ಸ್ವಾತಂತ್ರ್ಯೋತ್ಸವ ಫೋಟೋ ಗ್ಯಾಲರಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala Case: ಧರ್ಮಸ್ಥಳ ಮೇಲಿನ ದಾಳಿಗೆ ಕಮ್ಯೂನಿಸ್ಟ್‌ ಎಡಬಿಡಂಗಿಗಳೇ ನೇರ ಕಾರಣ: ವಸಂತ್‌ ಗಿಳಿಯಾರ್‌

Vasanth Giliyar: ಬೆಂಗಳೂರಿನ ಟೌನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಸಾಮಾಜಿಕ ಹೋರಾಟಗಾರ ವಸಂತ್‌ ಗಿಳಿಯಾರ್‌ ಮಾತನಾಡಿದರು. ಧರ್ಮಸ್ಥಳದ ಹೋರಾಟ ಹಾದಿ ತಪ್ಪಿದ್ದು ಹೇಗೆ? ಮತ್ತು ಧರ್ಮಸ್ಥಳಕ್ಕೆ ಶತ್ರುಗಳು ಸೃಷ್ಟಿಯಾಗಿದ್ದು ಹೇಗೆ? ಎಂಬ ಬಗ್ಗೆ ಅವರು ವಿವರಿಸಿದ್ದಾರೆ.

ಧರ್ಮಸ್ಥಳ ಮೇಲಿನ ದಾಳಿಗೆ ಕಮ್ಯೂನಿಸ್ಟ್‌ ಎಡಬಿಡಂಗಿಗಳೇ ನೇರ ಕಾರಣ

Prabhakara R Prabhakara R Aug 19, 2025 2:25 PM

ಬೆಂಗಳೂರು: ಧರ್ಮಸ್ಥಳದಲ್ಲಿ ಲ್ಯಾಂಡ್‌ ಮಾಫಿಯಾ ಇದೆ ಎಂದು ವಿವಿಧ ಬಗೆಯ ಆರೋಪ ಮಾಡುತ್ತಿದ್ದಾರೆ. ಆದರೆ, ಧರ್ಮಸ್ಥಳದ ವಿರುದ್ಧ ಜನರನ್ನು ಎತ್ತಿಕಟ್ಟಲು ಕಮ್ಯುನಿಸ್ಟ್‌ ಎಡಬಿಡಂಗಿಗಳೇ ಮೂಲ ಕಾರಣ ಎಂದು ಸಾಮಾಜಿಕ ಹೋರಾಟಗಾರ ವಸಂತ್‌ ಗಿಳಿಯಾರ್‌ ಹೇಳಿದರು.

ನಗರದ ಟೌನ್ ಹಾಲ್‌ನಲ್ಲಿ ಸೋಮವಾರ ಆಯೋಜಿಸಿದ್ದ 'ಧರ್ಮಸ್ಥಳದ ಮೇಲಿನ ಷಡ್ಯಂತ್ರ; ಸತ್ಯ-ಮಿಥ್ಯಗಳ ಅನಾವರಣʼ ವಿಚಾರಗೋಷ್ಠಿಯಲ್ಲಿ ಮಾತನಾಡಿದರು.

ಧರ್ಮಸ್ಥಳದ ಹೋರಾಟ ಹಾದಿ ತಪ್ಪಿದ್ದು ಹೇಗೆ? ಮತ್ತು ಧರ್ಮಸ್ಥಳಕ್ಕೆ ಶತ್ರುಗಳು ಸೃಷ್ಟಿಯಾಗಿದ್ದು ಹೇಗೆ? ಎಂಬ ಬಗ್ಗೆ ವಿವರಿಸಿದ ಅವರು, ಧರ್ಮಸ್ಥಳದಲ್ಲಿ ಲ್ಯಾಂಡ್‌ ಮಾಫಿಯಾ ಇದೆ ಎಂದು ವಿವಿಧ ಬಗೆಯ ಆರೋಪ ಮಾಡುತ್ತಿದ್ದಾರೆ. 1974ಕ್ಕೂ ಹಿಂದೆ ಒಟ್ಟು 4872 ಎಕರೆ ಪಟ್ಟಾ ಜಾಗ ಮತ್ತು ಕುಮ್ಕಿ ಜಾಗ ಧರ್ಮಾಧಿಕಾರಿಗಳ ಕುಟುಂಬ ನೆಲ್ಯಾಡಿಬೀಡಿನವರದ್ದಾಗಿತ್ತು.



1974ರ ನಂತರ ಧರ್ಮಸ್ಥಳಕ್ಕೆ ದೊಡ್ಡಮಟ್ಟದ ಶತ್ರುಗಳು ಹುಟ್ಟಿಕೊಳ್ಳಲು ಕಾರಣವಿದೆ. ಭೂ ಸುಧಾರಣಾ ಕಾಯ್ದೆ ಜಾರಿಯಾದಾಗ ಧರ್ಮಸ್ಥಳದ ಮೇಲೆ ಡಿಕ್ಲೆರೇಷನ್‌ ಹಾಕಲು ಯಾರೂ ತಯಾರು ಇರಲಿಲ್ಲ. ಆಗ ಹೆಗ್ಗಡೆಯವರೇ ಡಿಕ್ಲೆರೇಷನ್‌ ಹಾಕಲು ಅಧಿಕಾರಿಗಳಿಗೆ ತಿಳಿಸಿ, ಭೂಮಿ ಅನುಭವದಲ್ಲಿರುವ ಕುಟುಂಬಗಳಿಗೆ ಭೂಮಿ ನೀಡಲು ನೆರವಾಗಿದ್ದರು. 3800 ಎಕರೆಯನ್ನು ಅರ್ಜಿ ಹಾಕಿದವರಿಗೆ ಧರ್ಮಸ್ಥಳದಿಂದ ಬಿಟ್ಟುಕೊಡಲಾಯಿತು.

ನಂತರ ವಿವಾದ ಶುರುವಾಗಿದ್ದು ಯಾಕೆಂದರೆ? 1974ರಿಂದ 15 ವರ್ಷ ಭೂಮಿಯನ್ನು ಯಾರಿಗೂ ಮಾರಾಟ ಮಾಡುವಂತಿರಲಿಲ್ಲ. ಆಗ ಅಲ್ಲಿ ಲ್ಯಾಂಡ್‌ ಮಾಫಿಯಾ ಸೃಷ್ಟಿಯಾಗಿತ್ತು. ಬೇರೆ ಉದ್ದೇಶಕ್ಕೆ ಮಾರಾಟ ಮಾಡುವ ಬದಲು ಧರ್ಮಸ್ಥಳಕ್ಕೆ ಭೂಮಿ ನೀಡಿ ಎಂದು ಹೆಗ್ಗಡೆ ಕುಟುಂಬದವರಿಂದ ಖರೀದಿಸಲಾಗಿತ್ತು. ಅದರ ಮೇಲೆ ಒಂದಷ್ಟು ಜನ ಆ ಜಾಗ ನಮ್ಮದು ಎಂದು ಹೋರಾಟ ಮಾಡಿದಾಗ, ಧರ್ಮಸ್ಥಳ ಹೆಗ್ಗಡೆಯವರ ವಿರುದ್ಧ ಎತ್ತಿಕಟ್ಟಲು ಕಮ್ಯುನಿಸ್ಟ್‌ ಎಡಬಿಡಂಗಿಗಳು ಬಂದರು ಎಂದು ಆರೋಪಿಸಿದರು.