ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಅನನ್ಯ ಭಟ್ ನಾಪತ್ತೆ ಕೇಸ್​​ಗೆ ಟ್ವಿಸ್ಟ್: ದೂರುದಾರೆ ಸುಜಾತಾ ಭಟ್​​​ಗೆ ಮಕ್ಕಳೇ ಇರಲಿಲ್ಲ

ಕೆಎಂಸಿಯಲ್ಲಿ ಮೆಡಿಕಲ್‌ ಓದುತ್ತಿದ್ದ ಅನನ್ಯ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದವಳು ಮರಳಲಿಲ್ಲ ಎಂಬ ನಿಟ್ಟಿನಲ್ಲಿ ಸುದ್ದಿಯಾಗಿತ್ತು. ಈ ನಡುವೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸುಜಾತಾ ಭಟ್ ನೀಡಿರುವ ದೂರು ಮತ್ತು ಆಕೆಯ ಹಿನ್ನಲೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಇದೀಗ ಅನನ್ಯ ಭಟ್ ಎಂಬ ವ್ಯಕ್ತಿಯ ಅಸ್ತಿತ್ವವೇ ಸುಳ್ಳು ಎಂಬುದು ಗೊತ್ತಾಗಿದೆ.

ಅನನ್ಯ ಭಟ್ ನಾಪತ್ತೆ ಕೇಸ್​​ಗೆ ಟ್ವಿಸ್ಟ್: ಸುಜಾತಾ ಭಟ್​​​ಗೆ ಮಕ್ಕಳಿರಲಿಲ್ಲ

ಹರೀಶ್‌ ಕೇರ ಹರೀಶ್‌ ಕೇರ Aug 19, 2025 7:39 AM

ಶಿವಮೊಗ್ಗ: ಧರ್ಮಸ್ಥಳದಲ್ಲಿ (Dharmastala case) ಕಾಣೆಯಾಗಿದ್ದಾಳೆ ಎನ್ನಲಾಗಿರುವ ಅನನ್ಯ ಭಟ್ ನಾಪತ್ತೆ ಕೇಸ್‌ಗೆ (Ananya Bhat missing Case) ಬಿಗ್ ಟ್ವಿಸ್ಟ್ ಸಿಕ್ಕಿದೆ. ದೂರು ನೀಡಿದ, ಅನನ್ಯ ಭಟ್‌ ತಾಯಿ ಎಂದು ಹೇಳಿಕೊಂಡಿರುವ ಸುಜಾತಾ ಭಟ್ (Sujata Bhat) ಅವರಿಗೆ ಮಕ್ಕಳೇ ಇರಲಿಲ್ಲ ಎಂದು ತಿಳಿದುಬಂದಿದೆ. ಸುಜಾತಾ ಭಟ್ ನೀಡಿದ ದೂರಿನ ಮೇರೆಗೆ ಎಸ್​ಐಟಿ ಅಧಿಕಾರಿಗಳು ಅನನ್ಯ ಭಟ್ ಕೇಸಿನ ಹಿಂದೆ ಬದ್ದಿದ್ದು, ಕೆಲವು ಮಾಹಿತಿಗಳನ್ನು ಕಲೆಹಾಕಿದ್ದಾರೆ. ಸುಜಾತಾ ಭಟ್ ಮದುವೆಯಾಗದೇ ಪ್ರಭಾಕರ್ ಬಾಳಿಗ ಎನ್ನುವವರ ಜೊತೆ ಲಿವ್ ಇನ್​ ರಿಲೇಶನ್ ಶಿಪ್‌ನಲ್ಲಿದ್ದರು. ಆದರೆ ಇಬ್ಬರಿಗೆ ಯಾವುದೇ ಮಗು ಸಹ ಆಗಿಲ್ಲ ಎನ್ನುವುದು ಬೆಳಕಿಗೆ ಬಂದಿದೆ. ಹೀಗಾಗಿ ಅನನ್ಯ ಭಟ್ ಎಂಬ ವ್ಯಕ್ತಿಯ ಅಸ್ತಿತ್ವವೇ ಸುಳ್ಳೇ ಎಂಬ ಸಂಶಯ ಮೂಡಿದೆ.

