Sujata Bhat: ನಾನು ಹೇಳಿದ್ದೆಲ್ಲಾ ಸುಳ್ಳು, ಕೇಸ್ ಹಿಂಪಡೆಯುವುದಕ್ಕೆ ರೆಡಿ: ಎಸ್‌ಐಟಿ ಮುಂದೆ ಸುಜಾತ ಭಟ್
Dharmasthala case: ಕ್ಷಣಕ್ಕೊಂದು ಮಾತನಾಡುತ್ತ, ಒಂದೊಂದು ಮೀಡಿಯಾದ ಮುಂದೆ ಒಂದೊಂದು ಕಥೆ ಕಟ್ಟುತ್ತ ಇಡೀ ರಾಜ್ಯವನ್ನೇ ಬಫೂನ್ ಮಾಡಿದ್ದ ಸುಜಾತ ಭಟ್, ತನ್ನ ಸುಳ್ಳಿನ ವಾಂತಿಯನ್ನು ತಾನೇ ನುಂಗಲು ಇದೀಗ ಸಿದ್ಧವಾಗಿದ್ದಾರೆ. ಎರಡು ದಿನಗಳಿಂದ ಎಸ್‌ಐಟಿ ವಿಚಾರಣೆ ಏದುರಿಸು ಸುಜಾತ ಭಟ್ ಬಸವಳಿದಿದ್ದಾರೆ.


ಮಂಗಳೂರು: ಧರ್ಮಸ್ಥಳದಲ್ಲಿ (Dharmasthala case) ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಾಳೆ ಎಂದು ಸುಜಾತಾ ಭಟ್ (Sujatha Bhat) ಎಂಬಾಕೆ ನೀಡಿದ ದೂರು ರಾಜ್ಯಾದ್ಯಂತ ಸಂಚಲನ ಮೂಡಿಸಿತ್ತು. ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ತಾಯಿ ಎಂದು ಹೇಳಿಕೊಂಡು ಬಂದಿದ್ದ ಸುಜಾತಾ ಭಟ್ ನಿನ್ನೆ ಇಡೀ ದಿನ ಬೆಳ್ತಂಗಡಿಯಲ್ಲಿ ಎಸ್‌ಐಟಿ ಮುಂದೆ ವಿಚಾರಣೆ ಎದುರಿಸಿದ್ದು, ತಾನು ಹೇಳಿದ್ದೆಲ್ಲಾ ಕಪೋಲಕಲ್ಪಿತ ಎಂದು ಒಪ್ಪಿಕೊಂಡಿದ್ದಾರೆ. ದೂರು ವಾಪಸ್ ಪಡೆಯಲು ಸಿದ್ಧರಿರುವುದಾಗಿ ತಿಳಿಸಿದ್ದಾರೆ ಎಂದು ತಿಳದುಬಂದಿದೆ.
ಕ್ಷಣಕ್ಕೊಂದು ಮಾತನಾಡುತ್ತ, ಒಂದೊಂದು ಮೀಡಿಯಾದ ಮುಂದೆ ಒಂದೊಂದು ಕಥೆ ಕಟ್ಟುತ್ತ ಇಡೀ ರಾಜ್ಯವನ್ನೇ ಬಫೂನ್ ಮಾಡಿದ್ದ ಸುಜಾತ ಭಟ್, ತನ್ನ ಸುಳ್ಳಿನ ವಾಂತಿಯನ್ನು ತಾನೇ ನುಂಗಲು ಇದೀಗ ಸಿದ್ಧವಾಗಿದ್ದಾರೆ. ತನ್ನ ಮಗಳು ಅನನ್ಯಾ ಭಟ್ ನಾಪತ್ತೆಯಾಗಿದ್ದಳು ಎಂದು ಆರೋಪ ಮಾಡಿರುವ ಸುಜಾತಾ ಭಟ್ ಪ್ರಕರಣ ಸಂಬಂಧ ಎಸ್‌ಐಟಿ (SIT) ಅಧಿಕಾರಿಗಳು ತೀವ್ರವಾದ ವಿಚಾರಣೆ ನಡೆಸುತ್ತಿದ್ದಾರೆ. ಮೊನ್ನೆ ಸುಜಾತಾ ಭಟ್ರನ್ನು ಇಡೀ ದಿನ ವಿಚಾರಣೆಗೆ ಒಳಪಡಿಸಲಾಗಿತ್ತು. ನಿನ್ನೆ ಎರಡನೇ ದಿನ ಕೂಡ ಸುಜಾತಾ ಭಟ್ ವಿಚಾರಣೆಗೆ ಹಾಜರಾಗಿದ್ದಾರೆ. ತನಿಖಾಧಿಕಾರಿಗಳ ಪ್ರಶ್ನೆಗೆ ಸುಸ್ತಾದ ಸುಜಾತಾ ಭಟ್ ಈ ಕೇಸ್‌ನಲ್ಲಿಗೆ ಯೂಟರ್ನ್ ಹೊಡೆಯಲು ರೆಡಿಯಾಗಿದ್ದಾರೆ ಎಂದು ಹೇಳಲಾಗಿದೆ.
