#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ
ತುಮಕೂರು
Sira News: ಫುಡ್​ ಪಾಯಿಸನ್; ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ

ಹಾಸ್ಟೆಲ್‌ನಲ್ಲಿ ಉಪಾಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥ

Sira News: ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಲಕ್ಕನಹಳ್ಳಿಯಲ್ಲಿ ಸರಕಾರಿ ಬಾಲಕರ ವಸತಿ ನಿಲಯದಲ್ಲಿ ಬುಧವಾರ ಘಟನೆ ನಡೆದಿದೆ. ಉಪಾಹಾರ ಸೇವಿಸಿ 20 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದು, ಅವರನ್ನು ಶಿರಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆಕೊಡಿಸಲಾಗುತ್ತಿದೆ.

Mahakumbh 2025: ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುವಾಗ ಹೃದಯಾಘಾತವಾಗಿ ಶಿರಾ ಮೂಲದ ವ್ಯಕ್ತಿ ಸಾವು

ಕುಂಭಮೇಳದಲ್ಲಿ ಪುಣ್ಯ ಸ್ನಾನ ಮಾಡುವ ವೇಳೆ ಹೃದಯಾಘಾತವಾಗಿ ವ್ಯಕ್ತಿ ಸಾವು

Mahakumbh 2025: ಕುಂಭಮೇಳದಲ್ಲಿ ಪುಣ್ಯಸ್ನಾನ ಮಾಡುತ್ತಿದ್ದಾಗ ಶಿರಾ ತಾಲೂಕಿನ ಬರಗೂರು ಗ್ರಾಮದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಜಿಲ್ಲೆಯಿಂದ ಪ್ರಯಾಗ್ ರಾಜ್ ಕುಂಭ ಮೇಳಕ್ಕೆ ಸಹಸ್ರಾರು ಭಕ್ತರು ತೆರಳಿದ್ದಾರೆ. ಈ ರೀತಿ ಅವಘಡ ಸಂಭವಿಸಿರುವುದು ಇದೇ ಮೊದಲು.

Lake encroachment: ಕೆರೆಗಳ ಒತ್ತುವರಿ ತೆರವುಗೊಳಿಸಿ; ತುಮಕೂರು ಡಿಸಿ ಶುಭ ಕಲ್ಯಾಣ್ ಸೂಚನೆ

ಕೆರೆಗಳ ಒತ್ತುವರಿ ತೆರವುಗೊಳಿಸಿ; ತುಮಕೂರು ಡಿಸಿ ಶುಭ ಕಲ್ಯಾಣ್ ಸೂಚನೆ

Lake encroachment: ಜಿಲ್ಲೆಯಲ್ಲಿ ಒತ್ತುವರಿಯಾಗಿರುವ ಸರ್ಕಾರಿ ಕೆರೆಗಳನ್ನು ಸಂರಕ್ಷಿಸುವ ಯೋಜನೆಗಳನ್ನು ಕೈಗೊಳ್ಳುಬೇಕು. ಕೆರೆಗಳ ಅತಿಕ್ರಮಣ ಅಥವಾ ಒತ್ತುವರಿ ಮಾಡಿದವರಿಗೆ ನೋಟಿಸ್ ನೀಡಿ ಒತ್ತುವರಿಯನ್ನು ತೆರವುಗೊಳಿಸುವ ಕ್ರಮ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತುಮಕೂರು ಜಿಲ್ಲಾಧಿಕಾರಿ ಸೂಚಿಸಿದರು.

