ಗುಬ್ಬಿ: ಪರಿಸರ ದಿನಾಚರಣೆ ದಿನದಂದು ಸಸಿ ನೆಡುವ ಕಾರ್ಯಕ್ರಮ ಮಾಡುವುದಷ್ಟೇ ಪರಿಸರ ಕಾಳಜಿ ತೋರಿದಂತಲ್ಲ ಎಂಬ ಅಂಶವನ್ನು ಗ್ರಾಮೀಣ ಭಾಗದಲ್ಲಿ ಪಸರಿಸಿರುವ ಎಂ.ಎನ್.ಕೋಟೆ ಅಂಬೇಡ್ಕರ್ ನಗರದ ಯುವಕರು ಮಳೆಗಾಲದಲ್ಲಿ ಸಸಿ ನೆಟ್ಟು ಪೋಷಿಸಿದರೆ ಪರಿಸರ ಉಳಿಯುತ್ತದೆ ಎಂಬ ಜಾಗೃತಿ ಮೂಡಿಸುತ್ತಾ ರಸ್ತೆ ಬದಿ ಗಿಡ ನೆಟ್ಟು ಪೋಷಿಸಲು ಸಜ್ಜಾಗಿದ್ದಾರೆ.
ಇದನ್ನೂ ಓದಿ: Gururaj Gantihole Column: ನವಭಾರತದ ಹೆದ್ದಾರಿಗಳಿಗೆ ಹೊಸ ಭಾಷ್ಯ ಬರೆದ ಎಕ್ಸ್ ಪ್ರೆಸ್ ವೇ ಪಿತಾಮಹ !
ಮಳೆಗಾಲದಲ್ಲಿ ಸಸಿ ನೆಟ್ಟು ಪೋಷಿಸುವ ಪಣ ತೊಟ್ಟ ಯುವಕರು ಸಾರ್ವಜನಿಕ ಸ್ಥಳದಲ್ಲಿ ಪರಿಸರ ಸಂರಕ್ಷಣೆ ಕುರಿತು ಅರಿವು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಹಸಿರೇ ಉಸಿರು ಎಂಬ ವಾಕ್ಯಗಳು ಶಾಲಾ ಆವರಣದಲ್ಲಿ ಅಷ್ಟೇ ಕಾಣಸಿಗುತ್ತದೆ. ಈ ನಿಟ್ಟಿನಲ್ಲಿ ಈ ಗ್ರಾಮೀಣ ಯುವಕರು ಶಾಲಾ ಆವರಣ ಹೊರತಾಗಿ ರಸ್ತೆ ಬದಿ, ದೇವಸ್ಥಾನ ಸ್ಥಳ, ಕೆರೆ ಪಕ್ಕ, ಸರ್ಕಾರಿ ಸ್ಥಳ ಹೀಗೆ ಅನೇಕ ಭಾಗದಲ್ಲಿ ಸಸಿ ನೆಡುವ ಹಾಗೂ ಪೋಷಿಸುವ ಹೊಣೆ ಹೊರಲು ನಮ್ಮ ತಂಡ ಸಜ್ಜಾಗಿದೆ ಎಂದು ತಂಡದ ನೇತೃತ್ವ ವಹಿಸಿದ್ದ ಶಿವಕುಮಾರ್ ತಿಳಿಸಿದರು.
ಈ ತಂಡದಲ್ಲಿ ರಂಗನಾಥ್, ಕೃಷ್ಣಮೂರ್ತಿ, ಮಂಜುನಾಥ್, ಕುಮಾರ್, ರಂಗಸ್ವಾಮಿ ಇತರರು ಇದ್ದರು.