ಫೋಟೋ ಗ್ಯಾಲರಿ ವಿಶ್ವವಾಣಿ ಪ್ರಾಪರ್ಟಿ ವಿದೇಶ ಫ್ಯಾಷನ್​ ಕ್ರೈಂ ಧಾರ್ಮಿಕ ಹವಾಮಾನ ವಿಶ್ವವಾಣಿ ಕ್ಲಬ್​​ ಹೌಸ್​ ಸಂಪಾದಕೀಯ ಉದ್ಯೋಗ

Dharmasthala case: ತಿಮರೋಡಿ ಗಡೀಪಾರು ವಿಚಾರದಲ್ಲಿ ಸುಳ್ಳು ಪ್ರಸಾರ ಮಾಡಿದ ಜಯಂತ್‌ ಮೇಲೆ ಕೇಸು

Mahesh Shetty Thimarodi: ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ, ಇದೊಂದು ಷಡ್ಯಂತ್ರ ಎಂದು ಟಿ.ಜಯಂತ ಒಂದು ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾರಿನ ಕುರಿತು ಜಿಲ್ಲಾಡಳಿತದ ಆದೇಶದ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ.

ತಿಮರೋಡಿ ಗಡೀಪಾರು ವಿಚಾರದಲ್ಲಿ ಸುಳ್ಳು ಪ್ರಸಾರ ಮಾಡಿದ ಜಯಂತ್‌ ಮೇಲೆ ಕೇಸು

-

ಹರೀಶ್‌ ಕೇರ ಹರೀಶ್‌ ಕೇರ Oct 15, 2025 12:50 PM

ದಕ್ಷಿಣಕನ್ನಡ: ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ (Dharmasthala case) ಸಂಬಂಧಿಸಿದಂತೆ ಸುಳ್ಳು ಮಾಹಿತಿ ನೀಡಿದ, ಧರ್ಮಸ್ಥಳ ವಿರೋಧಿ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ (Mahesh Shetty Thimarodi) ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ ಯೂಟ್ಯೂಬ್‌ನಲ್ಲಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದ ಅಡಿ ಟಿ. ಜಯಂತ್ ವಿರುದ್ಧ ಇದೀಗ ಎಫ್ಐಆರ್ ದಾಖಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಠಾಣೆಯಲ್ಲಿ ಪೊಲೀಸರು ಸ್ವಯಂ ಪ್ರೇರಿತವಾಗಿ FIR ದಾಖಲಿಸಿಕೊಂಡಿದ್ದಾರೆ.

ಮಹೇಶ್ ಶೆಟ್ಟಿ ತಿಮರೋಡಿ ಗಡಿಪಾರು ವಿಚಾರಕ್ಕೆ ಸಂಬಂಧಪಟ್ಟಂತೆ, ಇದೊಂದು ಷಡ್ಯಂತ್ರ ಎಂದು ಟಿ.ಜಯಂತ ಒಂದು ಯುಟ್ಯೂಬ್‌ ಚಾನೆಲ್‌ನಲ್ಲಿ ಪ್ರಸಾರ ಮಾಡಿದ್ದ. ಗಡಿಪಾರಿನ ಕುರಿತು ಜಿಲ್ಲಾಡಳಿತದ ಆದೇಶದ ಸತ್ಯತೆ ತಿಳಿದಿದ್ದರೂ ಕೂಡ ಜಯಂತ್ ಅಪೂರ್ಣವಾದ ಮಾಹಿತಿ ನೀಡಿದ್ದಾನೆ. ಇದೊಂದು ಷಡ್ಯಂತ್ರ ಎಂದು ಸುಳ್ಳು ಸುದ್ದಿ ಹರಿಬಿಟ್ಟ ಆರೋಪದ ಮೇರೆಗೆ ಬೆಳ್ತಂಗಡಿ ಠಾಣೆಯಲ್ಲಿ ಬಿಎನ್‌ಎಸ್ 353 (1) (b) ಅಡಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Mahesh shetty thimarodi: ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣ; ಮಹೇಶ್‌ ತಿಮರೋಡಿ ಜಾಮೀನು ಅರ್ಜಿ ವಜಾ

ಗೆಳತಿಗೆ ಮೆಸೇಜ್‌ ಮಾಡಿದ್ದನ್ನು ಪ್ರಶ್ನಿಸಿದವನಿಗೆ ಇರಿತ

ಬೆಂಗಳೂರು: ಬೆಂಗಳೂರಿನಲ್ಲಿ ಯುವತಿಗೆ ಮೆಸೇಜ್‌ ಮಾಡಿದ ವಿಚಾರಕ್ಕೆ ಸಂಬಂಧಿಸಿ ವಿದ್ಯಾರ್ಥಿಗಳ ನಡುವೆ ಗಲಾಟೆ (assault case) ನಡೆದಿದ್ದು ಚಾಕುವಿನಿಂದ ಒಬ್ಬನಿಗೆ ಇರಿಯಲಾಗಿದೆ. ಆರ್ ಟಿ ನಗರದಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದ ಘಟನೆ (Bengaluru crime news) ತಡವಾಗಿ ಬೆಳಕಿಗೆ ಬಂದಿದೆ. ಇನ್ಸ್ಟಾಗ್ರಾಮ್‌ನಲ್ಲಿ ಯುವತಿಯೊಬ್ಬಳಿಗೆ ಪ್ರಭು ಎನ್ನುವ ಸೀನಿಯರ್‌ ವಿದ್ಯಾರ್ಥಿ ನಿರಂತರವಾಗಿ ಮೆಸೇಜ್ ಮಾಡಿ ಕಾಟ ಕೊಡುತ್ತಿದ್ದ. ಇದನ್ನು ಪ್ರಶ್ನಿಸಿದ ಯುವತಿಯ ಕ್ಲಾಸ್‌ಮೇಟ್‌ ಗೆಳೆಯ ಇರಿತಕ್ಕೆ (stabbing) ಒಳಗಾಗಿದ್ದಾನೆ.

ಯುವತಿಗೆ ಇನ್ಸ್ಟಾಗ್ರಾಮ್‌ನಲ್ಲಿ ಮೆಸೇಜ್ ಮಾಡಿದ್ದನ್ನು ಆಕೆಯ ಸ್ನೇಹಿತ ಪ್ರಶ್ನಿಸಿದ್ದು, ಇವರಿಬ್ಬರೂ ಒಂದೇ ಕ್ಲಾಸ್‌ನಲ್ಲಿ ಕಲಿಯುತ್ತಿದ್ದಾರೆ. ಇದೇ ಸಿಟ್ಟನ್ನು ಇಟ್ಟುಕೊಂಡ ಆರೋಪಿ ಪ್ರಭು ತನ್ನ ಗೆಳೆಯನ ಜೊತೆಗೆ ಬೈಕ್‌ನಲ್ಲಿ ಬಂದು ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ. ಆರ್ ಟಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.