Murder Case: ಪ್ರೇಯಸಿ ಕೊಂದ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

ಪ್ರೇಯಸಿ ಕೊಂದ ಪ್ರಿಯಕರನಿಗೆ ಜೀವಾವಧಿ ಶಿಕ್ಷೆ

Tumkur News: ಪ್ರೇಯಸಿ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆ ಮಾಡಿದ್ದ ಆರೋಪಿಗೆ ತುಮಕೂರಿನ 2ನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು ಜೀವಾವಧಿ ಶಿಕ್ಷೆ ಮತ್ತು 1 ಲಕ್ಷ ದಂಡ ವಿಧಿಸಿದೆ. ತುಮಕೂರು ಜಿಲ್ಲೆಯ ಕುಣಿಗಲ್ ತಾಲೂಕಿನ ಸಂತೆಮಾವತ್ತೂರು-ಅಮೃತೂರು ರಸ್ತೆಯಲ್ಲಿ 2019 ರ ಫೆಬ್ರವರಿ 2ರಂದು ನಡೆದಿದ್ದ ಭೀಕರ ಕೊಲೆ ಪ್ರಕರಣಕ್ಕೆ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.‌

Fire Accident: ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಹಸು ಸಜೀವ ದಹನ, ರೈತನಿಗೆ ಗಾಯ

ಹುಲ್ಲಿನ ಬಣವೆಗೆ ಆಕಸ್ಮಿಕ ಬೆಂಕಿ; ಹಸು ಸಜೀವ ದಹನ, ರೈತನಿಗೆ ಗಾಯ

Fire Accident: ಹುಲ್ಲಿನ ಬಣವೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿದ ಪರಿಣಾಮ ಹಸುವೊಂದು ಸಜೀವ ದಹನವಾಗಿರುವ ಘಟನೆ ಪಾವಗಡ ತಾಲೂಕಿನ ಕಾರನಾಗನಹಟ್ಟಿ ಗ್ರಾಮದಲ್ಲಿ ಮಂಗಳವಾರ ಸಂಜೆ ಜರುಗಿದೆ. ಹಸುಗಳನ್ನು ರಕ್ಷಿಸಲು ಮುಂದಾದ ರೈತ ಬಡನಾಗಪ್ಪಗೆ ಸುಟ್ಟ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಪಾವಗಡ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.

Ambedkar Residential school: ಪಾವಗಡದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅವ್ಯವಸ್ಥೆ; ಶೌಚಗೃಹ ಇದ್ರೂ ಮಕ್ಕಳಿಗೆ ಬಯಲೇ ಗತಿ!

ಪಾವಗಡದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಅವ್ಯವಸ್ಥೆ

Ambedkar Residential school: ಮೂಲ ಸೌಕರ್ಯಗಳಿಲ್ಲದೇ ಪಾವಗಡದ ಅಂಬೇಡ್ಕರ್‌ ವಸತಿ ಶಾಲೆ ವಿದ್ಯಾರ್ಥಿಗಳು ಸಮಸ್ಯೆ ಎದುರಿಸುತ್ತಿದ್ದಾರೆ. ಸ್ವಚ್ಛತೆಯಿಲ್ಲದೆ ಗಬ್ಬು ನಾರುವ ಕೊಠಡಿಗಳು, ಹರಿದ ಹಾಸಿಗೆ-ದಿಂಬು ಹಾಗೂ ಶೌಚಗೃಹಗಳಿದ್ದರೂ ಬಯಲು ಶೌಚಕ್ಕೆ ಹೋಗುವ ದುಸ್ಥಿತಿ ಇಲ್ಲಿರುವುದರಿಂದ ಮಕ್ಕಳು ಪರದಾಡುವಂತಾಗಿದೆ.

VAOs strike: ಮೂಲಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಸಿ: ಸರ್ಕಾರಕ್ಕೆ ಪಾವಗಡ ವಿಎಒಗಳ ಆಗ್ರಹ

