ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Chinthamani News: ಚೇಳೂರು ರಸ್ತೆಯಲ್ಲಿರುವ ಗುಂಡಿಗಳಿಗೆ ಪೂಜೆ ಮಾಡಿದ ಕೆ ಆರ್ ಎಸ್ ಪಕ್ಷದ ಕಾರ್ಯಕರ್ತರು

2023ರಲ್ಲಿ ಕಾರ್ಯಕರ್ತರು ರಸ್ತೆ ಗುಂಡಿಗೆ ಪೂಜೆ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಅಧಿಕಾರಿ ಗಳು ಕಾಟಾಚಾರಕ್ಕೆ ರಸ್ತೆ ಗುಂಡಿ ಮುಚ್ಚಿದ್ದರು. ಪ್ರಸ್ತುತ ರಸ್ತೆ ಗುಂಡಿ ಮುಚ್ಚದೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಈಗಲಾದರೂ ಎಚ್ಚೆತ್ತು ರಸ್ತೆಗುಂಡಿ ಮುಚ್ಚಬೇಕು. ವಾಹನ ಸವಾರರಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ರಸ್ತೆ ಗುಂಡಿಗೆ ಪೂಜೆ ಮಾಡಿ ಕೆ ಆರ್ ಎಸ್ ಪಕ್ಷದ ವಿನೂತನ ಪ್ರತಿಭಟನೆ

-

Ashok Nayak Ashok Nayak Sep 20, 2025 12:00 AM

ಚಿಂತಾಮಣಿ: ನಗರದಲ್ಲಿ ಹಲವು ತಿಂಗಳಿಂದ ರಸ್ತೆ ಗುಂಡಿ ಸರಿಪಡಿಸದ ಹಿನ್ನೆಲೆಯಲ್ಲಿ ಶುಕ್ರವಾರ ಕೆಆರ್‌ಎಸ್‌ ಕಾರ್ಯಕರ್ತರು ಗುಂಡಿಗಳಿಗೆ ಹೂ ಹಾಕಿ ಪೂಜೆ ಮಾಡುವ ಮೂಲಕ ವಿನೂತನ ಪ್ರತಿಭಟನೆ ನಡೆಸಿದರು.

ಅಧಿಕಾರಿಗಳ ಹಾಗೂ ಚುನಾಯಿತ ಪ್ರತಿನಿಧಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ರಸ್ತೆ ಗುಂಡಿ ಮುಚ್ಚದಿದ್ದರೆ ರಸ್ತೆತಡೆ ನಡೆಸಿ ಪ್ರತಿಭಟನೆ ಮಾಡುವ ಎಚ್ಚರಿಕೆ ನೀಡಿದರು.

ಇದನ್ನೂ ಓದಿ: Chinthamani News: ಬನಹಳ್ಳಿ ಗ್ರಾಮಾಭಿವೃದ್ದಿ ಟ್ರಸ್ಟ್ ನಿಂದ 90 ಹಸುಗಳಿಗೆ ವಿಮಾ ಹಣ ಪಾವತಿ: ಮಂಜುನಾಥ

2023ರಲ್ಲಿ ಕಾರ್ಯಕರ್ತರು ರಸ್ತೆ ಗುಂಡಿಗೆ ಪೂಜೆ ಮಾಡಿ ಪ್ರತಿಭಟನೆ ಮಾಡಿದ್ದರು. ಆಗ ಅಧಿಕಾರಿ ಗಳು ಕಾಟಾಚಾರಕ್ಕೆ ರಸ್ತೆ ಗುಂಡಿ ಮುಚ್ಚಿದ್ದರು. ಪ್ರಸ್ತುತ ರಸ್ತೆ ಗುಂಡಿ ಮುಚ್ಚದೆ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ. ಮತ್ತೊಮ್ಮೆ ಅಧಿಕಾರಿಗಳ ಗಮನಕ್ಕೆ ತರುತ್ತಿದ್ದೇವೆ. ಈಗಲಾದರೂ ಎಚ್ಚೆತ್ತು ರಸ್ತೆಗುಂಡಿ ಮುಚ್ಚಬೇಕು. ವಾಹನ ಸವಾರರಿಗೆ ಸಾರ್ವಜನಿಕರಿಗೆ ಅನುಕೂಲ ಮಾಡಿ ಕೊಡಬೇಕು ಎಂದು ಒತ್ತಾಯಿಸಿದರು.

ಕೆಆರ್‌ಎಸ್‌ ಪಕ್ಷದ ತಾಲ್ಲೂಕು ಅಧ್ಯಕ್ಷ ಅಬ್ದುಲ್ ಖಯುಮ್,ಜಿಲ್ಲಾ ಕಾರ್ಯದರ್ಶಿ ಶಿವಾರೆಡ್ಡಿ, ತಾಲ್ಲೂಕು ಕಾರ್ಯದರ್ಶಿ ವಿಶ್ವನಾಥ್,ತಾಲೂಕು ಪ್ರಧಾನ ಕಾರ್ಯದರ್ಶಿ ಶಬ್ಬೀರ್ ಪಾಷಾ, ಆಟೋ ಘಟಕದ ಅಧ್ಯಕ್ಷ ಮಹಬೂಬ್ ಪಾಷಾ,ಚಂದ್ರು,ಅಬ್ಜಲ್ ಪಾಷಾ,ನಾರಾಯಣಸ್ವಾಮಿ, ಫೈರೋಜ್ ಪಾಷಾ, ಸರ್ದಾರ್ ಭಾಗವಹಿಸಿದ್ದರು.