ಯುಗಾದಿ ಹಬ್ಬ ಐಪಿಎಲ್​ ಸುನಿತಾ ವಿಲಿಯಮ್ಸ್​ ಫ್ಯಾಷನ್​ ವಿದೇಶ ಧಾರ್ಮಿಕ ಕ್ರೈಂ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಜಿಲ್ಲೆಯ ಜನತೆಗೆ ಚಂದ್ರಮಾನ ಯುಗಾದಿ, ರಂಜಾನ್ ಹಬ್ಬದ ಶುಭಾಶಯಗಳು: ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಅಭಿಮತ

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸವರ್ಷವಾಗಿದ್ದು ಎಲ್ಲರೂ ಕೂಡ ಸುಖ ಶಾಂತಿ ನೆಮ್ಮದಿ ಯಿಂದ ಆಚರಣೆ ಮಾಡಬೇಕು.ಹಬ್ಬದ ಮರುದಿನವೇ ಹೊಸತೊಡಕು ಇರುತ್ತದೆ. ಜನ ಸಾಮಾನ್ಯರಲ್ಲಿ ಒಂದಷ್ಟು ಮಂದಿ ಹಬ್ಬದ ಹೆಸರಿನಲ್ಲಿ ನಿಯಬಾಹಿರವಾಗಿ ಇಸ್ಪೀಟ್, ಮಟ್ಕ, ಅಂದರ್‌ ಬಾಹರ್, ಕೋಳಿಪಂದ್ಯ ಇನ್ನಿತರೆ ಜುಜಾಟಗಳಲ್ಲಿ ತೊಡಗಿಸಿಕೊಳ್ಳುವುದು ನಡೆದಿದೆ.

ಹಬ್ಬದ ಸಂಭ್ರಮ ಇಮ್ಮಡಿಯಾಗಲಿ : ನೆಲದ ಕಾನೂನಿಗೆ ಗೌರವವಿರಲಿ

ಹಬ್ಬದ ಸಂಭ್ರಮ ಇಮ್ಮಡಿಯಾಗಲಿ,ನೆಲದ ಕಾನೂನಿಗೆ ಗೌರವವಿರಲಿ,ಜಿಲ್ಲೆಯ ಜನತೆಗೆ ಚಂದ್ರಮಾನ ಯುಗಾದಿ, ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ  ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ತಿಳಿಸಿದರು.

Profile Ashok Nayak Mar 30, 2025 11:34 PM

ಚಿಕ್ಕಬಳ್ಳಾಪುರ : ಜಿಲ್ಲೆಯ ಜನತೆ ಯುಗಾದಿ ಮತ್ತು ರಂಜಾನ್ ಹಬ್ಬಗಳು ಒಟ್ಟಿಗೆ ಬಂದಿರುವ ಕಾರಣ ಶಾಂತಿ ಸುವ್ಯವಸ್ಥೆಗೆ ಭಂಗಬಾರದAತೆ ನಡೆದುಕೊಳ್ಳುವ ಮೂಲಕ ಸಂತೋಷದಿಂದ ಆಚರಿಸಿ, ಭಗವಂತ ತಮ್ಮೆಲ್ಲರಿಗೆ ಆಯಸ್ಸು ಆರೋಗ್ಯದ ಜತೆಗೆ ಸುಖ ಶಾಂತಿ ನೆಮ್ಮದಿ ನೀಡಿ ಕಾಪಾಡಲಿ ಎಂದು ಜಿಲ್ಲಾಧಿಕಾರಿ ಪಿ.ಎನ್.ರವೀಂದ್ರ ಶುಭಾಶಯ ಕೋರಿದರು. ನಗರದ ಹೊರವಲಯ ಜಿಲ್ಲಾಡಳಿತ ಭವನದ ಜಿಲ್ಲಾಧಿಕಾರಗಳ ಕಚೇರಿಯಲ್ಲಿ ವಿಶ್ವವಾಣಿ ಪತ್ರಿಕೆಯೊಂದಿಗೆ ಮಾತನಾಡಿ ಶುಭಾಶಯ ಕೋರಿದರು.

