#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

ISRO news: ತಾಂತ್ರಿಕ ದೋಷದಿಂದಾಗಿ ಕಕ್ಷೆ ಸೇರದ ಇಸ್ರೋ ಉಪಗ್ರಹ

ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ NVS-02 ನ್ಯಾವಿಗೇಷನ್‌ ಉಪಗ್ರಹ ಹೊತ್ತ GSLV-F15 ರಾಕೆಟ್‌ ಆಕಾಶಕ್ಕೆ ಚಿಮ್ಮಿತ್ತು. ಇಂದು ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ತಾಂತ್ರಿಕ ದೋಷದಿಂದಾಗಿ ಕಕ್ಷೆ ಸೇರದ ಇಸ್ರೋ ಉಪಗ್ರಹ

ಹರೀಶ್‌ ಕೇರ ಹರೀಶ್‌ ಕೇರ Feb 3, 2025 6:55 AM

ನವದೆಹಲಿ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ (ISRO news) ಇತ್ತೀಚೆಗೆ ಹಾರಿಸಿದ 100ನೇ ರಾಕೆಟ್ (Rocket) ಉಡಾವಣೆಯ ಕಾರ್ಯಾಚರಣೆಗೆ ತಾಂತ್ರಿಕ ದೋಷ (Technical glitch) ಎದುರಾಗಿದ್ದು, ಉಪಗ್ರಹವನ್ನು (Satellite) ಕಕ್ಷೆಗೆ ಸೇರಿಸುವ ಕಾರ್ಯ ವಿಳಂಬವಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಬುಧವಾರ ಉಡಾವಣೆಯಾದ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) 100ನೇ ರಾಕೆಟ್ NVS-02 ನ್ಯಾವಿಗೇಷನ್‌ ಉಪಗ್ರಹವನ್ನು ಹೊತ್ತು ಸಾಗಿತ್ತು. ಈ ಉಪಗ್ರಹ ಕಾರ್ಯಾಚರಣೆಯಲ್ಲಿ ತಾಂತ್ರಿಕ ದೋಷ ಕಂಡುಬಂದಿದೆ. ಜನವರಿ 29ರಂದು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ NVS-02 ನ್ಯಾವಿಗೇಷನ್‌ ಉಪಗ್ರಹ ಹೊತ್ತ GSLV-F15 ರಾಕೆಟ್‌ ಆಕಾಶಕ್ಕೆ ಚಿಮ್ಮಿತ್ತು. ಇಂದು ರಾಕೆಟ್‌ನಲ್ಲಿ ತಾಂತ್ರಿಕ ದೋಷ ಕಂಡುಬಂದಿದ್ದು, ಕಾರ್ಯಾಚರಣೆಗೆ ಅಡಚಣೆಯಾಗಿದೆ ಎಂದು ಇಸ್ರೋ ಮೂಲಗಳು ತಿಳಿಸಿವೆ.

ಉಪ್ರಗ್ರಹ ಉಡಾವಣೆಯ ಬಳಿಕ ಸೌರಫಲಕಗಳನ್ನು ಯಶಸ್ವಿಯಾಗಿ ನಿಯೋಜಿಸಲಾಗಿತ್ತು. ಅದರೆ ಕಕ್ಷೆಗೆ ಏರಿಸಲು ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್‌ ಅನುಮತಿಸುವ ಕವಾಟಗಳು ತೆರಯದ ಕಾರಣ ಕಕ್ಷೆಯ ಸುತ್ತುಗಳನ್ನು ಹೆಚ್ಚಿಸುವ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ. ಇದು ಮುಂದೆ ಗೊತ್ತುಪಡಿಸಿದ ನಿರ್ದಿಷ್ಟ ಕಕ್ಷೆಗೆ ಸೇರಿಸಬಹುದು ಅಥವಾ ತಾಂತ್ರಿಕ ಅಡಚಣೆ ಹೀಗೆ ಮುಂದುವರಿದರೆ ಕಾರ್ಯಾಚರಣೆ ಕೈಬಿಡಲೂಬಹುದು ಎಂದು ಇಸ್ರೋ ಮೂಲಗಳು ತಿಳಿಸಿವೆ.

