RSS Song: ಭಾರೀ ವಿವಾದ ಸೃಷ್ಟಿಸ್ತಿದೆ RSSನ "ಗಣ ಗೀತಂ" ಹಾಡು; ಅಷ್ಟಕ್ಕೂ ನಡೆದಿದ್ದೇನು?
RSS Song: ಕೇರಳದ ಕೋಟುಕ್ಕಲ್‌ನಲ್ಲಿರುವ ತಿರುವಾಂಕೂರು ದೇವಾಸಂ ಬೋರ್ಡ್ ಆಡಳಿದ ಆಡಿಯಲ್ಲಿ ಬರುವ ದೇವಸ್ಥಾನದಲ್ಲಿ, ಆರ್‌ಎಸ್‌ಎಸ್‌ನ "ಗಣ ಗೀತಂ" ಹಾಡಿದ್ದಕ್ಕೆ ತೀವ್ರ ಟೀಕೆ ವ್ಯಕ್ತವಾಗಿದೆ. ಘಟನೆ ಕುರಿತು ಆಕ್ಷೇಪ ವ್ಯಕ್ತಪಡಿಸಿರುವ ಕಾಂಗ್ರೆಸ್, ದೇವಸ್ಥಾನವನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಂಡಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ. ಪೊಲೀಸರು ಘಟನೆಯ ಬಗ್ಗೆ ತನಿಖೆ ನಡೆಸುತ್ತಿದ್ದಾರೆ. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

ಕೇರಳದ ಕೊಟ್ಟುಕ್ಕಲ್‌ನಲ್ಲಿರುವ ದೇವಾಲಯ

ಕೊಟ್ಟುಕ್ಕಲ್: ಕೇರಳದ ಕೊಟ್ಟುಕ್ಕಲ್‌ನಲ್ಲಿರುವ ತಿರುವಾಂಕೂರು ದೇವಸ್ವಂ ಮಂಡಳಿ (TDP) ಆಡಳಿತಕ್ಕೆ ಒಳಪಡುವ ದೇವಾಲಯದಲ್ಲಿ ಆಯೋಜಿಸಲಾಗಿದ್ದ ಸಂಗೀತ ಕಚೇರಿ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ "ಗಣಗೀತೆ" (RSS Song)ಯನ್ನು ಹಾಡಿದ್ದು, ಭಾರೀ ವಿವಾದವನ್ನು ಸೃಷ್ಟಿ ಮಾಡಿದೆ. ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ವಿರೋಧ ಪಕ್ಷ ಕಾಂಗ್ರೆಸ್ ಕೆಂಡಮಂಡಲವಾಗಿದ್ದು, ಟಿಡಿಬಿಯ ಈ ನಡೆ ವಿರುದ್ದ ಟೀಕೆ ಪ್ರಹಾರ ನಡೆಸಿದೆ. ಅಲ್ಲದೇ ಇದರ ವಿರುದ್ದ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕೈ ನಾಯಕರು ಆಗ್ರಹಿಸಿದ್ದು, ಏ.6ರಂದು ದೇವಾಲಯದಲ್ಲಿ ನಡೆದ 'ಗಾನ ಮೇಳ' (ಸಂಗೀತ ಕಚೇರಿ) ದಲ್ಲಿ ಸಂಗೀತ ತಂಡದ ಸದಸ್ಯರು ಈ ಹಾಡನ್ನು ಹಾಡಿದ್ದಾರೆ ಎಂದು ವರದಿಯಾಗಿದೆ
ಹೌದು ದೇವಸ್ಥಾನದಲ್ಲಿ ಉತ್ಸವಾದಿ ಕಾರ್ಯಕ್ರಮಗಳು ನಡೆಯುತ್ತಿದ್ದು, ಇದರ ಅಂಗವಾಗಿ ಸಂಗೀತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ಈ ವೇಳೆ ಗಾಯಕರು ಆರ್‌ಎಸ್‌ಎಸ್‌ನ "ಗಣಗೀತೆ'' ಹಾಡಿದ್ದಾರೆ ಎನ್ನಲಾಗಿದ್ದು, ಇದೇ ವೇಳೆ ದೇವಾಲಯದ ಆವರಣದಲ್ಲಿ ಆರ್‌ಎಸ್‌ಎಸ್ ಧ್ವಜಗಳನ್ನು ಹಾರಿಸಲಾಗಿದೆ ಎಂಬ ಆರೋಪವೂ ಕೇಳಿ ಬಂದಿದೆ.
ಈ ಕುರಿತು ವಿರೋಧ ಪಕ್ಷದ ನಾಯಕ ವಿ.ಡಿ. ಸತೀಶನ್, ರಾಜಕೀಯ ಕಾರ್ಯಕ್ರಮಗಳಿಗೆ ದೇವಾಲಯಗಳನ್ನು ಬಳಸಿಕೊಳ್ಳಬಾರದು ಎಂದು ಹೈಕೋರ್ಟ್ ತೀರ್ಪು ನೀಡಿದೆ. ಆದರೂ ಟಿಡಿಬಿ ನಿರ್ವಹಿಸುತ್ತಿರುವ ದೇವಸ್ಥಾನದಲ್ಲಿ ಈ ನಿಯಮ ಉಲ್ಲಂಘನೆಯಾಗಿದೆ ಎಂದು ಅಸಮಾಧನ ಹೊರಹಾಕಿದ್ದಾರೆ. ಅಲ್ಲದೇ ಇದಕ್ಕೆ ಕಾರಣರಾದವರ ವಿರುದ್ಧ ತಕ್ಷಣ ಮತ್ತು ಕಠಿಣ ಕ್ರಮ ಕೈಗೊಳ್ಳುವಂತೆ ಟಿಡಿಬಿಯನ್ನು ಒತ್ತಾಯಿಸಿದ್ದಾರೆ.
