ಬೆಂಗಳೂರು: ರಾಜ್ಯ ಪೊಲೀಸ್ ಇಲಾಖೆಯ (Karnataka police) ಕಾನ್‌ಸ್ಟೇಬಲ್ ಹಾಗೂ ಹೆಡ್ ಕಾನ್‌ಸ್ಟೇಬಲ್‌ಗಳು ಇಂದಿನಿಂದ ತೆಲಂಗಾಣ ಮಾದರಿಯ ನೇವಿ ಬ್ಲೂ (Navy blue) ಬಣ್ಣದ ಹೊಸ ‘ಪಿ ಕ್ಯಾಪ್’ (P cap) ಧರಿಸಲಿದ್ದಾರೆ. ಈ ಮೂಲಕ ದಶಕಗಳಿಂದ ರಾಜ್ಯ ಪೊಲೀಸರು ಧರಿಸುತ್ತಿದ್ದ ಸ್ಲೌಚ್ ಕ್ಯಾಪ್‌ಗೆ ಪೊಲೀಸ್ ಇಲಾಖೆ ಅಂತಿಮ ವಿದಾಯ ಹೇಳಲಿದೆ. ತೆಲಂಗಾಣ (Telangana) ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯದಲ್ಲಿ ಅಚ್ಚೊತ್ತಲಾಗಿದೆ.
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ಬೆಂಗಳೂರಿನ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‌ನಲ್ಲಿ ಸಾಂಕೇತಿಕವಾಗಿ ಮುಖ್ಯಮಂತ್ರಿಗಳು ಹಾಗೂ ಗೃಹ ಸಚಿವರಿಂದ ಪಿ-ಕ್ಯಾಪ್ ಘೋಷಣೆ ಹಾಗೂ ವಿತರಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ. ಇದೇ ವೇಳೆ ಸಿಎಂ, ರಾಜ್ಯ ಮಾದಕ ದ್ರವ್ಯ ವಿರೋಧಿ ಕಾರ್ಯಪಡೆಗೂ ಅವರು ಚಾಲನೆ ನೀಡಲಿದ್ದಾರೆ. ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹಾಗೂ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಸಲೀಂ ಮತ್ತಿತರ ಗಣ್ಯರು ಪಾಲ್ಗೊಳ್ಳಲಿದ್ದಾರೆ.
ತೆಲಂಗಾಣ ಮಾದರಿಯಲ್ಲೇ ಹೊಸ ಪಿ ಕ್ಯಾಪ್
ತೆಲಂಗಾಣ ಮಾದರಿಯಲ್ಲೇ ರಾಜ್ಯದ ಪೊಲೀಸರಿಗೆ ಹೊಸ ಪಿ ಕ್ಯಾಪ್ ವಿನ್ಯಾಸಗೊಳಿಸಲಾಗಿದೆ. ಆದರೆ ರಾಜ್ಯ ಪೊಲೀಸ್ ಲಾಂಛನ ಆ ಕ್ಯಾಪ್‌ನ ಮಧ್ಯೆಯಲ್ಲಿ ಅಚ್ಚೊತ್ತಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆದರೆ ಎಎಸ್‌ಐ, ಪಿಎಸ್‌ಐ, ಸರ್ಕಲ್ ಇನ್ಸ್‌ಪೆಕ್ಟರ್ ಸೇರಿದಂತೆ ಮೇಲಧಿಕಾರಿಗಳು ಈ ಹಿಂದಿನಂತೆಯೇ ಖಾಕಿ ಬಣ್ಣದ ಕ್ಯಾಪ್ ಧರಿಸಲಿದ್ದಾರೆ.
ಇದನ್ನೂ ಓದಿ: Karnataka Police: ಅ. 28 ರಂದು ರಾಜ್ಯ ಪೊಲೀಸ್ ಸಿಬ್ಬಂದಿಗೆ ಪಿ-ಕ್ಯಾಪ್ ವಿತರಣೆ
ಈಗಾಗಲೇ ಪೊಲೀಸರು ಬಳಸುತ್ತಿರುವ 'ಸ್ಲೋಚ್ ಹ್ಯಾಟ್' ಬದಲಾಯಿಸುವ ಬಗ್ಗೆ ಹಲವು ವರ್ಷಗಳಿಂದ ಮಾತುಕತೆ ನಡೆಯುತ್ತಿತ್ತು. ಅಂತಿಮವಾಗಿ, ತೆಲಂಗಾಣ ರಾಜ್ಯದ ಪೊಲೀಸರು ಬಳಸುತ್ತಿರುವ ನೀಲಿ ಬಣ್ಣದ ಪಿ-ಕ್ಯಾಪ್ ಮಾದರಿಯನ್ನೇ ನಮ್ಮ ರಾಜ್ಯದ ಪೊಲೀಸರಿಗೂ ಅಳವಡಿಸಲು ಮುಖ್ಯಮಂತ್ರಿಗಳು ಒಪ್ಪಿಗೆ ಸೂಚಿಸಿದ್ದಾರೆ. ಈ ನಿಟ್ಟಿನಲ್ಲಿ ಹೊಸ ಪಿ-ಕ್ಯಾಪ್‌ಗಳನ್ನು ಪೊಲೀಸರು ಧರಿಸುವ ಪ್ರಕ್ರಿಯೆ ಶೀಘ್ರದಲ್ಲೇ ಆರಂಭವಾಗಲಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.