ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

KDCC Bank Election: ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ನೂರಾರು ಸಂಖ್ಯೆಯ ಅಭಿಮಾನಿ ಕಾರ್ಯಕರ್ತರೊಂದಿಗೆ ನಾಮಪತ್ರ ಸಲ್ಲಿಸಿದ ಸರಸ್ವತಿ ಎನ್. ರವಿ

ಬೆಳಿಗ್ಗೆ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ತನ್ನ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಟಿ.ಆರ್.ಸಿ. ಬ್ಯಾಂಕ್ ಎದುರಿನಿಂದ ಮೆರವಣಿಗೆಯ ಮೂಲಕ ಕೆ.ಡಿ.ಸಿ.ಸಿ. ಬ್ಯಾಂಕ್ ಆವಾರಕ್ಕೆ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದ ಊಹಾಪೋಹಗಳಿಗೆ ತೆರೆ ಎಳೆದರು.

ನಾನು ಗೆದ್ದಲ್ಲಿ ಸಹಕಾರಿ ಸಂಘಗಳು, ಕೆ.ಡಿ.ಸಿ.ಸಿ. ನಡುವಿನ ಕೊಂಡಿಯಂತೆ ಸೇವೆ ಸಲ್ಲಿಸುವೆ: ಸರಸ್ವತಿ ಎನ್. ರವಿ

ಕೆ.ಡಿ.ಸಿ.ಸಿ. ಬ್ಯಾಂಕ್ ಚುನಾವಣೆ: ಸಹಕಾರಿ ಸಂಸ್ಥೆಗಳ ಬಲವರ್ಧನೆಯೇ ನಿರ್ದೇಶಕರ ಗುರಿಯಾಗಬೇಕು: ಸರಸ್ವತಿ ಎನ್. ರವಿ

ಶಿರಸಿ: 105 ವರ್ಷಗಳ ಇತಿಹಾಸದಲ್ಲಿ ಉತ್ತರ ಕನ್ನಡ ಜಿಲ್ಲಾ ಮಧ್ಯವರ್ತಿ (ಕೆ.ಡಿ.ಸಿ.ಸಿ.) ಬ್ಯಾಂಕ್ ಚುನಾವಣೆಗೆ ಪ್ರಥಮ ಮಹಿಳಾ ಅಭ್ಯರ್ಥಿಯಾಗಿ ಅರ್ಬನ್ ಬ್ಯಾಂಕು ಹಾಗೂ ಕೃಷಿಯೇತರ ಸಹಕಾರಿ ಸಂಘಗಳ ಮತ ಕ್ಷೇತ್ರದಿಂದ ಸ್ಪರ್ಧಿಸಿದ ಸರಸ್ವತಿ ಎನ್. ರವಿ ನಾಮಪತ್ರ ಸಲ್ಲಿಸಿದರು.

ಬೆಳಿಗ್ಗೆ ಶ್ರೀ ಮಾರಿಕಾಂಬೆಗೆ ಪೂಜೆ ಸಲ್ಲಿಸಿ ತನ್ನ ನೂರಾರು ಸಂಖ್ಯೆಯ ಅಭಿಮಾನಿಗಳೊಂದಿಗೆ ಟಿ.ಆರ್.ಸಿ. ಬ್ಯಾಂಕ್ ಎದುರಿನಿಂದ ಮೆರವಣಿಗೆಯ ಮೂಲಕ ಕೆ.ಡಿ.ಸಿ.ಸಿ. ಬ್ಯಾಂಕ್ ಆವಾರಕ್ಕೆ ತೆರಳಿ ನಾಮಪತ್ರ ಸಲ್ಲಿಸುವ ಮೂಲಕ ಚುನಾವಣೆಯಿಂದ ಹಿಂದೆ ಸರಿಯುತ್ತಾರೆ ಎಂದ ಊಹಾಪೋಹ ಗಳಿಗೆ ತೆರೆ ಎಳೆದರು.

ಇದನ್ನೂ ಓದಿ: Sirsi News: ಹೇಳಿಕೆ ತಿರುಚಿ ಸಮಾಜಕ್ಕೆ ತಪ್ಪು ಸಂದೇಶ ನೀಡುತ್ತಿರುವುದು ವಿಷಾಧನೀಯ

ನಾಮಪತ್ರ ಸಲ್ಲಿಸಿ ಮಾತನಾಡಿದ ಸರಸ್ವತಿಯವರು ನನ್ನ ಸ್ಫರ್ಧೆ ಸಹಕಾರಿ ಕ್ಷೇತ್ರದಲ್ಲಿ ಮಹಿಳಾ ಪ್ರಾತಿನಿಧ್ಯಕ್ಕಾಗಿಯೇ ವಿನಃ ಯಾವುದೇ ದುರುದ್ದೇಶಕ್ಕಲ್ಲ. ಹಲವಾರು ಸಹಕಾರಿ ಸಂಸ್ಥೆಗಳು ಹಾಗೂ ಕೆ.ಡಿ.ಸಿ.ಸಿ. ಬ್ಯಾಂಕಿನ ಮಧ್ಯೆ ಸಾಕಷ್ಟು ಅಂತರವಿರುವುದರಿಂದ ಇಂದಿಗೂ ಹಲವಾರು ಸಹಕಾರಿ ಗಳಿಗೆ ಬ್ಯಾಂಕಿನ ಸೌಲಭ್ಯ ಸಿಗದೇ ಇರುವುದು ವಿಷಾದನೀಯ. ಆರ್ಥಿಕವಾಗಿ ಹಿಂದುಳಿದ ಸಹಕಾರಿ ಸಂಸ್ಥೆಗಳಿಗೆ ಕೆ.ಡಿ.ಸಿ.ಸಿ. ಬ್ಯಾಂಕಿನ ಸೌಲಭ್ಯ ಸಿಗುವಂತೆ ಮಾಡುವುದು ಆಯಾ ಕ್ಷೇತ್ರದ ನಿರ್ದೇಶಕರ ಜವಾಬ್ದಾರಿಯಾಗಿರುತ್ತದೆ. ನಾನು ಆಯ್ಕೆಯಾದಲ್ಲಿ ಸಹಕಾರಿಗಳ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತೇನೆ ಎಂದರು.

Sirsi 2

ಈ ಸಂದರ್ಭದಲ್ಲಿ ರೋಟರಿ ಸಂಸ್ಥೆಯ ಅಧ್ಯಕ್ಷರು, ಎಜಿಇ., ಇನ್ನರ್‌ವ್ಹೀಲ್ ಕ್ಲಬ್‌ನ ಅಧ್ಯಕ್ಷರು, ಕಾರ್ಯದರ್ಶಿಗಳು, ಸದಸ್ಯರು ಹಾಗೂ ಸರಸ್ವತಿ ಎನ್. ರವಿಯವರ ಅಭಿಮಾನಿಗಳು, ಕಾರ್ಯಕರ್ತ ರು, ಎಸ್.ಎಮ್.ಎಸ್., ವಿವಿಧ ಸೌಹಾರ್ದ ಸಹಕಾರಿ ಸಂಸ್ಥೆಗಳ ಪ್ರತಿನಿಧಿಗಳು ಸೇರಿದಂತೆ ನೂರಾರು ಜನ ಉಪಸ್ಥಿತರಿದ್ದರು.