ಚಿಕ್ಕನಾಯಕನಹಳ್ಳಿ : ಸಮಾಜ ಸುಧಾರಣೆಗಾಗಿ ತಮ್ಮ ಜೀವನವನ್ನೇ ಮುಡಿಪಾಗಿಟ್ಟ ಮಹಾನ್ ಸಂತರುಗಳ ಜಯಂತಿಯನ್ನು ಒಂದೇ ದಿನ ಆಚರಿಸಲು ನಿರ್ಧರಿಸಿರುವ ಶಾಸಕ ಸಿ.ಬಿ.ಸುರೇಶಬಾಬು ಕ್ರಮಕ್ಕೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸಿ.ಡಿ.ಚಂದ್ರಶೇಖರ್ ತೀವ್ರ ವಿರೋಧ ವ್ಯಕ್ತಪಡಿಸಿದರು.
ಪಟ್ಟಣದಲ್ಲಿರುವ ಮಾಜಿ ಶಾಸಕ ಕಿರಣ್‌ಕುಮಾರ್ ಕಾರ್ಯಲಯದಲ್ಲಿ ಬುಧವಾರ ಸುದ್ದಿಗೋಷ್ಠಿ ಯಲ್ಲಿ ಮಾತನಾಡಿದ ಅವರು ನ.26 ರಂದು ವಿವಿಧ ಸಮುದಾಯಗಳ ಮಹಾತ್ಮರ ಜಯಂತಿಗಳನ್ನು ಏಕಕಾಲದಲ್ಲಿ ಆಚರಿಸಲು ನಿರ್ಧರಿಸಿದೆ. ಈ ನಿರ್ಧಾರದಿಂದ ಒಂದು ಸಮುದಾಯದ ನಾಯಕನಿಗೆ ನೀಡಬೇಕಾದ ಗೌರವ ಮತ್ತು ಆದ್ಯತೆಯು ಕಡಿಮೆಯಾಗುತ್ತದೆ. ಜೊತೆಗೆ ಜಯಂತಿಗಳ ಮಹತ್ವದ ಬಗ್ಗೆ ಸಾರ್ವಜನಿಕರಲ್ಲಿ ಗೊಂದಲ ಮೂಡುತ್ತದೆ ಎಂದು ದೂರಿದರು.
ಪ್ರತಿಯೊಬ್ಬ ಸಂತನಿಗೂ ಅವರದೇ ಆದ ವಿಶಿಷ್ಟ ಕೊಡುಗೆ ಮತ್ತು ಇತಿಹಾಸವಿದೆ. ಜಯಂತಿ ಆಚರಣೆಯ ಉದ್ದೇಶ ಕೇವಲ ಒಂದು ದಿನದ ಕಾರ್ಯಕ್ರಮವಲ್ಲ. ಅವರ ಆದರ್ಶಗಳನ್ನು ಸಮಾಜಕ್ಕೆ ಮುಟ್ಟಿಸುವುದಾಗಿದೆ. ಒಂದೇ ದಿನ ಎಲ್ಲಾ ದಾರ್ಶನಿಕರ ಜಯಂತಿ ಆಚರಿಸಿದರೆ ಮಹಾತ್ಮರಿಗೆ ಸೂಕ್ತ ನ್ಯಾಯ ಸಿಗುವುದಿಲ್ಲ. ಕಾರ್ಯಕ್ರಮಗಳ ಗಡಿಬಿಡಿಯಲ್ಲಿ ಅವರ ಸಂದೇಶಗಳು ಕಡೆಗಣಿಸಲ್ಪಡುತ್ತವೆ ಎಂದು ತಿಳಿಸಿದರು.
