ಚೌತಿ ಹಬ್ಬ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Miss Firing: ಏರ್‌ಗನ್‌ನಿಂದ ಶೂಟ್‌; 9 ವರ್ಷದ ಬಾಲಕ ಸಾವು

ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್‌ ಟ್ರಿಗರ್‌ (Air Gun) ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಶಿರಸಿ: ಆಟವಾಡುತ್ತಿದ್ದ ಬಾಲಕನೊಬ್ಬ ಆಕಸ್ಮಿಕವಾಗಿ ಏರ್‌ಗನ್‌ ಟ್ರಿಗರ್‌ (Miss Firing) ಅದುಮಿದ ಪರಿಣಾಮ ಮತ್ತೋರ್ವ ಬಾಲಕನಿಗೆ ಗುಂಡು ತಗಲಿ ಮೃತಪಟ್ಟ ಘಟನೆ ಶಿರಸಿ (Sirsi) ತಾಲೂಕಿನ ಸೋಮನಹಳ್ಳಿಯಲ್ಲಿ ನಡೆದಿದೆ. ಬಾಲಕನಿಗೆ ಗುಂಡು ತಗಲಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸೋಮನಳ್ಳಿಯ ರಾಘವೇಂದ್ರ ಹೆಗಡೆ ಎಂಬುವರ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಹಾವೇರಿ ಜಿಲ್ಲೆಯ ಬಸಪ್ಪ ಉಂಡಿಯರ್ ಎಂಬುವವರ ಇಬ್ಬರು ಮಕ್ಕಳು ಆಟವಾಡುತ್ತಿದ್ದ ಸಂದರ್ಭದಲ್ಲಿ ಒಂಭತ್ತು ವರ್ಷದ ಕರಿಯಪ್ಪ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ರಾಘವೇಂದ್ರ ಹೆಗಡೆ ಸೇರಿದಂತೆ ಸೋಮನಳ್ಳಿಯ ಅಡಿಕೆ ತೋಟದಲ್ಲಿ ಮಂಗನ ಕಾಟ ತಪ್ಪಿಸಲು ನಿತಿಶ್ ಗೌಡ ಎಂಬುವರು ಏರ್ ಗನ್ ಮೂಲಕ ತೋಟ ಕಾಯುತ್ತಿದ್ದರು‌. ಕಾರಣ ಶುಕ್ರವಾರ ಬೆಳಿಗ್ಗೆಯೂ ತೋಟ ಕಾದು ಮೊಬೈಲ್ ಕರೆನ್ಸಿ ಹಾಕಿಕೊಳ್ಳಲು ಗಣಪತಿ ಹೆಗಡೆ ಮನೆಗೆ ಹೋಗಿದ್ದಾರೆ. ಅಲ್ಲಿ ಈದ್ ಮಿಲಾದ್ ರಜೆಯ ಕಾರಣ ಆಟವಾಡುತ್ತಿದ್ದ ಮೂವರು ಮಕ್ಕಳು ಬಂದಿದ್ದು, ಆ ವೇಳೆ ಕರಿಯಪ್ಪ ತಮ್ಮ ಆಕಸ್ಮಿಕವಾಗಿ ಟ್ರಿಗರ್ ಒತ್ತಿದ್ದಾನೆ. ಇದರಿಂದ ಗುಂಡು ಕರಿಯಪ್ಪ ಎದೆಗೆ ತಾಗಿದ್ದು, ತಕ್ಷಣ ಮೃತಪಟ್ಟಿದ್ದಾನೆ ಎಂದು ಮನೆ ಮಾಲೀಕ ಗಣಪತಿ ಹೆಗಡೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಆತ ಬದುಕುಳಿದಿಲ್ಲ.

ಈ ಸುದ್ದಿಯನ್ನೂ ಓದಿ: Crime news: ಮಾಜಿ ಪಂಚಾಯಿತಿ ಸದಸ್ಯನ ಕೊಲೆಗೆ ಸಂಬಂಧಿಕರೇ ಕೊಟ್ರು ಸುಪಾರಿ!

