ಕೊಲ್ಹಾರ: ಪಟ್ಟಣದಲ್ಲಿ ಹಿಂದೂ ಹಾಗೂ ಮುಸ್ಲಿಂ ಬಾಂಧವರು ಅತ್ಯಂತ ವಿಜೃಂಭಣೆಯ ಜೊತೆಗೆ ಭಾವೈಕ್ಯತೆಯಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡಿದರು. ಮೌಲಾ ಅಲಿ, ಜಿಂಗಿ ಸಾಹೇಬ, ಹಟೇಲಬಾಷಾ, ಹಾಶಿಂಪೀರ, ಇಮಾಮಕಾಸಿಂ, ಹುಸೇನಆಲಂ, ಲಾಲಸಾಬಪೀರ್ ಒಟ್ಟು ಏಳು ದೇವರು ಹಾಗೂ ಐದು ಡೋಲಿಗಳ ಪರಸ್ಪರ ಸಮಾಗಮದ ಸನ್ನಿವೇಶ ನೆರೆದ ಜನರನ್ನು ಭಕ್ತಿಯ ಪರಾಕಾಷ್ಠೆಗೆ ಕೊಂಡೊಯ್ಯಿತು. ಅಲಾಯಿ ದೇವರುಗಳ ಡೋಲಿಗಳಿಗೆ ಭಕ್ತರು ಲೋಬಾನ ಹಾಕಿ ಉತ್ತತ್ತಿ ಎಸೆದು ತಮ್ಮ ಭಕ್ತಿಯನ್ನು ತೋರ್ಪಡಿಸಿದರು.
ಅಲಾಯಿ ಹೆಜ್ಜೆ ಹಾಕುವ ತಂಡಗಳು ಮಧ್ಯಾಹ್ನದಿಂದಲೇ ಅಲಾಯಿ ಕುಣಿತ ಕುಣಿದು ಸಂಭ್ರಮಿಸಿ ದರು. ಹಲಿಗೆ ಬಡಿತಕ್ಕೆ ತಕ್ಕಂತೆ ವಿವಿದ ಹೆಜ್ಜೆ ತಂಡಗಳ ಕುಣಿತ ಮನಮೋಹಕವಾಗಿತ್ತು. ಅಲಾಯಿ ಕುಣಿತದ ಸಂದರ್ಭದಲ್ಲಿ ವಿವಿಧ ಛದ್ಮವೇಷಗಳನ್ನು ಹಾಕಿದ್ದ ಯುವಕರು ಗಮನ ಸೆಳೆದರು.
ಇದನ್ನೂ ಓದಿ: Kolhar (Vijayapura) News; ಶಾಂತಿ ಸೌಹಾರ್ದತೆಯಿಂದ ಬಕ್ರೀದ್ ಆಚರಣೆ ಮಾಡಿ: ಪಿಎಸ್ಐ ಎಂ.ಬಿ ಬಿರಾದಾರ
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಕಲ್ಲು ದೇಸಾಯಿ ಮಾತನಾಡಿ ಕೊಲ್ಹಾರ ಪಟ್ಟಣದ ಮೊಹರಂ ಹಬ್ಬವು ಅವಳಿ ಜಿಲ್ಲೆಗೆ ಹೆಸರುವಾಸಿಯಾಗಿದೆ. ಪಟ್ಟಣದ ಹಿಂದು ಹಾಗೂ ಮುಸ್ಲಿಂ ಬಾಂಧವರು ಜೊತೆಯಾಗಿ ಈ ಹಬ್ಬವನ್ನು ಆಚರಿಸುವ ಮೂಲಕ ಭಾವೈಕ್ಯತೆಯ ಸಂದೇಶ ವನ್ನು ಸಾರುತ್ತೇವೆ, ಮುಂದಿನ ಪೀಳಿಗೆಯವರು ಕೂಡ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸ ಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ವಿನಿತ ಕುಮಾರ ದೇಸಾಯಿ, ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಮೊಹಮ್ಮದ್ ಸಲೀಂ ಅತ್ತಾರ, ಹಸನ ಪಕಾಲಿ, ಗೂಳಪ್ಪ ವಾಲಿಕಾರ, ಬಿ. ಡಿ ಕಲಾದಗಿ, ಶ್ರೀಶೈಲ ಮುಳವಾಡ, ಜಾವೀದ ಬೀಳಗಿ, ಎಂ.