ಥಾಣೆ: ತನ್ನ 15 ವರ್ಷದ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಪ್ರಿಯಕರನಿಗೆ ತಾಯಿಯೇ ಸಹಕರಿಸಿದ ಘಟನೆ (Physical abuse) ಮಹಾರಾಷ್ಟ್ರದ ಥಾಣೆಯಲ್ಲಿ ನಡೆದಿದ್ದು, ಪೊಲೀಸರು ಪೋಕ್ಸೊ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
2023ರ ನ.9ರಂದು ಸಂತ್ರಸ್ತ ಬಾಲಕಿಗೆ ತನ್ನ 38 ವರ್ಷದ ತಾಯಿ ಮತ್ತು 30 ವರ್ಷದ ಪ್ರಿಯಕರನ ನಡುವಿನ ಅನೈತಿಕ ಸಂಬಂಧದ ಬಗ್ಗೆ ತಿಳಿದಿತ್ತು. ಖಾಸಗಿ ಕ್ಷಣದಲ್ಲಿ ತೊಡಗಿದ್ದಾಗ ಬಾಲಕಿ ನೋಡಿದ್ದರಿಂದ ಆಕೆಯನ್ನು ಆರೋಪಿಗಳು ಬೆದರಿಸಿ ಥಳಿಸಿದ್ದರು. ಮಹಿಳೆಯ ನೆರವಿನಿಂದ 15 ವರ್ಷದ ಬಾಲಕಿಯ ಮೇಲೆ ವ್ಯಕ್ತಿ ಅತ್ಯಾಚಾರ ಎಸಗಿದ್ದಾನೆ ಎಂದು ಕಾಸರವಾಡವಲಿ ಪೊಲೀಸ್ ಠಾಣೆಯ ಅಧಿಕಾರಿ ತಿಳಿಸಿದ್ದಾರೆ.
ಪ್ರಕರಣಕ್ಕೆ ಸಂಬಂಧಿಸಿ ಬಾಲಕಿ ದೂರಿನ ಮೇರೆಗೆ ಪೋಕ್ಸೊ ಕಾಯ್ದೆಯಡಿ ಅತ್ಯಾಚಾರ, ಬೆದರಿಕೆ, ಹಲ್ಲೆ ಮತ್ತು ಇತರ ಅಪರಾಧಗಳಡಿ ಇತ್ತೀಚೆಗೆ ಪ್ರಕರಣ ದಾಖಲಾಗಿದೆ ಎಂದು ಬಾಲಕಿಯ ತಂದೆ ಮಾಹಿತಿ ನೀಡಿದ್ದಾರೆ. ಇನ್ನು ಇಷ್ಟು ವಿಳಂಬವಾಗಿ ಪ್ರಕರಣವನ್ನು ಏಕೆ ದಾಖಲಿಸಲಾಗಿದೆ ಎಂಬುದರ ಕುರಿತು ಪೊಲೀಸರು ಯಾವುದೇ ವಿವರಣೆ ನೀಡಿಲ್ಲ. ಪ್ರಕರಣದಲ್ಲಿ ಯಾರನ್ನೂ ಬಂಧಿಸಿಲ್ಲ, ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಈ ಸುದ್ದಿಯನ್ನೂ ಓದಿ | Gaza Ceasefire Deal: ಗಾಜಾ ಕದನ ವಿರಾಮ; 200 ಪ್ಯಾಲಸ್ತೀನ್ ಖೈದಿಗಳನ್ನು ಬಿಡುಗಡೆಗೊಳಿಸಿದ ಇಸ್ರೇಲ್
Viral Video : ಶಾಲೆಯಲ್ಲಿಯೇ ಶಿಕ್ಷಕಿ, ಆಕೆಯ ಪತಿಗೆ ಹಿಗ್ಗಾ ಮುಗ್ಗಾ ಥಳಿತ; ವೈರಲ್ ಆದ ವಿಡಿಯೋ

ಲಖನೌ: ಉತ್ತರ ಪ್ರದೇಶದ (Uttar Pradesh) ಷಹಜಾನ್‌ಪುರದಲ್ಲಿ ಅಮಾನವೀಯ ಘಟನೆ ಒಂದು ನಡೆದಿದ್ದು, ವ್ಯಕ್ತಿಗಳ ಗುಂಪೊಂದು ಶಾಲಾ ಶಿಕ್ಷಕಿ ಮತ್ತು ಅವರ ಪತಿ ಮೇಲೆ ಹಲ್ಲೆ ನಡೆಸಿದೆ. ಈ ಗುಂಪಿನಲ್ಲಿ ಶಾಲೆಯ ಇದರಲ್ಲಿ ಶಾಲೆಯ ಪ್ರಾಂಶುಪಾಲರು ಸೇರಿದ್ದರು ಎಂದು ತಿಳಿದು ಬಂದಿದೆ. ಸದ್ಯ ಹಲ್ಲೆಯ ದೃಶ್ಯ ಸೋಶಿಯಲ್ ಮೀಡಿಯಾದಲ್ಲಿ (Viral Video) ವೈರಲ್ ಆಗುತ್ತಿದೆ.
