Sandhya Hegde Column: ಪಾದುಕಾ ಪುರಾಣ !
ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಅಂದು ಅಮ್ಮ, ನಮ್ಮ ಎರಡೂ ಜನ ಮಕ್ಕಳಿಗೂ ಶಾಲೆಗೆ ರಜೆ ಹಾಕಿಸಿ ಎಲ್ಲಿಗೋ ಕರೆದುಕೊಂಡು ಹೋಗು ತ್ತೇನೆಂದು ಘೋಷಿಸಿದ್ದರು. ಅಮ್ಮ ಬೆಳಿಗ್ಗೆ ಎಷ್ಟು ಗಂಟೆಗೆ ಎದ್ದಿದ್ದರೋ ಗೊತ್ತಿಲ್ಲ. ಇವತ್ತಂತೂ ನಮ್ಮನ್ನು 6.00 ಗಂಟೆಗೆಲ್ಲ ಎಬ್ಬಿಸಿದ್ದರು. ಇನ್ನೂ ನಸುಕು ಹರಿದಿರಲಿಲ್ಲ. ಬಚ್ಚಲು ಮನೆ ಹಂಡೆಯಲ್ಲಿ ಬಿಸಿನೀರು ಕಾಯುತ್ತಿತ್ತು. ಅಂತೂ ನಮ್ಮ ಮೈ ಬಿಸಿ ನೀರಿನ ಹಿತವನ್ನು ಅನುಭವಿಸಲು ಸಾಧ್ಯ ವಾಗುವುದಕ್ಕೆ ಮುನ್ನ ಸ್ನಾನವೇ ಮುಗಿದು ಹೋಗಿತ್ತು.


ಸಂಧ್ಯಾ ಹೆಗಡೆ, ಹೊಡ್ಡಹೊಂಡ
ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಮಾಡಿತು! ಯಾವುದಕ್ಕೆಲ್ಲ ಅಭಿಮುಖವಾಗುವಂತೆ ಮಾಡಿತು! ಕೊನೆಯ ಮಾತು ಹೇಳಬೇಕೆ ನಿಸುವುದು -‘ಇಲ್ಲಿ ಯಾವುದೂ ನಿರರ್ಥಕವಲ್ಲ, ಯಾವುದೂ ತನ್ನಷ್ಟಕ್ಕೆ ತಾನು ಅರ್ಥವು ಳ್ಳದ್ದೂ ಅಲ್ಲ’ ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಅಂದು ಅಮ್ಮ, ನಮ್ಮ ಎರಡೂ ಜನ ಮಕ್ಕಳಿಗೂ ಶಾಲೆಗೆ ರಜೆ ಹಾಕಿಸಿ ಎಲ್ಲಿಗೋ ಕರೆದುಕೊಂಡು ಹೋಗು ತ್ತೇನೆಂದು ಘೋಷಿಸಿದ್ದರು. ಅಮ್ಮ ಬೆಳಿಗ್ಗೆ ಎಷ್ಟು ಗಂಟೆಗೆ ಎದ್ದಿದ್ದರೋ ಗೊತ್ತಿಲ್ಲ. ಇವತ್ತಂತೂ ನಮ್ಮನ್ನು 6.00 ಗಂಟೆಗೆಲ್ಲ ಎಬ್ಬಿಸಿದ್ದರು. ಇನ್ನೂ ನಸುಕು ಹರಿದಿರಲಿಲ್ಲ. ಬಚ್ಚಲು ಮನೆ ಹಂಡೆಯಲ್ಲಿ ಬಿಸಿನೀರು ಕಾಯುತ್ತಿತ್ತು. ಅಂತೂ ನಮ್ಮ ಮೈ ಬಿಸಿ ನೀರಿನ ಹಿತವನ್ನು ಅನುಭವಿ ಸಲು ಸಾಧ್ಯವಾಗುವುದಕ್ಕೆ ಮುನ್ನ ಸ್ನಾನವೇ ಮುಗಿದು ಹೋಗಿತ್ತು.
ಆಮೇಲೆ ನಾವು ಏಳು ಗಂಟೆಗೆಲ್ಲ ರೆಡಿಯಾಗಿ ಹೊರಟಿದ್ದು ನಮ್ಮೂರಿನ ದೇವಸ್ಥಾನಕ್ಕೆ! ಅಮ್ಮ ಅಷ್ಟು ಬೇಗ ಎದ್ದು ತಯಾರಾಗಿ ಹೊರಟಿದ್ದು ದೇವಸ್ಥಾನದಲ್ಲಿ ಎಷ್ಟೋ ವರ್ಷಗಳ ನಂತರ ಬಂದ ಸ್ವಾಮೀಜಿಗಳ ಪಾದ ಪೂಜೆ ಮಾಡುವುದನ್ನು ನೋಡಬೇಕು ಎಂದು. ಅವರಿಂದ ಆಶೀರ್ವಾದ ಪಡೆಯಬೇಕು ಎಂದು.