ಧರ್ಮಸ್ಥಳದಲ್ಲಿ ಸುಜಾತಾ ಭಟ್ ತಮ್ಮ ಮಗಳು ಅನನ್ಯ ಭಟ್ ಮಿಸ್ಸಿಂಗ್ ಕೇಸ್ ದೂರು ದಾಖಲಿಸಿದ್ದರು. ಅದರ ತನಿಖೆ ಪೊಲೀಸರು ಮಾಡಲಿಲ್ಲ ಎನ್ನುವ ಆರೋಪವನ್ನು ಸುಜಾತಾ ಮಾಡಿದ್ದರು. ಈ ನಡುವೆ ಧರ್ಮಸ್ಥಳದಲ್ಲಿ ನೂರಾರು ಶವ ಹೂತಿರುವ ಕುರಿತು ಅನಾಮಿಕ ವ್ಯಕ್ತಿ ದೂರು ನೀಡಿದ್ದ. ಅಷ್ಟರಲ್ಲಿ ಸುಜಾತಾ ಭಟ್ ತನ್ನ ಮಗಳ ಮಿಸ್ಸಿಂಗ್ ಪ್ರಕರಣವನ್ನು ಮುನ್ನಲೆಗೆ ತಂದಿದ್ದು, ಈ ಸಂಬಂಧ ಎಸ್ಐಟಿ ಮುಂದೆ ಅನನ್ಯ ಭಟ್ ಮಿಸ್ಸಿಂಗ್ ಕೇಸ್ ಕುರಿತು ಮತ್ತೆ ದೂರು ನೀಡಿದ್ದಾರೆ. ಕೆಎಂಸಿಯಲ್ಲಿ ಮೆಡಿಕಲ್‌ ಓದುತ್ತಿದ್ದ ಅನನ್ಯ ಭಟ್ ಎಂಬಾಕೆ ಧರ್ಮಸ್ಥಳಕ್ಕೆ ಬಂದವಳು ಮರಳಲಿಲ್ಲ ಎಂಬ ನಿಟ್ಟಿನಲ್ಲಿ ಸುದ್ದಿಯಾಗಿತ್ತು. ಈ ನಡುವೆ ಎಸ್ ಐಟಿ ಅಧಿಕಾರಿಗಳು ತನಿಖೆ ಚುರುಕುಗೊಳಿಸಿದ್ದು, ಸುಜಾತಾ ಭಟ್ ನೀಡಿರುವ ದೂರು ಮತ್ತು ಆಕೆಯ ಹಿನ್ನಲೆ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ.

ಸುಜಾತಾ ಭಟ್ ಶಿವಮೊಗ್ಗದ ಹೊಸನಗರ ತಾಲೂಕಿನ ರಿಪ್ಪನಪೇಟೆಯಲ್ಲಿ ಇದ್ದುದು ಗೊತ್ತಾಗಿದೆ. ಈ ಹಿನ್ನೆಲೆಯಲ್ಲಿ ಎಸ್ಐಟಿ ತಂಡ ರಿಪ್ಪನ್‌ಪೇಟೆಗೆ ಬಂದು ವಿಚಾರಣೆ ಮಾಡಿ ಹೋಗಿರುವುದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದ್ದು, ಎಸ್ಐಟಿ ತಂಡದ ಅಧಿಕಾರಿಗಳು ಸುಜಾತ ಭಟ್ ಬಗ್ಗೆ ಒಂದಿಷ್ಟು ಮಾಹಿತಿ ಕಲೆಹಾಕಿದ್ದಾರೆ. 1999ರಿಂದ 2007 ರ ವರೆಗೆ ಸುಜಾತಾ ಭಟ್ ರಿಪ್ಪನ್‌ಪೇಟೆಯಲ್ಲಿ ವಾಸವಾಗಿದ್ದಳು. ರಿಪ್ಪನ್‌ಪೇಟೆಯ ಹೊಸನಗರ ರಸ್ತೆ ಬಳಿ ಪ್ರಭಾಕರ್ ಬಾಳಿಗ ಜೊತೆ ಲಿವ್‌ ಇನ್‌ ರಿಲೇಶನ್​​ ಶಿಪ್​ ನಲ್ಲಿದ್ದರು. ಪ್ರಭಾಕರ್ ಮತ್ತು ಸುಜಾತಾ ದಂಪತಿಗಳೆಂದು ಎಲ್ಲರೂ ಅಂದುಕೊಂಡಿದ್ದರು. ಆದರೆ ಅವರಿಬ್ಬರು ಮದುವೆಯಾಗದೇ ಜೊತೆಗಿದ್ದರು ಎನ್ನುವುದು ಈಗ ಬಹಿರಂಗವಾಗಿದೆ.

