮತ್ತು  ಮಾರ್ಗದರ್ಶಕ ಸೇರಿದಂತೆ ಬಹು ಪಾತ್ರಗಳಲ್ಲಿ ಯಶಸ್ವಿಯಾಗಿ ಕಾಣಿಸಿಕೊಳ್ಳುತ್ತಾರೆ.

ಒಬ್ಬ ಮಗನಾಗಿ, ಅಣ್ಣನಾಗಿ, ಪತಿಯಾಗಿ, ತಂದೆಯಾಗಿ, ಸಹೋದರನಾಗಿ, ಮಿತ್ರನಾಗಿ ಯಾವ ರೀತಿ ನಡೆದುಕೊಳ್ಳಬೇಕು ಎಂಬುದನ್ನು ಕೃಷ್ಣನ ಜೀವನ ಚರಿತ್ರೆಯನ್ನು ಅರಿಯುವ ಮೂಲಕ ನಾವೆಲ್ಲರೂ ತಿಳಿದುಕೊಳ್ಳಬಹುದಾಗಿದೆ. ಭಗವದ್ಗೀತೆ ಎಲ್ಲರ ಜೀವನದ ಆದರ್ಶವಾಗಬೇಕು. ಶ್ರೀಕೃಷ್ಣ ಚರಿತ್ರೆಯು ಹಾಗೂ ಅವರ ಸಂದೇಶಗಳು ಪ್ರಜಾಸತ್ತಾತ್ಮಕ ಹಾಗೂ ಸಮಸಮಾಜದ ಪರಿಕಲ್ಪನೆಗಳನ್ನು ಬಿಂಬಿಸುತ್ತವೆ. ಸತ್ಯ, ನಿಷ್ಠೆ, ಧರ್ಮವನ್ನು ರಕ್ಷಿಸಿದವರು ಶ್ರೀಕೃಷ್ಣ ಎಂದು ತಿಳಿಸಿದರು.

ಶ್ರೀ ಕೃಷ್ಣ ಎಂದರೆ ಒಂದು ರೀತಿಯ ಚೇತನ, ಜೀವಂತಿಕೆ, ಕಳೆ. ಶ್ರೀ ಕೃಷ್ಣನನ್ನು ನೆನೆಯುವುದೆ ಒಂದು ಭಾಗ್ಯ.ಇಂದಿಗೂ ಅನೇಕ ತಾಯಂದಿರು ಮನೆಯಲ್ಲಿ ತಮ್ಮ ಚಿಕ್ಕ ಮಕ್ಕಳಿಗೆ ಶ್ರೀ ಕೃಷ್ಣನ ವೇಷವನ್ನ ಹಾಕಿ ಸುಂದರವಾಗಿ ಅಲಂಕರಿಸಿ ಆನಂದಪಡುತ್ತಾರೆ. ಸಂಕಷ್ಟದ ಸಂದರ್ಭಗಳಲ್ಲಿ "ಕೃಷ್ಣ ಕೃಷ್ಣ ಹರೇ ಹರೇ" ಎಂದು ಮನಸ್ಸಿನಲ್ಲಿ ನೆನೆದರೆ ಸಂಕಷ್ಟ ದೂರವಾಗುತ್ತದೆ ಎಂದು ಪ್ರತೀತಿ ಇದೆ.

ವಿಷ್ಣುವಿನ ದಶಾವತಾರಗಳಲ್ಲಿ ಒಂದಾದ ಶ್ರೀಕೃಷ್ಣನ ಜನ್ಮ ದಿನವನ್ನು ಕೃಷ್ಣ ಜನ್ಮಾಷ್ಟಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಶ್ರೀಕೃಷ್ಣನ ಬೋಧನೆ ಹಾಗೂ ಸಂದೇಶಗಳನ್ನು ಇಂದಿನ ಹಾಗೂ ಮುಂದಿನ ಪೀಳಿಗೆಗೆ ನಿರಂತರವಾಗಿ ತಲುಪಲಿವೆ. ಸೂರ್ಯ, ಚಂದ್ರ, ಭೂಮಿ ಇರುವವ ರೆಗೂ ಕೃಷ್ಣನ ಜೀವನ ಚರಿತ್ರೆ, ಆದರ್ಶಗಳು ಸಾರ್ವತ್ರಿಕ ಮತ್ತು ಪ್ರಸ್ತುತವಾಗಿರಲಿವೆ  ಎಂದು ಬಣ್ಣಿಸಿದರು.

