Hairstyle Trend: ನ್ಯಾಚುರಲ್ ಲುಕ್ಗಾಗಿ ಬಿಗ್ ರಿಂಗ್ಲೆಟ್ಸ್ ಹೇರ್ಸ್ಟೈಲ್
Hairstyle Trend: ಕ್ಯಾಶುವಲ್ ಹಾಗೂ ಎಥ್ನಿಕ್ ಫ್ಯಾಷನ್ಗೆ ಮ್ಯಾಚ್ ಆಗುವ ಹೇರ್ಸ್ಟೈಲ್ನಲ್ಲಿ ಬಿಗ್ ರಿಂಗ್ಲೆಟ್ಸ್ ಆತ್ಯಾಕರ್ಷಕವಾಗಿ ಕಾಣಿಸುತ್ತದೆ. ಅಲ್ಲದೇ, ನ್ಯಾಚುರಲ್ ಲುಕ್ ಕೂಡ ನೀಡುತ್ತದೆ. ಹಾಗಾದಲ್ಲಿ, ಏನಿದು ಬಿಗ್ ರಿಂಗ್ಲೇಟ್ಸ್ ಸ್ಟೈಲಿಂಗ್ ? ಈ ಕುರಿತಂತೆ ಹೇರ್ ಸ್ಟೈಲಿಸ್ಟ್ಗಳು ಒಂದಿಷ್ಟು ಮಾಹಿತಿ ನೀಡಿದ್ದಾರೆ.

ಚಿತ್ರಕೃಪೆ: ಪಿಕ್ಸೆಲ್


ಹೇರ್ಸ್ಟೈಲಿಂಗ್ನಲ್ಲಿ ಇದೀಗ ಬಿಗ್ ರಿಂಗ್ಲೆಟ್ಸ್ ಸಖತ್ ಪಾಪುಲರ್ ಆಗಿದೆ. ಸ್ಪ್ರೇಟ್ ಹೇರ್ಸ್ಟೈಲ್ನಿಂದ ಬೋರ್ ಆಗಿದ್ದಲ್ಲಿ, ಇದೀಗ ಸೀಸನ್ಗೆ ಮ್ಯಾಚ್ ಆಗುವ ಬಿಗ್ ರಿಂಗ್ಲೆಟ್ಸ್ ಇರುವ ಹೇರ್ಸ್ಟೈಲ್ ಟ್ರೈ ಮಾಡಿ ಎನ್ನುತ್ತಾರೆ ಹೇರ್ಸ್ಟೈಲಿಸ್ಟ್ಗಳು. ಇತ್ತ ಸ್ಪ್ರೇಟ್ ಆಗಿಯೂ ಕಾಣಿಸದು. ಅತ್ತ ಸಂಪೂರ್ಣ ಗುಂಗುರಾಗಿಯೂ ಕಾಣದು. ಮೇಲಿನಿಂದ ಕತ್ತಿನ ಕೊಂಚ ಮೇಲ್ಭಾಗದವರೆಗೂ ಸ್ಪ್ರೇಟಾಗಿ ಕಂಡರೂ, ಕೆಳಭಾಗದಲ್ಲಿ ದೂರದೂರಕ್ಕೆ ಕರ್ಲಿ ಹೇರ್ ರೀತಿಯಲ್ಲಿ ಕಾಣಿಸುತ್ತದೆ. ಒಂದೊಂದು ಸ್ಟೆಪ್ಗೂ ಸುರಳಿ ಸುತ್ತಿಕೊಂಡಂತೆ ಕಾಣುತ್ತದೆ. ಇದನ್ನೇ ರಿಂಗ್ಲೆಟ್ಸ್ ಎನ್ನಲಾಗುತ್ತದೆ.

