ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

ಮುಂಬೈನಲ್ಲಿ ಭಾರೀ ಮಳೆ: ಬಿಸಿಸಿಐ ಆಯ್ಕೆ ಸಮಿತಿ ಸುದ್ದಿಗೋಷ್ಠಿ ವಿಳಂಬ ಸಾಧ್ಯತೆ

ಮುಂಬೈನಲ್ಲಿ ಮಳೆಯ ಅವಾಂತರ ಹೆಚ್ಚಿದ್ದು ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯವಾಗಿದೆ. ಮುಂಬೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ. ಒಂದೊಮ್ಮೆ ಸುದ್ದಿಗೋಷ್ಠಿ ನಡೆಸಲು ಸಾಧ್ಯವಾಗದಿದ್ದರೆ ಬಿಸಿಸಿಐ ಅಧಿಕೃತ ಎಕ್ಸ್‌ ಖಾತೆಯಲ್ಲಿ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಮುಂಬೈನಲ್ಲಿ ಮಳೆ; ಭಾರತ ಏಷ್ಯಾ ಕಪ್‌ ತಂಡ ಪ್ರಕಟ ವಿಳಂಬ ಸಾಧ್ಯತೆ

Abhilash BC Abhilash BC Aug 19, 2025 12:25 PM

ಮುಂಬಯಿ: ಮಹಾರಾಷ್ಟ್ರದ ರಾಜಧಾನಿ ಮುಂಬೈಯಲ್ಲಿ ಮಳೆಯ(Mumbai rain) ಅವಾಂತರ ಹೆಚ್ಚಿದ್ದು ಉಪನಗರ ರೈಲು ಸೇವೆ, ವಿಮಾನ ಸೇವೆಗಳು ವ್ಯತ್ಯಯವಾಗಿವೆ. ಇದೇ ಕಾರಣದಿಂದ ಏಷ್ಯಾಕಪ್‌ ಟಿ20(Asia Cup 2025) ಟೂರ್ನಿಗೆ ಭಾರತ ತಂಡ(India Asia Cup squad announcement) ಪ್ರಕಟಗೊಳ್ಳುವ ಬಿಸಿಸಿಐ ಆಯ್ಕೆ ಸಮಿತಿಯ ಸುದ್ದಿಗೋಷ್ಠಿ ವಿಳಂಬವಾಗಲಿದೆ ಎಂದು ತಿಳಿದುಬಂದಿದೆ.

ಆಯ್ಕೆ ಸಮಿತಿಯ ಮುಖ್ಯಸ್ಥ ಅಜಿತ್‌ ಅಗರ್ಕರ್‌ ನೇತೃತ್ವದಲ್ಲಿ ಏಷ್ಯಾಕಪ್‌ ಟೂರ್ನಿಗೆ 15 ಆಟಗಾರರ ಪಟ್ಟಿ ಇಂದು ಪ್ರಕಟಗೊಳ್ಳಲಿದೆ. ಮುಂಬೈಯಲ್ಲಿ ಸುದ್ದಿಗೋಷ್ಠಿ ನಿಗದಿಯಾಗಿದೆ. ಮುಂಬೈನಲ್ಲಿ ಮಳೆಯ ಅವಾಂತರ ಹೆಚ್ಚಿದ್ದು ಸಾಮಾನ್ಯ ಜನಜೀವನದಲ್ಲಿ ಭಾರೀ ವ್ಯತ್ಯಯವಾಗಿದೆ. ಮುಂಬೈನ ಬಹುತೇಕ ರಸ್ತೆಗಳು ಜಲಾವೃತಗೊಂಡಿದೆ. ಒಂದೊಮ್ಮೆ ಸುದ್ದಿಗೋಷ್ಠಿ ನಡೆಸಲು ಸಾಧ್ಯವಾಗದಿದ್ದರೆ ಬಿಸಿಸಿಐ ಅಧಿಕೃತ ಎಕ್ಸ್‌ ಖಾತೆಯಲ್ಲಿ ತಂಡವನ್ನು ಪ್ರಕಟಿಸಲಾಗುವುದು ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಆರಂಭಿಕ 3 ಸ್ಥಾನಗಳಿಗೆ 6 ಆಟಗಾರರ ನಡುವೆ ಪೈಪೋಟಿ ಇದ್ದು, ರೇಸ್‌ನಲ್ಲಿ ಗಿಲ್‌, ಜೈಸ್ವಾಲ್‌, ಸುದರ್ಶನ್‌ ಆಯ್ಕೆ ಬಗ್ಗೆ ಕುತೂಹಲ ಕೆರಳಿಸಿದೆ. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್‌, ತಿಲಕ್‌ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಸ್ಪಿನ್‌ ವಿಭಾಗದಲ್ಲಿ ಅಕ್ಷರ್‌ ಪಟೇಲ್‌ ಜತೆ ಕುಲ್‌ದೀಪ್‌, ವರುಣ್‌ ಚಕ್ರವರ್ತಿ, ರವಿ ಬಿಷ್ಣೋಯ್‌ ನಡುವೆ ಪೈಪೋಟಿಯಿದೆ.

ಇನ್ನೊಂದೆಡೆ ಚಾಂಪಿಯನ್ಸ್‌ ಟ್ರೋಫಿಯಲ್ಲಿ ಕೀಪಿಂಗ್‌ ಹೊಣೆ ಹೊತ್ತಿದ್ದ ಕನ್ನಡಿಗ ಕೆ.ಎಲ್‌ ರಾಹುಲ್‌ಗೂ ಅವಕಾಶ ಸಿಗಲಿದೆಯಾ ಎಂದು ಕಾದು ನೋಡಬೇಕಿದೆ. 2022 ಟಿ20 ವಿಶ್ವಕಪ್‌ ಬಳಿಕ ರಾಹುಲ್‌ ಭಾರತ ಪರ ಟಿ20 ಆಡಿಲ್ಲ. ಇತ್ತೀಚೆಗೆ ಇಂಗ್ಲೆಂಡ್‌ ಪ್ರವಾಸದಲ್ಲಿ ರಾಹುಲ್‌ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದರು. ಕೊಹ್ಲಿ, ರೋಹಿತ್‌ ಮತ್ತು ಜಡೇಜಾ ನಿವೃತ್ತಿಯಿಂದ ತಂಡದಲ್ಲಿ ಅನುಭವಿ ಆಟಗಾರನಾಗಿ ರಾಹುಲ್‌ ಮಾತ್ರ ಕಾಣಿಸಿಕೊಂಡಿದ್ದಾರೆ. ಹೀಗಾಗಿ ಕೋಚ್‌ ಗಂಭೀರ್‌ ಅವರು ರಾಹುಲ್‌ಗೆ ಮಣೆ ಹಾಕಿದರೂ ಅಚ್ಚರಿಯಿಲ್ಲ.

ಇದನ್ನೂ ಓದಿ Asia Cup 2025: ಪಾಕಿಸ್ತಾನ ವಿರುದ್ಧ ಭಾರತ ತಂಡ ಆಡಬಾರದೆಂದ ಕೇದರ್‌ ಜಾಧವ್!