ಚಿಕ್ಕನಾಯಕನಹಳ್ಳಿ : ಹಂದನಕೆರೆ ಹೋಬಳಿಯ ಬಂದ್ರೇಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ನೂತನ ಕಟ್ಟಡಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯ ವತಿಯಿಂದ 1.5 ಲಕ್ಷ ಅನುದಾನ ಮಂಜೂರುಗೊಂಡಿದೆ. ಮಂಜೂರಾತಿ ಪತ್ರವನ್ನು ತಾಲೂಕು ಯೋಜನಾಧಿಕಾರಿ ಪ್ರೇಮಾನಂದ ಅವರು ಸಹಕಾರ ಸಂಘದ ಅಧ್ಯಕ್ಷರಾದ ಬಸವರಾಜ ರವರಿಗೆ ನೀಡಿದರು.
ಇದನ್ನೂ ಓದಿ: Tumkur (Gubbi) News: ಡಾ.ಬಾಬು ಜಗಜೀವನ ರಾಮ್ ರವರ 39ನೇ ಪುಣ್ಯ ಸ್ಮರಣೆ
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಶಿವಕುಮಾರ್, ಒಕ್ಕೂಟದ ಅಧ್ಯಕ್ಷರಾದ ದೇವರಾಜ, ಕಾರ್ಯ ನಿರ್ವಹಣಾಧಿಕಾರಿ ಶಿವಕುಮಾರ್, ಮೇಲ್ವಿಚಾರಕರಾದ ವಸಂತ, ಸೇವಾಪ್ರತಿನಿಧಿ ಕಾಂತಮಣಿ, ಸಂಘದ ನಿರ್ದೇಶಕರು, ಸ್ವ ಸಹಾಯಗಳ ಸದಸ್ಯರುಗಳು ಉಪಸ್ಥಿತರಿದ್ದರು.