ವೀಡಿಯೊದಲ್ಲಿ, ಪುರುಷರ ಗುಂಪೊಂದು ಪುರುಷನ ಮೇಲೆ ದಾಳಿ ಮಾಡುವುದನ್ನು ಕಾಣಬಹುದು, ಆದರೆ ಮಹಿಳೆಯ ಧ್ವನಿಯು ಹಿನ್ನಲೆಯಲ್ಲಿ ಕೇಳಿ ಬರುತ್ತದೆ. ಆಕೆ ದಯವಿಟ್ಟು ನನ್ನ ಪತಿಗೆ ಹೊಡೆಯಬೇಡಿ ಎಂದು ವಿನಂತಿಸಿಕೊಳ್ಳುತ್ತಿರುವುದು ಕೇಳಿ ಬರುತ್ತದೆ. ಸಂತ್ರಸ್ತನನ್ನು ಶಾಲೆಯಲ್ಲಿ ಕೆಲಸ ಮಾಡುತ್ತಿದ್ದ ಶಿಕ್ಷಕಿಯ ಪತಿ ಎಂದು ಗುರುತಿಸಲಾಗಿದ್ದು, ಪತ್ನಿಯನ್ನು ಶಾಲೆಗೆ ಬಿಡಲು ಬಂದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.
ಈ ಸುದ್ದಿಯನ್ನೂ ಓದಿ : Viral Video: ಶಾರೂಕ್ ಖಾನ್ ಅಭಿನಯದ ಕುಛ್ ಕುಛ್ ಹೋತಾ ಹೈ ಹಾಡು ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾ ಸಚಿವರು
ಕೆಲ ಮಾಹಿತಿ ಪ್ರಕಾರ ಶಾಲೆಯ ಪ್ರಾಂಶುಪಾಲ ಸುಮಿತ್ ಪಾಠಕ್ ಮತ್ತು ಸಹ ಶಿಕ್ಷಕರು ಸೇರಿ ದಂಪತಿಯ ಮೇಲೆ ಹಲ್ಲೆ ಮಾಡಿದ್ದಾರೆ ಎನ್ನಲಾಗಿದೆ. ಹಲ್ಲೆಗೆ ನಿಖರವಾದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ, ಆದರೆ ಘಟನೆಯ ದೃಶ್ಯಗಳು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕ ಖಂಡನೆಗೆ ಕಾರಣವಾಗಿವೆ.ಅನೇಕರು ಕಾಮೆಂಟ್‌ಗಳ ವಿಭಾಗಕ್ಕೆ ಕಳವಳ ವ್ಯಕ್ತಪಡಿಸಿದ್ದಾರೆ. ಒಬ್ಬ ಬಳಕೆದಾರ, "ಇದು ಭಯಾನಕವಾಗಿದೆ" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೊಬ್ಬ ಇದು ಬಾಲಿವುಡ್ ಸಿನಿಮಾ ದೃಶ್ಯಗಳು ಎನ್ನುವಂತಿವೆ ಎಂದು ಹೇಳಿದ್ದಾರೆ.
ಇತ್ತೀಚೆಗೆ ರಾಜಸ್ಥಾನದ ಚಿತ್ತೋರ್‌ಗಢ ಜಿಲ್ಲೆಯಲ್ಲಿ ಹೆಡ್ ಮಾಸ್ಟರ್ ಒಬ್ರು ಶಾಲೆಯಲ್ಲಿಯೇ ಲೇಡಿ ಟೀಚರ್ ಜೊತೆ ರೊಮಾನ್ಸ್ ನಡೆಸಿದ್ದ ಘಟನೆ ವೈರಲ್ ಆಗಿತ್ತು. ಈ ದೃಶ್ಯ ಅಲ್ಲಿದ್ದ ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಅದನ್ನು ಸೋಶಿಯಲ್ ಮೀಡಿಯಾದಲ್ಲಿ ಯಾರೋ ಹರಿಬಿಟ್ಟಿದ್ದರು. ಆ ಶಿಕ್ಷಕರ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು.