ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Deepavali 2025: ಕಡಿಮೆ ಧೂಮೋತ್ಪತ್ತಿಯಿರುವ ಹರಳೆಣ್ಣೆಯಿಂದ ದೀಪ ಬೆಳಗಿರಿ: ದೀಪಾವಳಿಗೆ ಸದ್ಗುರು ಸಲಹೆ

Sadhguru Jaggi Vasudev: ಬೆಳಕಿನ ಹಬ್ಬದ ಮಹತ್ವದ ಕುರಿತು ಸದ್ಗುರು ಅವರು ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ.ಕತ್ತಲನ್ನು ತೊಡೆದು ಹಾಕುವುದೇ ಬೆಳಕಿನ ಸ್ವಭಾವ. ನಿಮ್ಮೊಳಗಿನ ಬೆಳಕು ಮಿರುಗಲಿ – ನಿಮ್ಮನ್ನೂ ನಿಮ್ಮ ಸುತ್ತಲಿರುವುದೆಲ್ಲವನ್ನೂ ಬೆಳಗಲಿ. ನಿಮ್ಮ ದೀಪಾವಳಿಯು ದೇದೀಪ್ಯಮಾನವಾಗಿರಲಿ. ಪ್ರೀತಿ ಮತ್ತು ಆಶೀರ್ವಾದಗಳುʼ ಎಂದು ಸದ್ಗುರು ಜಗ್ಗಿ ವಾಸುದೇವ್‌ ಅವರು ತಿಳಿಸಿದ್ದಾರೆ.

ಬೆಂಗಳೂರು: ಜನರು ಅಂತರ್ಮುಖರಾಗಬೇಕು ಹಾಗೂ ತಮ್ಮೊಳಗಿನ ಬೆಳಕನ್ನು ವ್ಯಕ್ತಗೊಳಿಸಬೇಕು ಎಂದು ಸದ್ಗುರು ಜಗ್ಗಿ ವಾಸುದೇವ್‌ (Sadhguru Jaggi Vasudev)‌ ಅವರು ಕರೆ ನೀಡಿದ್ದಾರೆ. ವಿಶ್ವದ ಕೋಟ್ಯಂತರ ಜನರು ದೀಪಾವಳಿಯನ್ನು (Deepavali 2025) ಆಚರಿಸುತ್ತಿರುವ ಸಂದರ್ಭದಲ್ಲಿ ಬೆಳಕಿನ ಹಬ್ಬದ ಮಹತ್ವದ ಕುರಿತು ಸಾಮಾಜಿಕ ಜಾಲತಾಣ ʼಎಕ್ಸ್‌ʼ ನಲ್ಲಿ ತಮ್ಮ ಸಂದೇಶವನ್ನು ಹಂಚಿಕೊಂಡಿದ್ದಾರೆ. ʼಕತ್ತಲನ್ನು ತೊಡೆದು ಹಾಕುವುದೇ ಬೆಳಕಿನ ಸ್ವಭಾವ. ನಿಮ್ಮೊಳಗಿನ ಬೆಳಕು ಮಿರುಗಲಿ – ನಿಮ್ಮನ್ನೂ ನಿಮ್ಮ ಸುತ್ತಲಿರುವುದೆಲ್ಲವನ್ನೂ ಬೆಳಗಲಿ. ನಿಮ್ಮ ದೀಪಾವಳಿಯು ದೇದೀಪ್ಯಮಾನವಾಗಿರಲಿ. ಪ್ರೀತಿ ಮತ್ತು ಆಶೀರ್ವಾದಗಳುʼ ಎಂದು ಸಂದೇಶವನ್ನು ಹಂಚಿಕೊಂಡಿದ್ದಾರೆ.