ಶಿರಸಿ ಗ್ರಾಮೀಣ ಠಾಣೆಯಲ್ಲಿ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಗದೀಶ್, ಡಿಎಸ್ಪಿ ಗೀತಾ ಪಾಟೀಲ್, ಸಿಪಿಐ ಶಶಿಕಾಂತ ವರ್ಮಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶಿರಸಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಎಫ್​ಐಆರ್​ನಲ್ಲೇನಿದೆ?

ಹಾವೇರಿ ಜಿಲ್ಲೆಯ ಹೊಸಕಿತ್ತೂರಿನ ಬಸಪ್ಪ ಉಂಡಿ ತನ್ನ ಪತ್ನಿ ಹಾಗೂ ಮೂವರು ಮಕ್ಕಳ ಜೊತೆ ತಾಲೂಕಿನ ಸೋಮನಳ್ಳಿಯಲ್ಲಿ ವಾಸವಿದ್ದರು. ಬಸಪ್ಪ ಉಂಡಿ ಅವರು ರಾಘವ ಹೆಗಡೆ ಎಂಬುವವರ ತೋಟದಲ್ಲಿ ಕೆಲಸ ಮಾಡಿಕೊಂಡಿದ್ದರು. ತೋಟದಲ್ಲಿ ಮಂಗಗಳ ಉಪಟಳ ನಿಯಂತ್ರಿಸಲು ರಾಘವ ಹೆಗಡೆ ಅವರು ಯಾವುದೇ ಅಧಿಕೃತ ಪ್ರಾಧಿಕಾರದಿಂದ ಪರವಾನಗಿ ಪಡೆಯದೇ ಏರ್ ಗನ್ ಇಟ್ಟುಕೊಂಡಿದ್ದರು. ಈ ಏರ್ ಗನ್ ಅನ್ನು ಆರೋಪಿತ ಸದಾಶಿವಳ್ಳಿಯ ನಿತೀಶ ಲಕ್ಷ್ಮಣ ಗೌಡನಿಗೆ ಮಂಗಗಳನ್ನು ನಿಯಂತ್ರಿಸಲು ನೀಡಿದ್ದರು.

ಎಫ್​ಐಆರ್ ದಾಖಲಾಗುವ ಮುನ್ನ, ತೋಟ ಕಾಯುತ್ತಿದ್ದ ನಿತೀಶ ಗೌಡ ಕೈಯಲ್ಲಿದ್ದ ಏರ್ ಗನ್ ಟ್ರಿಗರ್ ಅನ್ನು ಮೃತ ಬಾಲಕನ ಸಹೋದರನೇ ಆಕಸ್ಮಿಕವಾಗಿ ಒತ್ತಿದ್ದರಿಂದ ಗುಂಡು ಹಾರಿ ಅವಘಡ ಸಂಭವಿಸಿತ್ತು ಎಂದು ವರದಿಯಾಗಿತ್ತು. ಆದರೆ ಇದೀಗ ದ್ವೇಷದಿಂದ ಕರಿಯಪ್ಪನ ಎದೆಗೆ ಏರ್ ಗನ್​ನಿಂದ ಗುಂಡು ಹಾರಿಸಿ ಕೊಲೆ ಮಾಡಿದ್ದಾನೆ ಎಂದು ಬಾಲಕನ ತಾಯಿ ಶಿರಸಿ ಗ್ರಾಮೀಣ ಪೊಲೀಸ್‌ ಠಾಣೆಯಲ್ಲಿ ದೂರು ನೀಡಿದ್ದಾರೆ.

ಕೊಲೆ ಆರೋಪಿ ನಿತೀಶ ಲಕ್ಷ್ಮಣ ಗೌಡ (40) ಹಾಗೂ ಅಧಿಕೃತ ಪ್ರಾಧಿಕಾರದಿಂದ ಲೈಸನ್ಸ್ ಪಡೆಯದೇ ಏರ್‌ಗನ್‌ ಇಟ್ಟುಕೊಂಡ ಆರೋಪದ ಮೇಲೆ ರಾಘವ ಹೆಗಡೆ (62) ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಸದ್ಯ ಇಬ್ಬರೂ ಆರೋಪಿಗಳನ್ನು ಪೊಲೀಸರು ಬಂಧಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.