ರಾಜ್ಯದ ಹಣಕಾಸಿನ ಕೊರತೆಗೆ ಬಿಜೆಪಿಯ ದ್ರೋಹವೇ ಕಾರಣ: ಸಿಎಂ ಸಿದ್ದರಾಮಯ್ಯ
ನೇರವಾಗಿ ನ್ಯಾಯುತವಾಗಿ ಬರಬೇಕಾದ ತೆರಿಗೆ ಪಾಲು, ಕೇಂದ್ರ ಸಹಾಯಾನುದಾನಗಳನ್ನು ಕಡಿಮೆ ಮಾಡಲಾಗುತ್ತಿದೆ. ಹಾಗಾಗಿ, ಕರ್ನಾಟಕಕ್ಕೆ ಕೇಂದ್ರದಿಂದ ಅನುದಾನಗಳು ಬರದೆ ರಾಜ್ಯದ ಆರ್ಥಿಕ ಸ್ಥಿತಿ ಕ್ಲಿಷ್ಟಕರವಾಗಿರುವುದು ಒಂದು ರೀತಿಯದಾದರೆ, ಎರಡನೆಯದಾಗಿ ಹಿಂದೆ ಆಡಳಿತ ನಡೆಸಿದ್ದ ಬಿಜೆಪಿ ಸರ್ಕಾರ ನಡೆಸಿದ ಅರಾಜಕ ಸ್ಥಿತಿಗಳಿಂದಾಗಿ ಇನ್ನೊಂದು ರೀತಿಯ ಸಮಸ್ಯೆಗಳು ಉದ್ಭವಿಸಿವೆ ಎಂದು ಸಿಎಂ ಪ್ರತಿಪಾದಿಸಿದ್ದಾರೆ.