Viral Video: ಮಿಡತೆ ಹುರಿದು ಕರುಂ.. ಕುರುಂ... ಅಂತ ತಿಂದ ಭೂಪಾ! ನೆಟ್ಟಿಗರು ಫುಲ್ ಶಾಕ್
ಊಟ ತನ್ನಿಷ್ಟ.. ನೋಟ ಪರರಿಷ್ಟ.. ಎಂಬ ಗಾದೆ ಮಾತಿನಂತೆ, ಕೆಲವರಿಗೆ ಕೆಲವೊಂದು ಆಹಾರ ಪದಾರ್ಥಗಳು ಇಷ್ಟವಾಗುತ್ತವೆ.. ಆದ್ರೆ ಇಲ್ಲೊಬ್ಬನಿಗೆ ಏನು ಇಷ್ಟವಾಗಿದೆ ಎಂದು ನೀವು ಈ ವಿಡಿಯೋದಲ್ಲೇ ನೋಡ್ಬೇಕಷ್ಟೆ..!
ನವದೆಹಲಿ: ಚೀನಾ (China), ತೈವಾನ್ (Taiwan) ಸೇರಿದಂತೆ ಆಗ್ನೇಯ ಏಷ್ಯಾ (Southeast Asian) ರಾಷ್ಟ್ರಗಳ ಜನರು ಜಿರಲೆ, ಕಪ್ಪೆ ಸೇರಿದಂತೆ, ಕೀಟಗಳನ್ನು, ಸರೀಸೃಪಗಳನ್ನು, ಹಾಗೂ ಜಂತುಗಳನ್ನು ಕರಿದು, ಹುರಿದು ತಿನ್ನುವುದು ನಿಮಗೆಲ್ಲಾ ಗೊತ್ತೇ ಇದೆ. ಗೊಬ್ಬರದ ಹುಳಗಂತಹ ಹುಳಗಳನ್ನು ಅವರು ಎಂಜಾಯ್ ಮಾಡ್ಕೊಂಡು ತಿನ್ನುವುದನ್ನು ನೋಡಿದಾಗ ನಮಗಿಲ್ಲಿ ಹೊಟ್ಟೆ ತೊಳಸದೇ ಇರದು. ಆದರೆ ಇಂತಹ ಜೀವಿಗಳನ್ನು ತಿನ್ನುವುದನ್ನು ನೇರವಾಗಿ ನೀವು ಎಲ್ಲಿಯಾದರೂ ನೋಡಿದ್ದೀರಾ..? ಇಲ್ಲವೆಂದಾದರೆ ಅಂತಹ ವಿಡಿಯೋ ಒಂದನ್ನು ನಾವು ನಿಮಗಿಲ್ಲಿ ತೋರಿಸುತ್ತಿದ್ದೇವೆ, ಸದ್ಯಕ್ಕೆ ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ (Social Media) ಸಿಕ್ಕಾಪಟ್ಟೆ ವೈರಲ್ (Viral Video) ಆಗುತ್ತಿದೆ.
ಇನ್ ಸ್ಟಾಗ್ರಾಂನಲ್ಲಿ (Instagram) ವೈರಲ್ ಆಗಿರುವ ಈ ವಿಡಿಯೋದಲ್ಲಿರುವಂತೆ ವ್ಯಕ್ತಿಯೊಬ್ಬ ದೊಡ್ಡ ಮಿಡತೆಯೊಂದನ್ನು (giant cricket) ಕುರುಂ ಕುರುಂ ಮಾಡಿ ತಿನ್ನುತ್ತಿರುವ ವಿಡಿಯೋ ಇದಾಗಿದ್ದು, ಸದ್ಯಕ್ಕಿದು ಎಲ್ಲೆಡೆ ವೈರಲ್ ಆಗುತ್ತಿದೆ. ಯುವಕನೊಬ್ಬ ಈ ಕೀಟಗಳ ಪ್ಯಾಕೆಟನ್ನು ಸ್ನ್ಯಾಕ್ಸ್ ಯಂತ್ರದಿಂದ ಪಡೆದುಕೊಂಡು ಅದನ್ನು ವಿಡಿಯೋ ಮುಂದೆ ಸಖತ್ ಎಂಜಾಯ್ ಮಾಡ್ತಾ ತಿನ್ನುತ್ತಿರುವುದನ್ನು ನೋಡಿದ್ರೆ, ನಿಮ್ಗೆ ಇಲ್ಲಿ, ಚಿಪ್ಸ್, ಚಕ್ಕುಲಿ, ಮುರ್ಕು ತಿನ್ನುವ ನೆನಪಾಗದೆ ಇರದು!