ಈ ಮೊದಲು ಕರ್ಲ್ ಮಾಡಿಕೊಳ್ಳುವ ಸ್ಟೈಲ್ನಲ್ಲಿ ಹೆಚ್ಚಾಗಿ ಕ್ರೌಡಿ ಕರ್ಲ್, ಟೈಟ್ ರಿಂಗಲ್ಸ್, ಲೂಸ್ ಕರ್ಲ್ಸ್, ಸ್ಟೆಪ್ ಬೈ ಸ್ಟೆಪ್ ಕರ್ಲ್ಸ್ ಹೆಚ್ಚು ಟ್ರೆಂಡಿಯಾಗಿದ್ದವು. ಇದೀಗ ಹೆಚ್ಚು ಕರ್ಲ್ ಆಗಿರದೇ ನ್ಯಾಚುರಲ್ ಲುಕ್ ನೀಡುವ ಸಾಫ್ಟ್ ಬಿಗ್ ರಿಂಗ್ಲೆಟ್ಸ್ ಕರ್ಲ್ ಹೇರ್ ಸ್ಟೈಲ್ ಫ್ಯಾಷನ್ನಲ್ಲಿ ಕಾಣಿಸಿಕೊಳ್ಳುತ್ತಿದೆ. ಬಾಲಿವುಡ್ ತಾರೆಯರಾದ ಕಾಜೋಲ್, ಸೋನಾಕ್ಷಿ ಸಿನ್ಹಾ, ತಾಪ್ಸಿ, ಅನನ್ಯಾ, ದಿಶಾ ಕೂಡ ಇಂದು ಬಿಗ್ ರಿಂಗ್ಲೆಟ್ಸ್ ಸ್ಟೈಲಿಂಗ್ನಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಕೂದಲಿಗೆ ಬಿಗ್ ರಿಂಗ್ಲೆಟ್ಸನ್ನು ನೀವು ಮನೆಯಲ್ಲೆ ಮಾಡಿಕೊಳ್ಳಬಹುದು. ಆದರೆ, ಇದಕ್ಕಾಗಿ ನಿಮ್ಮ ಕೂದಲು ಉದ್ದವಾಗಿರಬೇಕಾದ್ದು ಅಗತ್ಯ. ಇಲ್ಲವಾದಲ್ಲಿ ಇದು ಸಾಧ್ಯವಾಗದ ಮಾತು. ಮುಖ ಅಗಲವಾಗಿದ್ದಲ್ಲಿ, ಲಾಂಗ್ ಹೇರ್ಕಟ್ ಇದ್ದಲ್ಲಿ ನೋಡಲು ಸೂಪರ್ಬ್ ಲುಕ್ ನೀಡುತ್ತದೆ. ಕನಿಷ್ಠ ನೂರಿನ್ನೂರು ರೂಪಾಯಿಗಳಿಗೆ ದೊರಕುವ ರಿಂಗ್ಲೆಟ್ಸ್ ಮಾಡುವಂತಹ ಪ್ಲಾಸ್ಟಿಕ್ ಅಥವಾ ಫೈಬರ್ ಮೆಟಿರಿಯಲ್ನ ಕ್ಲಿಪ್ಗಳು ಮಾರುಕಟ್ಟೆಯಲ್ಲಿ ದೊರೆಯುತ್ತವೆ. ನಿಮ್ಮ ಕೂದಲ ಅಂಚನ್ನು ಇದರೊಂದಿಗೆ ಸುರಳಿಯಂತೆ ಸುತ್ತಿ ಒಂದಿಷ್ಟು ಗಂಟೆಗಳ ಕಾಲ ಹಾಗೆಯೇ ಬಿಟ್ಟರಾಯಿತು. ರಾತ್ರಿ ವೇಳೆ ಕೂದಲಿಗೆ ಹಾಕಿ ಮಲಗಿದರೇ ಇನ್ನೂ ಬೆಸ್ಟ್. ಬೆಳಗ್ಗೆ ಸುರಳಿಯ ರೂಪ ಪಡೆದಿರುತ್ತವೆ ಎನ್ನುತ್ತಾರೆ ಸ್ಟೈಲಿಸ್ಟ್ಸ್.

