ದಿ ಸ್ಟೈಲ್ ಎಡಿಟ್ - ʼಫ್ಯಾಷನ್ ಆ್ಯಂಡ್ ಗ್ಲೋ ಅಪ್ʼ ಕಾರ್ಯಕ್ರಮದ ಆತಿಥ್ಯ ವಹಿಸಿದ ಬಾಲಿವುಡ್‌ನ ದುಬಾರಿ ಬೆಲೆಯ ಉಡುಪುಗಳ ವಿನ್ಯಾಸಗಾರ್ತಿ ಅನನ್ಯಾ ಪಾಂಡೆ
* ಅನನ್ಯಾ ಪಾಂಡೆ ಅವರು ತಮ್ಮ ವಿನ್ಯಾಸಗಾರರ ತಂಡದ ಜೊತೆ, ಕೇಶ ವಿನ್ಯಾಸಗಾರರು ಹಾಗೂ ಮುಖಾಲಂಕಾರ ಕಲಾವಿದರು ಮತ್ತು ಫ್ಯಾಷನ್ ಛಾಯಾಗ್ರಾಹಕರ ಜೊತೆಗೂಡಿ ನಡೆಸಿಕೊಡುವ ಈ ಏರ್‌ಬಿಎನ್‌ಬಿ ಕಾರ್ಯಕ್ರಮವು ಅತಿಥಿಗಳಿಗೆ ವಿಶೇಷವಾದ ಅನುಭವ ಒದಗಿಸುತ್ತದೆ.
* ಈ ಫ್ಯಾಷನ್ ಕಾರ್ಯಕ್ರಮಕ್ಕೆ ತಮ್ಮ ಹೆಸರುಗಳನ್ನು ಕಾಯ್ದಿರಿಸಲು ಆಗಸ್ಟ್ 21ರಿಂದ ಅವಕಾಶ ಇರಲಿದೆ.
ಬಾಲಿವುಡ್ ಜಗತ್ತಿನ ಫ್ಯಾಷನ್ ಐಕಾನ್ ಆಗಿರುವ ಅನನ್ಯಾ ಪಾಂಡೆ ಅವರು ಬಹಳ ವಿಶೇಷವಾದ, ವಿಶಿಷ್ಟವಾದ ಫ್ಯಾಷನ್ ಕಾರ್ಯಕ್ರಮವನ್ನು ಆಯೋಜಿಸಲು ಸಜ್ಜಾಗಿದ್ದಾರೆ. ಇದಕ್ಕೆ ʼಅನನ್ಯಾ ಸ್ಟೈಲ್ ಎಡಿಟ್ʼ ಎಂಬ ಹೆಸರು ಇಡಲಾಗಿದೆ. ಇದು ಏರ್‌ಬಿಎನ್‌ಬಿ ಮೂಲಕ ಮಾತ್ರವೇ ಲಭ್ಯ ವಿರಲಿದೆ. ಫ್ಯಾಷನ್ ಪ್ರಿಯರಿಗೆ, ಗ್ಲಾಮರ್ ಬಯಸುವವರಿಗೆ ಹಾಗೂ ಅನನ್ಯಾ ಅವರ ಅಭಿಮಾನಿ ಗಳಿಗೆ ಅವರು ತೆರೆಯ ಹಿಂದೆ ಏನೆಲ್ಲ ಕೆಲಸಗಳನ್ನು ತಮ್ಮದೇ ಆದ ಶೈಲಿಯಲ್ಲಿ ಮಾಡುತ್ತಾರೆ ಎಂಬುದನ್ನು ತಿಳಿದುಕೊಳ್ಳಲು ಇದು ಒಂದು ಅವಕಾಶ ಕಲ್ಪಿಸಲಿದೆ. ಗರಿಷ್ಠ ನಾಲ್ಕು ಮಂದಿ ಅತಿಥಿಗಳಿಗೆ ಇದಕ್ಕೆ ಹೆಸರು ಕಾಯ್ದಿರಿಸಲು ಅವಕಾಶ ಇರಲಿದೆ.
ಇದನ್ನೂ ಓದಿ: Vishwavani Editorial: ಧರೆ ಹೊತ್ತಿ ಉರಿದರೆ ನಿಲ್ಲಲಾಗದು..