ಹಂಗ್ರಿ ಯಾಕ್ ( hungryoc) ಎಂಬ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಅಪ್ಲೋಡ್ ಆಗಿದ್ದು,ಸೋನ್ ಸೆರ್ನ್ ಲಿನ್ ಎಂಬ ಥಾಯ್ – ಚೈನೀಸ್ ಕಂಟೆಂಟ್ ಕ್ರಿಯೇಟರ್ ಈ ದೈತ್ಯ ಮಿಡತೆಯನ್ನು ಹಾಗೇ ತಿನ್ನುತ್ತಿರುವುದನ್ನು ವಿಡಿಯೋ ಮಾಡಿದ್ದಾನೆ. ನಮ್ಮಲ್ಲಿರುವ ಎಟಿಂ ಯಂತ್ರದಂತಿರುವ ಸ್ನ್ಯಾಕ್ಸ್ ನೀಡುವ ಯಂತ್ರಕ್ಕೆ ಹಣವನ್ನು ನೀಡಿ ಅಲ್ಲಿಂದ ಜಾರ್ ಒಂದನ್ನು ಪಡೆದುಕೊಂಡು ಅದರೊಳಗೆ ಪ್ಯಾಕ್ ಮಾಡಿದ್ದ ಮಿಡತೆಗಳನ್ನು ಯಾವುದೇ ಭಯ ಅಥವಾ ಹಿಂಜರಿಕೆಯಿಲ್ಲದೇ ಆತ ತಿನ್ನುತ್ತಿದ್ದಾನೆ.
ತಾನು ಜಪಾನ್ (Japan) ದೇಶಕ್ಕೆ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಅಲ್ಲಿ ಕೀಟಗಳನ್ನು ತಿನ್ನಲು ಪ್ರಯತ್ನಿಸಿದ್ದಾಗಿ ಲಿನ್ ತನ್ನ ಅನುಭವವನ್ನು ಹಂಚಿಕೊಂಡಿದ್ದಾನೆ. ‘ಜಪಾನ್ ನಲ್ಲಿ ದೈತ್ಯ ಕೀಟಗಳನ್ನು ತಿನ್ನುತ್ತಿರುವುದು..’ ಎಂದು ಈ ರೀಲ್ ಅನ್ನು ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ಸಂದರ್ಭದಲ್ಲಿ ಆತ ಬರೆದುಕೊಂಡಿದ್ದಾನೆ.
ಇದನ್ನೂ ಓದಿ: Viral Video: ಕಂದಾಯ ಇಲಾಖೆಯ ಕಚೇರಿಯಲ್ಲಿ ಮಹಿಳೆಗೆ ಶೂನಿಂದ ಥಳಿಸಿದ ಗುಮಾಸ್ತ; ವಿಡಿಯೊ ವೈರಲ್
ಸ್ನ್ಯಾಕ್ಸ್ ಯಂತ್ರದಿಂದ ಮಿಡತೆಗಳಿದ್ದ ಜಾರ್ ಅನ್ನು ಪಡೆದುಕೊಂಡ ಈ ಯುವಕ ಬಳಿಕ ಅದನ್ನು ಓಪನ್ ಮಾಡಿ ವಿಡಿಯೋಕ್ಕೆ ತೋರಿಸುತ್ತಾನೆ. ಬಳಿಕ ಜಾರ್ ಒಳಗಿದ್ದ ಪ್ಯಾಕೆಟನ್ನು ತೆರೆದು ಅದರೊಳಗಿದ್ದ ದೈತ್ಯ ಮಿಡತೆಯೊಂದನ್ನು ಸಖತ್ ಎಂಜಾಯ್ ಮಾಡ್ಕೊಂಡು ತಿನ್ನುತ್ತಿರುವದನ್ನು ಕಾಣಬಹುದಾಗಿದೆ. ವಿಡಿಯೋದಲ್ಲಿರುವಂತೆ ಈ ಮಿಡತೆಗಳು ಕ್ರಿಸ್ಪಿ ಮತ್ತು ಕುರುಂ ಕುರುಂ ಆಗಿರುವಂತೆ ಕಾಣಿಸುತ್ತಿದೆ. ಇನ್ನೊಂದು ವಿಡಿಯೋದಲ್ಲಿ ಲಿನ್ ಜಪಾನಿನ ಹಾರ್ನೆಟ್ ಗಳನ್ನು ತಿನ್ನುತ್ತಿರುವುದನ್ನು ಕಾಣಬಹುದಾಗಿದೆ.
ಈ ವಿಚಿತ್ರ ವಿಡಿಯೋಗೆ ನೆಟ್ಟಿಗರು ಹಲವು ರಿತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ. ಕೆಲವರು ಇದನ್ನು ನೋಡಿ ಶಾಕ್ ಗೊಳಗಾಗಿದ್ದರೆ, ಇನ್ನು ಕೆಲವರು ತಮಾಷೆಯಾಗಿ ಕಮೆಂಟ್ ಹಾಕುತ್ತಿದ್ದಾರೆ. ಮತ್ತೆ ಕೆಲವರು ಆತನಿಗೆ ಭಾರತಕ್ಕೆ ಭೇಟಿ ನೀಡಿ ಇಲ್ಲಿ ಅವುಗಳನ್ನು ಫ್ರೀಯಾಗಿ ತಿನ್ನುವಂತೆ ಸಲಹೆ ನೀಡಿದ್ದಾರೆ! ‘ಬ್ರೋ ಇದನ್ನು ಚಿಪ್ಸ್ ತಿಂದಂತೆ ತಿನ್ನುತ್ತಿದ್ದಾನೆ..’ ಎಂದು ಇನ್ನೊಬ್ಬರು ಕಮೆಂಟ್ ಹಾಕಿದ್ದಾರೆ.