ಮೂಲಸೌಕರ್ಯ ಸೇರಿ ವಿವಿಧ ಬೇಡಿಕೆ ಈಡೇರಿಸಿ: ಪಾವಗಡ ವಿಎಒಗಳ ಆಗ್ರಹ

VAOs strike: ಕಂದಾಯ ಇಲಾಖೆ ತಂತ್ರಾಂಶಗಳ ನಿರ್ವಹಣೆಗೆ ಅವಶ್ಯಕವಾಗಿರುವ ಮೊಬೈಲ್, ಲ್ಯಾಪ್‌ಟಾಪ್, ಅದಕ್ಕೆ ಅವಶ್ಯವಿರುವ ಇಂಟರ್‌ನೆಟ್ ಹಾಗೂ ಸ್ಕ್ಯಾನರ್‌ಗಳನ್ನು ಒದಗಿಸದೇ ಕರ್ತವ್ಯ ನಿರ್ವಹಿಸುವಂತೆ ಒತ್ತಡ ಹೇರುತ್ತಿರುವುದರಿಂದ ಗ್ರಾಮ ಆಡಳಿತ ಅಧಿಕಾರಿಗಳು ಮಾನಸಿಕ ಹಿಂಸೆ ಅನುಭವಿಸುತ್ತಿದ್ದಾರೆ ಎಂದು ನೌಕರರು ಆರೋಪಿಸಿದ್ದಾರೆ.

Tumkur University: ಕೇಂದ್ರ ಸರ್ಕಾರದ ʼಮಿಷನ್ ಉತ್ಥಾನ್ ಯೋಜನೆʼಗೆ ತುಮಕೂರು ವಿವಿ ಆಯ್ಕೆ

ಮಿಷನ್ ಉತ್ಥಾನ್ ಯೋಜನೆಗೆ ತುಮಕೂರು ವಿವಿ ಆಯ್ಕೆ

Tumkur University: ಮಿಷನ್ ಉತ್ಥಾನ್ ಯೋಜನೆಗೆ ಆಯ್ಕೆಯಾದ ದೇಶದ ಕೆಲವೇ ಸಂಸ್ಥೆಗಳಲ್ಲಿ ತುಮಕೂರು ವಿವಿ ಒಂದಾಗಿದೆ. ತುಮಕೂರು ವಿವಿ ವ್ಯಾಪ್ತಿಯಲ್ಲಿ 90ಕ್ಕೂ ಸಂಯೋಜಿತ ಕಾಲೇಜುಗಳಿದ್ದು, ಇವುಗಳ ಮೂಲಕ ಮಿಶನ್ ಉತ್ಥಾನ್‌ನ ಯೋಜನೆಗಳನ್ನು ಅನುಷ್ಠಾನಗೊಳಿಸಲು ಕಾರ್ಯಯೋಜನೆ ರೂಪಿಸಲಾಗಿದೆ.

VAOs strike: ತುಮಕೂರಲ್ಲಿ ವಿವಿಧ ಬೇಡಿಕೆ ಈಡೇರಿಕೆಗಾಗಿ ವಿಎಒಗಳ ಅನಿರ್ಧಿಷ್ಟಾವಧಿ ಮುಷ್ಕರ

ವಿವಿಧ ಬೇಡಿಕೆ ಈಡೇರಿಕೆಗಾಗಿ ವಿಎಒಗಳ ಅನಿರ್ಧಿಷ್ಟಾವಧಿ ಮುಷ್ಕ

VAOs strike: ಸೂಕ್ತ ಕಚೇರಿ, ಕಾಲ ಕಾಲಕ್ಕೆ ಬಡ್ತಿ, ಕೆಲಸದ ಸಮಯದಲ್ಲಿ ಭದ್ರತೆ ಸೇರಿ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ತುಮಕೂರು ನಗರದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಗ್ರಾಮ ಆಡಳಿತ ಅಧಿಕಾರಿಗಳು ಮುಷ್ಕರ ನಡೆಸುತ್ತಿದ್ದಾರೆ.