ಅನನ್ಯಾ ಅವರ ಕನಸಿನ ಸೌಂದರ್ಯವರ್ಧಕ ಕೊಠಡಿಯಲ್ಲಿ ಏನು ಇರಲಿದೆ ಎಂಬುದನ್ನು ನೋಡಲು ಕೂಡ ಅತಿಥಿಗಳಿಗೆ ಅವಕಾಶ ಸಿಗಲಿದೆ. ದೆಹಲಿಯ ಏರ್‌ಬಿಎನ್‌ಬಿ ಕಟ್ಟಡವೊಂದರಲ್ಲಿ ಈ ಸೌಂದರ್ಯವರ್ಧಕ ಕೊಠಡಿಯನ್ನು ರೂಪಿಸಲಾಗಿದೆ. ಅನನ್ಯಾ ಅವರ ವಾರ್ಡ್‌ರೋಬ್‌ನಿಂದ ಆರಂಭಿಸಿ, ಅಲ್ಲಿನ ಸೌಂದರ್ಯವರ್ಧಕ ಸ್ಥಳದವರೆಗೆ ಎಲ್ಲವನ್ನೂ ಬಹಳ ಸಂತಸಮಯವಾದ ಫ್ಯಾಷನ್ ತಾಣವನ್ನಾಗಿ ಮಾರ್ಪಾಡು ಮಾಡಲಾಗಿದೆ.
ಅನನ್ಯಾ ಅವರ ಜೊತೆ ಅವರ ಎ-ತಂಡ ಇರಲಿದೆ. ಇದು ಪರಿಣತರನ್ನು ಒಳಗೊಂಡಿರುವ ಒಂದು ತಂಡ. ಅತಿಥಿಗಳಿಗೆ ಇದು ಸೌಂದರ್ಯವನ್ನು ವರ್ಧಿಸುವಲ್ಲಿ ಇನ್ನೆಲ್ಲೂ ಸಿಗದಂತಹ ಅನುಭವ ಒದಗಿಸಿಕೊಡಲಿದೆ. ಇಲ್ಲಿ ಅನನ್ಯಾ ಅವರ ತಂಡದ ಫ್ಯಾಷನ್ ವಿನ್ಯಾಸಕಾರರು ಸೌಂದರ್ಯವನ್ನು ಹೆಚ್ಚಿಸುವ ಕೆಲಸ ಮಾಡಲಿದ್ದಾರೆ. ಅನನ್ಯಾ ಅವರ ನಂಬಿಕಸ್ಥ ತಂಡದ ಸದಸ್ಯರು ಗ್ಲಾಮರ್ ಅಂಶವನ್ನು ಹೆಚ್ಚಿಸಿಕೊಡಲಿದ್ದಾರೆ. ಅಲ್ಲದೆ, ಅವರ ತಂಡದ ಛಾಯಾಚಿತ್ರಗ್ರಾಹಕರು ಅಂದದ ಛಾಯಾಚಿತ್ರಗಳನ್ನು ತೆಗೆದುಕೊಡಲಿದ್ದಾರೆ.