ದೇವಸ್ಥಾನದಲ್ಲಿ ತುಂಬಾ ಜನ ಸೇರಿದ್ದರು. ಮದುವೆ, ಮುಂಜಿ ಮತ್ತಿತರ ಸಮಾರಂಭಗಳಲ್ಲಿ ಹೆಂಚು ಕಿತ್ತು ಹೋಗುವ ಹಾಗೆ ಕೂಗುವ, ನಗುವ, ಹಾರಾಡುವ, ಸುದ್ದಿ ಹೇಳುವ ಸರಬರ ಓಡಾಡುವ ದೊಡ್ಡವರು ಈಗ ಯಾಕೆ ಇಷ್ಟು ಮೌನವಾಗಿದ್ದಾರೆ ಎಂದು ತಿಳಿಯಲಿಲ್ಲ. ಅಲ್ಲಿರುವ ಮಕ್ಕಳು ಮಾತಾಡಿದರೆ ಸುಮ್ಮನೆ ಇರಬೇಕೆಂದು ಕಣ್ಣಲ್ಲೇ ಗದರಿಸಲಾಗುತ್ತಿತ್ತು. ನಾನು ಮತ್ತು ನನ್ನ ತಮ್ಮಂದಿರು ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡೆವು.
ಇದನ್ನೂ ಓದಿ: Vinayak V Bhat Column: ಕಾಲಚಕ್ರದೊಳಗೊಂದು ಭರವಸೆಯ ಕಾಲ: ಯುಗಾದಿ
ದೊಡ್ಡವರು ಸುಮ್ಮನಿದ್ದಾರೆ ಎಂದರೆ ಬಂದವರು ಬಹಳ ದೊಡ್ಡವರೇ ಇರಬೇಕೆಂದು ನಿರ್ಧರಿಸಿ ದೆವು. ನಾವು ಸಾಲಾಗಿ ಕುಳಿತಿದ್ದೆವು. ಸೂಜಿ ಬಿದ್ದರೆ ಸಪ್ಪಳ ಕೇಳುವಷ್ಟು ಮೌನವಿತ್ತು. ನಿಧಾನಕ್ಕೆ ಗಂಟೆಯ ಶಬ್ದ ಕಿವಿ ತುಂಬತೊಡಗಿತು. ನೋಡುತ್ತಿದ್ದಂತೆಯೇ ಗುರುಗಳ ಪಾದುಕೆಯನ್ನು ತೆಗೆದುಕೊಂಡು ಅವಕ್ಕೆ ಹೂವು, ಗಂಧ, ಅಕ್ಷತೆ ಎಲ್ಲವನ್ನು ಹಾಕಿ ಪೂಜೆ ಮಾಡಲು ಆರಂಭಿಸ ಲಾಯಿತು.
ನಮ್ಮ ಅತ್ಯಂತ ಆಪ್ತರೂ ಪರಿಚಯದವರೂ ಆದ ದಂಪತಿ, ಗುರುಗಳ ಪಾದ ಪೂಜೆ ಮಾಡಲು ಕುಳಿತುಕೊಂಡಿದ್ದರು. ಶಾಸೋಕ್ತವಾಗಿ, ವಿಧ್ಯುಕ್ತವಾಗಿ ಮರದ ಪಾದುಕೆಗಳಿಗೆ ಪೂಜೆ ಸಲ್ಲಿಸ ಲಾಯಿತು. ಆಗ ನನಗೆ ಎಂಟು ವರ್ಷ ವಯಸ್ಸು. ಮೂರನೇ ತರಗತಿ ಓದುತ್ತಿದ್ದೆ. ಕಣ್ಣ ಮುಂದೆ ನಡೆಯುತ್ತಿರುವುದು ಏನೆಂದು ತಕ್ಷಣಕ್ಕೆ ವಿವರವಾಗಿ ಅರ್ಥವಾಗುವ ವಯಸ್ಸಲ್ಲವದು. ಅದೂ ಅಲ್ಲದೆ ನಾನೂ ನನ್ನ ತಮ್ಮಂದಿರೂ ಮೊಟ್ಟಮೊದಲ ಬಾರಿಗೆ ಪಾದಪೂಜೆಯನ್ನು ನೋಡು ತ್ತಿದ್ದೆವು.
ದೊಡ್ಡವರ ಶ್ರದ್ಧಾಭಕ್ತಿ ನಮ್ಮೊಳಗೆ ಸುರಿಸುತೋ ಇಲ್ಲವೋ ಕಾಣೆ. ಆದರೆ ಅವರು ಮಾಡಿದಂತೆ ಮಾಡುವ, ಸನ್ನಿವೇಶದ ಗಂಭೀರತೆಯನ್ನು ಅರ್ಥೈಸಿಕೊಳ್ಳುವ ಸಾಮರ್ಥ್ಯ ನಮ್ಮಲ್ಲಿ ಬೆಳೆಯು ತ್ತಿದ್ದರಿಂದ ನಾವು ಅಮ್ಮನ ಅಪ್ಪಣೆಯಂತೆ ಕೈಮುಗಿದು ಕುಳಿತಿದ್ದೆವು. ಆದರೂ ತಲೆಯೊಳಗೆ, ‘ಏಕೆ ಕಾಲಿಗೆ ಹಾಕುವ ಚಪ್ಪಲಿಯನ್ನು ಇವರೆಲ್ಲ ಸೇರಿ ಪೂಜೆ ಮಾಡುತ್ತಾರೆ’ ಎಂಬ ಪ್ರಶ್ನೆ ಓಡಾಡುತ್ತಿತ್ತು. ಆದರೂ ಇದೊಂದು ರೀತಿಯ ಗಾಂಭೀರ್ಯತೆಯಿಂದ ಕೂಡಿದ ಭಕ್ತಿಯ ಉನ್ನತ ಭಾವವನ್ನು ಹೊಂದಿರುವಂಥದ್ದೂ ಆಗಿತ್ತು ಎಂಬುದು ನಮಗೂ ಬೋಧೆಯಾಗುತ್ತಿತ್ತು.
