ಫೋಟೋ ಗ್ಯಾಲರಿ ಆಪರೇಷನ್​ ಸಿಂಧೂರ ಐಪಿಎಲ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Universe India Interview: ಉದ್ಯಾನನಗರಿಯವರು ಸಖತ್‌ ಫ್ಯಾಷನೆಬಲ್‌ ಎಂದು ಹೊಗಳಿದ ಮಿಸ್‌ ಯೂನಿವರ್ಸ್‌ ಇಂಡಿಯಾ ರಿಯಾ ಸಿಂಘಾ

Miss Universe India Interview: ಉದ್ಯಾನನಗರಿ ಗಾರ್ಡನ್‌ ಸಿಟಿ ಮಾತ್ರವಲ್ಲ, ಇಲ್ಲಿಯವರು ಕೂಡ ಸಖತ್‌ ಫ್ಯಾಷೆನಬಲ್‌ ಎಂದಿದ್ದಾರೆ ಮಿಸ್‌ ಯೂನಿವರ್ಸ್‌ ಇಂಡಿಯಾ ರಿಯಾ ಸಿಂಘಾ. ವಿಶ್ವವಾಣಿ ನ್ಯೂಸ್‌ನೊಂದಿಗೆ ವಿಶೇಷ ಸಂದರ್ಶನ ನೀಡಿದ ಅವರು ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು. ಸಂದರ್ಶನದ ಸಂಕ್ಷಿಪ್ತ ವರದಿ ಇಲ್ಲಿದೆ.

ಉದ್ಯಾನನಗರಿಯವರು ಸಖತ್‌ ಫ್ಯಾಷನೆಬಲ್‌ ಎಂದು ಹೊಗಳಿದ ರಿಯಾ ಸಿಂಘಾ

ಚಿತ್ರಗಳು: ರಿಯಾ ಸಿಂಘಾ, ಮಿಸ್‌ ಯೂನಿವರ್ಸ್‌ ಇಂಡಿಯಾ 2024

ವಿಶೇಷ ಸಂದರ್ಶನ: ಶೀಲಾ ಸಿ. ಶೆಟ್ಟಿ

ಇದುವರೆಗೂ ಸಾಕಷ್ಟು ಬ್ಯೂಟಿ ಪೇಜೆಂಟ್‌ ಟೈಟಲ್‌ಗಳನ್ನು ಪಡೆದಿರುವ ಮಿಸ್‌ ಯೂನಿವರ್ಸ್‌ ಇಂಡಿಯಾ ರಿಯಾ ಸಿಂಘಾಗೆ ಉದ್ಯಾನನಗರಿ ಬೆಂಗಳೂರು ಸಖತ್‌ ಇಷ್ಟವಾಗಿದೆಯಂತೆ. ಅಷ್ಟು ಮಾತ್ರವಲ್ಲ, ಇಲ್ಲಿನ ಹುಡುಗ-ಹುಡುಗಿಯರ ಲೈಫ್‌ಸ್ಟೈಲ್‌ ಹಾಗೂ ಅವರ ಸ್ಟೈಲಿಂಗ್‌ಗಳು ಪ್ರಿಯವಾಗಿದೆಯಂತೆ. ಮುಂಬಯಿ, ದಿಲ್ಲಿ ನಂತರ ಫ್ಯಾಷನ್‌ ಹಬ್‌ ಆಗುತ್ತಿರುವ ಬೆಂಗಳೂರು, ಮುಂದೊಮ್ಮೆ ಫ್ಯಾಷನ್‌ ಜಗತ್ತಿನಲ್ಲಿ ಅತ್ಯುನ್ನತ ಸ್ಥಾನ ಗಳಿಸುವುದು ಗ್ಯಾರಂಟಿ ಎಂದಿದ್ದಾರೆ ಮಿಸ್‌ ಇಂಡಿಯಾ ಯೂನಿವರ್ಸ್‌ ಇಂಡಿಯಾ ರಿಯಾ ಸಿಂಘಾ.

ಮಿಸ್‌ ಯೂನಿವರ್ಸ್‌ ಕರ್ನಾಟಕ ಬ್ಯೂಟಿ ಪೇಜೆಂಟ್‌ ನಡೆಯುವಾಗ ಬಿಡುವಿಲ್ಲದ ಶೆಡ್ಯೂಲ್‌ ನಡುವೆಯೂ ಫಟಾಫಟ್‌ ಸಂದರ್ಶನ ನೀಡಿದ ರಿಯಾ ಸಿಂಘಾ, ವಿಶ್ವವಾಣಿ ನ್ಯೂಸ್‌ನೊಂದಿಗೆ ಒಂದಿಷ್ಟು ವಿಷಯಗಳನ್ನು ಹಂಚಿಕೊಂಡರು.

Miss Universe India Interview 2

ವಿಶ್ವವಾಣಿ ನ್ಯೂಸ್‌: ಬೆಂಗಳೂರು ಫ್ಯಾಷನ್‌ ಜಗತ್ತಿನ ಬಗ್ಗೆ ನಿಮ್ಮ ಅನಿಸಿಕೆಯೇನು?