ಇದನ್ನೂ ಓದಿ: Chikkaballapur News: ನಗರ ಕೇಂದ್ರ ಬಸ್ ನಿಲ್ದಾಣದಲ್ಲಿ ನಿತ್ಯವೂ ಕಳ್ಳರ ಕೈಚಳಕ: ಪ್ರಯಾಣಿಕರ ಮೊಬೈಲ್ ಪರ್ಸ್ ಮಂಗಮಾಯ
ಹುಳಿಯಾರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ.ಟಿ.ಚಿಕ್ಕಣ್ಣ ಮಾತನಾಡಿ ಸಂತರ ಜಯಂತಿಗಳನ್ನು ಈ ಹಿಂದೇ ಇದ್ದಂತೆ ಮೂಲ ದಿನಾಂಕದಂದೆ ಆಚರಿಸುವುದನ್ನು ಮುಂದುವರೆಸಬೇಕು. ಶಾಸಕರ ಈ ನಿರ್ಧಾರದಿಂದ ದಾರ್ಶನಿಕರ ಅನುಯಾಯಿಗಳು, ಅಭಿಮಾನಿಗಳು ನೋವಿಗೆ ಒಳಗಾಗಿದ್ದಾರೆ. ಜಿಲ್ಲಾಧಿಕಾರಿಗಳು ಈ ವಿಷಯದಲ್ಲಿ ಮಧ್ಯಪ್ರವೇಶಿಸಿ ಎಲ್ಲಾ ಸಮುದಾಯಗಳ ಭಾವನೆಗಳಿಗೆ ಗೌರವ ನೀಡಿ ಸೂಕ್ತ ಕ್ರಮ ಕೈಗೊಳ್ಳಬೇಕು. ತಾಲ್ಲೂಕು ಆಡಳಿತ ಯಂತ್ರವನ್ನು ಈ ವಿಚಾರವಾಗಿ ಬಳಸಿ ಕೊಂಡಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು. ಈ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು. ಸರಕಾರಕ್ಕೆ ವರದಿ ಸಲ್ಲಿಸಿ ಕ್ರಮಕ್ಕೆ ಒತ್ತಾಯಿ ಸಲು ಶೀಘ್ರವಾಗಿ ತೆರಳಲಾಗುವುದು ಎಂದರು.
ಜಯಂತಿ ಹೆಸರಲ್ಲಿ ರಾಜಕೀಯ ಪ್ರಚಾರ
ಜಯಂತಿ ಆಚರಣೆಗಳ ನೆಪದಲ್ಲಿ ಸಾರ್ವಜನಿಕರ ಹಣ ಮತ್ತು ಸರಕಾರಿ ನೌಕರರ ಸಮಯವನ್ನು ರಾಜಕೀಯ ಉದ್ದೇಶಗಳಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಕಾರ್ಯಕ್ರಮಕ್ಕಾಗಿ ಲಕ್ಷಾಂತರ ರೂಪಾಯಿ ಸಾರ್ವಜನಿಕ ಹಣವನ್ನು ಅನಗತ್ಯವಾಗಿ ಖರ್ಚು ಮಾಡುವ ಆತಂಕವಿದೆ. ಜಯಂತಿ ಆಚರಣೆಗಳಿಗೆ ಸಂಬAಧಿಸಿದAತೆ ಇದರ ಸಂಪೂರ್ಣ ವೆಚ್ಚದ ವಿವರ ಮತ್ತು ಯಾವ ಅಧಿಕಾರಿಗಳನ್ನು ಯಾವ ಕಾರಣಕ್ಕಾಗಾಗಿ ನಿಯೋಜಿಸಿದ್ದೀರ ಎಂಬುದರ ಬಗ್ಗೆ ಸರಕಾರದ ಅನುಮತಿ ಪತ್ರವನ್ನು ಪ್ರಕಟಿಸಬೇಕೆಂದು ಬೇಡಿಕೆ ಕೇಳಿಬಂದಿತು.
ಬೇವಿನಹಳ್ಳಿ ಚನ್ನಬಸವಯ್ಯ, ಕೃಷ್ಣೇಗೌಡ, ಗಂಗಾಧರ್ ಮಗ್ಗದಮನೆ, ಅಗಸರಹಳ್ಳಿ ನರಸಿಂಹ ಮೂರ್ತಿ, ಸಾಸಲು ಮಂಜುನಾಥ್ ಮಾತನಾಡಿದರು. ಪೋಚಕಟ್ಟೆ ರಮೇಶ್, ನಿದರ್ಶ ಸಣ್ಣಗಿರಿ, ಸುರೇಶನಾಯ್ಕ, ಮಹಮದ್ ಹುಸೇನ್, ಪೀರ್‌ಪಾಶ, ಮತ್ತಿತರರು ಹಾಜರಿದ್ದರು.