ಬೆಳಕಿನ ಹಬ್ಬದ ಸಾರವನ್ನು ವಿವರಿಸುತ್ತಾ, ಬೆಳಕಿನಲ್ಲಿ ಮಾತ್ರ ನಾವು ಸ್ಪಷ್ಟವಾಗಿ ನೋಡಬಹುದು. ಹೀಗಾಗಿ ನಾವು ಸ್ಪಷ್ಟವಾಗಿ ನೋಡದೆ ಇದ್ದರೆ, ನಾವು ಉತ್ತಮವಾಗಿ ನಡೆಯಲು, ಓಡಲು ಅಥವಾ ನಮ್ಮ ಜೀವನದಲ್ಲಿ ಏನನ್ನಾದರೂ ಉತ್ತಮವಾಗಿ ಮಾಡಲು ಸಾಧ್ಯವೇ? ನಾವು ಸ್ಪಷ್ಟವಾಗಿ ನೋಡಬೇಕು. ಕೇವಲ ಕಣ್ಣಿನಿಂದ ಸ್ಪಷ್ಟವಾಗಿ ನೋಡುವುದಲ್ಲ. ಮನಸ್ಸಿನಲ್ಲೂ ನಾವು ಸ್ಪಷ್ಟವಾಗಿ ನೋಡಬೇಕು. ನಾವು ಸ್ಪಷ್ಟವಾಗಿ ನೋಡದಿದ್ದರೆ, ನಾವು ಎಲ್ಲಿಗೂ ತಲುಪುವುದಿಲ್ಲ ಎಂದು ಸದ್ಗುರುಗಳು ಹೇಳಿದ್ದಾರೆ.

ದೀಪಾವಳಿಯ ಹಿನ್ನೆಲೆಯಲ್ಲಿರುವ ವೈಜ್ಞಾನಿಕ ಕಾರಣವನ್ನು ಕುರಿತು ಮಾತನಾಡಿರುವ ಸದ್ಗುರುಗಳು “ದೀಪಾವಳಿ ಎಂಬುದು ಉತ್ತರಾರ್ಧಗೋಳದ ಋತುಮಾನದ ಬದಲಾವಣೆಯ ಆಳವಾದ ಅವಗಾಹನೆಯೊಂದಿಗೆ ಬಂದ ಹಬ್ಬ. ಚಳಿಗಾಲದಲ್ಲಿ ಭೂಮಿಯ ಉತ್ತರ ಭಾಗ ಸೂರ್ಯನಿಂದ ದೂರ ಸರಿಯುತ್ತದೆ. ಅದರ ಪರಿಣಾಮವಾಗಿ ಅಗತ್ಯವಾದ ಸೂರ್ಯಪ್ರಕಾಶವಿಲ್ಲದೆ ಶೈತ್ಯವು ಹೆಚ್ಚಾಗುತ್ತದೆ. ಆಗ ಜನರು ಕೇವಲ ಮಾನಸಿಕವಾಗಲ್ಲದೆ, ದೈಹಿಕವಾಗಿಯೂ ಸ್ವಲ್ಪ ಕುಗ್ಗುತ್ತಾರೆ, ಒಂದು ರೀತಿಯ ‘ಡಿಪ್ರೆಶನ್’ ಉಂಟಾಗುತ್ತದೆ” ಎಂದು ವಿವರಿಸಿದ್ದಾರೆ.

ಎಲ್ಲವೂ ಕ್ಷೀಣಗೊಳ್ಳುವ ಸಂದರ್ಭ. ಹಾಗಾಗಿ ದೀಪ ಹಚ್ಚುವುದು ಅದರ ಒಂದು ಭಾಗ. ನಾವು ವಿವಿಧ ರೀತಿಯ ದೀಪಗಳನ್ನು ಬೆಳಗಿಸಬಹುದು, ಆದರೆ ಹರಳೆಣ್ಣೆಯಿಂದ ದೀಪ ಹಚ್ಚುವುದು ಅತ್ಯುತ್ತಮ, ಏಕೆಂದರೆ ಅದರಿಂದ ಕಡಿಮೆ ಹೊಗೆ ಉಂಟಾಗುತ್ತದೆ” ಎಂದು ತಿಳಿಸಿದ್ದಾರೆ.

