ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Adichunchanagairi Mutt Sri: ಜಿಡಿಪಿ ಪಟ್ಟಿಯಲ್ಲಿ ಭಾರತ ನಾಲ್ಕನೇ ದೇಶ : ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಅಮೆರಿಕಾದಂತಹ ದೇಶಗಳು ನಮ್ಮ ದೇಶದ ಮೇಲೆ ಸವಾರಿ ಮಾಡಲು ಕಾರಣವೇ ಆರ್ಥಿಕ ಹಿನ್ನಡೆ ಕಾರಣವಿತ್ತು. ಈಗ ಅಬಿವೃದ್ದಿ ಪಥದಲ್ಲಿ ಭಾರತ ದಾಪುಗಾಲು ಹಾಕಿದೆ. ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹ ಉತ್ತಮ ಮಾರ್ಗವಾಗಿದೆ. ನಮ್ಮ ದೇಶದಲ್ಲಿ ಶೇ 50 ರಷ್ಟು ರೈತರು ದುಡಿಮೆ ಮಾಡುತ್ತಿದ್ದರು. ಅವರ ಆರ್ಥಿಕತೆಯ ಪ್ರಮಾಣ ಮಾತ್ರ ಶೇ.18 ರಷ್ಟು ಮಾತ್ರ ಇತ್ತು

ಗುಬ್ಬಿ : ಭಾರತ ದೇಶ ಜಿಡಿಪಿಯಲ್ಲಿ ನಾಲ್ಕನೇ ಸ್ಥಾನವಿದ್ದು 2050 ರ ವೇಳೆಗೆ ಮೂರನೇ ಸ್ಥಾನಕ್ಕೆ ಜಿಗಿಯಲಿದೆ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಶ್ರೀ ಡಾ.ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು.

ತಾಲೂಕಿನ ಕೆ ಜಿ ಟೆಂಪಲ್ ನಲ್ಲಿ ಕಾಳಿಕಂಟೇಶ್ವರಿ ಪತ್ತಿನ ಸಹಕಾರ ಸಂಘ ಉದ್ಘಾಟಿಸಿ ಮಾತನಾ ಡಿದ ಅವರು ಗ್ರಾಮಾಂತರ ಭಾಗದಲ್ಲಿ ಸಹಕಾರ ಸಂಘ ರಚನೆ ಗ್ರಾಮೀಣ ರೈತರ ಆರ್ಥಿಕ ಸಬಲತೆಗೆ ಕಾರಣವಾಗಲಿದೆ. ಆರ್ಥಿಕ ವಹಿವಾಟು ಬಡ ರೈತರ ಸಂಕಷ್ಟಕ್ಕೆ ನೆರವಾಗಲಿ ಎಂದು ಆಶಿಸಿದರು. 

ಅಮೆರಿಕಾದಂತಹ ದೇಶಗಳು ನಮ್ಮ ದೇಶದ ಮೇಲೆ ಸವಾರಿ ಮಾಡಲು ಕಾರಣವೇ ಆರ್ಥಿಕ ಹಿನ್ನಡೆ ಕಾರಣವಿತ್ತು. ಈಗ ಅಬಿವೃದ್ದಿ ಪಥದಲ್ಲಿ ಭಾರತ ದಾಪುಗಾಲು ಹಾಕಿದೆ. ಆರ್ಥಿಕವಾಗಿ ಅಭಿವೃದ್ಧಿಗೆ ಸಹಕಾರ ಕ್ಷೇತ್ರ ಸಹ ಉತ್ತಮ ಮಾರ್ಗವಾಗಿದೆ. ನಮ್ಮ ದೇಶದಲ್ಲಿ ಶೇ 50 ರಷ್ಟು ರೈತರು ದುಡಿಮೆ ಮಾಡುತ್ತಿದ್ದರು. ಅವರ ಆರ್ಥಿಕತೆಯ ಪ್ರಮಾಣ ಮಾತ್ರ ಶೇ.18 ರಷ್ಟು ಮಾತ್ರ ಇತ್ತು. ಈ ನಿಟ್ಟಿನಲ್ಲಿ ಸಹಕಾರ ಸಂಘ ರೈತರು ಬೆಳೆಯುವಂತಹ ಕೆಲಸಕ್ಕೆ ಕೈ ಹಾಕಬೇಕು ಎಂದರು.