“ನಾನು ನಡೆಸಿಕೊಡುವ, ನಾನೇ ರೂಪಿಸಿರುವ ಏರ್‌ಬಿಎನ್‌ಬಿ ಕಾರ್ಯಕ್ರಮವಾದ ಅನನ್ಯಾಸ್ ಸ್ಟೈಲ್ ಎಡಿಟ್‌ಗೆ ಅತಿಥಿಗಳನ್ನು ಆಹ್ವಾನಿಸಿ, ಅವರಿಗೆ ಗ್ಲಾಮರ್ ಮತ್ತು ಬಣ್ಣದ ಲೋಕವನ್ನು ತೋರಿಸಲು ನಾನು ಉತ್ಸುಕಳಾಗಿದ್ದೇನೆ. ನಟಿಯಾಗಿ ನನಗೆ ಫ್ಯಾಷನ್ ಮತ್ತು ಅಭಿವ್ಯಕ್ತಿಯು ಬಹಳ ದೊಡ್ಡದು. ಅದನ್ನು ಇಷ್ಟು ವೈಯಕ್ತಿಕವಾಗಿ ಹಾಗೂ ಪ್ರಾಯೋಗಿಕವಾಗಿ ಅತಿಥಿಗಳ ಜೊತೆ ಹಂಚಿ ಕೊಳ್ಳಲು ಅವಕಾಶ ದೊರೆತಿರುವುದು ಬಹಳ ವಿಶೇಷವಾದುದು. ಅತಿಥಿಗಳನ್ನು ಭೇಟಿಯಾಗಲು, ಅವರ ಜೊತೆ ಅನುಭವಗಳನ್ನು ಹಂಚಿಕೊಳ್ಳಲು, ಮರೆಯಲು ಆಗದಂತಹ ನೆನಪುಗಳನ್ನು ಸೃಷ್ಟಿಸಿಕೊಳ್ಳಲು ನಾನು ಕಾತರಳಾಗಿದ್ದೇನೆ” ಎಂದು ಕಾರ್ಯಕ್ರಮದ ಆತಿಥ್ಯ ವಹಿಸಿರುವ ಅನನ್ಯಾ ಪಾಂಡೆ ಹೇಳಿದ್ದಾರೆ.
“ಅನನ್ಯಾ ಪಾಂಡೆ ಅವರೊಂದಿಗೆ ಏರ್‌ಬಿಎನ್‌ಬಿ ಒರಿಜಿನಲ್ ಕಾರ್ಯಕ್ರಮವೊಂದನ್ನು ಭಾರತದಲ್ಲಿ ಆರಂಭಿಸಲು ನಾವು ಉತ್ಸುಕರಾಗಿದ್ದೇವೆ. ಅನನ್ಯಾ ಅವರು ಹೊಸ ತಲೆಮಾರಿನವರ ಸಾಂಸ್ಕೃತಿಕ ಐಕಾನ್ ಕೂಡ ಹೌದು. ವಿಶ್ವದ ಅತ್ಯಂತ ವಿಶಿಷ್ಟವಾದ ವ್ಯಕ್ತಿಗಳು ನಡೆಸಿಕೊಡುವ ಅಸಾಮಾನ್ಯ ಕಾರ್ಯಕ್ರಮಗಳು ಈ ಒರಿಜಿನಲ್‌ಗಳು. ಇವುಗಳನ್ನು ಏರ್‌ಬಿಎನ್‌ಬಿಗಾಗಿ ವಿಶೇಷವಾಗಿ ರೂಪಿಸಲಾಗಿದೆ. ಅನನ್ಯಾಸ್ ಸ್ಟೈಲ್ ಎಡಿಟ್ ಕಾರ್ಯಕ್ರಮವು ಇದಕ್ಕೆ ಬಹಳ ಸೂಕ್ತವಾದ ಉದಾಹರಣೆ. ಅನನ್ಯಾ ಅವರು ಹೊಂದಿರುವ ವಿಶಿಷ್ಟವಾದ ಸ್ಟೈಲ್ ಹಾಗೂ ಬಾಲಿವುಡ್‌ಅನ್ನು ಇಷ್ಟಪಡುವ ದೇಶಗಳ ಯುವ ಸಮುದಾಯದ ಜೊತೆ ಅವರು ಹೊಂದಿರುವ ಬಲವಾದ ನಂಟು ಈ ಪಾಲುದಾರಿಕೆಯನ್ನು ಬಹಳ ವಿಶೇಷವಾಗಿಸಿದೆ. ಅವರ ಗ್ಲಾಮರಸ್ ಜಗತ್ತನ್ನು ಅತಿಥಿಗಳಿಗೆ ಇನ್ನಷ್ಟು ಹತ್ತಿರವಾಗಿ, ಅವಿಸ್ಮರಣೀಯ ಬಗೆಯಲ್ಲಿ ತೋರಿಸಲು ನಾವು ಹೆಮ್ಮೆ ಪಡುತ್ತೇವೆ” ಎಂದು ಏರ್‌ಬಿಎನ್‌ಬಿ ಭಾರತದ ಹಾಗೂ ಆಗ್ನೇಯ ಏಷ್ಯಾದ ಮುಖ್ಯಸ್ಥರಾದ ಅಮನ್‌ಪ್ರೀತ್ ಬಜಾಜ್ ಹೇಳಿದ್ದಾರೆ.