Pavagada Hostel: ಪಾವಗಡ ಬಾಲಕಿಯರ ಹಾಸ್ಟೆಲ್‌ಗೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ದಿಢೀರ್ ಭೇಟಿ; ಅವ್ಯವಸ್ಥೆಗೆ ಗರಂ

ಪಾವಗಡ ಹಾಸ್ಟೆಲ್‌ಗೆ ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಭೇಟಿ

Pavagada Hostel: ವಸತಿ ನಿಲಯದಲ್ಲಿ ಕುಡಿಯುವ ನೀರಿನ ಸಮಸ್ಯೆ, ಶೌಚಾಲಯ ಅವ್ಯವಸ್ಥೆ, ಶುಚಿತ್ವ ಕೊರತೆಯಿಂದ ಮಕ್ಕಳು ಪದೇ ಪದೇ ಅನಾರೋಗ್ಯಕ್ಕೆ ಈಡಾಗುತ್ತಿದ್ದು, ತಿಂಗಳುಗಟ್ಟಲೇ ವಸತಿ ನಿಲಯಕ್ಕೆ ಗೈರಾಗಿರೋದು ಬೆಳಕಿಗೆ ಬಂದಿದೆ. ಹೀಗಾಗಿ ಸಿಬ್ಬಂದಿಯನ್ನು ಮಕ್ಕಳ ರಕ್ಷಣಾ ಆಯೋಗದ ಸದಸ್ಯ ಡಾ.ತಿಪ್ಪೇಸ್ವಾಮಿ ತರಾಟೆಗೆ ತೆಗೆದುಕೊಂಡಿದ್ದಾರೆ.

Koratagere News: ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್: ಆರೋಪಿ ಬಂಧನ, 137 ಸಿಲಿಂಡರ್‌ ವಶ

ಅಕ್ರಮ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್: 137 ಸಿಲಿಂಡರ್‌ ವಶ

Koratagere News: ಕೋಳಿ ಶೆಡ್‌ನಲ್ಲಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಫಿಲ್ಲಿಂಗ್ ಅಡ್ಡೆಯ ಮೇಲೆ ಕೊರಟಗೆರೆ ಪಿಎಸ್‌ಐ ಚೇತನ್‌ ಕುಮಾರ್ ನೇತೃತ್ವದ ತಂಡ ದಾಳಿ ನಡೆಸಿ, 137 ಸಿಲಿಂಡರ್, ಒಂದು ಟಾಟಾ ಇಂಟ್ರಾ ಗೂಡ್ಸ್ ಗಾಡಿ ಸಮೇತ ಓರ್ವ ಆರೋಪಿಯನ್ನು ಬಂಧಿಸಿರುವ ಘಟನೆ ಕೊರಟಗೆರೆ ತಾಲೂಕಿನ ಸಿ.ಎನ್.ದುರ್ಗ ಹೋಬಳಿಯ ಬುಕ್ಕಾಪಟ್ಟಣ ಬಳಿ ಶನಿವಾರ ತಡರಾತ್ರಿ ಜರುಗಿದೆ.

ನಗರದ ಸರಕಾರಿ ಪ.ಪೂ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳ ಸಮಾರೋಪ

ಶಿಕ್ಷಣವು ವ್ಯಕ್ತಿಯ ಬದುಕನ ಕಟ್ಟಿಕೊಳ್ಳಲು ರೂವಾರಿ; ಟಿ.ಬಿ.ಜಯಚಂದ್ರ

ಶಿಕ್ಷಣದಲ್ಲಿ ಸಂಸ್ಕಾರ ಮತ್ತು ಮೌಲ್ಯಗಳು ಬಹು ಮುಖ್ಯ ಅಂಶಗಳು ಇದನ್ನು ವಿದ್ಯಾರ್ಥಿಗಳು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಾಧನೆ ಯನ್ನು ಮಾಡಿ ಎಂದು ರಾಜ್ಯ ಸರಕಾರದ ದೆಹಲಿ ವಿಶೇಷ ಪ್ರತಿನಿಧಿ ಟಿ.ಬಿ.ಜಯಚಂದ್ರ ಹೇಳಿದರು. ಅವರು ನಗರದ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ನಡೆದ 2024-25 ನೇ ಸಾಲಿನ ಶೈಕ್ಷಣಿಕ ಸಾಂಸ್ಕೃತಿಕ ಕ್ರೀಡಾ ಹಾಗೂ ರಾಷ್ಟ್ರೀಯ ಸೇವಾ ಯೋಜನೆ ಘಟಕದ ಚಟುವಟಿಕೆಗಳ ಸಮಾ ರೋಪ ಸಮಾ ರಂಭ ಉದ್ಘಾಟಿಸಿ ಮಾತನಾಡಿದರು