ಪ್ರಭಾಕರ್ ಈಗಾಗಲೇ ಮೃತಪಟ್ಟಿದ್ದಾರೆ. ಸುಜಾತಾ ಭಟ್ ರಿಪ್ಪನಪೇಟೆಯಲ್ಲಿ ಪ್ರಭಾಕರ್ ಜೊತೆ ಸಂಸಾರ ಮಾಡುತ್ತಿದ್ದ ಸಂದರ್ಭದಲ್ಲಿ ಮಕ್ಕಳು ಇದ್ದ ಯಾವುದೇ ಸುಳಿವಿಲ್ಲ. ಎರಡು ನಾಯಿಗಳನ್ನೇ ತಮ್ಮ ಮಕ್ಕಳು ಎಂದುಕೊಂಡು ಆರೈಕೆ ಮಾಡುತ್ತಿದ್ದರು. ಸುಜಾತಾ ಭಟ್ ರಿಪ್ಪನಪೇಟೆಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದಲ್ಲಿ 2004 ರಲ್ಲಿ ತೇಜಸ್ವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯತ್ವ ಪಡೆದಿದ್ದಳು. ರಿಜಿಸ್ಟರ್‌ನಲ್ಲಿ ಸುಜಾತಾ ಬಾಳಿಗ ಹೆಸರಿನಲ್ಲಿ ಹಸ್ತಾಕ್ಷರ ಕಂಡುಬಂದಿದೆ. ಇದರ ನಂತರ 2007 ರ ನಂತರ ಸೊಸೈಟಿಯಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಇಟ್ಟುಕೊಂಡಿರಲಿಲ್ಲ. ಸಂಘದ ಹೆಸರಿನಲ್ಲಿ ಒಂದಿಷ್ಟು ಸಾಲ ಪಡೆದಿದ್ದಳು. ಅದನ್ನು ವಾಪಸ್ ಕಟ್ಟಿರಲಿಲ್ಲ.

ಸುಜಾತಾ ಭಟ್​ಗೆ ಮಗಳೇ ಇರಲಿಲ್ಲ

ಇನ್ನು ಪ್ರಭಾಕರ್ ಬೀಡಾ ಅಂಗಡಿ ಇಟ್ಟುಕೊಂಡಿದ್ದರು. ಆತನ ಎಲ್ಲ ಹಣಕಾಸಿನ ವ್ಯವಹಾರವನ್ನು ಸುಜಾತಾ ಅವರೇ ನೋಡಿಕೊಳ್ಳುತ್ತಿದ್ದರು. ಎಸ್ಐಟಿ ಅಧಿಕಾರಿಗಳು ಸುಜಾತ ಈ ಹಿಂದೆ ವಾಸವಿದ್ದ ಮತ್ತು ಅವಳ ಚಟುವಟಿಕೆಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. ಈ ನಡುವೆ ಸುಜಾತ ಭಟ್ ಗೆ ಯಾವುದೇ ಮಕ್ಕಳು ಇರಲಿಲ್ಲ ಎನ್ನುವುದು ಸ್ಥಳೀಯರಿಂದ ಕಂಡು ಬಂದಿದೆ. ಹಾಗಾದರೆ ಧರ್ಮಸ್ಥಳ ಪ್ರಕರಣದ ಕುರಿತು ಆಕೆ ಸುಳ್ಳು ಹೇಳಿದ್ದಳೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಮೆಡಿಕಲ್ ಕಾಲೇಜ್ ವಿದ್ಯಾರ್ಥಿನಿ ಧರ್ಮಸ್ಥದಲ್ಲಿ ನಾಪತ್ತೆ ಆಗಿರುವುದು ನಿಜವೋ ಅಥವಾ ಸುಳ್ಳೋ ಎನ್ನುವುದರ ಹಿಂದೆ ಎಸ್ಐಟಿ ಅಧಿಕಾರಿಗಳು ಬಿದ್ದಿದ್ದಾರೆ. ರಿಪ್ಪನಪೇಟೆಯಲ್ಲಿ ಸುಜಾತಾ ಭಟ್ ಕುರಿತು ಒಂದಿಷ್ಟು ಮಹತ್ವದ ಸಂಗತಿಗಳು ಪೊಲೀಸರ ಕೈಗೆ ಸಿಕ್ಕಿವೆ. ಅನನ್ಯ ಮಿಸ್ಸಿಂಗ್ ಕೇಸ್ ಮತ್ತೆ ಯಾವ ತಿರುವು ಪಡೆದುಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಇದನ್ನೂ ಓದಿ: Dharmasthala case: ಎಫ್‌ಎಸ್‌ಎಲ್‌ ವರದಿ ಬರುವವರೆಗೆ ಧರ್ಮಸ್ಥಳದಲ್ಲಿ ಎಸ್‌ಐಟಿ ಶೋಧ ಕಾರ್ಯ ಸ್ಥಗಿತ: ಗೃಹ ಸಚಿವ ಪರಮೇಶ್ವರ್‌