ಸುಮಾರು 9 ಗಂಟೆಗೆಲ್ಲ ಪೂಜೆ ಮುಕ್ತಾಯಗೊಂಡಿತು. ಪ್ರಸಾದ ಹಂಚಲಾಯಿತು. ಮಂತ್ರಾಕ್ಷತೆ ಹಾಗೂ ಫಲವನ್ನು ಗುರುಗಳು ಎಲ್ಲ ಮಕ್ಕಳಿಗೂ ನೀಡಿದರು. ಪರಿಚಿತರಲ್ಲಿ ನಕ್ಕು, ಮಾತಾಡಿ ಊಟ ಮಾಡಿ ಅಪರಾಹ್ನ 4 ಗಂಟೆಗೆ ಮನೆಗೆ ಮರಳಿದೆವು. ಗುರುಗಳೂ ಹೊರಟರು. ಅವರು ಹೊರಟ ಮೇಲೆ ಮನೆ, ಮಂದಿ, ಊರು ಖಾಲಿಯಾದಂತೆನಿಸಿತು. ನಮ್ಮ ಯೋಚನೆಗಳು ಗುರುಗಳು, ಪಾದ ಪೂಜೆ, ಊಟ, ತಿಂಡಿ ಇದರ ಸುತ್ತಲೇ ಗಿರಕಿ ಹೊಡೆಯುತ್ತಿದ್ದು ಈಗ ಎಲ್ಲವೂ ಮುಗಿದು ನಮ್ಮ ತಲೆ ಹೊಸ ಯೋಚನೆಗಳತ್ತ ಹೊರಳಲು ತಯಾರಾಯಿತು. ಶನಿವಾರದ ಒಂದು ಮಧ್ಯಾಹ್ನ. 11.30 ಗಂಟೆಗೆಲ್ಲ ನಮ್ಮ ಶಾಲೆ ಮುಗಿದಿತ್ತು. ಅವತ್ತು ನಾನು ಮತ್ತು ನನ್ನ ತಮ್ಮ 12 ಗಂಟೆಗೆಲ್ಲ ಮನೆ ಸೇರಿದ್ದೆವು. ಊಟಕ್ಕೆ ಇನ್ನೂ ಸಮಯವಿತ್ತು. ಪಾದುಕಾ ಪುರಾಣ!
ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಮಾಡಿತು! ಯಾವುದಕ್ಕೆಲ್ಲ ಅಭಿಮುಖವಾಗುವಂತೆ ಮಾಡಿತು! ಕೊನೆಯ ಮಾತು ಹೇಳಬೇಕೆ ನಿಸುವುದು -‘ಇಲ್ಲಿ ಯಾವುದೂ ನಿರರ್ಥಕವಲ್ಲ, ಯಾವುದೂ ತನ್ನಷ್ಟಕ್ಕೆ ತಾನು ಅರ್ಥವುಳ್ಳದ್ದೂ ಅಲ್ಲ’ ಅದೆಲ್ಲಕ್ಕಿಂತ ಮುಂಚೆ ನಮಗೊಂದು ಬೃಹತ್ ಕಾರ್ಯ ಸಾಧಿಸುವುದಿತ್ತು. ಬಂದವರೇ ಕೈಕಾಲು ಮುಖ ತೊಳೆದು ನಮ್ಮ ಕೆಲಸಕ್ಕೆ ಅಣಿಯಾದೆವು. ಒಳಗೆ ದೇವರ ಕೋಣೆಯಲ್ಲಿ ಅಪ್ಪನ ಪೂಜೆ ನಡೆಯುತ್ತಿತ್ತು.
ನಾವು ಕೂಡ ಮನೆಯ ಮುಂಬಾಗಿಲ ಮೇಲೆ ನಮ್ಮ ಪೂಜೆ ಮಾಡುವ ಸಾಮಗ್ರಿಯನ್ನ ಜೋಡಿಸಲು ತೊಡಗಿದೆವು. ನನ್ನ ಚಿಕ್ಕ ತಮ್ಮ ತನ್ನ ಚಡ್ಡಿಕಿಸೆಯಲ್ಲಿ ಅಕ್ಕಿ ಡಬ್ಬಿಯಲ್ಲಿದ್ದ ಅಕ್ಕಿಯನ್ನು ಯಾರಿ ಗೂ ಕಾಣದಂತೆ ತುಂಬಿಕೊಂಡು ತಂದ. ದೇವರ ಮನೆಗೆ ನುಸುಳಿ ಕುಂಕುಮವನ್ನು ಗುರುಗಳ ಎಗರಿಸಿದ.
ದೊಡ್ಡಂವ ಗಂಧ ತೇಯಲು ಬಣ್ಣದ ಕಲ್ಲುಗಳನ್ನ ಆಯ್ದುಕೊಳ್ಳಲು ಮನೆಯ ಆಚೆ ಓಡಿದ. ನಾನೂ ನನ್ನ ಚಿಕ್ಕ ತಮ್ಮನೂ ಸೇರಿ ದೇವರಿಗೆಂದು ಕುಂಕುಮ ಮತ್ತು ಅಕ್ಕಿ ಕಲಸಿ ಅಕ್ಷತೆ ತಯಾರಿಸಿದೆವು. ಅಂಗಿಯ ತುಂಬಾ ಅಂಗಳದಲ್ಲಿ ಬೆಳೆದಿದ್ದ ಥರಹೇವಾರಿ ಹೂವುಗಳನ್ನು ಕೊಯ್ದುಕೊಂಡು ಬಂದೆ. ಸ್ಟೀಲಿನ ಚೊಂಬುಗಳು ಅಮ್ಮನ ಅಡುಗೆ ಮನೆಯಿಂದ ಮಾಯವಾದವು. ದೇವರಭಿಷೇಕಕ್ಕೆ ತಯಾರಿ ನಡೆಸಿ ನಲ್ಲಿಯ ನೀರು ತುಂಬಿಸಿದೆವು.