ದೇಶದ ಯುವಕರು ನಮ್ಮ ಸಂಸ್ಕೃತಿಯನ್ನು ಮುಂದುವರೆಸಿಕೊಂಡು ಹೋಗಬೇಕು: ಚಿದಾನಂದ್ ಎಂ.ಗೌಡ

ಶ್ರೀ ವೇಣುಗೋಪಾಲ ಸ್ವಾಮಿ ದೇವಸ್ಥಾನದ ಪ್ರವೇಶದ್ವಾರ ನಿರ್ಮಾಣಕ್ಕೆ ಭೂಮಿ ಪೂಜೆ

ಗ್ರಾಮಗಳಲ್ಲಿ ದೇವಸ್ಥಾನಗಳು ಅಭಿವೃದ್ಧಿಯಾಗಿ ದೇವರ ಉತ್ಸವಗಳು ನಡೆಯುತ್ತಿದ್ದರೆ. ಆ ಗ್ರಾಮಗಳು ಸುಭೀಕ್ಷವಾಗಿರುತ್ತವೆ. ಈ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಿ ದೇವಸ್ಥಾನಗಳ ಅಭಿವೃದ್ಧಿಗೆ ಸಹಕಾರ ನೀಡ ಬೇಕು. ವಿಧಾನ ಪರಿ ಷತ್ ಸದಸ್ಯರಾದ ಚಿದಾನಂದ್ ಎಂ.ಗೌಡ ಅವರು ತಮಗೆ ಬರುವ ಅಲ್ಪ ಅಭಿ ವೃದ್ಧಿ ಹಣ ದಲ್ಲೂ ತಾಲೂಕಿನ ಹಲವು ಶಾಲೆಗಳಿಗೆ ದೇವಸ್ಥಾನಗಳಿಗೆ ನೀಡುತ್ತಿರುವುದು ಶ್ಲಾಘನೀಯ ಎಂದರು

ತುಮಕೂರು ಹಾಲು ಒಕ್ಕೂಟದಿಂದ ಹೈನುಗಾರರಿಗೆ ಲೀಟರ್ ಹಾಲಿಗೆ 2 ರೂ. ಹೆಚ್ಚಳ: ಎಸ್.ಆರ್.ಗೌಡ

ಪಶು ಇಲಾಖೆಯಿಂದ ಬರಡು ರಾಸುಗಳಿಗೆ ಆರೋಗ್ಯ ತಪಾಸಣೆ

ಹೈನುಗಾರಿಕೆಯನ್ನು ಪ್ರೋತ್ಸಾಹಿಸಿ ಬಡ ರೈತ ಕುಟುಂಬಗಳ ಆರ್ಥಿಕ ಪ್ರಗತಿಗೆ ಆದ್ಯತೆ ನೀಡುವುದೇ ನನ್ನ ಗುರಿಯಾಗಿದ್ದು, ಕಳೆದ ೧೦ ವರ್ಷಗಳಲ್ಲೂ ತುಮಕೂರು ಹಾಲು ಒಕ್ಕೂಟದ ನಿರ್ದೇಶಕನಾಗಿ ಹಾಲು ಉತ್ಪಾದಕರ ಧ್ವನಿಯಾಗಿ, ಕೆಲಸ ಮಾಡಿದ್ದೇನೆ. ಮುಂದೆಯೂ ಇದೇ ರೀತಿ ಕೆಲಸ ಮಾಡುತ್ತೇನೆ. ರೈತರು ಹಾಲು ಉತ್ಪಾದನೆಯಲ್ಲಿ ಗುಣಮಟ್ಟ ಕಾಯ್ದುಕೊಂಡು ಹೆಚ್ಚು ಲಾಭ ಪಡೆಯಿರಿ ಎಂದರು