ಕಾರ್ಯಾಚರಣೆಯು ತಾಂತ್ರಿಕ ದೋಷ ಎದುರಿಸಿದೆ ಎಂದು ಹೇಳಿದ ಇಸ್ರೋ ಈ ಬಗ್ಗೆ ತನ್ನ ವೆಬ್ ಸೈಟ್ ನಲ್ಲಿ ಮಾಹಿತಿ ನೀಡಿದೆ. "ಕಕ್ಷೆಯನ್ನು ಹೆಚ್ಚಿಸಲು ಥ್ರಸ್ಟರ್‌ಗಳನ್ನು ಹಾರಿಸಲು ಆಕ್ಸಿಡೈಸರ್ ಅನ್ನು ಪ್ರವೇಶಿಸುವ ಕವಾಟಗಳು ತೆರೆಯದ ಕಾರಣ ಉಪಗ್ರಹವನ್ನು ಗೊತ್ತುಪಡಿಸಿದ ಕಕ್ಷೆಯ ಸ್ಲಾಟ್‌ಗೆ ಇರಿಸುವ ಕಡೆಗೆ ಕಕ್ಷೆಯನ್ನು ಹೆಚ್ಚಿಸುವ ಕಾರ್ಯಾಚರಣೆಗಳನ್ನು ಕೈಗೊಳ್ಳಲು ಸಾಧ್ಯವಾಗಲಿಲ್ಲ" ಎಂದು ಹೇಳಿದೆ.



ಯು ಆರ್ ರಾವ್ ಉಪಗ್ರಹ ಕೇಂದ್ರದಿಂದ ನಿರ್ಮಿಸಲಾದ NVS-02 ಉಪಗ್ರಹವನ್ನು ಭಾರತದ ಮೇಲೆ ಗೊತ್ತುಪಡಿಸಿದ ಸ್ಥಳದಲ್ಲಿ ಭೂಸ್ಥಿರ ವೃತ್ತಾಕಾರದ ಕಕ್ಷೆಯಲ್ಲಿ ಇರಿಸಬೇಕಾಗಿತ್ತು. ಉಪಗ್ರಹದಲ್ಲಿರುವ ದ್ರವ ಎಂಜಿನ್ ಅತ್ಯುತ್ತಮವಾಗಿ ಕಾರ್ಯನಿರ್ವಹಿಸದ ಕಾರಣ, ಅದನ್ನು ಅದರ ಗೊತ್ತುಪಡಿಸಿದ ಕಕ್ಷೆಗೆ ಕಳುಹಿಸುವ ಪ್ರಯತ್ನ ವಿಳಂಬವಾಗಬಹುದು ಅಥವಾ ಸಂಪೂರ್ಣವಾಗಿ ಕೈಬಿಡಲೂಬಹುದು. ಪ್ರಸ್ತುತ ಉಪಗ್ರಹ ವ್ಯವಸ್ಥೆಗಳು ಆರೋಗ್ಯಕರವಾಗಿವೆ ಮತ್ತು ಉಪಗ್ರಹವು ಪ್ರಸ್ತುತ ಅಂಡಾಕಾರದ ಕಕ್ಷೆಯಲ್ಲಿದೆ. ಅಂಡಾಕಾರದ ಕಕ್ಷೆಯಲ್ಲಿ ಸಂಚರಣೆಗಾಗಿ ಉಪಗ್ರಹವನ್ನು ಬಳಸಿಕೊಳ್ಳಲು ಪರ್ಯಾಯ ಮಿಷನ್ ತಂತ್ರಗಳನ್ನು ರೂಪಿಸಲಾಗುತ್ತಿದೆ" ಎಂದು ಇಸ್ರೋ ಹೇಳಿದೆ.

ಭೂಮಿಯ ಸುತ್ತಲಿನ ಹತ್ತಿರದ ಬಿಂದುವಿಗೆ ಸುಮಾರು 170 ಕಿಲೋಮೀಟರ್‌ಗಳ ದೀರ್ಘವೃತ್ತದ ಕಕ್ಷೆಯಿಂದ ಮತ್ತು ಭೂಮಿಯಿಂದ ಅತ್ಯಂತ ದೂರದ ಬಿಂದುವಿನಲ್ಲಿ ಸುಮಾರು 36,577 ಕಿಲೋಮೀಟರ್‌ಗಳವರೆಗೆ ಉಪಗ್ರಹವು ತನ್ನ ಗೊತ್ತುಪಡಿಸಿದ ಕಾರ್ಯಗಳನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂದು ಬಾಹ್ಯಾಕಾಶ ತಜ್ಞರು ಹೇಳಿದ್ದಾರೆ.