ತಮ್ಮ, ದೊಡ್ಡ ಕಲ್ಲಿನ ಮೇಲೆ ನೀರು ಹಾಕಿ ಅದರ ಮೇಲೆ ಸಣ್ಣ ಸಣ್ಣ ಬಣ್ಣದ ಕಲ್ಲು ತಿಕ್ಕಿ ಬೇರೆ ಬೇರೆ ರೀತಿಯ ಗಂಧ ತಯಾರಿಸಿದ. ಸದ್ದು ಗದ್ದಲವಿಲ್ಲದೆ ನಮ್ಮ ಪೂಜೆಯ ತಯಾರಿ ನಿರಾತಂಕ ಸಾಗುತ್ತಿತ್ತು. ಎಲ್ಲಾ ತಯಾರಿ ಆದ ಮೇಲೆ ಅಪ್ಪ ನನಗಾಗಿ ತಂದಿದ್ದ ಹೊಸ ಚಪ್ಪಲಿಯನ್ನು ತಂದು ಮೆಟ್ಟಿಲುಗಳ ಮೇಲೆ ಇಟ್ಟೆ. ಮೆಟ್ಟಿಲು ಗಳನ್ನು ದೇವರಪೀಠದ ಥರಾ ಈಗಾಗಲೇ ಹೂವುಗಳಿಂದ ಅಲಂಕಾರ ಮಾಡಿದ್ದೆವು.
ಚಪ್ಪಲಿಗಳು ಯಾವ ಪುಣ್ಯ ಮಾಡಿದ್ದವೋ! ಪೂಜೆ ಸ್ವೀಕರಿಸಲು ತಯಾರಾದವು. ಮೊದಲು ನನ್ನ ಪಾದುಕೆಯ ಮೇಲೆ ಜಲಪ್ರಕ್ಷಾಲನೆಯಾಯಿತು. ಆಮೇಲೆ ಜಲಾಭಿಷೇಕ! ಒಳಗೆ ನಮ್ಮ ತಂದೆಯ ವಿಧ್ಯುಕ್ತ ಪೂಜೆ ನಡೆಯುತ್ತಿದ್ದರೆ ಹೊರಗಡೆ ನಮ್ಮದು. ಚೊಂಬುಗಟ್ಟಲೆ ನೀರು ಸುರಿದು ಹೊಸ ಪಾದುಕೆಗೆ ಅಭಿಷೇಕವಾಯಿತು. ಬಿಳಿಯ ದಾಸವಾಳ, ಕೆಂಪು ಕಿಸ್ಕಾರ, ಮೋತಿಮಲ್ಲಿಗೆಯ ಮೃದು ತ್ವ, ಮಧ್ಯಾಹ್ನ ಮಲ್ಲಿಗೆಯ ಹೊಚ್ಚ ಹೊಸ ಬಣ್ಣ, ನೀಲಿ ಬಣ್ಣದ ಶಂಖಪುಷ್ಪ, ಮಾಗಿ ಮಲ್ಲಿಗೆಯ ನಯವಾದ ಸೊಗಡು, ಚಿಕ್ಕ ಸುಂದರಿ ತುಂಬೆ ಹೂವಿನ ತರಹೇವಾರಿ ಅಲಂಕಾರ ದೊಂದಿಗೆ ಚಪ್ಪಲಿ ದೈವತ್ವಕ್ಕೇರಿತು.
ಹೊರಗಿನಿಂದ ನೋಡಿದರೆ ಹೂವಿನೊಳಗೆ ಮುಚ್ಚಿಕೊಂಡಿದ್ದ ಹೂವಿನ ಗುಪ್ಪೇತರ ಕಾಣಿಸುತ್ತಿತ್ತೇ ವಿನ: ಅದು ಚಪ್ಪಲಿ ಎಂದು ಸ್ವಲ್ಪನಾದರೂ ತಿಳಿದರೆ ಹೇಳಿ! ನೈವೇದ್ಯ ಮಾಡಬೇಕಲ್ಲ, ಆಗಲೇ ತೋಟದಲ್ಲಿ ಬೆಳೆದ ಸೀಬೆಹಣ್ಣು, ಮಾವಿನಹಣ್ಣು, ಪಪ್ಪಾಯ, ಬಾಳೆಹಣ್ಣುಗಳು ನೈವೇದ್ಯಕ್ಕೆ ಸಿದ್ಧವಾಗಿದ್ದವು. ಸರಿ, ಅದೂ ಆಗಿ ಹೋಯಿತು. ಈಗ ಮೂರೂ ಜನ ಎದ್ದು ನಿಂತೆವು. ’ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭಾ..’ ಹೂವು ಮಂತ್ರ ಮುಗಿಯುತ್ತಿದ್ದಂತೆ ಮತ್ತೆ ದೇವರಿಗೆ ಹೂವು ಹಾಕಿದೆವು.