Honeytrap Case: ಪ್ರೀತಿ, ಮದುವೆ ಹೆಸರಲ್ಲಿ ನಾಲ್ವರಿಗೆ ವಂಚನೆ; ಮಹಿಳೆ ವಿರುದ್ಧ ಕೇಸ್‌ ದಾಖಲು

ಪ್ರೀತಿ, ಮದುವೆ ಹೆಸರಲ್ಲಿ ನಾಲ್ವರಿಗೆ ವಂಚನೆ; ಮಹಿಳೆ ವಿರುದ್ಧ ಕೇಸ್‌ ದಾಖಲು

Honeytrap case: ಸಾಮಾಜಿಕ ಜಾಲತಾಣದ ಮೂಲಕ ಪುರುಷರ ಸ್ನೇಹ ಸಂಪಾದಿಸಿ ಅವರನ್ನು ಪ್ರೀತಿ-ಪ್ರೇಮ, ಮದುವೆ ಹೆಸರಿನಲ್ಲಿ ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿ ವಂಚಿಸುತ್ತಿದ್ದ ಮಹಿಳೆ ವಿರುದ್ಧ ತುಮಕೂರಿನ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಕೇಸ್‌ ದಾಖಲಾಗಿದೆ.

Turuvekere News: ತುರುವೇಕೆರೆಯಲ್ಲಿ 11 ಟನ್ ಕಳಪೆ ರಸಗೊಬ್ಬರ ವಶ

ತುರುವೇಕೆರೆಯಲ್ಲಿ 11 ಟನ್ ಕಳಪೆ ರಸಗೊಬ್ಬರ ವಶ

Turuvekere News: ತುರುವೇಕೆರೆಯ ಶ್ರೀ ಸ್ವಾಮಿ ಅಯ್ಯಪ್ಪ ಫರ್ಟಿಲೈಸರ್ಸ್ ರಸಗೊಬ್ಬರ ಮಾರಾಟ ಮಳಿಗೆ ಮೇಲೆ ಕೃಷಿ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 11.25 ಟನ್ ಕಳಪೆ ರಸಗೊಬ್ಬರವನ್ನು ವಶಕ್ಕೆ ಪಡೆದಿದ್ದಾರೆ. ಇಲಾಖೆ ಅನುಮತಿ ಪಡೆಯದೆ ಕಳಪೆ ದರ್ಜೆಯ ರಸಗೊಬ್ಬರ ಮಾರಾಟ ಮಾಡುತ್ತಿದ್ದ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

ಸಾಮಾಜಿಕ ಜಾಲತಾಣದಲ್ಲಿ ಸಂವಿಧಾನ ವಿರೋಧಿ ಬರಹ ಡಿಎಸ್ಎಸ್ ಮುಖಂಡರು ಆಕ್ರೋಶ

ದಲಿತರ ಭಾವನೆಗೆ ಧಕ್ಕೆ ಉಂಟು ಮಾಡಿರುವ ಬಗ್ಗೆ ವ್ಯಾಪಕ ಖಂಡನೆ

ಬಾಬಾ ಸಾಹೇಬ್ ಅಂಬೇಡ್ಕರ್ ರವರು ಬರೆದ ಸಂವಿಧಾನದ ಬಗ್ಗೆ ಅವಹೇಳನಕಾರಿಯಾಗಿ ಬರೆದಿರುವ ಸಂವಿಧಾನ ವಿರೋಧಿ ವೀರೇಶ್ ಪ್ರಸಾದ್ ಎಂಬ ಮೂರ್ಖನನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಕ್ರಮ ಜರುಗಿಸಬೇಕೆಂದು ದ ಸಂ ಸ ತಾಲೂಕು ಸಂಚಾಲಕ ಮಾರಶೆಟ್ಟಿಯಲ್ಲಿ ಬಸವರಾಜ್ ಒತ್ತಾಯಿಸಿ ದರು