ರಿಯಾ ಸಿಂಘಾ: ದಿನದಿಂದ ದಿನಕ್ಕೆ ಬೆಂಗಳೂರು ಫ್ಯಾಷನ್‌ ಲೋಕ ಅಭಿವೃದ್ಧಿಗೊಳ್ಳುತ್ತಿದೆ. ಅಷ್ಟು ಮಾತ್ರವಲ್ಲ, ಜಾಗತಿಕ ಮಟ್ಟದಲ್ಲೂ ಗುರುತಿಸಿಕೊಳ್ಳುತ್ತಿದೆ. ಮಾಡೆಲಿಂಗ್‌ ಅಸೈನ್‌ಮೆಂಟ್‌ ಮೇಲೆ ನಾನಾ ಕಡೆಯಿಂದ ಮಾಡೆಲ್‌ಗಳು ಕೂಡ ಬೆಂಗಳೂರನ್ನು ಆಯ್ಕೆ ಮಾಡಿಕೊಳ್ಳುವುದು ಹೆಚ್ಚಾಗುತ್ತಿದೆ.

Miss Universe India Interview 1

ವಿಶ್ವವಾಣಿ ನ್ಯೂಸ್‌: ಬೆಂಗಳೂರಿನ ಲೋಕಲ್‌ ಫ್ಯಾಷನ್‌ ಬಗ್ಗೆ ಏನು ಹೇಳುವಿರಿ?

ರಿಯಾ ಸಿಂಘಾ: ಇಲ್ಲಿನ ಕಲ್ಚರ್‌ಗೆ ತಕ್ಕಂತೆ ಲೋಕಲ್‌ ಫ್ಯಾಷನ್‌ ಮಹತ್ವ ಪಡೆದಿದೆ. ಸಂತೋಷದ ವಿಚಾರ.

ವಿಶ್ವವಾಣಿ ನ್ಯೂಸ್‌: ಕನ್ನಡದಲ್ಲಿ ಯಾವುದಾದರೂ ಪದ ಹೇಳುವಿರಾ?

ರಿಯಾ ಸಿಂಘಾ: ನನಗೆ ಕನ್ನಡ ಭಾಷೆ ಬರುವುದಿಲ್ಲ. ನಮಸ್ಕಾರ ಎಂಬುದನ್ನು ಖುಷಿಯಿಂದ ಹೇಳಬಲ್ಲೆ.

Miss Universe India Interview 3

ವಿಶ್ವವಾಣಿ ನ್ಯೂಸ್‌: ಮಿಸ್‌ ಯೂನಿವರ್ಸ್‌ ಬ್ಯೂಟಿ ಪೇಜೆಂಟ್‌ನಲ್ಲಿ ಸ್ಪರ್ಧಿಸುವುದು ಮೊದಲಿಗಿಂತ ಸುಲಭವಾಗಿದೆಯಾ?

ರಿಯಾ ಸಿಂಘಾ: ಖಂಡಿತಾ, ನನಗೆ ಗೊತ್ತಿರುವಂತೆ ಮೊದಲೆಲ್ಲಾ ಮುಂಬಯಿಗೆ ತೆರಳಿ ಅಲ್ಲಿಂದ ಸ್ಪರ್ಧೆಗೆ ತಯಾರಿ ನಡೆಸಬೇಕಿತ್ತು. ಈಗ ಹಾಗಿಲ್ಲ! ನಾವು ಇರುವ ರಾಜ್ಯಗಳಿಂದಲೇ ಅಣಿಯಾಗಬಹುದು. ಇಲ್ಲಿನ ರಿಜಿನಲ್‌ ಪೇಜೆಂಟ್‌ಗಳಲ್ಲಿ ಭಾಗವಹಿಸಿ, ಇಲ್ಲಿಂದ ಅರ್ಹತೆ ಪಡೆದು, ಫೈನಲ್‌ಗೆ ಮುಂಬಯಿಗೆ ತೆರಳಬಹುದು. ಮೊದಲಿಗಿಂತ ಈ ಪ್ರೊಸಿಜರ್‌ ಸುಲಭವಾಗಿದೆ.

Miss Universe India Interview 4

ವಿಶ್ವವಾಣಿ ನ್ಯೂಸ್‌: ಮಿಸ್‌ ಯೂನಿವರ್ಸ್‌ ಇಂಡಿಯಾ ಆಗಿರುವ ನೀವು ಮಾಡೆಲ್‌ಗಳಿಗೆ ಸ್ಪರ್ಧಿಗಳಿಗೆ ನೀಡುವ 3 ಟಿಪ್ಸ್‌ ಏನು?

ರಿಯಾ ಸಿಂಘಾ: 1. ಮಾಡೆಲಿಂಗ್‌ನಲ್ಲಿ ಆದಷ್ಟೂ ಪ್ರತಿಯೊಂದು ವಿಷಯಕ್ಕೂ ಗಮನ ನೀಡಿ.

2.ಫ್ಯಾಷನ್‌ ಮಾತ್ರವಲ್ಲ, ಫಿಟ್ನೆಸ್‌ ಹಾಗೂ ಕಮ್ಯೂನಿಕೇಷನ್‌ಗೂ ಮಹತ್ವ ನೀಡಿ.
3.ಸಾಮಾನ್ಯ ಜ್ಞಾನ ಹೊಂದಿರಲು ಟ್ರೈ ಮಾಡಿ.

(ಲೇಖಕಿ: ಫ್ಯಾಷನ್‌ ಪತ್ರಕರ್ತೆ)

ಈ ಸುದ್ದಿಯನ್ನೂ ಓದಿ | Hairstyle Trend: ನ್ಯಾಚುರಲ್‌ ಲುಕ್‌ಗಾಗಿ ಬಿಗ್‌ ರಿಂಗ್ಲೆಟ್ಸ್ ಹೇರ್‌ಸ್ಟೈಲ್‌