ಆರ್ ಕಲಾದಗಿ, ಇಕ್ಬಾಲ್ ನದಾಫ, ಹನೀಫ ಮಕಾನದಾರ, ಲಾಲಸಾಬ ಗಿರಗಾವಿ, ಅಬ್ಬು ಪಕಾಲಿ, ದಾದಾ ಕಂಕರಪೀರ, ಬಾಬು ಬಜಂತ್ರಿ, ಸುರೇಶ ಗಿಡ್ಡಪ್ಪಗೋಳ, ಇಸ್ಮಾಯಿಲ ನದಾಫ್, ದಶರಥ ಈಟಿ, ಮೋದಿನ ಪಕಾಲಿ ಸಹಿತ ಅನೇಕ ಹಿಂದು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮುಸ್ಲಿಂ ಹಿರಿಯ ಮುಖಂಡ ಆರ್.ಬಿ ಪಕಾಲಿ ಮಾತನಾಡಿ ಕೊಲ್ಹಾರ ಪಟ್ಟಣದಲ್ಲಿ ಮೊಹರಂ ಹಬ್ಬವನ್ನು ಸರ್ವರು ಸಂಭ್ರಮದಿಂದ ಆಚರಿಸುತ್ತೇವೆ, ಹಿಂದು ಹಾಗೂ ಮುಸ್ಲಿಂ ಬಾಂಧವರು ಪರಸ್ಪರ ಸಹೋದರತೆ ಸಾರುವ ಮೂಲಕ ಈ ಮೊಹರಂ ಹಬ್ಬದಲ್ಲಿ ಪಾಲ್ಗೊಂಡು ಸಂಭ್ರಮಿಸುತ್ತೇವೆ ಎಂದರು.
ಪಿಎಸ್ಐ ಎಂ.ಬಿ ಬಿರಾದಾರ ಸೂಕ್ತ ಪೊಲೀಸ್ ಬಂದೋಬಸ್ತ್ ಹಮ್ಮಿಕೊಂಡಿದ್ದರು.
ಈ ಸಂದರ್ಭದಲ್ಲಿ ಪಟ್ಟಣದ ಪ್ರಮುಖರಾದ ವಿನಿತ ಕುಮಾರ ದೇಸಾಯಿ, ಮಾಜಿ ಜಿ.ಪಂ ಸದಸ್ಯ ಕಲ್ಲು ದೇಸಾಯಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಬಿ ಪಕಾಲಿ, ಮೊಹಮ್ಮದ್ ಸಲೀಂ ಅತ್ತಾರ, ಹಸನ ಪಕಾಲಿ, ಗೂಳಪ್ಪ ವಾಲಿಕಾರ, ಬಿ. ಡಿ ಕಲಾದಗಿ, ಶ್ರೀಶೈಲ ಮುಳವಾಡ, ಜಾವೀದ ಬೀಳಗಿ, ಎಂ.ಆರ್ ಕಲಾದಗಿ, ಇಕ್ಬಾಲ್ ನದಾಫ, ಹನೀಪ ಮಕಾನದಾರ, ಲಾಲಸಾಬ ಗಿರಗಾವಿ, ಅಬ್ಬು ಪಕಾಲಿ, ದಾದಾ ಕಂಕರಪೀರ, ಬಾಬು ಬಜಂತ್ರಿ, ಸುರೇಶ ಗಿಡ್ಡಪ್ಪಗೋಳ, ಇಸ್ಮಾಯಿಲ ನದಾಫ್, ದಶರಥ ಈಟಿ, ಮೋದಿನ ಪಕಾಲಿ ಸಹಿತ ಅನೇಕ ಹಿಂದು ಹಾಗೂ ಮುಸ್ಲಿಂ ಸಮುದಾಯದ ಮುಖಂಡರು ಹಾಗೂ ಹಿರಿಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪಿಎಸ್ಐ ಎಂ.ಬಿ ಬಿರಾದಾರ ಸೂಕ್ತ ಪೊಲೀಸ್ ಬಂದೋಬಸ್ತ್ ಹಮ್ಮಿಕೊಂಡಿದ್ದರು.