Essay Competition Winners: ʼಸದಾತನʼ ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಫಲಿತಾಂಶ ಪ್ರಕಟ

Essay Competition Winners: ʼಸದಾತನʼ ದಿಂದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆ; ಫಲಿತಾಂಶ ಪ್ರಕಟ

Essay Competition Winners: ʼಸದಾತನʼ ದಿಂದ ಶಾಲಾ ಶಿಕ್ಷಕರಿಗಾಗಿ ನಡೆಸಲಾದ ರಾಜ್ಯಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಭಾಗಗಳಿಂದ 964 ಶಿಕ್ಷಕರು ಭಾಗವಹಿಸಿದ್ದು, ಸ್ಪರ್ಧೆಯ ಫಲಿತಾಂಶ ಪ್ರಕಟಿಸಲಾಗಿದೆ. ಈ ಕುರಿತ ವಿವರ ಇಲ್ಲಿದೆ.

Pavagada News: ವೈದ್ಯನ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಸಾವು; ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ

ವೈದ್ಯನ ನಿರ್ಲಕ್ಷ್ಯಕ್ಕೆ 7 ವರ್ಷದ ಬಾಲಕ ಸಾವು; ಆಸ್ಪತ್ರೆ ಎದುರು ಕುಟುಂಬಸ್ಥರ ಪ್ರತಿಭಟನೆ

Pavagada News: ವೈದ್ಯನ ನಿರ್ಲಕ್ಷ್ಯದಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಬಾಲಕನ ಕುಟುಂಬಸ್ಥರು ಪಾವಗಡದ ಖಾಸಗಿ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಿದ್ದಾರೆ. ಡೆಂಗಿ ಜ್ವರ ತೀವ್ರವಾಗಿ, ಪರಿಸ್ಥಿತಿ ಕೈಮೀರಿದ ಬಳಿಕ ವೈದ್ಯರು ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯಲು ಸೂಚಿಸಿದ್ದಾರೆ. ಹೀಗಾಗಿ ಬಾಲಕ ಮೃತಪಟ್ಟದ್ದಾನೆ ಎಂದು ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ; ತಾಲೂಕು ಕಚೇರಿಯಲ್ಲೇ ವಿಷ ಕುಡಿದ ವಿಶೇಷಚೇತನ ರೈತ

ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ಕಬಳಿಕೆ; ತಾಲೂಕು ಕಚೇರಿಯಲ್ಲೇ ವಿಷ ಕುಡಿದ ವಿಶೇಷಚೇತನ ರೈತ

ತುರುವೇಕೆರೆ ತಾಲೂಕಿನ ದೊಡ್ಡಘಟ್ಟ ಗ್ರಾಮದ ವಿಶೇಷಚೇತನ ರೈತ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ನಕಲಿ ದಾಖಲಾತಿ ಸೃಷ್ಟಿಸಿ ತನಗೆ ವಂಚಿಸಿದ್ದಾರೆ ಎಂದು ರೈತ ಅರೋಪಿಸಿದ್ದಾರೆ.

Mango Pachcha Movie: ಸುದೀಪ್ ಸೋದರಳಿಯ ಸಂಚಿತ್ ಸಂಜೀವ್ ನಟನೆಯ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್

ಸುದೀಪ್ ಸೋದರಳಿಯನ 'ಮ್ಯಾಂಗೋ ಪಚ್ಚ' ಚಿತ್ರದ ಪ್ರೋಮೋ ರಿಲೀಸ್

Mango Pachcha Movie: ಕಿಚ್ಚ ಸುದೀಪ್ ಅಕ್ಕನ ಮಗ ಸಂಚಿತ್ ಸಂಜೀವ್‌ ಅಭಿನಯದ ಚೊಚ್ಚಲ ಸಿನಿಮಾಗೆ 'ಮ್ಯಾಂಗೋ ಪಚ್ಚ' ಎಂದು ಟೈಟಲ್ ಇಡಲಾಗಿದೆ. ಚಿತ್ರದ ಪ್ರೋಮೋ ರಿಲೀಸ್‌ ಆಗಿದೆ. ಈ ಕುರಿತ ವಿವರ ಇಲ್ಲಿದೆ.