ರಿಂಗ್ಲೆಟ್ಸ್ಗಾಗಿ ನೀವು ಹಾಟ್ ರೋಲರ್ಸ್ ಕೂಡ ಬಳಸಬಹುದು. ದೊಡ್ಡ ದೊಡ್ಡ ಸುರಳಿಯಂತೆ ಬೇಕಾದಲ್ಲಿ ಸ್ಟೈಲಿಂಗ್ ಜೆಲ್ ಬಳಸಬಹುದು. ಬಿಗ್ ರಿಂಗ್ಲೆಟ್ಸ್ಗೆ ಕರ್ಲಿಂಗ್ ಐರನ್ ಮಾಡಿಸಬಹುದು ಎನ್ನುತ್ತಾರೆ ಹೇರ್ಸ್ಟೈಲಿಸ್ಟ್ ರೀನಾ. ಚಿಕ್ಕ ಲೆಂತ್ ಇರುವ ಕೂದಲಿನವರಿಗೆ ಸ್ಟೆಪ್ವೈಸ್ ರಿಂಗ್ಲೆಟ್ಸ್ ಮಾಡಲು ಸಾಧ್ಯವಾಗುವುದಿಲ್ಲ. ಈ ಹೇರ್ಕಟ್ಗೆ ಒಂದೇ ಲೆಯರ್ನಲ್ಲಿ ನಾಲ್ಕೈದು ರಿಂಗ್ಲೆಟ್ಸ್ ಮಾಡುವ ಕ್ಲಿಪ್ ಹಾಕಿದರೆ, ಕೆಳಗಿನ ಕೂದಲ ಅಂಚು ಮೇಲ್ಭಾಗಕ್ಕೆ ಸುರಳಿಯಂತೆ ಸುತ್ತಿಹಾಕಿಕೊಳ್ಳುತ್ತದೆ. ಇದು ನೋಡಲು ಥೇಟ್ ಬಾರ್ಬಿ ಹೇರ್ಸ್ಟೈಲ್ನಂತೆ ಕಾಣುತ್ತದೆ. ಉದ್ದ ಹಾಗೂ ಅಗಲ ಮುಖವಿರುವವರಿಗೆ ಬಿಗ್ ರಿಂಗ್ಲೆಟ್ಸ್ ಹೇರ್ಸ್ಟೈಲ್ ಬೆಸ್ಟ್. ಏಕೆಂದರೆ, ಮುಖದ ಬಹುತೇಕ ಭಾಗವನ್ನು ಇವು ಆವರಿಸುತ್ತದೆ. ಇನ್ನು ಚಿಕ್ಕ ಮುಖದವರಿಗೆ ಬೇಡ. ತೀರಾ ದಪ್ಪಗಿರುವವರಿಗೂ ಒಪ್ಪದು ಎನ್ನುತ್ತಾರೆ ಬ್ಯೂಟಿ ಎಕ್ಸ್ಪರ್ಟ್ ರೀನಾ.

ರಿಂಗ್ಲೆಟ್ಸ್ ಪ್ರಿಯರಿಗೆ ಒಂದಿಷ್ಟು ಟಿಪ್ಸ್: ತಲೆಸ್ನಾನದ ನಂತರ ಈ ಹೇರ್ಸ್ಟೈಲ್ ಸ್ಪ್ರೇಟ್ ಆಗುವುದು. ಜಿಡ್ಡಿನಂಶ ಇರುವ ಕೂದಲಿಗೆ ರಿಂಗ್ಲೆಟ್ಸ್ ಬೇಡ. ಕೂದಲು ದಪ್ಪವಾಗಿದ್ದಲ್ಲಿ ಈ ಸ್ಟೈಲ್ ಅವಾಯ್ಡ್ ಮಾಡಿ. ಡ್ರೈ ಹೇರ್ ಇರುವಂತವರು ಯಾವುದೇ ಕಾರಣಕ್ಕೂ ಬಿಗ್ ರಿಂಗ್ಲೆಟ್ಸ್ಗೆ ಒಳಗಾಗಬೇಡಿ. ಆಗಾಗ್ಗೆ ಕಂಡೀಷನಿಂಗ್ ಮಾಡುವುದನ್ನು ಮರೆಯಕೂಡದು.