ಎಸ್​ ಎಲ್​ ಭೈರಪ್ಪ ನಿಧನ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

MLA C B SureshBabu Fan: ತಮ್ಮ ವಾಹನಕ್ಕೆ ಶಾಸಕರ ಹೆಸರಿಟ್ಟ ಅಭಿಮಾನಿ !

ಕ್ಷೇತ್ರದ ಶಾಸಕರ ಮೇಲಿರುವ ಅತೀವ ಅಭಿಮಾನವನ್ನು ವ್ಯಕ್ತಪಡಿಸಲು ಸಿ.ಬಿ.ಸುರೇಶಬಾಬು ಅವರ ಕಟ್ಟಾ ಅಭಿಮಾನಿ ಎನ್ನಲಾದ ಜಾಣೇಹಾರ್ ಗ್ರಾಮದ ಬೈಲಪ್ಪ ಎಂಬ ದಿವ್ಯಾಂಗರು ಸರಕಾರ ದಿಂದ ಪಡೆದಿರುವ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಸಿಬಿಎಸ್ ಅಭಿಮಾನಿ ಎಂದು ಬರೆಸಿದ್ದಾರೆ.

ಧನಂಜಯ್

ಚಿಕ್ಕನಾಯಕನಹಳ್ಳಿ: ರಾಜಕಾರಣದಲ್ಲಿ ಅಪರೂಪದ ವಿದ್ಯಮಾನವೊಂದು ಈಗ ಎಲ್ಲರ ಗಮನ ಸೆಳೆಯುತ್ತಿದೆ. ಚಿಕ್ಕನಾಯಕನಹಳ್ಳಿ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರು ಸಿ.ಬಿ.ಸುರೇಶ ಬಾಬು ಅವರ ಮೇಲೆ ಅಭಿಮಾನವಿಟ್ಟುಕೊಂಡು ಅವರ ಕಟ್ಟಾ ಬೆಂಬಲಿಗನೊಬ್ಬ ತನ್ನ ಖಾಸಗಿ ವಾಹನದ ಮೇಲೆ ಶಾಸಕರ ಹೆಸರನ್ನು ದೊಡ್ಡ ಅಕ್ಷರಗಳಲ್ಲಿ ಬರೆಸಿ ಅಭಿಮಾನ ಮೆರೆದಿದ್ದಾರೆ.

ಕ್ಷೇತ್ರದ ಶಾಸಕರ ಮೇಲಿರುವ ಅತೀವ ಅಭಿಮಾನವನ್ನು ವ್ಯಕ್ತಪಡಿಸಲು ಸಿ.ಬಿ.ಸುರೇಶಬಾಬು ಅವರ ಕಟ್ಟಾ ಅಭಿಮಾನಿ ಎನ್ನಲಾದ ಜಾಣೇಹಾರ್ ಗ್ರಾಮದ ಬೈಲಪ್ಪ ಎಂಬ ದಿವ್ಯಾಂಗರು ಸರಕಾರ ದಿಂದ ಪಡೆದಿರುವ ದ್ವಿಚಕ್ರ ವಾಹನದ ಮುಂಭಾಗದಲ್ಲಿ ಕಾಣುವಂತೆ ದೊಡ್ಡ ಅಕ್ಷರಗಳಲ್ಲಿ ಸಿಬಿಎಸ್ ಅಭಿಮಾನಿ ಎಂದು ಬರೆಸಿದ್ದಾರೆ. ವಾಹನದ ಬಣ್ಣಕ್ಕೆ ವ್ಯತಿರಿಕ್ತವಾದ ಬಣ್ಣದಲ್ಲಿ ಈ ಬರಹವನ್ನು ಬರೆಯಿಸಿರುವುದರಿಂದ ರಸ್ತೆಯಲ್ಲಿ ಸಂಚರಿಸುವವರ ಗಮನ ತಕ್ಷಣವೇ ಸೆಳೆಯುತ್ತಿದೆ.

ಇದನ್ನೂ ಓದಿ: Tumkur News: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ವಾತ್ಸಲ್ಯ ಮನೆ ಹಸ್ತಾಂತರ

ಸಾಮಾನ್ಯವಾಗಿ ವಾಹನಗಳಿಗೆ ಇಷ್ಟವಾದ ಸಂಖ್ಯೆ ಅಥವಾ ದೇವರ ಹೆಸರನ್ನು ಬರೆಯಲಾಗುತ್ತದೆ. ಆದರೆ, ಈ ಅಭಿಮಾನಿ ನೇರವಾಗಿ ಜನಪ್ರತಿನಿದಿಯ ಹೆಸರನ್ನೇ ತಮ್ಮ ವಾಹನದ ಮೇಲೆ ಪ್ರದರ್ಶಿಸಿ ಶಾಸಕ ಸುರೇಶ ಬಾಬು ಮೇಲಿನ ತಮ್ಮ ನಿಷ್ಠೆ ಮತ್ತು ಪ್ರೀತಿಯ ಮಟ್ಟವನ್ನು ತೋರಿಸಿದ್ದಾರೆ. ಅಭಿಮಾನಿಗಳು ತೋರಿಸುವ ಪ್ರೀತಿ ಅಮೂಲ್ಯವಾದುದ್ದು ಮತ್ತು ಅದನ್ನು ಶಾಸಕರು ಗೌರವಿಸು ತ್ತಿದ್ದಾರೆ ಎಂದು ತಿಳಿದುಬಂದಿದೆ. ಯುವಕನ ಈ ವಿಶಿಷ್ಟ ಪ್ರೀತಿ ಪ್ರದರ್ಶನವು ಸ್ಥಳಿಯ ರಾಜಕೀಯ ವಲಯದಲ್ಲಿ ಮತ್ತು ಸಾರ್ವಜನಿಕರಲ್ಲಿ ಕುತೂಹಲದ ವಿಷಯವಾಗಿದೆ.

ಅಭಿಮಾನಿ ಪ್ರತಿಕ್ರಿಯೆ

ಈ ವಿಶಿಷ್ಟ ಪ್ರೀತಿ ಪ್ರದರ್ಶನದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬೈಲಪ್ಪ ನಮ್ಮ ಶಾಸಕರು ಬಡವರಿ ಗಾಗಿ ಮತ್ತು ಕ್ಷೇತ್ರದ ಅಭಿವೃದ್ದಿಗಾಗಿ ಮಾಡಿದ ಕೆಲಸಗಳು ನನ್ನ ಮೇಲೆ ಪ್ರಭಾವ ಬೀರಿದೆ. ನನ್ನ ಕುಟುಂಬಕ್ಕೂ ಸಾಕಷ್ಟು ಸಹಾಯ ಮಾಡಿದ್ದಾರೆ. ಅವರಿಗೆ ಪ್ರೀತಿ ತೋರಿಸಲು ಬೇರೆ ದಾರಿ ಸಿಗಲಿಲ್ಲ ಹಾಗಾಗಿ ಈ ರೀತಿ ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಒಟ್ಟಿನಲ್ಲಿ ತಮ್ಮ ನೆಚ್ಚಿನ ನಾಯಕನ ಮೇಲಿನ ಅಭಿಮಾನವು ಪ್ರೀತಿಯ ಸ್ವರೂಪದಲ್ಲಿ ವಿಭಿನ್ನವಾಗಿ ಪ್ರಕಟಗೊಂಡಿದೆ.