ಅನನ್ಯಾಸ್ ಸ್ಟೈಲ್ ಎಡಿಟ್ ಬಗ್ಗೆ ಒಂದಿಷ್ಟು ಮಾಹಿತಿ
ಇದನ್ನು ರೂಪಿಸಿರುವುದು ಹಾಗೂ ಇದಕ್ಕೆ ನೇತೃತ್ವ ವಹಿಸಿರುವುದು ಅನನ್ಯಾ ಪಾಂಡೆ. ಅವರ ಎ-ತಂಡವು ಇದರಲ್ಲಿ ಭಾಗಿಯಾಗುತ್ತದೆ. ನವದೆಹಲಿಯ ಏರ್‌ಬಿಎನ್‌ಬಿಯಲ್ಲಿ ನಡೆಯುವ ನಾಲ್ಕು ತಾಸುಗಳ ಈ ಕಾರ್ಯಕ್ರಮವು ಇವೆಲ್ಲವನ್ನೂ ಒಳಗೊಳ್ಳುತ್ತದೆ
* ಫ್ಯಾಷನ್ ರೀಬೂಟ್: ತಾರೆಯರಿಗೆ ಫ್ಯಾಷನ್ ಸೇವೆಗಳನ್ನು ಒದಗಿಸುವ ಸೈಲಿಸ್ಟ್ ಅಮಿ ಪಟೇಲ್ ಅವರು ವೈಯಕ್ತಿಕ ಮಟ್ಟದ ಸ್ಟೈಲಿಂಗ್ ಸೇವೆ ನೀಡುತ್ತಾರೆ. ಅನನ್ಯಾರಿಂದ ಸ್ಫೂರ್ತಿ ಪಡೆದ ವಿನ್ಯಾಸವನ್ನು ಇದರಲ್ಲಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ.
* ಸ್ಲೇ & ಸ್ಪ್ರೇ: ಇನ್ನಷ್ಟು ಸುಂದರವಾಗಿ ಕಾಣಿಸಿಕೊಳ್ಳಲು ಇದು ಒಂದು ಅವಕಾಶ. ಅನನ್ಯಾ ಅವರ ಇಷ್ಟದ ಕೇಶವಿನ್ಯಾಸಕಾರರಾದ ಆಂಚಲ್ ಮೊರ್ವಾನಿ ಅವರಿಂದ ಕೇಶವಿನ್ಯಾಸ ಹಾಗೂ ಅನನ್ಯಾ ಅವರ ಇಷ್ಟದ ಮೇಕಪ್ ಕಲಾವಿದೆ ರಿಧಿಮಾ ಶರ್ಮಾ ಅವರಿಂದ ಮೇಕಪ್.
* ಪೋಸ್ & ಶೈನ್: ಅನನ್ಯಾ ಪಾಂಡೆ ಜೊತೆ ಒಂದು ಫ್ಯಾಷನ್ ಶೂಟ್‌ನಲ್ಲಿ ಭಾಗಿಯಾಗಲು ಅವಕಾಶ ಇರಲಿದೆ. ಚಿತ್ರಗಳನ್ನು ರಾಹುಲ್ ಝಾಂಗಿಯಾನಿ ಮತ್ತು ಅವರ ತಂಡವು ಕ್ಯಾಮೆರಾದಲ್ಲಿ ಸೆರೆಹಿಡಿಯಲಿದೆ. ಇವರು ಬಾಲಿವುಡ್‌ನ ಕೆಲವು ದೊಡ್ಡ ತಾರೆಯರ ಚಿತ್ರಗಳನ್ನು ಕ್ಲಿಕ್ಕಿಸಿದವರು.
* ಕಾಫಿ ವಿತ್ ಅನನ್ಯಾ: ಅವಿಸ್ಮರಣೀಯವಾದ ದಿನವನ್ನು ಕೊನೆಗೊಳಿಸುವ ಮೊದಲು ಅನನ್ಯಾ ಅವರ ಜೊತೆ ಒಂದು ಕಾಫಿ ಕುಡಿಯುತ್ತ, ಅವರ ಜೊತೆ ಹರಟೆ ಹೊಡೆಯಬಹುದು. ಅಲ್ಲದೆ ಮಾತಿನ ಜೊತೆ ಅವರ ಫ್ಯಾಷನ್ ಕಥೆಗಳನ್ನು, ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವ ವಿಧಾನಗಳನ್ನು ಆಲಿಸಬಹುದು.
