ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Belagavi Crime: ಮೌಲ್ವಿಯಿಂದ ಮಸೀದಿಯಲ್ಲೇ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ, ಆರೋಪಿ ಬಂಧನ

ಆಡಿಯೋದಲ್ಲಿ ನೊಂದ ಬಾಲಕಿ ತಂದೆ ಘಟನೆ ಕುರಿತು ಮಾಹಿತಿ ಹೊರ ಹಾಕಿದ್ದಾನೆ. ಅಷ್ಟೇ ಅಲ್ಲದೆ ಮಸೀದಿಯಲ್ಲಿ ಘಟನೆ ನಡೆದ ನಂತರ ಪ್ರಕರಣ ದಾಖಲಿಸದಂತೆ ಒತ್ತಡ ಹೇರಲಾಗಿತ್ತು. ಜೊತೆಗೆ ಆರೋಪಿಯನ್ನು ಸ್ಥಳದಿಂದ ಹೊರ ಕಳಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದ್ದಾನೆ.‌

ಮೌಲ್ವಿಯಿಂದ ಮಸೀದಿಯಲ್ಲೇ 5 ವರ್ಷದ ಬಾಲಕಿ ಮೇಲೆ ಅತ್ಯಾಚಾರ

Ashok Nayak Ashok Nayak Aug 6, 2025 2:11 PM

ಬೆಳಗಾವಿ: ಸವದತ್ತಿ ತಾಲೂಕು ವ್ಯಾಪ್ತಿಯ ಮಸೀದಿಯಲ್ಲಿ 5 ವರ್ಷದ ಅಪ್ರಾಪ್ತ ಬಾಲಕಿ ಮೇಲೆ ಮೌಲಿಯಿಂದ ಅತ್ಯಾಚಾರ ಎಸಗಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು ಮಹಾಲಿಂಗಪೂರ ಮೂಲದ ತುಫೇಲ್ ಮಹಮ್ಮದ್ ದಾದಾಫೀರ್ ( 22 ) ಆರೋಪಿತನ್ನು ಪೊಲೀಸರು ಬಂಧಿಸಿದ್ದಾರೆ.

ಕಳೆದ 2023 ರ ಅಕ್ಟೋಬರ್ 5 ರಂದು ಬೆಳಗಾವಿ ಜಿಲ್ಲೆ ಮುರಗೋಡ ಪೊಲೀಸ್ ಠಾಣೆ ವ್ಯಾಪ್ತಿಯ ಮಸೀದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಲಾಗಿದೆ. ಈ ಕುರಿತು ಬಾಲಕಿ ತಂದೆ ಜೊತೆ ಮಾತನಾಡಿರುವ ವೀಡಿಯೋ ಒಂದನ್ನು ಹಿಂದೂಪರ ಹೋರಾಟಗಾರ ಪುನಿತ್ ಕೆರೆಹಳ್ಳಿ ಟ್ವೀಟ್ ಮಾಡಿದ್ದರು.

ಇದನ್ನೂ ಓದಿ: Belagavi News: ಮುಸ್ಲಿಂ ಮುಖ್ಯಶಿಕ್ಷಕನ ವರ್ಗಾವಣೆ ಮಾಡಿಸಲು ಶಾಲೆಯ ನೀರಿನ ಟ್ಯಾಂಕ್‌ಗೆ ವಿಷ; ಮೂವರ ಬಂಧನ

ಈ ಆಡಿಯೋದಲ್ಲಿ ನೊಂದ ಬಾಲಕಿ ತಂದೆ ಘಟನೆ ಕುರಿತು ಮಾಹಿತಿ ಹೊರಹಾಕಿದ್ದಾನೆ. ಅಷ್ಟೇ ಅಲ್ಲದೆ ಮಸೀದಿಯಲ್ಲಿ ಘಟನೆ ನಡೆದ ನಂತರ ಪ್ರಕರಣ ದಾಖಲಿಸದಂತೆ ಒತ್ತಡ ಹೇರಲಾಗಿತ್ತು. ಜೊತೆಗೆ ಆರೋಪಿಯನ್ನು ಸ್ಥಳದಿಂದ ಹೊರ ಕಳಿಸುವ ಪ್ರಯತ್ನ ಮಾಡಿದ್ದರು ಎಂದು ಆರೋಪಿಸಿದ್ದಾನೆ.‌

ವೀಡಿಯೋ ಸಾಕ್ಷಿಯಾಗಿ ಪರಿಗಣಿಸಿದ ಮುರಗೋಡ ಠಾಣೆ ಪೊಲೀಸರು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವತಿಯಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿ ತನಿಖೆ ಕೈಗೊಂಡಿ ದ್ದಾರೆ.