ಕಲಬುರಗಿ: ರಾಜ್ಯದಲ್ಲಿ ಭುಗಿಲೆದ್ದಿರುವ ಆರ್‌ಎಸ್‌ಎಸ್ ಚಟುವಟಿಕೆಗಳಿಗೆ ನಿರ್ಬಂಧ ವಿವಾದ(RSS procession) ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿದೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವಿನ ತಿಕ್ಕಾಟವೂ ತಾರಕಕ್ಕೇರಿದೆ. ಸಚಿವ ಪ್ರಿಯಾಂಕ್ ಖರ್ಗೆ ತವರು ಕ್ಷೇತ್ರ ಚಿತ್ತಾಪುರದಲ್ಲಿ ಇಂದು ನಡೆಯಬೇಕಿದ್ದ ಪಥಸಂಚಲನಕ್ಕೆ ಜಿಲ್ಲಾಧಿಕಾರಿ ಅನಮತಿ ನಿರಾಕರಿಸಿ ಆದೇಶ ಹೊರಡಿಸಿದ್ದರು. ಅದರಂತೆ ಇಂದಿನ ಕಾರ್ಯಕ್ರಮ ರದ್ದುಗೊಂಡಿದೆ.
ಇದೀಗ ಇದರ ಬೆನ್ನಲ್ಲೇ ಆರ್ ಎಸ್ ಎಸ್ ಪಥ ಸಂಚಲನಕ್ಕೆ ಅನುಮತಿ ನಿರಾಕರಣೆ ಹಿನ್ನೆಲೆಯಲ್ಲಿ ಇದೀಗ ಜಿಲ್ಲಾಧಿಕಾರಿ ಕ್ರಮ ಪ್ರಶ್ನಿಸಿ ಕಲಬುರಗಿ ಹೈಕೋರ್ಟ್ ಪೀಠದಲ್ಲಿ ಅರ್ಜಿ ವಿಚಾರಣೆ ನಡೆಯಿತು. ನ್ಯಾಯಮೂರ್ತಿ ಎಂಜಿಎಸ್ ಕಮಲ್ ಅವರ ಪೀಠದಲ್ಲಿ ತುರ್ತು ವಿಚಾರಣೆ ನಡೆಯಿತು. ಇಂತಹ ವಿಚಾರಗಳಿಗೆ ಸ್ಪಷ್ಟ ಕಾನೂನು ಇಲ್ಲ ಎಂದು ಅರ್ಜಿದಾರರ ಪರವಾಗಿ ವಾದಿರಾಜ್ ಕಡ್ಲೂರು ವಾದಿಸಿದರು. ವೇಳೆ ಹೈಕೋರ್ಟ್ ಭೀಮ್ ಆರ್ಮಿ ಮತ್ತು ಆರ್ ಎಸ್ ಎಸ್ ಮತ ಸಂಚಲನಕ್ಕೆ ಪ್ರತ್ಯೇಕ ಸಮಯ ನೀಡಿ ಎಂದು ಸೂಚನೆ ನೀಡಿತು.
ಈ ಸುದ್ದಿಯನ್ನೂ ಓದಿ: RSS Song: ಭಾರೀ ವಿವಾದ ಸೃಷ್ಟಿಸ್ತಿದೆ RSSನ "ಗಣ ಗೀತಂ" ಹಾಡು; ಅಷ್ಟಕ್ಕೂ ನಡೆದಿದ್ದೇನು?
ಪ್ರತಿಭಟನೆ ಮಾಡದೆ, ಘೋಷಣೆ ಕೂಗದೆ, ಗುಂಪು ನಡೆಯಲು ಅನುಮತಿ ಅಗತ್ಯವೇ? ದೊಡ್ಡ ಕುಟುಂಬದ ಸದಸ್ಯರು, ಪರಿಸರದ ಅರಿವು ಮೂಡಿಸುವ ಮೆರವಣಿಗೆಗೆ ಅನುಮತಿ ಪಡೆಯಬೇಕೆಂದು ಯಾವ ಕಾನೂನಿನ ಅಡಿಯಲ್ಲಿ ಅನುಮತಿ ಪಡೆಯಬೇಕೆಂದು ಇದೆ ಎಂದು ಹೈಕೋರ್ಟ್ ಪ್ರಶ್ನೆ ಮಾಡಿತು. ಈ ವೇಳೆ ಹೈಕೋರ್ಟ್ ಎರಡು ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಸೂಚನೆ ನೀಡಿತು ನವೆಂಬರ್ 2ರಂದು ಆರ್ ಎಸ್ ಎಸ್ ಪಥ ಸಂಚಲನ ನಡೆಸಲು ಅರ್ಜಿದಾರರು ಒಪ್ಪಿಗೆ ನೀಡಿದ್ದಾರೆ. ರಾಜ್ಯದಲ್ಲೆಡೆ 250 ಶಾಂತಿಯುತ ಪಥ ಸಂಚಲನ ನಡೆಸಲಾಗುತ್ತದೆ.
ಹೊಸದಾಗಿ ಅರ್ಜಿ ಕೊಡಲು ಅರ್ಜಿದಾರರಿಗೆ ಹೈಕೋರ್ಟ್ ಸೂಚನೆ ನೀಡಿತು. ಪಥ ಸಂಚಲನ ಮಾರ್ಗದೊಂದಿಗೆ ಅರ್ಜಿ ನೀಡಲು ಸೂಚನೆ ನೀಡಿತು. ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಲು ಸೂಚಿಸಿತು ಪೊಲೀಸರು ಹಾಗೂ ತಹಶೀಲ್ದಾರರಿಗೂ ಕೂಡ ಅರ್ಜಿ ಪ್ರತಿ ನೀಡಲು ಸೂಚನೆ ನೀಡಿತು. ಆರ್ ಎಸ್ ಎಸ್ ಮತ್ತು ಭೀಮ್ ಆರ್ಮಿಗೆ ಪ್ರತ್ಯೇಕ ಸಮಯ ನೀಡಿ ಎರಡು ಸಂಘಟನೆಗಳಿಗೆ ಪ್ರತ್ಯೇಕ ಸಮಯ ನಿಗದಿಪಡಿಸಲು ಹೈಕೋರ್ಟ್ ಸೂಚನೆ ನಡೆಯಿತು. ಎಲ್ಲೂ ಶಾಂತಿ ಭಂಗವಾಗಿಲ್ಲವೆಂದು ಅರ್ಜಿದಾರರ ಹೇಳಿಕೆಯನ್ನು ಹೈಕೋರ್ಟ್ ದಾಖಲಿಸಿತು. ಬಳಿಕ ವಿಚಾರಣೆಯನ್ನು ಅಕ್ಟೋಬರ್ 24ರಂದು ಹೈಕೋರ್ಟ್ ಮುಂದೂಡಿತು.