ಮತ್ತೆ ನಮಸ್ಕಾರ ಮಾಡಿದೆವು. ಚಪ್ಪಲಿ ಪೂಜೆ ಸಮಾಪ್ತಿಗೊಂಡಿತ್ತು. ಅಷ್ಟರಲ್ಲಿ ನಾವು ಚಪ್ಪಲಿ ಪೂಜೆ ಮಾಡಿದ ವಿಷಯ ನಮ್ಮ ಅಜ್ಜಿಗೆ ತಿಳಿದುಹೋಯಿತು. ಅವರು ಹೌಹಾರಿದರು. ‘ಚಪ್ಪಲಿಗೆ ಪೂಜೆ ಮಾಡುವುದೇ? ಈ ಮಕ್ಕಳ ತಲೆಹರಟೆ ಜಾಸ್ತಿ ಆಯ್ತು, ಸ್ವಲ್ಪವೂ ಬುದ್ಧಿ ಇಲ್ಲದ ಮಕ್ಕಳು. ಮಾಣಿ, ಅವಳು ಕೊಟ್ಟ ಪ್ರಸಾದ ತಲೆಯ ಮೇಲೆ ಇಡಬೇಡ. ಚಪ್ಪಲಿ ಪೂಜೆ ಮಾಡಿ ಅದರ ಪ್ರಸಾದ ಕೊಟ್ಟಿದ್ದು ಕಾಣ್ತು’ ಅಪ್ಪ ಒಮ್ಮೆ ಹೂವಿನ ಪ್ರಸಾದ ಕೈಯಲ್ಲಿ ಹಿಡಿದರು. ಮತ್ತೆ ನನ್ನ ಕಡೆ ನೋಡಿದರು.
ನಿರಾಳ ಪ್ರಸಾದವನ್ನು ತಲೆಯ ಮೇಲೇರಿಸಿಕೊಂಡರು. ನನಗೆ ಅಜ್ಜಿಯ ಬಿರುಸಿನ ಮಾತುಗಳನ್ನು ಕೇಳಿ ಏನು ತಪ್ಪು ಮಾಡಿದೆ ಎಂದು ಅರ್ಥವಾಗದಿದ್ದರೂ ಅಪ್ಪ ಬೈದುಬಿಡಬಹುದೆಂದು ಸುಲಲಿತ ಪ್ರಬಂಧ ಭಯವಾಗಿತ್ತು. ಪ್ರಸನ್ನವಾದ ಅಪ್ಪನ ಮುಖ ನೋಡಿದ ಮೇಲೆ ಸಮಾಧಾನವಾಯಿತು.
ಅಜ್ಜಿಗೆ ಸ್ವಲ್ಪ ಬೇಸರವಾಯಿತು ಅನಿಸುತ್ತದೆ. ಆದರೆ ನನಗೆ ವಿಜಯೋತ್ಸವ ಉಂಟಾಗಿತ್ತು. ಅಪ್ಪನಿಗೆ ಪೂಜೆ ಆದ ತಕ್ಷಣ ಅಡುಗೆ ಮನೆಗೆ ಹೋಗಿ ತಲೆಗೆ ತೆಂಗಿನ ಎಣ್ಣೆ ಸವರಿಕೊಂಡು ನಂತರ ಊಟಕ್ಕೆ ಕೂರುವುದು ರೂಢಿ. ಅವರು ನಮಗೆ ಪ್ರಸಾದ ನೀಡಿ ಅಡುಗೆ ಮನೆ ಒಳಗೆ ಹೋದರು. ಅಜ್ಜಿಯಿಂದ ಹಿಡಿದು ನಮ್ಮ ನೆಂಟರು, ಇಷ್ಟರು, ಆಪ್ತರು, ಮಕ್ಕಳು ಯಾರೂ ಅಪ್ಪನ ಎದುರಿಗೆ ಅಷ್ಟು ಮಾತನಾಡುತ್ತಿರಲಿಲ್ಲ.
ಅಜ್ಜಿ, ಅಪ್ಪ ಒಳಗೆ ಹೋದ ಕೂಡಲೇ ನನ್ನನ್ನು ಬಳಿಗೆ ಕರೆದು ಹೇಳಿದರು, ‘ನೋಡು ಮಗಾ, ನಾವು ಚಪ್ಪಲಿ ಪೂಜೆಯೆಲ್ಲಾ ಮಾಡುವುದಿಲ್ಲ. ಅದು “ಪೂಜೆ ಮಾಡಬಾರದು ಅಂತಲ್ಲ, ಕಂದಾ. ನಾವು ಕಾಲಿಗೆ ಹಾಕುವ ಚಪ್ಪಲಿಗಿಂತ ಬೇರೆ ನಮ್ಮ ಕಲ್ಪನೆಯ ದೇವರ ಸಂಕೇತಗಳನ್ನ ಸೃಷ್ಟಿಸಿಕೊಂಡಿ ದ್ದೇವೆ. ಅವನನ್ನು ಆ ಮೂಲಕ ಕಾಣಲು ಹೆಚ್ಚು ಇಷ್ಟಪಡುತ್ತೇವೆ. ಅವನಿಗೆ ಯಾವ ರೂಪಗಳನ್ನು ಬೇಕಾದರೂ ಹೊಂದುವ ಶಕ್ತಿ ಇದೆ ಮಗು. ನೋಡು, ನರಸಿಂಹ ಅವತಾರದಲ್ಲಿ ಆತ ಪ್ರಹ್ಲಾದನನ್ನು ರಕ್ಷಿಸಲು ಅಲ್ಲಿಯತನಕ ಇರದ ಹೊಸ ರೂಪದೊಂದಿಗೆ ಬರಲಿಲ್ಲವೇ? ನಿನಗೆ ಕಥೆ ಗೊತ್ತಿದೆಯಲ್ಲ’.
