ಯಾದಗಿರಿ: ನೀರು ಕುಡಿಯಲು ಹೋಗಿ ಭೀಮಾ ನದಿಯಲ್ಲಿ ಇಬ್ಬರು ಯುವಕರು ಕೊಚ್ಚಿ ಹೋಗಿರುವ ಘಟನೆ ಯಾದಗಿರಿ ಜಿಲ್ಲೆಯ ವಡಗೇರ ತಾಲೂಕಿನ ಮಾಚನೂರ್ ಗ್ರಾಮದಲ್ಲಿ ನಡೆದಿದೆ. ನಾಪತ್ತೆಯಾದ ಇಬ್ಬರು ಯುವಕರಿಗಾಗಿ ನಡೆದ ಶೋಧ ಕಾರ್ಯ ನಡೆಯುತ್ತಿದೆ. ಅಗ್ನಿಶಾಮಕ ಸಿಬ್ಬಂದಿ, ನುರಿತ ಮೀನುಗಾರರು ಹಾಗೂ ಸ್ಥಳೀಯರಿಂದ ಶೋಧ ಕಾರ್ಯ ನಡೆಯುತ್ತಿದೆ.
ಮಾಚನೂರ್ ಗ್ರಾಮದ ಸಿದ್ದಪ್ಪ ಹಾಗೂ ರಾಮು ಎಂಬ ಯುವಕರು ನೀರುಪಾಲಾದವರು. ಜಾನುವಾರು ಮೇಯಿಸಲು ಹೋದ ವೇಳೆ, ನದಿಯಲ್ಲಿ ನೀರು ಕುಡಿಯಲು ಯುವಕರು ಹೋಗಿದ್ದಾಗ ಅವಘಡ ನಡೆದಿದೆ. ಸಿದ್ದಪ್ಪನಿಗೆ ಈಜು ಬರುತ್ತಿರಲಿಲ್ಲ. ನೀರಿಗೆ ಬಿದ್ದಾಗ ಸಿದ್ದಪ್ಪನನ್ನು ಬಚಾವ್ ಮಾಡಲು ಹೋಗಿ ರಾಮು ಕೂಡ ನೀರುಪಾಲಾಗಿದ್ದಾನೆ. ಗ್ರಾಮದ ವೀರುಪಾಕ್ಷಪ್ಪಗೌಡ ಎಂಬುವರ ಕಣ್ಣೆದುರೇ ದುರಂತ ನಡೆದಿದೆ.
ನದಿ ದಡದಲ್ಲಿ ಜಮಾಯಿಸಿರುವ ನೂರಾರು ಜನ ಗ್ರಾಮಸ್ಥರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ಈ ಸುದ್ದಿಯನ್ನೂ ಓದಿ | Self Harming: ಬೆಂಗಳೂರಲ್ಲಿ ಘೋರ ಘಟನೆ; ಪುತ್ರ ವೃದ್ಧಾಶ್ರಮಕ್ಕೆ ಸೇರಿಸಿದ್ದಕ್ಕೆ ಮನನೊಂದು ವೃದ್ಧ ದಂಪತಿ ಆತ್ಮಹತ್ಯೆ
ಮುಸ್ಲಿಂ ಯುವತಿಗೆ ಬೈಕ್‌ನಲ್ಲಿ ಲಿಫ್ಟ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ಹಲ್ಲೆ

ಕಲಬುರಗಿ: ಅನ್ಯಕೋಮಿನ ಯುವತಿಗೆ ಲಿಫ್ಟ್ ಕೊಟ್ಟಿದ್ದಕ್ಕೆ ಹಿಂದೂ ಯುವಕನ ಮೇಲೆ ನಡೆಸಿರುವ ಘಟನೆ (Moral Policing) ಕಲಬುರಗಿಯ ಸಂತ್ರಸದ ವಾಡಿ ಬಳಿ ನಡೆದಿದೆ. ಆಟೋ ಸಿಗದಿದ್ದಕ್ಕೆ ಡ್ರಾಪ್ ಕೊಡುವಂತೆ ಯುವತಿ ಕೇಳಿದ್ದಳು. ಹೀಗಾಗಿ ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದಾಗ ಮುಸ್ಲಿಂ ಯುವಕರು ಬೈಕ್ ನಿಲ್ಲಿಸಿ ಹಲ್ಲೆ ನಡೆಸಿದ್ದಾರೆ. ಬೈಲಪ್ಪ (21) ಹಲ್ಲೆಗೊಳಗಾದ ಯುವಕ.
ನಗರದ ಶಾಬದಿ ಆಸ್ಪತ್ರೆಯಲ್ಲಿ ನರ್ಸಿಂಗ್ ಸ್ಟಾಫ್ ಆಗಿ ಯುವಕ, ಯುವತಿ ಕೆಲಸ ಮಾಡುತ್ತಿದ್ದಾರೆ. ಆಟೋ ಸಿಗದಿದ್ದಕ್ಕೆ ಡ್ರಾಪ್ ಕೊಡುವಂತೆ ಮುಸ್ಲಿಂ ಯುವತಿ ಕೇಳಿದ್ದರಿಂದ ಹಿಂದೂ ಯುವಕ ಡ್ರಾಪ್ ಕೊಡಲು ಬೈಕ್ ಮೇಲೆ ಕೂರಿಸಿಕೊಂಡು ಹೋಗುತ್ತಿದ್ದ. ಈ ವೇಳೆ ಮುಸ್ಲಿಂ ಯುವತಿಯನ್ನು ಯಾಕೆ ಬೈಕ್ ಮೇಲೆ ಕರ್ಕೊಂಡು ಹೋಗುತ್ತಿದ್ದೀಯಾ ಎಂದು 10-15 ಮುಸ್ಲಿಂ ಯುವಕರು ದೊಣ್ಣೆಯಿಂದ ಹಲ್ಲೆ ನಡೆಸಿ, ರಸ್ತೆ ಪಕ್ಕ ಬಿಸಾಡಿ ಹೋಗಿದ್ದಾರೆ.
ಹಲ್ಲೆ ವೇಳೆ ಬೈಕ್, ಬೆಳ್ಳಿ ಚೈನ್ ಕೀ, 3.5 ಸಾವಿರ ರೂ.ಗಳನ್ನು ಯುವಕನಿಂದ ಕಿಡಿಗೇಡಿಗಳು ದೋಚಿದ್ದಾರೆ. ಗಾಯಗೊಂಡ ಬೈಲಪ್ಪನನ್ನು ಕಲಬುರಗಿಯ ಟ್ರಾಮಾ ಕೇರ್‌ಗೆ ದಾಖಲಿಸಲಾಗಿದೆ.
ಈ ಸುದ್ದಿಯನ್ನೂ ಓದಿ | 15 ವರ್ಷಗಳ ದಾಂಪತ್ಯವನ್ನು ಕೊನೆಗೊಳಿಸಿ ಪತ್ನಿಗೆ ಮರು ಮದುವೆ ಮಾಡಿಸಿದ ಪತಿ