ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

C B Suresh Babu: ನೂರನೇ ಜನಸ್ಪಂದನಕ್ಕೆ ಅರ್ಜಿಗಳ ಶ್ವೇತಪತ್ರ ಬಿಡುಗಡೆ : ಶಾಸಕ ಸಿಬಿಎಸ್

Chikkanayakana Halli News: ಜನಸ್ಪಂದನ ಇದುವರೆಗೂ ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳ ಅರ್ಜಿಗಳೇ ಇಲ್ಲದಾಗಿದೆ, ಪ್ರತಿ ಸಭೆಯಲ್ಲೂ ಬಂದತಹ ಅರ್ಜಿಗಳನ್ನು ನಾವೇ ಪರಿಶೀಲಸಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೀಡಿ, ನಿಗದಿತ ಸಮಯದಲ್ಲಿ ಪರಿಸಹರಿಸಲಾಗುತ್ತಿದೆ ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು ತಿಳಿಸಿದರು.

ಚಿಕ್ಕನಾಯಕನಹಳ್ಳಿ ತಾಲೂಕು ಹೊಸಳ್ಳಿಯಲ್ಲಿ ನಡೆದ 'ಮನೆಬಾಗಿಲಿಗೆ ಮನೆ ಮಗ' ಜನಸ್ಪಂದನ ಕಾರ್ಯಕ್ರಮವನ್ನು ಶಾಸಕ ಸಿ.ಬಿ. ಸುರೇಶ್‌ಬಾಬು ಉದ್ಘಾಟಿಸಿದರು.

ಚಿಕ್ಕನಾಯಕನಹಳ್ಳಿ: ತಾಲೂಕಿನಲ್ಲಿ ತಮ್ಮ ಮಹತ್ವಾಕಾಂಕ್ಷೆಯ ಮನೆ ಬಾಗಿಲಿಗೆ ಮನೆ ಮಗ ಎಂಬ ಜನಸ್ಪಂದನ ಕಾರ್ಯಕ್ರಮ ಕುರಿತಂತೆ ಇರುವ ಟೀಕೆಗಳಿಗೆ ಅಂತಿಮ ಉತ್ತರ ನೀಡಲು ಶಾಸಕ ಸುರೇಶ್‌ಬಾಬು ಮುಂದಾಗಿದ್ದಾರೆ. ನೂರನೇ ಜನಸ್ಪಂದನದ ಕಾರ್ಯಕ್ರಮದ ಸಂದರ್ಭದಲ್ಲಿ ಈವರೆಗೆ ಸ್ವೀಕರಿಸಲಾದ, ಯಶಸ್ವಿಯಾಗಿ ಬಗೆಹರಿದ ಮತ್ತು ಮತ್ತು ಬಾಕಿ ಉಳಿದಿರುವ ಅರ್ಜಿಗಳ ಸಂಪೂರ್ಣ ಅಂಕಿ ಅಂಶಗಳ ಪುಸ್ತಕವನ್ನು ಬಿಡುಗಡೆಗೊಳಿಸಲಾಗುವುದು ಎಂದು ಶಾಸಕ ಸಿ.ಬಿ. ಸುರೇಶ್‌ಬಾಬು (C B Suresh Babu) ತಿಳಿಸಿದರು.

ತಾಲೂಕಿನ ಹೊನ್ನೆಬಾಗಿ ಪಂಚಾಯಿತಿ ವ್ಯಾಪ್ತಿಯ ಹೊಸಳ್ಳಿ ಗ್ರಾಮದಲ್ಲಿ ನಡೆದ ಮನೆ ಬಾಗಿಲಿಗೆ ಮನೆಮಗ ಶೀರ್ಷಿಕೆಯಡಿ ನಡೆದ 85 ಜನಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಶಾಸಕರು ತಮ್ಮ ಸೇವೆಯಲ್ಲಿನ ಪಾರದರ್ಶಕತೆ ಮತ್ತು ಜವಾಬ್ದಾರಿಯನ್ನು ಎತ್ತಿ ಹಿಡಿದರು.

ಜನಸ್ಪಂದನ ಇದುವರೆಗೂ ಯಶಸ್ವಿಯಾಗಿ ನಡೆಸಿದ ಕಾರಣಕ್ಕೆ ವೃದ್ಧಾಪ್ಯ ವೇತನ ಸೇರಿದಂತೆ ಇತರೆ ಯೋಜನೆಗಳ ಅರ್ಜಿಗಳೇ ಇಲ್ಲದಾಗಿದೆ, ಪ್ರತಿ ಸಭೆಯಲ್ಲೂ ಬಂದತಹ ಅರ್ಜಿಗಳನ್ನು ನಾವೇ ಪರಿಶೀಲಿಸಿ ಸಂಬಂಧಿಸಿದ ಇಲಾಖಾ ಅಧಿಕಾರಿಗಳಿಗೆ ಸ್ಥಳದಲ್ಲಿಯೇ ನೀಡಿ, ನಿಗದಿತ ಸಮಯದಲ್ಲಿ ಪರಿಸಹರಿಸಲಾಗುತ್ತಿದೆ. ನಮ್ಮ ಜನಸ್ಪಂದನದ ಬಗೆಗಿನ ಟೀಕೆಗೆ ಈ ಪುಸ್ತಕ ಉತ್ತರ ನೀಡಲಿದೆ ಎಂದರು.

ಮನೆ ಬಾಗಿಲಿಗೆ ಮನೆಮಗ ಕಾರ್ಯಕಮ್ರದ ಸಂದರ್ಭದಲ್ಲಿ ಗ್ರಾಮದ ಜನ ನೇರವಾಗಿ ನಿಮ್ಮ ಸಮಸ್ಯೆಗಳನ್ನು ನನ್ನ ಬಳಿಗೆ ತನ್ನಿ, ಇಲ್ಲಿ ಪಕ್ಷಾತೀತ, ಜಾತ್ಯತೀತದಡಿ ಸಾಮಾಜಿಕ ಮನೋಭಾವದಿಂದ ನಿಮ್ಮಲ್ಲಿಗೆ ಬಂದಿದ್ದೇವೆ, ಇದರ ಪ್ರಯೋಜವನ್ನು ಸಂಪೂರ್ಣವಾಗಿ ಪಡೆಯಿರಿ ಎಂದರು. ಹಿಂದುಳಿದಪಟ್ಟ ಹೊತ್ತ ಈ ತಾಲೂಕಿನಲ್ಲಿ ಶೈಕ್ಷಣಿಕವಾಗಿ ನಾವು ಸಾಧನೆ ಮಾಡಿದ್ದೇವೆ, ಸ್ಥಳೀಯ ನುರಿತ ಶಿಕ್ಷಕರ ತಂಡದಿಂದ ಪ್ರೇರಣಾ ಶಿಬಿರಗಳನ್ನು ಸತತವಾಗಿ ನಡೆಸಿದ ಪರಿಣಾಮ ಕಳೆದರೆಡು ವರ್ಷದಿಂದ ಎಸ್‌ಎಸ್‌ಎಲ್‌ಸಿ ಫಲಿತಾಂಶದಲ್ಲಿ ತಾಲೂಕು ಜಿಲ್ಲೆಗೆ ಪ್ರಥಮ ಸ್ಥಾನ ಪಡೆಯಲು ಯಶಸ್ವಿಯಾಗಿದ್ದು ಈ ಸಾಧನೆ ಮುಂದುವರಿಯಲಿದೆ ಎಂದರು.

ಗಣಿಬಾಧಿತ ಅನುದಾನದಲ್ಲಿ ಈ ಭಾಗದಲ್ಲಿ ಉತ್ತಮ ರಸ್ತೆಗಳಾಗುತ್ತಿದೆ. ಅರೆ ಮಲೆನಾಡಿನ ಈ ಪ್ರದೇಶ ಈಗಾಗಲೆ ಪ್ರವಾಸಿಗರ ತಾಣವಾಗಿರುವುದನ್ನು ಮನಗಂಡು ಈ ಭಾಗದಲ್ಲಿ ಸಾಧು ಪ್ರಾಣಿಗಳ ಸಂಗ್ರಹಾಲಯದ ಮೂಲಕ ಸುತ್ತಮುತ್ತಲಿನ ಆಕರ್ಷಕ ಸ್ಥಳಗಳನ್ನು ಅಭಿವೃದ್ದಿಪಡಿಸಿ ಪ್ರವಾಸಿ ತಾಣವನ್ನಾಗಿಸುವಲ್ಲಿ ಯೋಜನೆ ರೂಪಿಸಲಾಗುವುದೆಂದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಎಚ್.ಆರ್. ಶಶಿಧರ್ ಮಾತನಾಡಿ, 224 ಕೇಂದ್ರಗಳಲ್ಲಿ ಈ ಕಾರ್ಯಕ್ರಮ ಮಾಡುತ್ತಿರುವುದು ನಮ್ಮ ಶಾಸಕರ ಸಾಧನೆ. ಒಬ್ಬ ಶಾಸಕರು ಒಂದು ಜನಸ್ಮಂದನ ಮಾಡಬಹುದು. ಆದರೆ, ನಮ್ಮ ಕ್ಷೇತ್ರದಲ್ಲಿ ಇದುವರೆಗೂ 85ಕ್ಕೂ ಹೆಚ್ಚು ಜನಸ್ಪಂದನ ಕಾರ್ಯಕ್ರಮವನ್ನು ಮನೆ ಬಾಗಿಲಿಗೆ ಮನೆ ಮಗ ಕಾರ್ಯಕ್ರಮದೊಂದಿಗೆ ಪ್ರತಿ ಗ್ರಾಮಕ್ಕೂ ಭೇಟಿ ನೀಡುತ್ತಿದ್ದಾರೆ. ಕೆಲವು ಶಾಸಕರು ಜನರಕೈಗೆ ಸಿಗುವುದಿಲ್ಲ, ಆದರೆ ನಮ್ಮ ಶಾಸಕರು ಪ್ರತಿಯೊಬ್ಬರಿಗೂ ಸಲಭವಾಗಿ ಸಿಗುತ್ತಾರೆ. ಇವರ ಈ ಕೆಲಸದ ಬಗ್ಗೆ ಕೆಲವರು ಮಾಧ್ಯಮಗಳಲ್ಲಿ ಟೀಕೆ ಮಾಡುವುದನ್ನು ಬಿಡಬೇಕು, ರಾಜಕೀಯ ಮಾಡುವ ವೇಳೆ ರಾಜಕೀಯ ಮಾಡಲಿ, ಆದರೆ ಇದರಲ್ಲಿ ಕ್ಷುಲ್ಲಕ ರಾಜಕೀಯ ಮಾಡುವುದು ತರವಲ್ಲ ನಿಮ್ಮ ಸಮಸ್ಯೆಯನ್ನು ಶಾಸಕರ ಗಮನಕ್ಕೆ ತರುವುದರ ಮೂಲಕ ಬಗೆಹರಿಸಿಕೊಳ್ಳಿ ಎಂದರು.

ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ಎಸ್.ಆರ್. ರಾಜ್‌ಕುಮಾರ್ ಮಾತನಾಡಿದರು. ಕಾರ್ಯಕ್ರಮದಲ್ಲಿ ನಿವೇಶನಕ್ಕಾಗಿ, ಮನೆ ಮಂಜೂರಾತಿಗಾಗಿ, ರಸ್ತೆ ದುರಸ್ತಿಗಾಗಿ, ಸ್ಮಶಾನಕ್ಕಾಗಿ, ಶುದ್ಧ ಕುಡಿಯುವ ನೀರಿನ ಘಟಕಕ್ಕಾಗಿ, ಖಾತೆ ಬದಲಾವಣೆಗಾಗಿ ಇದರೊಂದಿಗೆ ದುರ್ಗದಕೆರೆ ಸೇರಿದಂತೆ ಇತರೆ ಕೆರೆಗಳಿಗೆ ವಿವಿಧ ನೀರಾವರಿ ಯೋಜನೆಗಳ ಮೂಲಕ ನೀರನ್ನು ಹರಿಸುವಂತೆ ಸಾರ್ವಜನಿಕರು ಶಾಸಕರನ್ನು ಒತ್ತಾಯಿಸಿದರು.

ಈ ಸುದ್ದಿಯನ್ನೂ ಓದಿ | CM Siddaramaiah: ಕಾಲಮಿತಿಯಲ್ಲಿ ಅನುಮೋದನೆ ನೀಡದಿದ್ರೆ ಕಠಿಣ ಕ್ರಮ: ಅಧಿಕಾರಿಗಳಿಗೆ ಸಿಎಂ ಖಡಕ್ ಎಚ್ಚರಿಕೆ

ಸಭೆಯಲ್ಲಿ ಹೊನ್ನೇಬಾಗಿ ಗ್ರಾಮಪಂಚಾಯಿತಿ ಅಧ್ಯಕ್ಷೆ ಕೆ.ಶೈಲ, ಉಪಾಧ್ಯಕ್ಷೆ ಪಲ್ಲವಿ ಬಿ.ಆರ್. ತಹಸೀಲ್ದಾರ್ ಕೆ.ಪುರಂದರ, ಇಓ ದೊಡ್ಡಸಿದ್ದಯ್ಯ, ಸಿಡಿಪಿಓ ಹೊನ್ನಪ್ಪ, ಎಇಇ ತಿಮ್ಮಯ್ಯ, ಮಾರುತಿ, ಪಿಡಿಓ ಭೈರಪ್ಪ ಸೇರಿದಂತೆ ಹೊನ್ನೇಬಾಗಿ ಗ್ರಾಮಪಂಚಾಯಿತಿ ಸದಸ್ಯರುಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.