‘ಹೌದು, ಹಾಗಿದ್ದರೆ ಚಪ್ಪಲಿಯಲ್ಲಿ ಕೂಡ ಅಂವ ಇರುವನು ಅಲ್ಲವೇ?’ ‘ಹೌದು ಕಂದಾ, ನೀನು ಶ್ರದ್ಧೆಯಿಂದ ಪೂಜೆ ಮಾಡಿದೆಯಲ್ಲ, ನೋಡು ಅಪ್ಪನ ತಲೆಯ ಮೇಲೆ ನೀನು ಕೊಟ್ಟ ಪ್ರಸಾದ ಹಾಗೆ ಇದೆ. ದೇವರು ಎಲ್ಲೆಲ್ಲಿಯೂ ಇದ್ದಾನೆ, ಎಲ್ಲದರಲ್ಲೂ ಇದ್ದಾನೆ’. ನನಗೆ ಸಂತೋಷವಾಯಿತು. ಅಪ್ಪ ನಾನು ಮಾಡಿದ್ದು ‘ತಪ್ಪು’ ಎಂದು ಹೇಳಲಿಲ್ಲವಲ್ಲ!
ಕೈಯ್ಯಲ್ಲಿ ಹಿಡಿದಿದ್ದ ನಾವು ಕಾಲಿಗೆ ಹಾಕುವ ವಸ್ತು. ಹಾಗೆಲ್ಲ ಪೂಜೆ ಮಾಡಿದರೆ ದೇವರಿಗೆ ಅವಮಾನ ಮಾಡಿದಂತೆ ಅಲ್ಲವೇ? ಯಾಕೆ ನೀವೆಲ್ಲ ಸೇರಿ ಹೀಗೆ ಮಾಡುತ್ತಿದ್ದೀರಿ?’ ಅಂದರು. ನನ್ನ ಹಾಗೂ ತಮ್ಮಂದಿರ ಮುಖ ಚಿಕ್ಕದಾಯಿತು. ನನಗೊಂದು ವಿಷಯ ಅರ್ಥವಾಗಲಿಲ್ಲ. ಅಲ್ಲಾ, ಮೊನ್ನೆ ಮಾತ್ರ ಗುರುಗಳ ಕಾಲಿನ ಮರದ ವಸ್ತುವನ್ನು ಪೂಜೆ ಮಾಡಿ ಆ ನೀರನ್ನು ಪ್ರೋಕ್ಷಣ್ಯ ಮಾಡಿಕೊಂಡಿರುವುದನ್ನು ನೋಡಿದ್ದೆ. ಆದರೆ ನಾನು ಪೂಜೆ ಮಾಡಿದರೆ ಈ ಅಜ್ಜಿ ಯಾಕೆ ಶಾಪ ಬರುತ್ತದೆ ಎನ್ನುತ್ತಿದ್ದಾರೆ? ತಲೆ ತುಂಬಾ ಯೋಚಿಸುತ್ತಾ ನಿಂತೆ.
ಅಷ್ಟರಲ್ಲಿ ಅಪ್ಪ ಒಳಗಡೆ ಹೋದವರು ತಲೆ ತಿಕ್ಕುತ್ತಾ ಹೊರಗಡೆ ಬಂದರು. ಸೀದಾ ಅವರ ಬಳಿಗೆ ಓಡಿದೆ. ಈಗ ನನ್ನನ್ನ ಈ ಶಾಪದಿಂದ ಕಾಪಾಡಬಲ್ಲ ಏಕೈಕ ವೀರ ಅಪ್ಪನೊಬ್ಬನೆ ಆಗಿದ್ದರು. ‘ಅಪ್ಪ, ನಾವು ಚಪ್ಪಲಿ ಪೂಜೆ ಮಾಡಬಾರದು ಎಂದು ಅಜ್ಜಿ ಹೇಳುತ್ತಿದ್ದಾರೆ, ಮೊನ್ನೆ ಅಷ್ಟೇ ಗುರುಗಳ ಚಪ್ಪಲಿ ಪೂಜೆಗೆ ನಮ್ಮನ್ನೆಲ್ಲಾ ಅಮ್ಮ ಕರೆದುಕೊಂಡು ಹೋಗಿದ್ದರಲ್ಲ. ಈಗ ನಮಗೆ ಕರಿ ಶಾಪ ಬರುತ್ತದೆ ಎಂದು ಹೇಳುತ್ತಿದ್ದಾರೆ’ ಅಜ್ಜಿಯ ಮೇಲೆ ಆರೋಪ ಹೊರೆಸಿದೆ.
ಅಪ್ಪ ಕೇಳಿದರು, ‘ಚಪ್ಪಲಿ ಪೂಜೆ ಮಾಡಿದಿರಾ?’
‘ಹೌದು’
‘ಈ ಮೊದಲು ಯಾರಾದರೂ ಚಪ್ಪಲಿ ಪೂಜೆ ಮಾಡುವುದನ್ನು ನೋಡಿದ್ದೆಯಾ?’
