ಚಿಕ್ಕಬಳ್ಳಾಪುರ : ಜನಸಾಮಾನ್ಯರ ಆರೋಗ್ಯ ಸುಧಾರಣೆಯಲ್ಲಿ ಸರಕಾರಿ ಆಸ್ಪತ್ರೆಗಳ ಸೇವೆ ಎಷ್ಟು ಮುಖ್ಯವೋ,ಅಷ್ಟೇ ಪ್ರಮಾಣದಲ್ಲಿ ಖಾಸಗಿ ಆಸ್ಪತ್ರೆಗಳ ವೈದ್ಯರು ಮತ್ತು ಆರೋಗ್ಯ ಸಿಬ್ಬಂದಿಯ ಕೊಡುಗೆಯೂ ಇದೆ ಎಂದು ಆದಿಚುಂಚನಗಿರಿ ಮಹಾಸಂಸ್ಥಾನಮಠದ ಜಗದ್ಗುರು ನಿರ್ಮಲಾ ನಂದನಾಥ ಮಹಾಸ್ವಾಮೀಜಿ ತಿಳಿಸಿದರು.
ನಗರದ ಕೆನರಾಬ್ಯಾಂಕ್ ಹಿಂಭಾಗದ ರಸ್ತೆಯಲ್ಲಿ ಪ್ರಾರಂಭವಾಗಿರುವ ಸಿಧ್ವಿನ್ ನೂತನ ಆಸ್ಪತ್ರೆ ಉದ್ಘಾಟಿಸಿ ಮಾತನಾಡಿದರು.
ನಾಗರೀಕ ಸಮಾಜ ಬೆಳವಣಿಗೆ ಆಗುತ್ತಿರುವಂತೆ ಜನಸಂಖ್ಯೆಯೂ ಹೆಚ್ಚುತ್ತಿದೆ. ಜನಸಂಖ್ಯೆಗೆ ಅನುಗುಣವಾಗಿ ಸರಕಾರವೇ ಎಲ್ಲರಿಗೂ ಆರೋಗ್ಯ ಸೇವೆಯನ್ನು ಒದಗಿಸಲು ಸಾಧ್ಯವಿಲ್ಲದಂತಹ ಪರಿಸ್ಥಿತಿಯಿದೆ.ಇದನ್ನು ಮನಗಂಡೇ ಖಾಸಗಿ ಕ್ಲಿನಿಕ್, ಆಸ್ಪತ್ರೆ, ವೈದ್ಯಕೀಯ ಸಂಶೋಧನಾ ಸಂಸ್ಥೆ ಗಳು ತಲೆಯೆತ್ತುತ್ತಿವೆ. ಇವುಗಳಿಂದಾಗಿ ಸರಕಾರಿ ವೈದ್ಯರು ಮತ್ತು ಆಸ್ಪತ್ರೆ ಸೇವೆಗಳ ಮೇಲಿನ ಒತ್ತಡ ಕಡಿಮೆಯಾಗಿದೆ ಎಂದರು.
ಇದನ್ನೂ ಓದಿ:Chikkaballapur News: ಧರ್ಮಸ್ಥಳ ಕ್ಷೇತ್ರದ ಪಾವಿತ್ರ್ಯತೆ ಉಳಿಸಿ : ಕೆ.ಎಚ್.ಪದ್ಮರಾಜ್ ಜೈನ್
ಚಿಕ್ಕಬಳ್ಳಾಪುರ ನಗರದಲ್ಲಿ ನೂತನವಾಗಿ ವೈದ್ಯಕೀಯ ಸೇವೆಗಳನ್ನು ಸಾರ್ವಜನಿಕರಿಗೆ ಒದಗಿಸಲು ಮುಂದಾಗಿರುವ ಸಿಧ್ವಿನ್ ಆಸ್ಪತ್ರೆಯ ಆಡಳಿತ ಮಂಡಳಿ ಗ್ರಾಮೀಣ ಪ್ರದೇಶದ ಜನತೆಯ ಆಶಾ ಕಿರಣವಾಗಿ ಬೆಳೆಯಲಿ.ಗುಣಮಟ್ಟದ ಸೇವೆಗೆ ಆದ್ಯತೆ ನೀಡಿ ಆರೋಗ್ಯ ಸುಧಾರಣೆ ಬಯಸು ಬರುವ ರೋಗಿಗಳ ಪಾಲಿಗೆ ಸಂಜೀವಿನಿ ರೀತಿ ಕೆಲಸ ಮಾಡಲಿ.ವೈದ್ಯೋನಾರೇಯಣೋ ಹರಿ ಎಂಬ ಉಕ್ತಿಗೆ ಕಳಂಕ ಬರದಂತೆ ಆರೋಗ್ಯ ಸೇವೆಯಲ್ಲಿ ಉತ್ತರೋತ್ತರ ಅಭಿವೃದ್ಧಿ ಕಾಣಲಿ ಎಂದು ಹಾರೈಸಿದರು.