ಭಾರತೀಯ ಸಂಸ್ಕೃತಿ ಮತ್ತು ಹಬ್ಬಗಳ ಮೂಲ ಕಾರಣಗಳನ್ನು ಉಲ್ಲೇಖಿಸುತ್ತಾ ಸದ್ಗುರುಗಳು,”ಇದು ಭಯವಿಲ್ಲದ, ಲಾಲಸೆಯಿಲ್ಲದ ಮತ್ತು ಅಪರಾಧ ಭಾವನಾರಹಿತರಾದ ಜನರನ್ನು ರೂಪಿಸಲು ಪ್ರಯತ್ನಿಸುವ ನಾಗರಿಕತೆಯಿಂದ ಬಂದಿದೆ. ಭಯ ಎಂಬುದು ಇನ್ನೂ ಸಂಭವಿಸದದ್ದನ್ನು ಕಲ್ಪನೆ ಮಾಡುವುದರಿಂದ ಉಂಟಾಗುತ್ತದೆ – ತನ್ನ ಇಂದ್ರಿಯಗಳು ಮತ್ತು ಮನಸ್ಸಿನ ಮೇಲಿನ ನಿಯಂತ್ರಣವನ್ನು ಹೊಂದಿದಾಗ ಜನರು ಭಯರಹಿತರಾಗುತ್ತಾರೆ. ಎಲ್ಲರೊಂದಿಗೂ ಒಳಗೊಳ್ಳುವಂತೆ ಮಾಡಿಕೊಂಡಾಗ ಲಾಲಸೆಯಿಲ್ಲದವರಾಗುತ್ತೇವೆ, ಏಕೆಂದರೆ ನಾವು ಒಳಗೂಡುವಿಕೆಯಿಂದಿದ್ದರೆ ಯಾವತ್ತೂ ತಪ್ಪು ಮಾಡುವುದಿಲ್ಲ. ಹೀಗಾಗಿ ಅಪರಾಧದ ಭಾವನೆಯೇ ಇಲ್ಲ. ಅದೇ ರೀತಿ, ತೃಪ್ತರಾದಾಗ, ಅಂದರೆ ಸುಮ್ಮನೆ ಕುಳಿತುಕೊಂಡಿದ್ದರೂ, ಉತ್ತಮಗೊಳ್ಳಲು ಇನ್ನೇನನ್ನೋ ಮಾಡಬೇಕೆಂಬ ಅಗತ್ಯವಿಲ್ಲದೆ ಧನ್ಯತೆಯನ್ನು ಅನುಭವಿಸುತ್ತೇವೆ – ಅಂದರೆ ಲಾಲಸೆಯಿಲ್ಲದವರಾಗುತ್ತೇವೆ” ಎಂದು ಹೇಳಿದ್ದಾರೆ.

ಈ ಸುದ್ದಿಯನ್ನೂ ಓದಿ | Muhurat trading 2025 Timings: ದೀಪಾವಳಿಯ ಸಂಭ್ರಮ ಸೆನ್ಸೆಕ್ಸ್‌ 412 ಅಂಕ ಜಿಗಿತ, ಸಂವತ್‌ 2082 ಮುನ್ನೋಟ

ನೀವು ಭಯರಹಿತರು. ಅಪರಾಧ ಭಾವನಾರಹಿತರು ಮತ್ತು ಲಾಲಸೆಯಿಲ್ಲದವರಾದರೆ, ನಾವು ಅದ್ಭುತವಾದ ಮನುಷ್ಯತ್ವವನ್ನು ನಿರ್ಮಿಸಿದ್ದೇವೆ ಎಂದರ್ಥ. ಮನುಷ್ಯತ್ವ ಎಂದರೆ ಇತರ ವ್ಯಕ್ತಿ ಅಥವಾ ಸಮಸ್ತ ಜನರ ಬಗ್ಗೆ ಅಲ್ಲ. ಇದು ‘ಈ ವ್ಯಕ್ತಿ’ (ಸ್ವಯಂ) ಬಗ್ಗೆ. ಇದು ಅದ್ಭುತವಾದರೆ, ಉಳಿದೆಲ್ಲವೂ ಅದ್ಭುತವಾಗುತ್ತದೆ ಎಂದು ದೀಪಾವಳಿಯ ಸಂದರ್ಭದಲ್ಲಿ ಜನರು ತಮ್ಮ ಆಂತರ್ಯದ ದೀಪವನ್ನು ಬೆಳಗಿಸಬೇಕು ಎಂದುಸದ್ಗುರು ಜಗ್ಗಿ ವಾಸುದೇವ್‌ ಅವರು ಕರೆ ನೀಡಿದ್ದಾರೆ.