‘ಹೌದಲ್ಲ, ಮೊನ್ನೆ ಗುರುಗಳದ್ದು ನೋಡಿದ್ದೆ. ಅದಕ್ಕಿಂತ ಮೊದಲು ಕಥೆ ರಾಮಾಯಣದಲ್ಲಿ ಕೇಳಿದ್ದೆ, ಭರತ ಫೋಟೋ ರಾಮನ ಪಾದುಕೆಯನ್ನು ಪೂಜಿಸುತ್ತಾನಲ್ಲ, ಸಿಂಹಾಸನದ ಮೇಲೆ ಇಟ್ಟು ರಾಜ್ಯಭಾರ ಮಾಡುತ್ತಾನೆ ಎಂದು ನೀನು ಹೇಳಿದ್ದೆಯಲ್ಲ!’
‘ರಾಮನ ’ಚಪ್ಪಲಿ’ಗೆ ಏನು ಹೇಳಿದ್ದೆ?’
‘ಪಾದುಕೆ’ ‘ಹ್ಞಾಂ, ಗುರುಗಳ ಕಾಲುಗಳಲ್ಲಿರುವುದೂ ’ಪಾದುಕೆ’.
‘ಚಪ್ಪಲಿ’ಗಳೆಂದು ಅವುಗಳಿಗೆ ಕರೆಯುವುದಿಲ್ಲ.
ನಾವು ಬೇರೆಯವರಿಂದ ಪೂಜಿಸಿಕೊಳ್ಳುವ ಮಟ್ಟಕ್ಕೆ ಆಧ್ಯಾತ್ಮಿಕವಾಗಿ ಏರಿದಾಗ ಮಾತ್ರ ಅದಕ್ಕೊಂದು ಅರ್ಥ. ಇಲ್ಲದಿದ್ದರೆ ಅವೆಲ್ಲವೂ ವ್ಯರ್ಥ.’
‘ಹಾಗಾದರೆ ನನ್ನ ಚಪ್ಪಲಿ ಪೂಜೆ ಮಾಡಬಾರದ?’ ಯಾಕೋ ಗೊತ್ತಿಲ್ಲ, ಈ ಪುಟ್ಟ ಘಟನೆ ಮನಸ್ಸಿನ ಮೂಲೆ ಹಿಡಿದು ಗಪ್ಪನೆ ಕುಳಿತುಬಿಟ್ಟಿತ್ತು. ನಮ್ಮ ಸುತ್ತಮುತ್ತಲಿನ ಅನೇಕ ಜನ ಚಪ್ಪಲಿಯನ್ನು ಪೂಜೆ ಮಾಡುವುದಿರಲಿ ಅದನ್ನು ಒಳಗೆ ಹಾಕಿಕೊಂಡು ಬರುವುದನ್ನೂ ನಿಷೇಧಿಸುತ್ತಾರೆ ಎಂದು ಸ್ವಲ್ಪ ದೊಡ್ಡವಳಾಗುತ್ತಿದ್ದ ಹಾಗೆ ಅರ್ಥಮಾಡಿಕೊಂಡೆ. ಆದರೆ ನನ್ನ ತಂದೆ ಅದೆಷ್ಟು ದೊಡ್ಡವರು!
ಅವರು ನಂಬಿ, ನಡೆಯತ್ತಿದ್ದ ಸಂಪ್ರದಾಯದಲ್ಲಿ ಚಪ್ಪಲಿ ಪೂಜೆ ಮಾಡುವುದನ್ನು ಕಲ್ಪನೆ ಮಾಡುವುದು ಕೂಡಾ ಸಾಧ್ಯವಿರಲಿಲ್ಲ. ಆದರೆ ಆ ಕ್ಷಣದಲ್ಲಿ ಅವರು ಅದೆಷ್ಟು ದೊಡ್ಡ ವಿಷಯ ವನ್ನು ಕೇವಲ ತಮ್ಮ ನಡೆಯ ಮೂಲಕ ತೋರಿಸಿದರು. ದೇವರ ಬಗೆಗಿನ ಅಗಾಧ ಕಲ್ಪನೆಯನ್ನೇ ನನ್ನೆದುರು ತೆರೆದಿಟ್ಟರು! ಇವತ್ತಿಗೂ ಇಂತಹ ಅನೇಕ ವಿಷಯಗಳಿಗಾಗಿ ತಂದೆಗೆ ಮಣಿಯುತ್ತೇನೆ.
ಆಮೇಲಿನ ದಿನಗಳಲ್ಲಿ ಒಂದು ದಿನ ಚಪ್ಪಲಿ ಖರೀದಿಸಲು ಹೊನ್ನಾವರದ ಪೇಟೆಗೆ ತಮ್ಮಂದಿರ ಜೊತೆ ಹೋಗಿದ್ದೆ. ಎಲ್ಲರೂ ಚಪ್ಪಲಿ ಖರೀದಿಸಿದೆವು. “ಒಟ್ಟು ಎಷ್ಟಾಯಿತು?" ಎಂದು ಕೇಳಿದಾಗ ಅಂಗಡಿಯಾತ ಒಂದಿಷ್ಟು ಮೊತ್ತವನ್ನು ಹೇಳಿದ. ಆಗೆಲ್ಲ ಈಗಿನಂತೆ ಫೋನ್ ಪೇ ಬಳಕೆಗೆ ಬಂದ ಕಾಲವಾಗಿರಲಿಲ್ಲ. ಕ್ಯಾಶ್ ಕೊಟ್ಟೆ. ಅವನ್ನು ತೆಗೆದುಕೊಂಡು ತನ್ನ ಅಂಗಡಿಯ ಒಂದು ಮೂಲೆಗೆ ಹೋದ.