ಸಿಧ್ವಿನ್ ಆಸ್ಪತ್ರೆಯ ಎಂ.ಡಿ.ಡಾ.ಮೇಘನಾ ಮಾತನಾಡಿ ನಮ್ಮ ಆಸ್ಪತ್ರೆಯಲ್ಲಿ ಒಪಿಡಿ ಸೇವೆಗಳು ಸೇರಿದಂತೆ ಶಸ್ತ್ರ ಚಿಕಿತ್ಸೆಯ ತನಕ ಎಲ್ಲಾ ಸೇವೆಗಳು ಒಂದೇ ಸೂರಿನಡಿ ಲಭ್ಯವಿದೆ. ಸಮರ್ಥ ವೈದ್ಯಕೀಯ ಸಿಬ್ಬಂದಿ, ಸೇವಾ ಮನೋಭಾವದ ದಾದಿಯರು, ವಾರ್ಡ್ ಬಾಯ್ಸ್ಗಳನ್ನು ಒಳಗೊಂಡಿ ರುವ ನಮ್ಮ ಆಸ್ಪತ್ರೆಯು ಈ ಭಾಗದ ಜನತೆಗೆ ವರದಾನದಂತೆ ಪ್ರಾರಂಭವಾಗಿದೆ. ಬೆಂಗಳೂರಿನಲ್ಲಿ ದೊರೆಯಬಹುದಾದ ಎಲ್ಲಾ ಗುಣಮಟ್ಟದ ಸೇವೆಗಳನ್ನು ನಮ್ಮಲ್ಲಿ ರಿಯಾಯಿತಿ ದರದಲ್ಲಿ ಒದಗಿಸಲು ಸಂಕಲ್ಪ ಮಾಡಲಾಗಿದೆ.ನಾಗರೀಕರು ನಮ್ಮ ಆಸ್ಪತ್ರೆಗೆ ಬಂದು ಗುಣಮಟ್ಟದ ಸೇವೆ ಯನ್ನು ಪಡೆಯಬಹುದು ಎಂದು ಮನವಿ ಮಾಡಿದರು.
ನೂತನ ಆಸ್ಪತ್ರೆ ಉದ್ಘಾಟನೆಯಲ್ಲಿ ಎಡಿಸಿ ಡಾ.ಭಾಸ್ಕರ್, ತಹಶೀಲ್ದಾರ್ ರಶ್ಮಿ, ಎಎಸ್ಪಿ ಜಗನ್ನಾಥ್ ರೈ,ಆರ್‌ಎಂಒ ಡಾ.ರಮೇಶ್, ಮಂಜುನಾಥ್ ಆಸ್ಪತ್ರೆಯ ಡಾ.ಮಂಜುನಾಥ್, ಮಾವು ಅಭಿವೃದ್ಧಿ ಮಂಡಳಿ ಮಾಜಿ ನಿರ್ದೇಶಕ ಕೆ.ವಿ.ನಾಗರಾಜ್,ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿ ಶುಭ ಕೋರಿದರು.
ಈ ವೇಳೆ ವೈದ್ಯರಾದ ತುರ್ತು ಚಿಕಿತ್ಸಾ ವಿಭಾಗದ ವೈದ್ಯರಾದ ಡಾ.ಅಜಯ್, ಸರ್ಜನ್ ಡಾ. ಅರುಣ್ ಕುಮಾರ್, ಡಾ.ಗಣೇಶ್, ಡಾ.ಹರಿಣಿ, ಡಾ.ಶೋಭ ಮತ್ತಿತರರು ಇದ್ದರು.