ಪ್ರವಾಸಿಗರನ್ನು ಜಾದೂ ಮಾಡಿ ಸೆಳೆಯುವ UVA ಮೆರಿಡಿಯನ್ ಬೇ!
ಕುಂದಾಪುರ ತಾಲೂಕಿನ ಪ್ರಮುಖ ಆಕರ್ಷಣೆ ಏನು ಅಂತ ಯಾರೇ ಕೇಳಿದರೂ ಅದಕ್ಕೆ ಉತ್ತರವಾಗಿ ಸಿಗುವುದು ಈಗ ಒಂದೇ ತಾಣ. ಅದು ಯುವ ಮೆರಿಡಿಯನ್ ಬೇ ಎಂಬ ಆತಿಥ್ಯ ತಾಣ. ಇದು ಆತಿಥ್ಯ ತಾಣ ಎಂದಷ್ಟೇ ಹೇಳಿದರೆ ಬಹಳ ಸೀಮಿತಗೊಳಿಸಿದಂತಾಗಿಬಿಡುತ್ತದೆ. ಇದೊಂದು ಅಕ್ಷರಶಃ ಮಾಯಾ ಲೋಕ. ಬೇರೆಯದೇ ಪ್ರಪಂಚ.