ಅಲ್ಲೊಂದು ಲಕ್ಷ್ಮೀದೇವಿಯ ಭಾವಚಿತ್ರವನ್ನಾತ ಇಟ್ಟುಕೊಂಡಿದ್ದ. ಗಣೇಶ ಕೂಡ ಜೊತೆಗೇ ಇದ್ದ. ಕೆಳಗಡೆ ಪುಟ್ಟ ಮಕ್ಕಳು ಹಾಕುವ ಮುದ್ದಾದ ಒಂದು ಜೊತೆ ಚಪ್ಪಲಿ ಇತ್ತು. ಕೆಂಪು ಹಳದಿ ಬಣ್ಣ ಮಿಶ್ರಿತ ಕ್ರಾಕ್ಸ್ ಅದು. ಬಹಳ ದಿನಗಳಿಂದ ಅದು ಅಲ್ಲೇ ಇತ್ತು ಎಂದು ಕಾಣುತ್ತದೆ. ಬಣ್ಣ ಸ್ವಲ್ಪ ಮಾಸಿತ್ತು. ಅದರ ಮೇಲೆ ಇವತ್ತು ಹಾಕಿದ ತಾಜಾ ಹೂಗಳಿದ್ದವು. ಅವನು ಮೊದಲು ಗಣೇಶ ಮತ್ತು ಲಕ್ಷ್ಮಿಯರಿಗೆ ಕೈ ಮುಗಿದ. ಆ ಪುಟ್ಟ ಚಪ್ಪಲಿಯನ್ನು ಮುಟ್ಟಿ ಕಣ್ಣಿಗೊತ್ತಿಕೊಂಡ. ನಾನು ಕೊಟ್ಟ ಹಣವನ್ನು ಅಷ್ಟೂ ತೆಗೆದು ಚಪ್ಪಲಿಯ ಮೇಲೆ ಇಟ್ಟ. ಮತ್ತೆ ಚಪ್ಪಲಿಯನ್ನೂ ಹಣವನ್ನೂ ಒಟ್ಟಿಗೆ ಹಿಡಿದು ಮತ್ತೆ ಕಣ್ಣಿಗೊತ್ತಿಕೊಂಡ.
ಆ ಚಪ್ಪಲಿಯನ್ನು ಇವನು ತನ್ನ ದೇವರೆಂದುಕೊಂಡಿದ್ದಾನಲ್ಲ! ಅಪ್ಪ ಚಿಕ್ಕಂದಿನಲ್ಲೇ ಹೇಳಿದ್ದರ ಅರ್ಥ ಈಗ ಸಂಪೂರ್ಣವಾಗಿ ಆಯಿತು. ದೇವರು ಎಲ್ಲೆಲ್ಲಿಯೂ ಇದ್ದಾನೆ! ಅವನು ‘ಭಾವಪ್ರಿಯ’. ಆತ, ತನ್ನನ್ನ ಮೂರ್ತಿ ಮಾಡಿದವರ ಮನೆಯಲ್ಲಿಯೂ ನೆಲೆಸುತ್ತಾನೆ. ಚಪ್ಪಲಿ ಅಂಗಡಿಯವನ ಚಪ್ಪಲಿಯಲ್ಲಿಯೂ ನೋಡಿದ್ದೆ. ಮೂಡುತ್ತಾನೆ.
ಮೆಚ್ಚಿ ‘ಭಗವಂತಾ’ಎಂದು ಕರೆದರೆ ಸೀರೆಯನ್ನು ಕೊಡುವ ಕೆಲಸವನ್ನೂ ಮಾಡುತ್ತಾನೆ. ‘ಮೂಕಂ ಕರೋತಿ ವಾಚಾಲಂ, -ಗುಂ ಲಂಘಯತಿ ಗಿರಿಂ’. ದೊಡ್ಡವರ ಮಂತ್ರಕ್ಕೂ ಒಲಿಯುತ್ತಾನೆ, ಮಕ್ಕಳ ಮುಗ್ಧ ಬಾಲಭಾಷೆಯನ್ನೂ ಮೆಚ್ಚುತ್ತಾನೆ. ಆಕಾಶ, ಭೂಮಿ, ಪಾತಾಳವನ್ನಳೆಯುವವನು ಭಿಕ್ಷಾ ಪಾತ್ರೆಯನ್ನು ಹಿಡಿದೂ ಬರುತ್ತಾನೆ. ಅಮೃತದ ಹಂಗಿರದವನು ವಿಷವನ್ನೂ ನುಂಗುತ್ತಾನೆ.
ಆಹಾ! ಒಂದು ‘ಪಾದುಕಾ ಪುರಾಣ’ ಜೀವನದ ಯಾವೆಲ್ಲ ಸ್ಥರಗಳಲ್ಲಿ ಏನೇನನ್ನು ತಿಳಿಯುವಂತೆ ಮಾಡಿತು! ಯಾವುದಕ್ಕೆಲ್ಲ ಅಭಿಮುಖವಾಗುವಂತೆ ಮಾಡಿತು! ಹೇಳಬೇಕೆನಿಸುವುದು-‘ಇಲ್ಲಿ ಕೊನೆಯ ಮಾತು ಯಾವುದೂ ನಿರರ್ಥಕವಲ್ಲ, ಯಾವುದೂ ತನ್ನಷ್ಟಕ್ಕೆ ತಾನು ಅರ್ಥವುಳ್ಳದ್ದೂ ಅಲ್ಲ’