* ಸ್ಲೇ ದ ಡೇ ಗಿವ್ ಅವೆ: ಪ್ರತಿ ಅತಿಥಿಗೂ ಒಂದು ಉಡುಗೊರೆ ಸಿಗಲಿದೆ. ಇದನ್ನು ಅನನ್ಯಾ ಅವರು ತಾವೇ ಆಯ್ಕೆ ಮಾಡಿದ ಅಗತ್ಯ ವಸ್ತುಗಳಿಂದ ತುಂಬಿಸಿಕೊಡಲಿದ್ದಾರೆ. ಜೊತೆ ಅವರು ಸಹಿ ಮಾಡಿದ ಸ್ಮರಣಿಕೆಯೊಂದು ಇರುತ್ತದೆ.
ಬುಕ್ ಮಾಡುವುದು ಹೇಗೆ?
* ಬುಕ್ ಮಾಡುವ ಕೋರಿಕೆ ಸಲ್ಲಿಸುವ ಅವಕಾಶವು 2025ರ ಆಗಸ್ಟ್ 21ರಂದು ಬೆಳಿಗ್ಗೆ 11 ಗಂಟೆಗೆ ತೆರೆದುಕೊಳ್ಳುತ್ತದೆ. airbnb.com/ananya ಮೂಲಕ ಬುಕ್ ಮಾಡಬಹುದು.
* ನಾಲ್ಕು ತಾಸುಗಳ ಈ ಕಾರ್ಯಕ್ರಮಕ್ಕೆ ರೂ 00 ಶುಲ್ಕ ಇರುತ್ತದೆ
* ಗರಿಷ್ಠ ನಾಲ್ಕು ಮಂದಿ ಅತಿಥಿಗಳು ಬುಕ್ ಮಾಡಬಹುದು. ಒಬ್ಬರು ಅಥವಾ ಇಬ್ಬರು ಅತಿಥಿಗಳಿಗೆ ಅವಕಾಶ ಕಾಯ್ದಿರಿಸಿ. ಆದರೆ ಅವಕಾಶಗಳು ಸೀಮಿತವಾಗಿದ್ದರೆ ಒಬ್ಬರಿಗೆ ಮಾತ್ರ ಅವಕಾಶ ಕಾಯ್ದಿರಿಸಲು ಆಗುತ್ತದೆ. ಮೊದಲು ಬಂದವರಿಗೆ ಮೊದಲ ಆದ್ಯತೆಯ ಎಂಬ ಆಧಾರದಲ್ಲಿ ಅತಿಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
* ನವದೆಹಲಿಗೆ ಬರುವುದು ಹಾಗೂ ಅಲ್ಲಿಂದ ವಾಪಸ್ ಆಗುವುದು ಅತಿಥಿಗಳ ಹೊಣೆ
ಇದು ಸ್ಪರ್ಧೆ ಅಲ್ಲ. ಬುಕ್ ಮಾಡುವವರಿಗೆ ತಮ್ಮದೇ ಆದ ಸಕ್ರಿಯ ಏರ್‌ಬಿಎನ್‌ಬಿ ಪ್ರೊಫೈಲ್ ಹೊಂದಿರಬೇಕು. ಅಲ್ಲದೆ, ಅವರಿಗೆ ಈ ವೇದಿಕೆಯಲ್ಲಿ ಉತ್ತಮ ರೀವ್ಯೂಗಳು ದೊರೆತಿರಬೇಕು. ಅವಕಾಶ ಕಾಯ್ದಿರಿಸಲು ಮುಂದಾಗುವ ಪ್ರತಿ ಅತಿಥಿಯೂ ಸರ್ಕಾರದ ಯಾವುದಾದರೂ ಒಂದು ಗುರುತಿನ ಚೀಟಿಯನ್ನು ಸಲ್ಲಿಸಬೇಕು.