Raichur news: ಕಾಂಗ್ರೆಸ್ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಸಿಎಂ, ಡಿಸಿಎಂ ಫೋಟೋ ಮಾಯ; ʼಕ್ಷಮಿಸಿʼ ಎಂದ ಸೌಮ್ಯಾ ರೆಡ್ಡಿ
Women Congress: ರಾಯಚೂರಿನಲ್ಲಿ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಬ್ಯಾನರ್‌ನಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮಟ್ಟದ ನಾಯಕರ ಫೋಟೋಗಳು ಕಂಡುಬಂದವಾದರೂ, ಸಿಎಂ, ಡಿಸಿಎಂ ಚಿತ್ರಗಳು ಕಾಣಿಸಲಿಲ್ಲ.

ಮಹಿಳಾ ಕಾಂಗ್ರೆಸ್ ಕಾರ್ಯಕ್ರಮದ ಬ್ಯಾನರ್

ರಾಯಚೂರು: ರಾಯಚೂರಿನಲ್ಲಿ (Raichur news) ನಡೆದ ಮಹಿಳಾ ಕಾಂಗ್ರೆಸ್ (Women congress) ಪಕ್ಷದ ಕಾರ್ಯಕ್ರಮದ ಬ್ಯಾನರ್‌ನಲ್ಲಿ ಎಲ್ಲಾ ನಾಯಕರ ಫೋಟೋಗಳಿದ್ದರೂ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ಅವರ ಫೋಟೋಗಳು ಕಂಡಬರಲಿಲ್ಲ. ಈ ಕುರಿತು ಪತ್ರಕರ್ತರ ಪ್ರಶ್ನೆಯಿಂದ ಗಲಿಬಿಲಿಯಾದ ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ, ತಪ್ಪಾಗಿದೆ ದಯವಿಟ್ಟು ಕ್ಷಮಿಸಿಬಿಡಿ ಎಂದು ಕೇಳಿಕೊಂಡ ಘಟನೆ ನಡೆಯಿತು.
ರಾಯಚೂರಿನಲ್ಲಿ ನಡೆದ ಜಿಲ್ಲಾ ಮಹಿಳಾ ಕಾಂಗ್ರೆಸ್ ಸಮಾವೇಶದಲ್ಲಿ ಈ ಘಟನೆ ನಡೆದಿದೆ. ರಾಜ್ಯ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಸೌಮ್ಯಾ ರೆಡ್ಡಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮದ ಬ್ಯಾನರ್‌ನಲ್ಲಿ ರಾಷ್ಟ್ರ, ರಾಜ್ಯ, ಜಿಲ್ಲೆ ಹಾಗೂ ಸ್ಥಳೀಯ ಮಟ್ಟದ ನಾಯಕರ ಫೋಟೋಗಳು ಕಂಡುಬಂದವಾದರೂ, ಸಿಎಂ, ಡಿಸಿಎಂ ಚಿತ್ರಗಳು ಕಾಣಿಸಲಿಲ್ಲ.
ಶಕ್ತಿ, ಗೃಹಲಕ್ಷ್ಮಿ ಯೋಜನೆ ಕೊಟ್ಟ ಸಿಎಂ, ಡಿಸಿಎಂರನ್ನೇ ಮಹಿಳಾ ಕಾಂಗ್ರೆಸ್ಸಿಗರು ಮರೆತುಬಿಟ್ಟರೇ ಎಂದು ಪತ್ರಕರ್ತರು ವೇದಿಕೆ ಮೇಲಿದ್ದ ಕಾಂಗ್ರೆಸಿಗರನ್ನು ಪ್ರಶ್ನೆ ಮಾಡಿದರು. ಮಾಧ್ಯಮದವರ ಪ್ರಶ್ನೆಗೆ ಗಲಿಬಿಲಿಯಾದ ಸೌಮ್ಯಾ ರೆಡ್ಡಿ, ಮಹಿಳಾ ಕಾಂಗ್ರೆಸ್‌ನ ಜಿಲ್ಲಾಧ್ಯಕ್ಷೆ ನಿರ್ಮಲಾ ಬೆಣ್ಣೆ ಕಡೆ ನೋಡಿದರು. ನಿರ್ಮಲಾ ನಿರುತ್ತರರಾದರು. ʼಇದಾರೆ ನೋಡಿ ಸರ್ʼ ಅಂತ ಸೌಮ್ಯಾ ರೆಡ್ಡಿ ಬ್ಯಾನರ್ ಕಡೆ ತಿರುಗಿ ತಿರುಗಿ ನೋಡಿದರು. ʼನಾನು ಲೇಟಾಗಿ ಬಂದೆ. ನಾನು ಗಮನಿಸಿಲ್ಲ. ನಾನೂ ಈಗಲೇ ನೋಡ್ತಾ ಇದೀನಿ. ತಪ್ಪಾಗಿದೆ, ದಯವಿಟ್ಟು ಕ್ಷಮಿಸಿʼ ಎಂದು ಸೌಮ್ಯಾ ರೆಡ್ಡಿ ಕೇಳಿಕೊಂಡರು.
ಇದನ್ನೂ ಓದಿ: Rahul Gandhi: ರಾಹುಲ್ ಗಾಂಧಿ 2ನೇ ಅಂಬೇಡ್ಕರ್ ಎಂದು ಕಾಂಗ್ರೆಸ್ ನಾಯಕ