ಇದನ್ನೂ ಓದಿ:

ಯುಗಾದಿ ಹಬ್ಬ ಎಂದರೆ ಹಿಂದೂಗಳಿಗೆ ಹೊಸವರ್ಷವಾಗಿದ್ದು ಎಲ್ಲರೂ ಕೂಡ ಸುಖ ಶಾಂತಿ ನೆಮ್ಮದಿಯಿಂದ ಆಚರಣೆ ಮಾಡಬೇಕು.ಹಬ್ಬದ ಮರುದಿನವೇ ಹೊಸತೊಡಕು ಇರುತ್ತದೆ. ಜನ ಸಾಮಾನ್ಯರಲ್ಲಿ ಒಂದಷ್ಟು ಮಂದಿ ಹಬ್ಬದ ಹೆಸರಿನಲ್ಲಿ ನಿಯಬಾಹಿರವಾಗಿ ಇಸ್ಪೀಟ್, ಮಟ್ಕ, ಅಂದರ್‌ ಬಾಹರ್, ಕೋಳಿಪಂದ್ಯ ಇನ್ನಿತರೆ ಜುಜಾಟಗಳಲ್ಲಿ ತೊಡಗಿಸಿಕೊಳ್ಳುವುದು ನಡೆದಿದೆ. ಇಂತಹ ಯಾವುದೇ ಆಟಗಳಲ್ಲಿ ತೊಡಗಿ ವರ್ಷಪೂರ್ತಿ ದುಡಿದಿರುವ ಹಣವನ್ನು ಕ¼ ಎದು ಕೊಂಡರೆ, ವೈಯಕ್ತಿಕವಾಗಿ ನಿಮಗೂ ನಷ್ಟ. ಕುಟುಂಬದಲ್ಲಿ ನೆಮ್ಮದಿಯೂ ಹಾಳು. ಹಬ್ಬದ ದಿನ ಕುಟುಂಬದಲ್ಲಿರುವ ಸಂತೋಷ ಸಂಭ್ರಮವನ್ನು ನಿಮ್ಮ ಕೈಯಾರೆ ನೀವೇ ಹಾಳು ಮಾಡಬೇಡಿ. ಮಾಡಿದಂತಾಗುತ್ತದೆ.ಯುಗಾದಿ ಹಬ್ಬದ ದಿನ ಯಾರೂ ಕೂಡ ಇಂತಹ ಜೂಜಾಟಗಳಲ್ಲಿ, ನಿಯಮಬಾಹಿರ ಆಟಗಳಲ್ಲಿ ತೊಡಗಬೇಡಿ ಎಂದು ಮನವಿ ಮಾಡಿದರು.

ಈ ಬಾರಿ ಮಾ.೩೦ ರಂದು ಯುಗಾದಿ ಇದೆ. ೩೧ರಂದು ರಂಜಾನ್ ಇದೆ.ಹೀಗಾಗಿ ಎಲ್ಲಾ ಸಾರ್ವ ಜನಿಕರಿಗೆ ಯುಗಾದಿಯ ಮತ್ತು ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರುತ್ತೇನೆ. ಯುಗಾದಿ ದಿನ ಹೊಸ ಚಂದ್ರನನ್ನು ನೋಡುವ ಮೂಲಕ ಹೊಸ ಸಂವತ್ಸರವನ್ನು ಸ್ವಾಗತಿಸಿದರೆ, ಮುಸ್ಲಿ ಮರು ಮೆರವಣಿಗೆ ಸಾಮೂಹಿಕ ಪ್ರಾರ್ಥನೆಗಳಲ್ಲಿ ತೊಡಗಿಸಿಕೊಳ್ಳುವುದು ಮಾಡುತ್ತಾರೆ. ಯಾರೇ ಆಗಲಿ ಹಬ್ಬಗಳ ಸಮಯವನ್ನು ಬಳಸಿಕೊಂಡು ಸಮಾಜದ ಶಾಂತಿಗೆ ಭಂಗತರುವ ಕೆಲಸ ಮಾಡಿ ದರೆ, ಜಿಲ್ಲಾ ಪೊಲೀಸ್ ಇಲಾಖೆ ಸದಾ ಎಚ್ಚರಿದ್ದು ಅಂತಹವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.