ಸಂಪನ್ಮೂಲ ವ್ಯಕ್ತಿಯಾಗಿ ಪೆರೇಸಂದ್ರದ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಪಿ.ಎನ್.  ನರಸಿಂಹರೆಡ್ಡಿ ಅವರು ಮಾತನಾಡುತ್ತಾ, ಶ್ರೀಕೃಷ್ಣ ಜಯಂತಿಯನ್ನು ಇಂದು ವಿಶ್ವ ದಾದ್ಯಂತ ಆಚರಿಸಲ್ಪಡುತ್ತಿದೆ. ಮಥುರಾ ನಗರದಲ್ಲಿ ಉಗ್ರ ರಾಕ್ಷಸ ಕಂಸನನ್ನ ಅಂತ್ಯ ಗೊಳಿಸಲು ಶ್ರೀ ಮಹಾವಿಷ್ಣು ಅವತಾರ ತಾಳುತ್ತಾರೆ.  ದೇವಕಿಗೆ ಎಂಟನೇ ಮಗುವಾಗಿ ಶ್ರೀ ಕೃಷ್ಣನು ಜನಿಸು ತ್ತಾನೆ.

ವಸುದೇವನು ಕೃಷ್ಣನನ್ನು ಯಮುನಾ ನದಿಯ ಮೂಲಕ ಗೋಕುಲಕ್ಕೆ ಸಾಗಿಸಿದನು. ಅಲ್ಲಿ ಅವರನ್ನು ನಂದ ಗೋಕುಲದಲ್ಲಿ ಯಶೋಧ ಸಾಕಿದರು. ರಾಧೆಯನ್ನು ವಿವಾಹವಾಗುತ್ತಾರೆ. ನಂತರದ ದಿನಗಳಲ್ಲಿ ಅನ್ಯ ಜನಾಂಗಕ್ಕೆ ಸೇರಿದ ಜಾಂಬವತಿಯನ್ನು ಮದುವೆಯಾಗುವ ಮೂಲಕ ಅಂತರ್ಜಾತಿ ವಿವಾಹಕ್ಕೆ ನಾಂದಿಯಾಗಿರುವ ದೈವ ಸ್ವರೂಪಿ ಕೃಷ್ಣ.

ಜೂಜಿನಲ್ಲಿ ಪಾಂಡವರು ಸೋತ ನಂತರ ದ್ರೌಪದಿ ವಸ್ತ್ರಾಭರಣ ಮಾಡುವ ಸಂದರ್ಭದಲ್ಲಿ  ಹೆಣ್ಣಿನ  ಮಾನ, ಗೌರವ ಕಾಪಾಡುತ್ತಾರೆ. ಪಾಂಡವ ಕೌರವರ ಯುದ್ಧದಲ್ಲಿ ಶ್ರೀ ಕೃಷ್ಣನು ಅರ್ಜುನನ ರಥಸಾರಥಿಯಾಗು ತ್ತಾನೆ. ಅರ್ಜುನನು ಗುರು ಹಿರಿಯರು, ರಕ್ತ ಸಂಬಂಧಿಕರ ನಡುವೆ ಯುದ್ಧ ಮಾಡುತ್ತಿರುವ ಸಂದರ್ಭದಲ್ಲಿ ಭಗವದ್ಗೀತೆಯ ಉಪದೇಶ ನೀಡುತ್ತಾನೆ. ಕೃಷ್ಣ ಪಾಂಡವರ ಜೊತೆ ಸೇರಿ ಧರ್ಮವೆಂಬ ಯುದ್ಧವನ್ನು  ಗೆಲ್ಲುತ್ತಾರೆ ಎಂದು ಅವರ ಜೀವನ ಚರಿತ್ರೆಯನ್ನು ತಿಳಿಸಿಕೊಟ್ಟರು.

ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಡಾ.ಎನ್ ಭಾಸ್ಕರ್, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಗನ್ನಾಥ್ ರೈ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಿ.ಎಂ ರವಿಕುಮಾರ್, ತಹಸೀಲ್ದಾರ್ ರಶ್ಮಿ,  ಸಮುದಾಯದ ಮುಖಂಡರಾದ ಕೆ.ಎಂ ಮುನೇಗೌಡ, ಆರ್ ವೆಂಕಟೇಶ್, ವಿ.ಮನಿಕೃಷ್ಣಪ್ಪ, ವೆಂಕಟೇಶ್, ಶ್ರೀನಿವಾಸ್, ನರಸಪ್ಪ, ಗೋಪಾಲಪ್ಪ ಹಾಗೂ  ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.