ಅನನ್ಯ ಭಟ್ ಮಿಸ್ಸಿಂಗ್ ಪ್ರಕರಣಕ್ಕೆ ಸಂಬಂಧಿಸಿ ಸುಜಾತ ಭಟ್ ತನಿಖಾಧಿಕಾರಿ ಗುಣಪಾಲ್ ಅವರಿಂದ ಸತತ ವಿಚಾರಣೆ ಎದುರಿಸುತ್ತಿದ್ದಾರೆ. ಈ ವೇಳೆ ಸುಜಾತಾ ಭಟ್ ನಾನು ಅಂದುಕೊಂಡಿದ್ದೇ ಬೇರೆ, ಆಗಿದ್ದೇ ಬೇರೆ, ಈ ಪ್ರಾಯದಲ್ಲಿ ನನಗೆ ತನಿಖೆ ಎದುರಿಸೋಕೆ ಅಸಾಧ್ಯ. ನ್ಯಾಯ ಸಿಗೋಕೆ ಇಷ್ಟು ದಿನ ಹೋರಾಟ ನಡೆಸಿದೆ. ಇನ್ನು ನನಗೆ ಎದುರಿಸಲು ಶಕ್ತಿ ಇಲ್ಲ. ಕೇಸ್ ಹಿಂಪಡೆಯೋದಕ್ಕೂ ನಾನು ಸಿದ್ಧ ಎಂದು ತನಿಖಾಧಿಕಾರಿ ಗುಣಪಾಲ್ ಎದುರು ಸುಜಾತಾ ಭಟ್ ಹೇಳಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ತನಿಖಾಧಿಕಾರಿ ಗುಣಪಾಲ್, ಸುಳ್ಳು ಹೇಳಿದ್ದರಿಂದ ಎದುರಿಸಬೇಕಾದ ಕಾನೂನಾತ್ಮಕ ಪರಿಣಾಮಗಳ ಬಗ್ಗೆ ಬಿಡಿಸಿ ಹೇಳಿದ್ದಾರೆ ಎಂದು ಹೇಳಲಾಗಿದೆ.
2003ರಲ್ಲಿ ಧರ್ಮಸ್ಥಳದ ಮಂಜುನಾಥ ದೇವಸ್ಥಾನಕ್ಕೆ ಭೇಟಿ ನೀಡಿದ್ದ ಸಂದರ್ಭದಲ್ಲಿ, ಮಣಿಪಾಲ್‌ನ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಪ್ರಥಮ ವರ್ಷದ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿದ್ದ ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ಸುಜಾತ ಭಟ್ ಆರೋಪಿಸಿದ್ದರು. ಜುಲೈ 15, 2025ರಂದು ಸುಜಾತ ಭಟ್ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ದೂರಿನ ಆಧಾರದ ಮೇಲೆ, ಆಗಸ್ಟ್ 19, 2025 ರಂದು ರಾಜ್ಯದ ಡಿಜಿಪಿ ಎಂ.ಎ. ಸಲೀಂ ಅವರ ಆದೇಶದಂತೆ ಈ ಪ್ರಕರಣವನ್ನು ಎಸ್‌ಐಟಿಗೆ ವರ್ಗಾಯಿಸಲಾಯಿತು. ತನಿಖಾಧಿಕಾರಿ ಗುಣಪಾಲ ಜೆ. ಅವರ ನೇತೃತ್ವದಲ್ಲಿ ಇದೀಗ ಬೆಳ್ತಂಗಡಿಯ ಎಸ್‌ಐಟಿ ಕಚೇರಿಯಲ್ಲಿ ವಿಚಾರಣೆ ನಡೆಯುತ್ತಿದೆ.
ಆಗಸ್ಟ್ 26 ಹಾಗೂ 27ರಂದು ಸುಜಾತ ಭಟ್ ಬೆಳ್ತಂಗಡಿಯ ಎಸ್‌ಐಟಿ ಕಚೇರಿಗೆ ಆಗಮಿಸಿ, ತನಿಖಾಧಿಕಾರಿಗಳ ಮುಂದೆ ಹಾಜರಾಗಿದ್ದಾರೆ. ಈ ವೇಳೆ ತನಿಖಾಧಿಕಾರಿ ಗುಣಪಾಲ ಜೆ. ಅವರು ಸುಜಾತ ಭಟ್‌ರಿಂದ ಅನನ್ಯ ಭಟ್ ಅಸ್ತಿತ್ವಕ್ಕೆ ಸಂಬಂಧಿಸಿದ ದಾಖಲೆಗಳಾದ ಶಾಲಾ ದಾಖಲೆಗಳು, ಜನನ ಪ್ರಮಾಣಪತ್ರ, ಮತ್ತು ಕಾಲೇಜು ದಾಖಲಾತಿಗಳನ್ನು ಸಲ್ಲಿಸುವಂತೆ ಕೋರಿದ್ದರು.
ಇದನ್ನೂ ಓದಿ: Dharmasthala Case: ಎಸ್‌ಐಟಿ ಮುಂದೆ ವಿಚಾರಣೆಗೆ ಸುಜಾತ ಭಟ್ ಹಾಜರು