#ದೆಹಲಿರಿಸಲ್ಟ್​ ಧಾರ್ಮಿಕ ವಿಶ್ವವಾಣಿ ಕ್ಲಬ್‌ ಹೌಸ್‌ ರಾಜಕೀಯ ಸಂಪಾದಕೀಯ ಫ್ಯಾಷನ್‌ ಲೋಕ ಉದ್ಯೋಗ

Viral Video: ಶಾರೂಕ್‌ ಖಾನ್‌ ಅಭಿನಯದ ಕುಛ್‌ ಕುಛ್‌ ಹೋತಾ ಹೈ ಹಾಡು ಹಾಡಿ ಸಂಭ್ರಮಿಸಿದ ಇಂಡೋನೇಷ್ಯಾ ಸಚಿವರು

ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಪ್ರಬೋ ಸುಬಿಯಂತೋ ಮತ್ತು ಅವರ ಜತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, ಇದರ ವಿಡಿಯೊವೊಂದು ಭಾರೀ ವೈರಲ್‌(Viral Video) ಆಗುತ್ತಿದೆ.

ʻಕುಛ್‌ ಕುಛ್‌ ಹೋತಾ ಹೈʼ  ಹಾಡು  ಹಾಡಿದ ಇಂಡೋನೇಷ್ಯಾ ಸಚಿವರು-ವಿಡಿಯೊ ಫುಲ್‌ ವೈರಲ್‌

Indonesia Delegation

Profile Rakshita Karkera Jan 26, 2025 4:14 PM

ನವದೆಹಲಿ: ಇಂದು ದೇಶದೆಲ್ಲೆಡೆ ಗಣರಾಜ್ಯೋತ್ಸವದ ಸಂಭ್ರಮಾಚರಣೆ (76th Republic Day)ಯಲ್ಲಿದೆ. ಪ್ರತಿಬಾರಿಯಂತೆ ಈ ಬಾರಿ ಗಣರಾಜ್ಯೋತ್ಸವ ಅತಿಥಿಯಾಗಿ ಇಂಡೋನೇಷ್ಯಾ ಅಧ್ಯಕ್ಷ ಪ್ರಬೋ ಸುಬಿಯಂತೋ(Prabowo Subianto) ಆಗಮಿಸಿದ್ದಾರೆ. ಇದೇ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿರುವ ಪ್ರಬೋ ಸುಬಿಯಂತೋ ಮತ್ತು ಅವರ ಜತೆಗಿದ್ದ ಅಧಿಕಾರಿಗಳ ನಿಯೋಗಕ್ಕೆ ರಾಷ್ಟ್ರಪತಿ ಭವನ(Rashtrapathi Bhavan)ದಲ್ಲಿ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಅಧಿಕಾರಿಗಳ ತಂಡ ಬಾಲಿವುಡ್‌ನ ಜನಪ್ರಿಯ ಸಿನಿಮಾದ ಹಾಡೊಂದನ್ನು ಹಾಡಿದ್ದು, ಇದರ ವಿಡಿಯೊವೊಂದು ಭಾರೀ ವೈರಲ್‌(Viral Video) ಆಗುತ್ತಿದೆ.



ಇಂಡೋನೇಷ್ಯಾ ಅಧಿಕಾರಿಗಳಿಗಾಗಿ ರಾಷ್ಟ್ರಪತಿ ದ್ರೌಪದಿ ಮುರ್ಮು ನಿನ್ನೆ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಕರಣ್‌ ಜೋಹರ್‌ ನಿರ್ದೇಶನದ 1998ರಲ್ಲಿ ಬಿಡುಗಡೆಯಾದ ಕುಛ್‌ ಕುಛ್‌ ಹೋತಾ ಹೇ ಸಿನಿಮಾದ ಹಾಡೊಂದನ್ನು ಇಂಡೋನೇಷ್ಯಾದ ಸಚಿವರು ಮತ್ತು ಅಧಿಕಾರಿಗಳ ನಿಯೋಗ ಹಾಡಿ ಸಂಭ್ರಮಿಸಿದ್ದಾರೆ. ಖ್ಯಾತ ಹಿನ್ನೆಲೆ ಗಾಯಕರಾದ ಉದಿತ್‌ ನಾರಾಯಣ್‌ ಮತ್ತು ಅಲ್ಕಾ ಯಾಗ್ನಿಕ್‌ ಹಾಡಿರುವ ಕುಛ್‌ ಕುಛ್‌ ಹೋತಾ ಹೈ ಹಾಡನ್ನು ಹಾಡಿದ್ದಾರೆ. ಈ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.

ಈ ಸುದ್ದಿಯನ್ನೂ ಓದಿ: Republic Day: ಧ್ವಜಾರೋಹಣದ ವೇಳೆ ಎಡವಟ್ಟು; ಹಗ್ಗ ತುಂಡಾಗಿ ಕುಸಿದು ಬಿದ್ದ ದೇಶದ ಎರಡನೇ ಬೃಹತ್‌ ರಾಷ್ಟ್ರ ಧ್ವಜ, ಮತ್ತೊಂದೆಡೆ ಕಾಡುಕೋಣ ಎಂಟ್ರಿ!

ANI ಹಂಚಿಕೊಂಡಿರುವ ಈ ವೀಡಿಯೊದಲ್ಲಿ, ಸಚಿವರು ಸೂಟ್‌ ಮತ್ತು ಸಾಂಪ್ರದಾಯಿಕ ಇಂಡೋನೇಷ್ಯಾದ ಶಿರಸ್ತ್ರಾಣವಾದ ಸಾಂಗ್‌ಕಾಕ್ ಅನ್ನು ಧರಿಸಿ, ಐಕಾನಿಕ್ ಹಾಡನ್ನು ಹಾಡುತ್ತಿರುವುದನ್ನು ಕಾಣಬಹುದಾಗಿದೆ.

ದ್ವಿಪಕ್ಷೀಯ ಸಂಬಂಧ ಮತ್ತಷ್ಟು ಬಲ

ನಿನ್ನೆ ಭಾರತಕ್ಕೆ ಆಗಮಿಸಿರುವ ಸುಬಿಯಾಂಟೊ ಮತ್ತು ಅವರ ನಿಯೋಗ ಶನಿವಾರ ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ನಿರ್ಣಾಯಕ ಚರ್ಚೆಗಳನ್ನು ನಡೆಸಿದರು. ಮಾತುಕತೆಗಳು ಎರಡು ರಾಷ್ಟ್ರಗಳ ನಡುವಿನ ರಾಜಕೀಯ, ರಕ್ಷಣೆ ಮತ್ತು ಭದ್ರತಾ ಸಂಬಂಧಗಳನ್ನು ಬಲಪಡಿಸುವತ್ತ ಕೇಂದ್ರೀಕೃತವಾಗಿದ್ದವು.