ಇದೀಗ ಸರಕು ಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಮೆಟ್ರೋ ಚಿಂತನೆ
ದೆಹಲಿ ಮೆಟ್ರೋದಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಖಾಸಗಿ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅತಿವೇಗವಾಗಿ ವಸ್ತುಗಳನ್ನು ರವಾನಿಸುವ ಜತೆಗೆ ಮೆಟ್ರೋ ಸಂಸ್ಥೆಗಳಿಗೂ ಹೆಚ್ಚುವರಿ ಆದಾಯ ಬರುತ್ತಿದೆ. ಆದ್ದರಿಂದ ದೆಹಲಿ ಮಾದರಿಯನ್ನೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಅಳವಡಿಸುವ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿ ದ್ದು, ಶೀಘ್ರದಲ್ಲಿಯೇ ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.


ಅಪರ್ಣಾ ಎ.ಎಸ್. ಬೆಂಗಳೂರು
ದರ ಏರಿಕೆಯಿಂದ ಪ್ರಯಾಣಿಕ ಸಂಖ್ಯೆಯಲ್ಲಿ ತೀವ್ರ ಕುಸಿತ, ನಷ್ಟ ಸರಿದೂಗಿಸಲು ಕ್ರಮ
ನಮ್ಮ ಮೆಟ್ರೋ ದರ ಪರಿಷ್ಕರಣೆಯಲ್ಲಿ ಭಾರಿ ಏರಿಕೆಯಾದ ಪರಿಣಾಮ ಪ್ರಯಾಣಿಕರ ಸಂಖ್ಯೆ ಯಲ್ಲಿನ ಕುಸಿತದಿಂದಾಗುತ್ತಿರುವ ನಷ್ಟವನ್ನು ಸರಿದೂಗಿಸಲು ಇದೀಗ ಸರಕು ಸಾಗಣೆಯಲ್ಲಿ ತೊಡಗಿಸಿಕೊಳ್ಳಲು ಮೆಟ್ರೋ ಚಿಂತನೆ ನಡೆಸಿದೆ ಎನ್ನಲಾಗಿದೆ. ನಷ್ಟ ಸರಿದೂಗಿಸಲು ಕಳೆದ ತಿಂಗಳು ನಮ್ಮ ಮೆಟ್ರೋ ದರ ಪರಿಷ್ಕರಣೆ ಮಾಡಿತ್ತು. ಆದರೆ ದರ ಪರಿಷ್ಕರಣೆಯ ಭಾರಿ ಪ್ರಮಾಣದಲ್ಲಿ ದರ ಏರಿಕೆ ಮಾಡಿದ್ದರಿಂದ ಅನೇಕ ಮೆಟ್ರೋ ಪ್ರಯಾಣಿಕರು ಪರ್ಯಾಯ ಮಾರ್ಗವನ್ನು ಕಂಡು ಕೊಂಡಿದ್ದಾರೆ. ಪ್ರಯಾಣಿಕರ ಸಂಖ್ಯೆಯಲ್ಲಿ ಭಾರಿ ಕುಸಿತ ವಾಗಿದ್ದರಿಂದ, ದರ ಏರಿಕೆಯಿಂದ ಲಾಭದ ನಿರೀಕ್ಷೆಯಲ್ಲಿದ್ದ ಮೆಟ್ರೋ ಇನ್ನಷ್ಟು ನಷ್ಟ ಅನು ಭವಿಸುತ್ತಿರುವ ಮಾತುಗಳು ಕೇಳಿಬರುತ್ತಿದೆ.
ಈ ನಷ್ಟವನ್ನು ಸರಿದೂಗಿಸುವ ಉದ್ದೇಶದಿಂದ, ದೆಹಲಿ ಮಾದರಿಯಲ್ಲಿ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಸರಕು ಸಾಗಣೆಗೆ ಅವಕಾಶ ನೀಡುವ ಬಗ್ಗೆ ಚಿಂತನೆ ನಡೆಸಿದೆ ಎಂದು ತಿಳಿದು ಬಂದಿದೆ.
ಈಗಾಗಲೇ ದೆಹಲಿ ಮೆಟ್ರೋದಲ್ಲಿ ಸರಕು ಸಾಗಾಣಿಕೆಗೆ ಅವಕಾಶ ನೀಡಲಾಗಿದ್ದು, ಖಾಸಗಿ ಸಂಸ್ಥೆ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದರಿಂದ ಅತಿವೇಗವಾಗಿ ವಸ್ತುಗಳನ್ನು ರವಾನಿಸುವ ಜತೆಗೆ ಮೆಟ್ರೋ ಸಂಸ್ಥೆಗಳಿಗೂ ಹೆಚ್ಚುವರಿ ಆದಾಯ ಬರುತ್ತಿದೆ. ಆದ್ದರಿಂದ ದೆಹಲಿ ಮಾದರಿಯನ್ನೇ ಬೆಂಗಳೂರಿನ ನಮ್ಮ ಮೆಟ್ರೋದಲ್ಲಿಯೂ ಅಳವಡಿಸುವ ಬಗ್ಗೆ ಬಿಎಂಆರ್ ಸಿಎಲ್ ಅಧಿಕಾರಿಗಳು ಗಂಭೀರ ಚಿಂತನೆ ನಡೆಸಿದ್ದು, ಶೀಘ್ರದಲ್ಲಿಯೇ ಈ ಸಂಬಂಧ ಖಾಸಗಿ ಸಂಸ್ಥೆಗಳೊಂದಿಗೆ ಸಭೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: Namma Metro: ನಮ್ಮ ಮೆಟ್ರೋದಲ್ಲಿ ಕನ್ನಡೇತರರ ನೇಮಕಾತಿ, ಸೂಚನೆ ಹಿಂಪಡೆದ ಬಿಎಂಆರ್‌ಸಿಎಲ್
ದೇಶದಲ್ಲಿ ಮೊದಲ ಬಾರಿಗೆ ದೆಹಲಿಯ ಮೆಟ್ರೋ ನಗರ ಸರಕು ಸೇವೆಗಳಿಗೆ ಅವಕಾಶ ನೀಡಿದೆ. ಬ್ಲೂ ಡಾರ್ಟ್ ಖಾಸಗಿ ಕೊರಿಯರ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಅದೇ ರೀತಿ ಬೆಂಗಳೂ ರು ಮೆಟ್ರೋದಲ್ಲಿಯೂ ಅವಕಾಶ ನೀಡಲು ತೀರ್ಮಾನಿಸಲಾಗಿದೆ. ಒಂದು ವೇಳೆ ಎಲ್ಲವೂ ಅಂದು ಕೊಂಡಂತೆ ನಡೆದರೆ, ಮೆಟ್ರೋ ಶೀಘ್ರದಲ್ಲಿಯೇ ಲಾಜಿಸ್ಟಿP ಮತ್ತು ಇ-ಕಾಮರ್ಸ್ ಕಂಪನಿ ಗಳೊಂದಿಗೆ ಒಪ್ಪಂದ ಮಾಡಿಕೊಳ್ಳಲಿದೆ ಎಂದು ತಿಳಿದುಬಂದಿದೆ.
ವಾಣಿಜ್ಯ ಕೇಂದ್ರಗಳತ್ತ ಗಮನ
ಇದರೊಂದಿಗೆ ಆದಾಯವನ್ನು ದ್ವಿಗುಣಗೊಳಿಸುವ ಉದ್ದೇಶದಿಂದ ನಮ್ಮ ಮೆಟ್ರೋ ವಾಣಿಜ್ಯ ಬೆಳವಣಿಗೆಗಳನ್ನು ಹೆಚ್ಚಿಸಲು ಮುಂದಾಗಿದೆ. 30 ವರ್ಷಗಳ ಸಾರ್ವಜನಿಕ-ಖಾಸಗಿ ಸಹಭಾಗಿತ್ವ ಮಾದರಿಯಲ್ಲಿ 31,920 ಚದರ ಎಂಟಿ ಸೈಟ್‌ನಲ್ಲಿ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಮೇಲೆ ವಾಣಿಜ್ಯ ಸಂಕೀರ್ಣ ಮತ್ತು ಸಾರ್ವಜನಿಕ ಪಾರ್ಕಿಂಗ್ ಸೌಲಭ್ಯವನ್ನು ಪ್ರಸ್ತಾಪಿಸಿದೆ.
ಇದು ಕಚೇರಿ ಸ್ಥಳಗಳು, ಚಿಲ್ಲರೆ ಮಾರಾಟ ಮಳಿಗೆಗಳು ಮತ್ತು ಬಜೆಟ್ /ಬೊಟಿಕ್ ಹೋಟೆಲ್ ಆರಂಭಿಸಲು ಅವಕಾಶ ಕಲ್ಪಿಸಲಾಗಿದೆ. ಇನ್ನು ಕೆ.ಆರ್.ಪುರ ಮೆಟ್ರೋ ನಿಲ್ದಾಣದ ಬಳಿ 6730 ಚದರ ಮೀ (1.66 ಎಕರೆ) ಗ್ರೀನ್ ಫೀಲ್ಡ್ ಯೋಜನೆಯನ್ನು ಯೋಜಿಸಲಾಗಿದೆ.
ಬೈಯಪ್ಪನಹಳ್ಳಿ ಕೇಂದ್ರ ನಿಲ್ದಾಣ
ಹಲವು ಖಾಸಗಿ ಸಂಸ್ಥೆಗಳು ಕೆಆರ್.ಪುರ ಭಾಗದಲ್ಲಿ ತಮ್ಮ ಗೋದಾಮನ್ನು ಹೊಂದಿವೆ. ಆದರೆ ಅಲ್ಲಿಂದ ವಾಹನದ ಮೂಲಕ ಬೆಂಗಳೂರಿನ ಕೇಂದ್ರಕ್ಕೆ ತರಲು ಹೆಚ್ಚು ಸಮಯ ಹಿಡಿಯುತ್ತದೆ. ಇದರೊಂದಿಗೆ ಸಂಚಾರ ದಟ್ಟಣೆಯಿಂದ ಅನೇಕ ಸಮಸ್ಯೆಯಾಗುತ್ತಿದೆ. ಆದ್ದರಿಂದ ಬೈಯಪ್ಪನ ಹಳ್ಳಿಯನ್ನು ಸರಕು ಸಾಗಾಣಿಕೆಗೆ ಕೇಂದ್ರ ನಿಲ್ದಾಣವನ್ನಾಗಿ ಮಾಡಿಕೊಂಡು, ಅಲ್ಲಿಂದ ವಸ್ತುಗಳು ತಲುಪಬೇಕಿರುವ ವಿಳಾಸದ ಹತ್ತಿರದ ಮೆಟ್ರೋ ನಿಲ್ದಾಣಕ್ಕೆ ಸಾಗಾಣಿಕೆಯಾಗಲಿದೆ.
ಅಲ್ಲಿಂದ ಕೊರಿಯರ್ ಸಂಸ್ಥೆ ವಾಹನದ ಮೂಲಕ ತಲುಪಿಸಬಹುದು ಎನ್ನುವುದು ಮೆಟ್ರೋ ಅಧಿ ಕಾರಿಗಳ ಆಲೋಚನೆಯಾಗಿದೆ. ನಿರ್ದಿಷ್ಠ ರೈಲುಗಳ ಕೊನೆಯ ಬೋಗಿ ಗಳಲ್ಲಿ ಪ್ಯಾಕೇಜ್‌ಗಳನ್ನು, ಸರಕುಗಳನ್ನು ಸಾಗಿಸಲು ಬಳಕೆ ಮಾಡಿಕೊಳ್ಳುವುದು ಅಧಿಕಾರಿಗಳ ಲೆಕ್ಕಾಚಾರವಾಗಿದೆ. ಈ ಮೂಲಕ ನಗರದ ಲಾಜಿಸ್ಟಿಕ್ಸ್ ನ್ನು ಸುಧಾರಿಸುವ ಜತೆಗೆ ಸಂಚಾರದಟ್ಟಣೆಯ ನಿರ್ವಹಣೆ ಹಾಗೂ ಮಾಲಿನ್ಯವನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ.
ಸಾಗಾಣಿಕೆಯ ಉದ್ದೇಶವೇನು?
ಮೆಟ್ರೋಗೆ ಸರಕು ಸಾಗಾಣಿಕೆಯಿಂದ ಹೆಚ್ಚುವರಿ ಲಾಭ
ದರ ಏರಿಕೆಯಿಂದ ಆಗುತ್ತಿರುವ ನಷ್ಟವನ್ನು ಇಲ್ಲಿ ಸರಿದೂಗಿಸಬಹುದು
ಕೊರಿಯರ್, ಇ-ಕಾಮರ್ಸ್ ಸಂಸ್ಥೆಗಳು ವೇಗವಾಗಿ ವಸ್ತುಗಳನ್ನು ಒಂದು ಸ್ಥಳದಿಂದ ಇನ್ನೊಂದು ಕಡೆ ರವಾನಿಸಬಹುದು
ಸರಕು ವಾಹನಗಳ ಸಂಖ್ಯೆಯನ್ನು ತಗ್ಗಿಸುವ ಮೂಲಕ ಸಂಚಾರ ದಟ್ಟಣೆಯನ್ನು ನಿಯಂತ್ರಿಸಬಹುದು