ಅಲ್ಲದೇ ದೇವಾಲಯಗಳು ಭಕ್ತರಿಗೆ ಸೇರಿದ್ದು, ದೇವಾಲಯದ ಆವರಣ ಮತ್ತು ಹಬ್ಬಗಳನ್ನು ರಾಜಕೀಯಗೊಳಿಸುವುದು ಸಂಕುಚಿತ ಮನೋಭಾವವನ್ನು ಪ್ರತಿಬಿಂಬಿಸುತ್ತದೆ. ಹಾಗಾಗಿ ದೇವಸ್ವಂ ಮಂಡಳಿ ಮತ್ತು ಸರ್ಕಾರವು ಇದರಲ್ಲಿ ಭಾಗಿಯಾಗಿರುವವರ ವಿರುದ್ಧ ಶೀಘ್ರವಾಗಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದಿದ್ದಾರೆ.
ಈ ಸುದ್ದಿಯನ್ನು ಓದಿ:Kerala Horror: ಮನೆಯಲ್ಲಿಯೇ ಹೆರಿಗೆ ಮಾಡಿಸಿ, ಪತ್ನಿಯನ್ನು ಕೊಂದ ಪಾಪಿ; ಪತಿಯನ್ನು ಬಂಧಿಸಿದ ಪೊಲೀಸರು
ಘಟನೆ ನಡೆದಿರುವುದರ ಕುರಿತು ದೇವಾಲಯದ ಸಲಹಾ ಸಮಿತಿಯ ಸದಸ್ಯರೊಬ್ಬರು ಕಡಕ್ಕಲ್ ಪೊಲೀಸರಿಗೆ ದೂರು ನೀಡಿದ್ದು, ಪ್ರಕರಣ ದಾಖಲಾಗುತ್ತಿದ್ದಂತೆ ಪೊಲೀಸರೂ ತನಿಖೆ ಆರಂಭಿಸಿದ್ದಾರೆ. ಸದ್ಯ ಟಿಡಿಬಿ ಅಧಿಕಾರಿಗಳು, ದೇವಸ್ಥಾನದಲ್ಲಿ ಆರ್‌ಎಸ್‌ಎಸ್‌ನ "ಗಣ ಗೀತಂ" ಹಾಡಿ ಹಾಡಿರುವ ಕುರಿತು ಪ್ರತಿಕ್ರಿಯೆ ನೀಡಿದ್ದು, "ಈ ಘಟನೆಯ ಬಗ್ಗೆ ಆಂತರಿಕ ಮಟ್ಟದಲ್ಲೂ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು.." ಎಂದು ಭರವಸೆ ನೀಡಿದ್ದಾರೆ. ಆದರೆ ಆಡಳಿತದಲ್ಲಿರುವ ಎಡ ಪ್ರಜಾಸತ್ತಾತ್ಮಕ ಮೈತ್ರಿಕೂಟ (ಎಲ್‌ಡಿಎಫ್) ಈ ಘಟನೆ ಬಗ್ಗೆ ಇಲ್ಲಿಯವರೆಗೂ ಯಾವುದೇ ಪ್ರತಿಕ್ರಿಯೆ ಕೊಟ್ಟಿಲ್ಲ.
ಇನ್ನು ಈ ಹಿಂದೆ ಕೂಡ ಕೊಟ್ಟುಕ್ಕಲ್‌ನಲ್ಲಿರುವ ದೇವಸ್ಥಾನ ಒಂದರ ಉತ್ಸವ ಕಾರ್ಯಕ್ರಮದಲ್ಲಿ, ಆಡಳಿತಾರೂಢ ಸಿಪಿಐ(ಎಂ) ಪಕ್ಷವನ್ನು ಹೊಗಳುವ "ಕ್ರಾಂತಿ ಗೀತೆ"ಯನ್ನು ಹಾಡಿದ್ದರು. ಆ ವೇಳೆ ಕೂಡ ತೀವ್ರ ವಿವಾದ ಸೃಷ್ಟಿಸಿಯಾತ್ತು. ಈಗ ಮತ್ತೇ ಅಂತಹದೇ ಘಟನೆ ನಡೆದಿದ್ದು, ಕೇರಳದಲ್ಲಿ ಧಾರ್ಮಿಕ ಶ್ರದ್ಧಾ ಕೇಂದ್ರಗಳನ್ನು ತಮ್ಮ ರಾಜಕೀಯ ಚಟುವಟಿಕೆಗೆ ಬಳಸಿಕೊಳ್ಳುತ್ತಿವೆ ಎಂದು ಪ್ರತಿಪಕ್ಷ ಕಾಂಗ್ರೆಸ್ ತೀವ್ರ ಟೀಕೆ ಮಾಡಿದೆ. ಸದ್ಯ ಈ ವಿವಾದ ಕೇರಳದಲ್ಲಿ ರಾಜಕೀಯ ಸ್ವರೂಪ ಪಡೆದುಕೊಳ್ಳುವಂತಹ ಪರಿಸ್ಥಿತಿ ನಿರ್ಮಾಣವಾದಂತಿದ್ದು, ಕೇರಳದಲ್ಲಿ ಹೊಸ ವಿವಾದವೊಂದು ಭುಗಿಲೇಳುವ ಸಾಧ್ಯತೆ ಇದೆ.