ಮದುವೆಯಾಗುವುದಾಗಿ ನಂಬಿಸಿ ವಿಧವೆಗೆ ವಂಚನೆ
ವ್ಯಕ್ತಿಯೊಬ್ಬ ಮದುವೆಯಾಗುವುದಾಗಿ ನಂಬಿಸಿ ವಿಧವೆಯ ಜತೆ ದೈಹಿಕ ಸಂಪರ್ಕ ಬೆಳೆಸಿ, ಆಕೆಯ ಲಕ್ಷಾಂತರ ರೂ. ಬೆಲೆ ಬಾಳುವ ಜಮೀನು ಮಾರಿ ಹಣ ಪಡೆದು ವಂಚಿಸಿದ ಪ್ರಕರಣ ಯಾದಗಿರಿಯಲ್ಲಿ ಬೆಳಕಿಗೆ ಬಂದಿದೆ. ಯಾದಗಿರಿ ತಾಲೂಕಿನ ಬಸಂತಪುರ ಗ್ರಾಮದ ಸುವರ್ಣಾ ವಂಚನೆಗೊಳಗಾದ ವಿಧವೆ ಮಹಿಳೆ. ತಡಿಬಿಡಿ ಗ್ರಾಮದ ಮಾಳಪ್ಪ ಹತ್ತಕುಣಿ ಎಂಬುವನು ಸುವರ್ಣಾಗೆ ವಂಚಿಸಿದಾತ.