Yadgir Accident: ಯಾದಗಿರಿಯಲ್ಲಿ ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಒಂದೇ ಕುಂಟುಂಬದ ಮೂವರ ದುರ್ಮರಣ

ಯಾದಗಿರಿಯಲ್ಲಿ ಬೈಕ್‌ಗೆ ಬಸ್‌ ಡಿಕ್ಕಿಯಾಗಿ ಒಂದೇ ಕುಂಟುಂಬದ ಮೂವರ ದುರ್ಮರಣ

Yadgir Accident: ಯಾದಗಿರಿ ಜಿಲ್ಲೆ ಸುರಪುರ ತಾಲೂಕಿನ ತಿಂಥಣಿ ಬಳಿ ಬುಧವಾರ ಅಪಘಾತ ನಡೆದಿದೆ. ತಿಂಥಣಿ ಕಡೆಗೆ ಹೊರಟಿದ್ದ ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ ಹೊಡೆದಿದ್ದರಿಂದ ಅಪಘಾತ ಸಂಭವಿಸಿದೆ.

Mr Rani Movie: ‘ಲಕ್ಷ್ಮಿ ನಿವಾಸ’ ಖ್ಯಾತಿಯ ದೀಪಕ್ ಸುಬ್ರಹ್ಮಣ್ಯ ಅಭಿನಯದ ‘ಮಿಸ್ಟರ್‌ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್‌

‘ಮಿಸ್ಟರ್‌ ರಾಣಿ’ ಚಿತ್ರ ಫೆ.7ಕ್ಕೆ ರಿಲೀಸ್‌

Mr Rani Movie: ʼಲಕ್ಷ್ಮೀ ನಿವಾಸ’ ಧಾರಾವಾಹಿಯಲ್ಲಿ ಜಯಂತ್‌ ಪಾತ್ರದ ಮೂಲಕ ಖ್ಯಾತಿ ಗಳಿಸಿದ ದೀಪಕ್ ಸುಬ್ರಹ್ಮಣ್ಯ ಪ್ರಮುಖ ಪಾತ್ರದಲ್ಲಿ ನಟಿಸಿರುವ ‘ಮಿಸ್ಟರ್ ರಾಣಿ’ ಚಿತ್ರ ಫೆ.7 ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ. ಈ ಕುರಿತ ವಿವರ ಇಲ್ಲಿದೆ.

DK Shivakumar: ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ- ಡಿ.ಕೆ.ಶಿವಕುಮಾರ್ ತರಾಟೆ

ಧರ್ಮ, ಧಾರ್ಮಿಕ ನಂಬಿಕೆ, ಆಚರಣೆಗಳಲ್ಲಿ ಬಿಜೆಪಿ ರಾಜಕೀಯ- ಡಿಕೆಶಿ ಕಿಡಿ

ಪ್ರಪಂಚದಲ್ಲಿ ಹಲವಾರು ಧಾರ್ಮಿಕ ಆಚರಣೆ, ನಂಬಿಕೆಗಳಿವೆ.‌ ನಾನು ನನ್ನ ದೇವರನ್ನು ನಂಬುತ್ತೇನೆ. ಕೆಲವರು ಹಸ್ತ ನೋಡಿಕೊಳುತ್ತಾರೆ, ಇನ್ನೂ ಕೆಲವರು ನೀರು, ಆಕಾಶ, ಸೂರ್ಯನನ್ನು ನಂಬುತ್ತಾರೆ. ಇದರಲ್ಲಿ ಸರಿ ತಪ್ಪು ಎಂಬುದಿಲ್ಲ, ಅವರವರ ನಂಬಿಕೆ ಅಷ್ಟೇ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್‌ ತಿಳಿಸಿದ್ದಾರೆ.