ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Ramanashree Sharana Award: ರಮಣಶ್ರೀ ಶರಣ ಪ್ರಶಸ್ತಿ-2025ಕ್ಕೆ ಶಿಫಾರಸುಗಳ ಆಹ್ವಾನ

Ramanashree Sharana Award 2025: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿ ವರ್ಷ ನೀಡಲಾಗುವ ʼರಮಣಶ್ರೀ ಶರಣ ಪ್ರಶಸ್ತಿ 2025ʼ ಗೆ ಉನ್ನತ ಮಟ್ಟದ ಸಾಧನೆ ಗೈದಿರುವ ವ್ಯಕ್ತಿಗಳ ಹೆಸರುಗಳ ಶಿಫಾರಸುಗಳನ್ನು ಆಹ್ವಾನಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

ರಮಣಶ್ರೀ ಶರಣ ಪ್ರಶಸ್ತಿಗೆ ಶಿಫಾರಸುಗಳ ಆಹ್ವಾನ

-

Profile Siddalinga Swamy Sep 19, 2025 11:31 PM

ಬೆಂಗಳೂರು: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು ಮತ್ತು ರಮಣಶ್ರೀ ಪ್ರತಿಷ್ಠಾನದ ಸಹಯೋಗದಲ್ಲಿ ಪ್ರತಿ ವರ್ಷ ನೀಡಲಾಗುವ ʼರಮಣಶ್ರೀ ಶರಣ ಪ್ರಶಸ್ತಿ 2025ʼ ಗೆ (Ramanashree Sharana Award) ಉನ್ನತ ಮಟ್ಟದ ಸಾಧನೆ ಮಾಡಿರುವ ವ್ಯಕ್ತಿಗಳ ಹೆಸರುಗಳ ಶಿಫಾರಸುಗಳನ್ನು ಆಹ್ವಾನಿಸಲಾಗಿದೆ. ʼಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತುʼ ಮತ್ತು ʼರಮಣಶ್ರೀ ಪ್ರತಿಷ್ಠಾನʼ ದ ಸಹಯೋಗದಲ್ಲಿ ಪ್ರತಿವರ್ಷ ನಾಲ್ಕು ಹಿರಿಯ ಶ್ರೇಣಿ ಮತ್ತು ನಾಲ್ಕು ಉತ್ತೇಜನ ಶ್ರೇಣಿ ʼರಮಣಶ್ರೀ ಶರಣ ಪ್ರಶಸ್ತಿʼ ಗಳನ್ನು ನೀಡಲಾಗುತ್ತಿದೆ. ಉತ್ತೇಜನ ಶ್ರೇಣಿ ಪ್ರಶಸ್ತಿಗೆ 45 ವರ್ಷದೊಳಗಿನವರು ಮಾತ್ರ ಅರ್ಹರಾಗಿರುತ್ತಾರೆ.

ಹಿರಿಯ ಶ್ರೇಣಿಯಲ್ಲಿ ಶರಣ ಸಾಹಿತ್ಯ ಅಧ್ಯಯನ ಮತ್ತು ಸಂಶೋಧನೆ, ಆಧುನಿಕ ವಚನ ರಚನೆ, ವಚನ ಸಂಗೀತ, ಶರಣ ಸಂಸ್ಕೃತಿ ಪ್ರಸಾರ ಮತ್ತು ಸೇವಾ ಸಂಸ್ಥೆ ಎಂಬ ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ನೀಡಲಾಗುತ್ತದೆ. ತಲಾ 40 ಸಾವಿರ ರೂ. ನಗದು ಬಹುಮಾನ ನೀಡಲಾಗುತ್ತದೆ. ಉತ್ತೇಜನ ಶ್ರೇಣಿಯಲ್ಲಿ ಈ ನಾಲ್ಕು ವಿಭಾಗಗಳಲ್ಲಿ ತಲಾ 20 ಸಾವಿರ ರೂ. ನಗದು ಬಹುಮಾನ ನೀಡಿ, ಗೌರವಿಸಲಾಗುತ್ತದೆ.

ಈ ವಿಭಾಗಗಳಿಗೆ ಉನ್ನತ ಮಟ್ಟದ ಸಾಧನೆ ಗೈದಿರುವ ಹೆಸರುಗಳನ್ನು ಶಿಫಾರಸು ಮಾಡಬಹುದು. ತಮ್ಮ ಶಿಫಾರಸ್ಸಿನೊಂದಿಗೆ ಅವರ ಪೂರ್ಣ ವಿವರ, ಪ್ರಕಟಿತ ಪುಸ್ತಕ ಮತ್ತು ಇನ್ನಿತರ ಸಾಧನೆಯ ವಿವರಗಳನ್ನು ಇದೇ ಸೆ.30ರೊಳಗೆ ಕಳುಹಿಸಬೇಕು.

ಅರ್ಜಿ ಕಳುಹಿಸಬೇಕಾದ ವಿಳಾಸ

ವಿಳಾಸ: ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತು, ಜಗದ್ಗುರು ಶ್ರೀ ಶಿವರಾತ್ರೀಶ್ವರ ವೃತ್ತ, 1ನೇ ಮುಖ್ಯರಸ್ತೆ, ಜಯನಗರ 8ನೇ ವಿಭಾಗ, ಬೆಂಗಳೂರು 560070 ಅಥವಾ ಎಸ್‌. ಷಡಕ್ಷರಿ, ಅಧ್ಯಕ್ಷರು, ರಮಣಶ್ರೀ ಪ್ರತಿಷ್ಠಾನ, ನಂ. 16, ರಾಜಾರಾಮ ಮೋಹನ ರಾಯ್‌ ರಸ್ತೆ, ಬೆಂಗಳೂರು 560025 ಈ ವಿಳಾಸಕ್ಕೆ ಅರ್ಜಿಗಳನ್ನು ಕಳುಹಿಸಬಹುದು. ಹೆಚ್ಚಿನ ಮಾಹಿತಿಗೆ ಮೊ.ಸಂ: 9845032813 ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದೆ.‌

ಈ ಸುದ್ದಿಯನ್ನೂ ಓದಿ | Karnataka Grameena Bank Recruitment 2025: ಪದವೀಧರರಿಗೆ ಗುಡ್‌ನ್ಯೂಸ್‌; ಕರ್ನಾಟಕ ಗ್ರಾಮೀಣ ಬ್ಯಾಂಕ್‌ನಲ್ಲಿದೆ 1,425 ಹುದ್ದೆ