ಇದನ್ನೂ ಓದಿ: Tumkur News: ಡಾ.ಮೌಲಾ ಷರೀಫ್ ಅವರದ್ದು ಮಾತೃ ಹೃದಯ- ಶ್ರೀ ಸಿದ್ದಲಿಂಗ ಸ್ವಾಮೀಜಿ

ತಾವೇ ಬೆಳೆದ ಬೆಳೆಗಳನ್ನು ಬಳಸಿಕೊಂಡು ಉಪ ಉತ್ಪನ್ನಗಳನ್ನು ತಯಾರಿಸುವಂತಹ ಕೆಲಸಗಳು ನಡೆಯಬೇಕಾಗಿದೆ. ಇನ್ನೂ ರೈತರು ಈ ದೇಶದ ಬೆನ್ನೆಲುಬಾಗಿದ್ದು ಯಾವುದೇ ಕಾರಣಕ್ಕೂ ತಮ್ಮ ಭೂಮಿಯನ್ನ ಮಾರಾಟ ಮಾಡುವಂತಹ ತಪ್ಪನ್ನು ಯಾರೂ ಮಾಡಬೇಡಿ.

 ರೈತರು ಕಷ್ಟಪಟ್ಟು ದುಡಿಯುತ್ತಿದ್ದು ಅದನ್ನು ಉಳಿಸಿಕೊಳ್ಳುವ ಕೆಲಸವನ್ನು ಸಹ ಮಾಡ ಬೇಕಾಗಿದೆ. ಗ್ರಾಮಾಂತರದಲ್ಲಿ ಇರುವಂತಹ ಜನರು ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳು ವಂತಹ ಕೆಲಸವನ್ನು ಸಹ ಮಾಡಬೇಕಿದ್ದು  ಉತ್ತಮವಾದ ಆಹಾರ ಮೂಲಕ ಆರೋಗ್ಯ ಸಂಪಾದಿಸಿ ಎಂದರು.

ರಾಜ್ಯ ರೈತ ಸಂಘದ ರಾಜ್ಯಾಧ್ಯಕ್ಷ ಬಡಗಲಪುರ ನಾಗೇಂದ್ರಪ್ಪ ಮಾತನಾಡಿ ಈ ದೇಶದ ರೈತರು ಈ ದೇಶದ ಜೀವನಾಡಿಯಾಗಿದ್ದು ಅವರನ್ನು ಗೌರವಿಸುವಂತಹ ಕೆಲಸವನ್ನು ಪ್ರತಿಯೊಬ್ಬರೂ ಮಾಡಬೇಕು ರೈತರು ಬಲಿಷ್ಠರಾದಾಗ ಮಾತ್ರ ದೇಶವು ಸಹ ಬಲಿಷ್ಠವಾಗುತ್ತದೆ ನಮ್ಮ ಹೋರಾಟ ಗಳು ನಿರಂತರವಾಗಿದ್ದರು ರೈತರು ಯಾವುದೇ ಕಾರಣಕ್ಕೂ ರೈತ ಜೀವನದಿಂದ ವಿಮುಕ್ತಿ ಆಗದೆ ಅದರಲ್ಲಿಯೇ ಮುಂದುವರಿಯಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಆದಿಚುಂಚನಗಿರಿ ಶಾಖಾಮಠದ ಮಂಗಳನಾಥ ಸ್ವಾಮೀಜಿ, ಅರೆ ಶಂಕರ ಮಠದ ಸಿದ್ದರಾಮಯ್ಯ ಚೈತನ್ಯ ಸ್ವಾಮೀಜಿ, ಶಾಸಕ ಎಸ್.ಆರ್.ಶ್ರೀನಿವಾಸ್, ಜಿಲ್ಲಾ ರೈತ ಸಂಘದ ಅಧ್ಯಕ್ಷ ಎ.ಗೋವಿಂದರಾಜು, ತಾಲೂಕು ರೈತ ಸಂಘದ ಅಧ್ಯಕ್ಷ ಕೆ.ಎನ್.ವೆಂಕಟೇಗೌಡ, ಡಾ.ನಾಗ ಭೂಷಣ್ ಸೇರಿದಂತೆ ಸ್ಥಳೀಯ ಮುಖಂಡರುಗಳು, ಗ್ರಾಮಸ್ಥರು ಭಾಗವಹಿಸಿದ್ದರು.